LIC (Life Insurance Corporation of India) ಕೂಡ ಅನೇಕ ಬಗೆಯ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಪೆನ್ಷನ್ ಪ್ಲಾನ್ ಮಾಡುವವರಿಗೂ ಅನುಕೂಲವಾಗುವಂತಹ ಯೋಜನೆಗಳು ಇವೆ. ಇಂತಹ ಯೋಜನೆಗಳಲ್ಲಿ LIC ಜೀವನ್ ಅಕ್ಷಯ್ ಯೋಜನೆ (LIC Jeevan Akshay Scheme) ಕೂಡ ಒಂದು.
ಈ ಯೋಜನೆಯನ್ನು LIC Annuilty plan ಅಥವಾ LIC Pension plan ಎಂದು ಕೂಡ ಕರೆಯಬಹುದು ಯಾಕೆಂದರೆ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ನೀವು ಜೀವನಪರ್ಯಂತ ಪ್ರತಿ ತಿಂಗಳು ಪೆನ್ಷನ್ ಪಡೆಯಬಹುದು. ಹಾಗಾಗಿ ಈ ಯೋಜನೆಯ ಕೆಲ ಪ್ರಮುಖ ನಿಯಮ ಹಾಗೂ ನಿಬಂಧನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಈ ಯೋಜನೆಯನ್ನು 30 ವರ್ಷ ಮೇಲ್ಪಟ್ಟವರು ಮಾತ್ರ ಖರೀದಿಸಬಹುದು
● ಗರಿಷ್ಠ ವಯೋಮಿತಿ 85 ವರ್ಷಗಳು
● ನೀವೇನಾದರೂ LIC ಜೀವನ್ ಅಕ್ಷಯ್ ಯೋಜನೆಯ F ಆಪ್ಷನ್ ಅನ್ನು ಸೆಲೆಕ್ಟ್ ಮಾಡುವುದಾದರೆ ಗರಿಷ್ಠ ವಯೋಮಿತಿ 100 ವರ್ಷಗಳಿರುತ್ತದೆ.
ನೀವು ನೇರವಾಗಿ LIC ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಕೂಡ ಆನ್ಲೈನ್ ನಲ್ಲಿ ಈ ಯೋಜನೆ ಖರೀದಿಸಬಹುದು ಅಥವಾ LIC ಶಾಖೆಗಳಿಗೆ ಹೋಗಿ ಅರ್ಜಿ ಭರ್ತಿ ಮಾಡಿ ತುಂಬಿಸುವ ಮೂಲಕ ಕೂಡ ಆಫ್ ಲೈನ್ ನಲ್ಲಿ ಯೋಜನೆ ಖರೀದಿ ಮಾಡಬಹುದು.
● ಈ ಯೋಜನೆಗೆ ಪ್ರತಿ ತಿಂಗಳು ಪ್ರೀಮಿಯ್ ಗಳನ್ನು ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ
● ಒಂದೇ ಬಾರಿಗೆ ಒಂದು ಮೊತ್ತದ ಹಣವನ್ನು ಯೋಜನೆಯಡಿ ಹೂಡಿಕೆ ಮಾಡಬೇಕು.
ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!
● ಕನಿಷ್ಠ 1 ಲಕ್ಷವನ್ನಾದರೂ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು
● ಹೂಡಿಕೆಗೆ ಗರಿಷ್ಠ ಯಾವುದೇ ಮಿತಿ ಇಲ್ಲ.
● ಯೋಜನೆಯನ್ನು ಖರೀದಿಸಲು ಯಾವುದೇ ವೈದ್ಯಕೀಯ ಪರೀಕ್ಷೆಯ ಡಾಕ್ಯುಮೆಂಟ್ ಗಳನ್ನು ಸಬ್ಮಿಟ್ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
● ನೀವು ನಿಮ್ಮ ಪೆನ್ಷನ್ ನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಪಡೆಯಲು ಆಪ್ಷನ್ ಗಳು ಇವೆ. ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಆಪ್ಷನ್ ಸೆಲೆಕ್ಟ್ ಮಾಡಬಹುದು.
ಈ ಯೋಜನೆಯನ್ನು ಖರೀದಿಸಲು ಬೇಕಾಗುವ ದಾಖಲೆಗಳು:-
1. ತುಂಬಿದ ಅರ್ಜಿ ಫಾರಂ
2. ಜನ್ಮ ದಿನಾಂಕದ ಗುರುತಿಗಾಗಿ ಆಧಾರ್ ಕಾರ್ಡ್
3. ವಿಳಾಸ ಪುರಾವೆಗಾಗಿ ಯಾವುದಾದರೂ ಗುರುತಿನ ಚೀಟಿ
4. ನಿಮ್ಮ ಪಾಸ್ ಬುಕ್ ವಿವರ
5. ಇತ್ತೀಚಿನ ಭಾವಚಿತ್ರ
6. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ.
● ಯೋಜನೆಗೆ ಮೆಚ್ಯುರಿಟಿ ಅವಧಿ ಎನ್ನುವುದು ಇರುವುದಿಲ್ಲ, ಇದು ಜೀವನ ಪರ್ಯಂತ ಪೆನ್ಷನ್ ನೀಡುವ ಯೋಜನೆಯಾಗಿದೆ, ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದ್ದು ನಿಮ್ಮ ನಂತರ ನೀವು ಹೂಡಿಕೆ ಮಾಡಿದ ಮೊತ್ತವು ನಾಮಿನಿಗೆ ಹೋಗುತ್ತದೆ.
● ನೀವು ನಿಮ್ಮ ಹೂಡಿಕೆ ಮೊತ್ತದ ಆಧಾರದ ಮೇಲೆ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು.
● ಯೋಜನೆ ಖರೀದಿಸಿದ 15 ರಿಂದ 30 ದಿನದ ಒಳಗಡೆ ರದ್ದು ಪಡಿಸಬಹುದು.
● LIC ಜೀವನ್ ಅಕ್ಷಯ್ ಯೋಜನೆಯಡಿ ಹಲವಾರು ಆಪ್ಷನ್ಗಳಿರುತ್ತವೆ, Option A,B,F,G,H,I,J ಪ್ರತಿ ಆಪ್ಷನ್ ಕೂಡ ರೂಪುರೇಷೆಗಳಲ್ಲಿ ವಿಭಿನ್ನತೆಯನ್ನು ಹೊಂದಿರುತ್ತದೆ.
● ನೀವು ನಿಮ್ಮ 30ನೇ ವಯಸ್ಸಿನಲ್ಲಿ 1.5 ಲಕ್ಷಕ್ಕೆ ಈ ಯೋಜನೆಯನ್ನು ಖರೀದಿಸಿದರೆ ನಿಮಗೆ ವಾರ್ಷಿಕವಾಗಿ 9,832 ರೂ. ಪೆನ್ಷನ್ ಸಿಗುತ್ತದೆ ಇದನ್ನು ಅರ್ಧವಾರ್ಷಿಕವಾಗಿ ಪಡೆಯುವುದಾದರೆ 4,916 ರೂಗಳು ಸಿಗುತ್ತದೆ, ತ್ರೈಮಾಸಿಕವಾಗಿ ಪಡೆಯುವುದಾದರೆ 2,397ರೂ. ಪ್ರತಿ ತಿಂಗಳು ಪಡೆಯುವುದಾದರೆ 794 ರೂಗಳು ಸಿಗಲಿದೆ.
ನಾಳೆಯಿಂದ ದೇಶದಾದ್ಯಂತ ಈ 13 ನಿಯಮಗಳು ಬದಲಾಗಿದೆ.! ಸಾರ್ವಜನಿಕರು ತಪ್ಪದೆ ಇದನ್ನು ತಿಳಿದುಕೊಳ್ಳಿ.!
● ಈ ಯೋಜನೆ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು LIC ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ ಅಥವಾ LIC ಶಾಖೆಗಳಿಗೆ ಭೇಟಿಕೊಟ್ಟು ಅಥವಾ ನಿಮ್ಮ LIC ಏಜೆಂಟ್ ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ.