ಕರ್ನಾಟಕ ರಾಜ್ಯ ಸರ್ಕಾರದ (Karnataka government) ಗ್ಯಾರಂಟಿ ಯೋಜನೆಗಳ ಒಂದಾದ ಅನ್ನಭಾಗ್ಯ ಯೋಜನೆಯನ್ನು (Annabhagya Scheme) ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರವು ಚುನಾವಣೆ ಪೂರ್ವವಾಗಿ ಭರವಸೆ ನೀಡಿದಂತೆ ಅನ್ನಭಾಗ್ಯ ಯೋಜನೆಯಡಿ ಕೇಂದ್ರದಿಂದ ಸಿಗುತ್ತಿರುವ 5Kg ಅಕ್ಕಿ ಜೊತೆ ರಾಜ್ಯ ಸರ್ಕಾರದಿಂದ ವತಿಯಿಂದಲೂ ಕೂಡ 5Kg ಅಕ್ಕಿ ಸೇರಿಸಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿ ಸದಸ್ಯರಿಗೂ 10kg ಪಡಿತರ (10 Kg ration) ನೀಡುವುದಾಗಿ ಘೋಷಣೆ ಮಾಡಿತ್ತು.
ಆದರೆ ಕೊನೆಯ ಹಂತದಲ್ಲಿ ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣ ಅಕ್ಕಿ ಖರೀದಿಗೆ ಪ್ರಯತ್ನಿಸಿ ಸೋತ ಸರ್ಕಾರವು ಕೇಂದ್ರ ಸರ್ಕಾರದಿಂದ ಬಲುವ 5Kg ಅಕ್ಕಿಯನ್ನು ವಿತರಣೆ ಮಾಡಿ ಹೆಚ್ಚುವರಿಯಾಗಿ ನೀಡಬೇಕಾದ 5Kg ಅಕ್ಕಿ ಬದಲು Kg ಗೆ 34 ರೂಪಾಯಿಯಂತೆ ಒಬ್ಬ ಸದಸ್ಯನಿಗೆ 170 ರೂಗಳನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ( transfer head of the family account through DBT) ವರ್ಗಾವಣೆ ಮಾಡುವುದಕ್ಕೆ ನಿರ್ಧಾರ ಮಾಡಿತು.
ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!
ಅಂತೆಯೇ ಜುಲೈ ತಿಂಗಳಿನಿಂದ (Annabhagya launch at July) ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿರುವ ಕಾರಣ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೋಟ್ಯಾಂತರ ಪಡಿತರ ಚೀಟಿದಾರರು ಈ ಹೆಚ್ಚುವರಿ ಅಕ್ಕಿಯ ಹಣವನ್ನು ಪಡೆದಿದ್ದಾರೆ. ಈ ಪೈಕಿ ಲಕ್ಷಾಂತರ ಸದಸ್ಯರು ಹಣ ಪಡೆಯಲಾಗದ ವಂಚಿತರಾಗಿದ್ದರೆ ಎನ್ನುವ ಮಾಹಿತಿಯನ್ನು ಆಹಾರ ಇಲಾಖೆ (food department) ಹಂಚಿಕೊಂಡಿದೆ.
ಜುಲೈ ತಿಂಗಳ ಹಣ ವರ್ಗಾವಣೆ ಆದ ನಂತರವೇ ಆಹಾರ ಇಲಾಖೆ ವೆಬ್ಸೈಟ್ (DBT Status check through ahara website ) ಅಲ್ಲಿ DBT ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು, ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಯಾರ ಹೆಸರಿದೆ ಅವರ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ, ಯಾವ ದಿನಾಂಕದಂದು ಎಷ್ಟು ಹಣ ವರ್ಗಾವಣೆ ಆಗಿದೆ ಹಾಗೂ ಎಷ್ಟು Kg ಅಕ್ಕಿ ಹಣ ಪಡೆಯಲು ಅರ್ಹವಾಗಿದೆ ಎನ್ನುವ ವಿವರವನ್ನು ಕೂಡ ಅದರಲ್ಲಿ ನೀಡಲಾಗಿತ್ತು.
ಅದೇ ರೀತಿ ಹಣ ಪಡೆಯಲಾಗದೆ ಸಮಸ್ಯೆ ಆದವರಿಗೆ ಯಾವ ಕಾರಣದಿಂದಾಗಿ ಸಮಸ್ಯೆ ಆಗಿದೆ ಎನ್ನುವ ಘೋಷಣೆ ಕೂಡ ಬರುತ್ತಿತ್ತು ಅದನ್ನ ನೋಡಿ ಸಮಸ್ಯೆ ಸರಿಪಡಿಸಿಕೊಂಡ 25 ಲಕ್ಷ ಪಡಿತರ ಚೀಟಿ ದಾರರು ಜುಲೈ ತಿಂಗಳಲ್ಲಿ ಹಣ ಪಡೆಯಲಾಗದಿದ್ದರು ಆಗಸ್ಟ್ ತಿಂಗಳಲ್ಲಿ ಹಣ ಪಡೆದಿದ್ದಾರೆ. ಆದರೆ ಈ ತಿಂಗಳು ಕೂಡ 29 ಲಕ್ಷ ಪಡಿತರದಾರರು ಹಣ ಪಡೆಯಲು ಸಾಧ್ಯವಾಗಿಲ್ಲ ತಾಂತ್ರಿಕ ದೋಷದಿಂದಾಗಿ ಅವರ ಹಣ ವರ್ಗಾವಣೆ ತಡೆಹಿಡಿಯಲಾಗಿದೆ ಎಂದು ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ (Gnanedra Kumar ) ಅವರು ಮಾಹಿತಿ ನೀಡಿದ್ದಾರೆ.
ಈಗ ಈ ಹೆಚ್ಚುವರಿ ಅಕ್ಕಿ ಹಣದ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (C.M Siddaramaih) ಅವರು ಸಹ ಕೆಲವು ಪ್ರಮುಖ ಅಂಶಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತಾಂತ್ರಿಕ ದೋಷದಿಂದ ಹಣ ಪಡೆಯಲಾಗದವರು ಮಾತ್ರವಲ್ಲದೆ ಮೂರು ತಿಂಗಳಿನಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯದಿದ್ದವರು ಹಾಗೂ ಕುಟುಂಬದ ಗರಿಷ್ಠ ಸದಸ್ಯರ ಮಿತಿಯನ್ನು ಮೀರಿರುವ ಕುಟುಂಬಗಳು ಕೂಡ ಸೆಪ್ಟೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಆದರೆ ಕೇಂದ್ರದಿಂದ ಸಿಗುತ್ತಿರುವ 5Kg ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಹೋಗಿ ಪಡೆಯಬಹುದು ಮತ್ತು ತಾಂತ್ರಿಕ ದೋಷದಿಂದ ಹಣ ಪಡೆಯಲಾಗದವರು ಶೀಘ್ರವೇ ತಮ್ಮ ಯಾವ ಸಮಸ್ಯೆಯಿಂದ ಹಣ ಪಡೆಯಲಾಗುತ್ತಿಲ್ಲ ಎನ್ನುವುದನ್ನು ಸರಿಪಡಿಸಿಕೊಂಡರೆ ಆಗ ಅವರಿಗೆ ಹಣ ವರ್ಗಾವಣೆ ಆಗುತ್ತದೆ ಎನ್ನುವುದನ್ನು ತಿಳಿಸಿದ್ದಾರೆ.