ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!

 

ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರರ ಪಿಂಚಣಿ (government employs pension) ಕುರಿತು ಸುದ್ದಿಗಳು ಪ್ರಸಾರವಾಗುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಸರ್ಕಾರಿ ನೌಕರರು ಹೊಸ ಪಿಂಚಣಿ(Pension) ವ್ಯವಸ್ಥೆಯನ್ನು (NPS) ವಿರೋಧಿಸಿ ತಮಗೆ ಹಳೆಯ ಪಿಂಚಣಿ ವ್ಯವಸ್ಥೆಯಂತೆ (OPS) ಪಿಂಚಣಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಅಲ್ಲಲ್ಲಿ ಪ್ರತಿಭಟನೆ ಮಾಡಿದ ವಿಷಯ ಹೆಚ್ಚು ಚರ್ಚೆಯಾಗುತ್ತಿತ್ತು.

ಈಗ ಅಂತಿಮವಾಗಿ ಕೇಂದ್ರ ಸರ್ಕಾರವು ಈ ವಿಚಾರವಾಗಿ ಮೌನ ಮುರಿದು ಎಲ್ಲಾ ಸರ್ಕಾರ ನೌಕರರಿಗೂ ಕೂಡ ಅನ್ವಯವಾಗುವಂತೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ ಹಾಗೂ ಸರ್ಕಾರಿ ನೌಕರರ ಪಿಂಚಣಿ ವಿವಾದದ ಕುರಿತು ಕೆಲವು ಪ್ರಮುಖ ವಿಷಯವನ್ನು ಕೂಡ ತಿಳಿಸುತ್ತಿದ್ದೇವೆ, ಇವುಗಳ ಮಾಹಿತಿಗಾಗಿ ಅಂಕಣವನ್ನು ಪೂರ್ತಿಯಾಗಿ ಓದಿ.

ಯಾರಿಗೆಲ್ಲಾ ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಬಂದಿಲ್ಲ, ಅವರು ಹಣ ಬರುತ್ತೋ ಇಲ್ವೋ ಅಂತ ಈ ವಿಧಾನದ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

ಹಳೆಯ ಪಿಂಚಣಿ ಯೋಜನೆ ಮತ್ತು ಹೊಸ ಪಿಂಚಣಿ ಯೋಜನೆ ಎಂದರೇನು ಎಂದು ತಿಳಿದುಕೊಳ್ಳೋಣ. ಹಳೆಯ ಪಿಂಚಣಿ ಯೋಜನೆ ಅಥವಾ OPS ಸರ್ಕಾರದಿಂದ ಅನುಮೋದಿಸಲ್ಪಟ್ಟ ನಿವೃತ್ತಿ ಯೋಜನೆಯಾಗಿದೆ. ಇದು ಫಲಾನುಭವಿಗಳಿಗೆ ಅವರ ಸೇವಾ ಜೀವನದ ಕೊನೆಯವರೆಗೂ ಮಾಸಿಕ ಪಿಂಚಣಿ ನೀಡುತ್ತದೆ ಮಾಸಿಕ ಪಿಂಚಣಿಯು ನೌಕರನ ಕೊನೆಯ ಸಂಬಳದ ಅರ್ಧದಷ್ಟಿರುತ್ತದೆ.

NPS ಈಗ ಸುದ್ದಿ ಆಗುತ್ತಿರುವ ಹೊಸ ನಿವೃತ್ತಿ ಯೋಜನೆಯಾಗಿದ್ದು, ಇದರಲ್ಲಿ ಫಲಾನುಭವಿಗಳು ನಿವೃತ್ತಿಯ ನಂತರ ಅವರು ಹೂಡಿಕೆ ಮಾಡಿದ ಮೊತ್ತದ 60% ಅನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಈ ಮಾಸಿಕ ಪಿಂಚಣಿ ಪಡೆಯಲು ಉಳಿದ 40% ವರ್ಷಾಶನದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.ಇದನ್ನು ಭಾರತ ಸರ್ಕಾರವು 2004 ರಲ್ಲಿ ಪರಿಚಯಿಸಿತು. ನೌಕರನ ಮರಣ ಮತ್ತು ಅಂಗವಿಕಲತೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರು ಮಾತ್ರ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳಿಗೆ ಹಿಂತಿರುಗಬಹುದು.

ನಾಳೆಯಿಂದ ದೇಶದಾದ್ಯಂತ ಈ 13 ನಿಯಮಗಳು ಬದಲಾಗಿದೆ.! ಸಾರ್ವಜನಿಕರು ತಪ್ಪದೆ ಇದನ್ನು ತಿಳಿದುಕೊಳ್ಳಿ.!

ಹಾಗಾಗಿ ಎಲ್ಲಾ ನೌಕರರು ಕೂಡ ಈ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದರು. 2006ರ ನಂತರ ಸರ್ಕಾರಿ ನೌಕರರು ಎಲ್ಲರಿಗೂ ಕೂಡ ಹಳೆ ಪಿಂಚಣಿ ವ್ಯವಸ್ಥೆಯಂತೆ ಪಿಂಚಣಿ ಇಡಬೇಕು ಜೊತೆಗೆ ತಮ್ಮ ಕುಟುಂಬಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಂಡು 7ನೇ ವೇತನ ಆಯೋಗದ ವರದಿ ಪ್ರಕಾರ ವೇತನವನ್ನು ಪರಿಷ್ಕರಿಸಿ ನೀಡಬೇಕು ಎಂದು ಮನವಿ ಕೂಡ ಸಲ್ಲಿಸಿದ್ದರು.

ಮೊದಲಿಗೆ ರಾಜಸ್ಥಾನ, ಛತಿಸ್ಗಢ ಹಾಗೂ ಜಾರ್ಖಂಡ್ ರಾಜ್ಯಗಳು ಈ ಹೊಸ ಪಿಂಚಣಿ ವ್ಯವಸ್ಥೆಯನ್ನು ಕೈ ಬಿಟ್ಟು ಹಳೆ ಪಿಂಚಣಿ ವ್ಯವಸ್ಥೆಗೆ ಹಿಂತಿರುಗಿದವು. ಇತ್ತೀಚೆಗೆ ಆಂಧ್ರಪ್ರದೇಶ ಸರಕಾರವು ಕೂಡ ತನ್ನ ನೌಕರರಿಗೆ ನಿವೃತ್ತಿ ವೇಳೆಯಲ್ಲಿ ಮೂಲವೇತನದ 33% ಪೆನ್ಷನ್ ಕೊಡುವುದಾಗಿ ಘೋಷಿಸಿತ್ತು ಈಗ ಕೇಂದ್ರ ಸರ್ಕಾರ ಒಟ್ಟಾರೆಯಾಗಿ ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

SBI New Annuity Deposit ಸ್ಕೀಮ್, ಕೇವಲ ಒಂದು ಸಲ 1 ಲಕ್ಷ ಕಟ್ಟಿದ್ರೆ ಸಾಕು ಪ್ರತಿ ತಿಂಗಳು ಸಿಗಲಿದೆ 3,259/- ರೂಪಾಯಿ

ಪ್ರಸ್ತುತ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ  ನೌಕರರು ಮೂಲ ವೇತನದ 10% ಮತ್ತು ಸರ್ಕಾರ 14% ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಹಾಗೆಯೇ ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ಕೊನೆಯ ವೇತನದ 50% ಖಾತರಿ ಪಿಂಚಣಿಯಾಗಿ ನೀಡಲಾಗುತ್ತದೆ. ನೌಕರರು ತಮ್ಮ ಕೊನೆಯ ಸಂಬಳದ 40% ರಿಂದ 45% ರಷ್ಟು ಖಾತರಿಯಾಗಿ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಯು ಸರ್ಕಾರದ ಹೊಸ ಪಿಂಚಣಿ ವ್ಯವಸ್ಥೆಯ ಅಭಿವೃದ್ಧಿಗೆ ಒತ್ತು ನೀಡಿ ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Minister Nirmala Sitharaman) ಹೇಳಿಕೆ ನೀಡಿದ್ದಾರೆ.

ಆಸ್ತಿ ರಿಜಿಸ್ಟರ್ ಯಾವ ವಿಧಾನದಲ್ಲಿ ಮಾಡಿದರೆ ಬೆಸ್ಟ್, ಕ್ರಯ ಪತ್ರ ಮತ್ತು ದಾನ ಪತ್ರದ ನಡುವಿನ ವ್ಯತ್ಯಾಸವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Leave a Comment

%d bloggers like this: