ಈ ತಿಂಗಳು ಕೆಲವು ಜಿಲ್ಲೆಗಳಿಗೆ ಮಾತ್ರ ಅನ್ನಭಾಗ್ಯ ಯೋಜನೆಯ ಅಕ್ಕಿ & ಹಣ ಸಿಗೋದು.! ಯಾವ ಜಿಲ್ಲೆಗೆ ಸಿಗಲಿದೆ ಯಾವ ಜಿಲ್ಲೆಯ ಜನರಿಗೆ ಬರಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಅನ್ನ ಭಾಗ್ಯ ಯೋಜನೆಯ (Annabhagya Scheme) ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ (BPL RC Card) ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೂ ಕೂಡ 10Kg ಪಡಿತರ ನೀಡಲಾಗುವುದು ಎಂದು ರಾಜ್ಯ ಸರ್ಕಾರ (government) ಆದೇಶ ನೀಡಿತ್ತು. ಆದರೆ ಕೊನೆ ಸಮಯದಲ್ಲಿ ಅಕ್ಕಿ ದಾಸ್ತಾನು ಕೊರತೆ ಉಂಟಾಗಿರುವ ಕಾರಣ ಎಂದಿನಂತೆ 5Kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲು ಪ್ರತಿ ಸದಸ್ಯನಿಗೆ 170 ರೂಗಳಂತೆ ಆ ಕುಟುಂಬದ ಮುಖ್ಯಸ್ಥನ ಖಾತೆಗೆ (head of the family account) ಹಣ ವರ್ಗಾವಣೆ ಮಾಡುತ್ತಿದೆ.

ಜುಲೈ ತಿಂಗಳಿಂದ ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಲ್ಲಿ ಇದ್ದು, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಹೆಚ್ಚುವರಿ ಅಕ್ಕಿಯ ಹಣ (Annabhagya amount) ಕೂಡ ವರ್ಗಾವಣೆಯಾಗಿದೆ. ಆದರೆ ಇನ್ನೂ ಕೂಡ ಅನೇಕರು ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ ಅದರ ಬಗ್ಗೆ ಆಹಾರ ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪರವರು (Minister K.H Muniyappa) ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

LIC ಪೆನ್ಷನ್ ಪ್ಲಾನ್, ಒಂದು ಸಲ 1,50,000 ಕಟ್ಟಿದ್ರೆ ಸಾಕು, ಗಂಡ ಹೆಂಡತಿಗೆ ಇಬ್ಬರಿಗೂ ಜೀವನ ಪೂರ್ತಿ ಪ್ರತಿ ತಿಂಗಳು 9,832 ಪೆನ್ಷನ್ ಸಿಗುತ್ತೆ.!

ಅವರು ಮಾತನಾಡಿರುವ ವಿಷಯಗಳ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಮೊದಲಿಗೆ ಅನ್ನಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿ ಹಣದ ಬಗ್ಗೆ ಮಾತನಾಡಿದ ಸಚಿವರು ಅನೇಕ ಫಲಾನುಭವಿಗಳ ಆಧಾರ್ ಸಂಖ್ಯೆ ಅವರ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿಲ್ಲ ಈ ಕಾರಣದಿಂದ ಅರ್ಹರಾಗಿದ್ದರು ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ.

ಜುಲೈ ತಿಂಗಳಲ್ಲಿ ಹೆಚ್ಚು ಈ ಸಮಸ್ಯೆ ಕಂಡು ಬಂದಿತ್ತು, ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ (check DBT Status through ahara website) ಅನ್ನಭಾಗ್ಯ ಯೋಜನೆಯ ಹಣದ DBT ಸ್ಟೇಟಸ್ ಚೆಕ್ ಮಾಡಲು ಅವಕಾಶ ನೀಡಿದ್ದೆವು. ಅದರಲ್ಲಿದ್ದ ಘೋಷಣೆ ಪ್ರಕಾರ ಸಮಸ್ಯೆ ಪರಿಹರಿಸಿಕೊಂಡವರಿಗೆ ಆಗಸ್ಟ್ ತಿಂಗಳಲ್ಲಿ ಹಣ ವರ್ಗಾವಣೆ ಆಗಿದೆ. ಆಗಸ್ಟ್ ತಿಂಗಳಲ್ಲಿ 25 ಲಕ್ಷ ಫಲಾನುಭವಿಗಳು ತಮ್ಮ ಸಮಸ್ಯೆ ಬಗ್ಗೆ ಹರಿಸಿಕೊಂಡಿರುವುದು ತಿಳಿದು ಬಂದಿದೆ.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್, ಇಂಥವರಿಗೆ ಇನ್ಮುಂದೆ 5 Kg ಅಕ್ಕಿಯೂ ಇಲ್ಲ ಜೊತೆಗೆ ಹಣವೂ ಇಲ್ಲ.! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯೇ ಚೆಕ್ ಮಾಡಿ.!

ಆದರೆ ಇನ್ನೂ ಕೂಡ ಲಕ್ಷಾಂತರ ಫಲಾನುಭವಿಗಳು ಇದೇ ಸಮಸ್ಯೆಯಲ್ಲಿ ಇರುವುದರಿಂದ ಈ ತಿಂಗಳಿನಿಂದ ಮತ್ತೊಂದು ನಿರ್ಧಾರ ಕೈಗೊಂಡಿದ್ದೇವೆ. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲೂ (fare price shop) ಕೂಡ ಯಾರೆಲ್ಲ ಈ ರೀತಿ ತಮ್ಮ ಖಾತೆಯಲ್ಲಿರುವ ಸಮಸ್ಯೆ ಕಾರಣದಿಂದಾಗಿ ಹಣ ಪಡೆಯಲು ಸಾಧ್ಯವಾಗಿಲ್ಲ ಅವರ ಲಿಸ್ಟ್ ತಯಾರಿಸಿ ಅವರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇವೆ.

ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!

ಅದೇ ರೀತಿ ಸೆಪ್ಟೆಂಬರ್ ತಿಂಗಳಿಂದಲೇ ಅನ್ನ ಭಾಗ್ಯ ಯೋಜನೆಡಿ ಹಣದ ಬದಲು ಪೂರ್ತಿ 10Kg ಪಡಿತರ ನೀಡಬೇಕು ಎನ್ನುವ ಇಚ್ಛೆ ಸರ್ಕಾರಕ್ಕಿದೆ. ನಾವು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮುಂತಾದ ಕಡೆಯಲ್ಲ ಅಕ್ಕಿ ಖರೀದಿಗೆ ಪ್ರಯತ್ನಿಸುತ್ತಿದ್ದೇವೆ. ದಾಸ್ತಾನು ಲಭ್ಯವಾದರೆ ಸೆಪ್ಟೆಂಬರ್ ತಿಂಗಳದಿಂದಲೇ ಹಣದ ಬದಲು ಅಕ್ಕಿಯನ್ನು ವಿತರಣೆ ಮಾಡಲಿದ್ದೇವೆ. ಎನ್ನುವುದನ್ನು ತಿಳಿಸಿದ ಅವರು ಮತ್ತೊಂದು ಹೊಸ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಅದೇನೆಂದರೆ ಈಗ ರಾಜ್ಯದಲ್ಲಿ ಬರಪೀಡಿತ (drought declared thaluk) ವಾತಾವರಣವಿದೆ. ಈಗಾಗಲೇ 114 ತಾಲ್ಲೂಕುಗಳನ್ನು ಕೇಂದ್ರ ಸರ್ಕಾರದ ಗೈಡ್ಲೈನ್ಸ್ (According to central government guidlines) ಪ್ರಕಾರ ಬರಪೀಡಿತ ತಾಲ್ಲೂಕುಗಳು ಎಂದು ನಿರ್ಧರಿಸಿ ಪಟ್ಟಿ ತಯಾರಿಸಿ ಘೋಷಿಸಲಾಗಿದೆ ಈ ಲಿಸ್ಟಿಗೆ ಇನ್ನಷ್ಟು ತಾಲೂಕುಗಳು ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!

ಈಗ ಘೋಷಣೆಯಾಗಿರುವ 114 ಬರಪೀಡಿತ ತಾಲೂಕುಗಳಿಗೆ 10Kg ಪಡಿತರ ವಿತರಣೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಉಳಿದ ತಾಲೂಕುಗಳಿಗೆ ಒಂದು ವೇಳೆ ಅಕ್ಕಿ ದಾಸ್ತಾನು ಲಭ್ಯವಾಗದಿದ್ದರೆ ಎಂದಿನಂತೆ ಹಣ ವರ್ಗಾವಣೆ ಮಾಡಲಾಗುತ್ತದೆ ಆದರೆ ಬರಪಿಡಿತ ಪ್ರದೇಶದಲ್ಲಿರುವ ಜನರಿಗೆ ಆಹಾರದ ಕೊರತೆ ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಮೊದಲಿಗೆ ಅವರಿಗೆ 10Kg ಅಕ್ಕಿ ನೀಡಲು ಸರ್ಕಾರ ಪ್ರಯತ್ನಿಸುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

Leave a Comment

%d bloggers like this: