ನಾಳೆಯಿಂದ ದೇಶದಾದ್ಯಂತ ಈ 13 ನಿಯಮಗಳು ಬದಲಾಗಿದೆ.! ಸಾರ್ವಜನಿಕರು ತಪ್ಪದೆ ಇದನ್ನು ತಿಳಿದುಕೊಳ್ಳಿ.!

 

ಪ್ರತಿ ತಿಂಗಳ ಅಂತ್ಯ ಹಾಗೂ ಆರಂಭದಲ್ಲಿ ಹಲವು ವಿಷಯಗಳ ಬಗ್ಗೆ ಗಮನ ಕೊಡಲೇಬೇಕು. ಸರ್ಕಾರದ ಹಲವು ಸೂಚನೆಗಳಿಗೆ, ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಅಥವಾ ನಮ್ಮ ಹೂಡಿಕೆ ಯೋಜನೆಗಳ ಪ್ರೀಮಿಯಂ ಗಳನ್ನು ಪಾವತಿಸುವುದಕ್ಕೆ ಕಡೆಯ ದಿನಾಂಕವಾಗಿರುತ್ತದೆ. ದೇಶದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆ ಅಥವಾ ಇಳಿಕೆ ಇದೇ ಸಮಯದಲ್ಲಿ ಆಗುತ್ತದೆ. ಸದ್ಯಕ್ಕೆ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಾದ್ಯಂತ ಬದಲಾಗಲಿರುವ ಪ್ರಮುಖ 13 ವಿಷಯಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● SBI ಹೊಸದಾಗಿ We Care Scheme ಪರಿಚಯಿಸಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಖಚಿತವಾಗಿ ಹೆಚ್ಚು ಲಾಭವನ್ನು ಪಡೆಯುತ್ತೀರಿ. ಈ ಯೋಜನೆ ಖರೀದಿಸಲು ಸೆಪ್ಟೆಂಬರ್ 30 ಕಡೆ ದಿನಾಂಕ.
● CBDT ಹೊಸ ನಿಯಮವನ್ನು ಜಾರಿಗೆ ತಂದಿದೆ, ಇದರಿಂದ ತೆರಿಗೆ ದರದಲ್ಲಿ ಬದಲಾವಣೆಯಾಗಿದೆ, ಇದು ಸೆಪ್ಟೆಂಬರ್ 1 ರಿಂದ ಅನ್ವಯವಾಗಲಿದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ಸೆಪ್ಟೆಂಬರ್ ತಿಂಗಳಿನಿಂದ ಸಂಬಳದಲ್ಲಿ ಮೊದಲಿಗಿಂತ ಹೆಚ್ಚು ಸಿಗುತ್ತದೆ.

SBI New Annuity Deposit ಸ್ಕೀಮ್, ಕೇವಲ ಒಂದು ಸಲ 1 ಲಕ್ಷ ಕಟ್ಟಿದ್ರೆ ಸಾಕು ಪ್ರತಿ ತಿಂಗಳು ಸಿಗಲಿದೆ 3,259/- ರೂಪಾಯಿ

● ರಿಲಯನ್ಸ್ ಜಿಯೋ (Jio) ತನ್ನ 5G ಏರ್ ಫೈಬರ್ ಹೈಸ್ಪೀಡ್ ಇಂಟರ್ನೆಟ್ ಸೇವೆ (High Speed Internet Service) ಯನ್ನು ಪ್ರಾರಂಭಿಸಲಿದೆ, ಇದು ಗಣೇಶ ಚತುರ್ಥಿಯ ದಿನದಂದು ಅಂದರೆ ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ.
● LPG ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price) 200 ರೂ ಇಳಿಕೆಯಾಗಿದೆ, ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಫಲಾನುಭವಿಗಳಿಗೆ 400 ರೂ.ವರೆಗೆ ರಿಯಾಯಿತಿ ದೊರೆಯಲಿದೆ ಇದು ಕೂಡ ಸೆಪ್ಟೆಂಬರ್ ತಿಂಗಳಿಂದ ಅನ್ವಯವಾಗಲಿದೆ.

● SEBI IPO ಕುರಿತು ಹೊಸ ನಿಯಮವನ್ನು ಜಾರಿಗೆ ತಂದಿದೆ, ಇದರಿಂದ ಈಗ ಯಾವುದೇ ಕಂಪನಿಯು ತನ್ನ IPO ನ್ನು 3 ದಿನಗಳಲ್ಲಿ ಮಾತ್ರ ಪಟ್ಟಿ ಮಾಡಲು ಸಾಧ್ಯ, ಇದು ಮೊದಲ 6 ದಿನಗಳಲ್ಲಿ ಮಾಡಲಾಗುತ್ತದೆ, ಈ ನಿಯಮವನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುವುದು, ಮೊದಲು 1 ಸೆಪ್ಟೆಂಬರ್ 2023 ರಂದು ಅಥವಾ ಅದರ ನಂತರ ತೆರೆಯುವ ಕಂಪನಿಗಳ IPO ಗಳಿಗೆ ಇದು ಸ್ವಯಂಪ್ರೇರಿತವಾಗಿರುತ್ತದೆ ಮತ್ತು ಎರಡನೆಯದಾಗಿ, ಡಿಸೆಂಬರ್ 2023 ರ ನಂತರ ತೆರೆಯುವ ಕಂಪನಿಗಳ IPO ಗಳಿಗೆ ಇದು ಕಡ್ಡಾಯವಾಗಿರುತ್ತದೆ.

ಆಸ್ತಿ ರಿಜಿಸ್ಟರ್ ಯಾವ ವಿಧಾನದಲ್ಲಿ ಮಾಡಿದರೆ ಬೆಸ್ಟ್, ಕ್ರಯ ಪತ್ರ ಮತ್ತು ದಾನ ಪತ್ರದ ನಡುವಿನ ವ್ಯತ್ಯಾಸವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● Demat Account ಗೆ Nominee ಹೆಸರು ಸೂಚಿಸಲು ಇದ್ದ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30 ರ ವರೆಗೆ ಸರ್ಕಾರ ವಿಸ್ತರಿಸಿದೆ.
● ಭಾರತ ಸರ್ಕಾರವು ರೂ. 2000 ಮುಖಬೆಲೆಯ ನೋಟ್ ಗಳನ್ನು ಮರಳಿ ಪಡೆಯುತ್ತಿದೆ ಸೆಪ್ಟೆಂಬರ್ 30 ಇದಕ್ಕೆ ಕೊನೆಯ ದಿನಾಂಕ. ಆದರೆ ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ದಿನಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ ಹಾಗಾಗಿ ಶೀಘ್ರವಾಗಿ ಈ ಪ್ರಕ್ರಿಯೆ ಮುಗಿಸಿ.

● ಭಾರತ ಸರ್ಕಾರವು ಸೆಪ್ಟೆಂಬರ್ ನಿಂದ “ಮೇರಾ ಬಿಲ್ ಮೇರಾ ಅಧಿಕಾರ್” (Mera Bill Mera Adhikar) ಎಂಬ GST ಯೋಜನೆಯನ್ನು ಪ್ರಾರಂಭಿಸುತ್ತಿದೆ, ಇದರಲ್ಲಿ ಭಾಗಿಯಾಗುವ ಮೂಲಕ ನೀವು 1 ಕೋಟಿ ರೂಪಾಯಿಗಳ ಬಹುಮಾನವನ್ನು ಮನೆಯಲ್ಲಿ ಕುಳಿತು ಗೆಲ್ಲಬಹುದು. ಇದಕ್ಕಾಗಿ ನೀವು ಈ ತಿಂಗಳಲ್ಲಿ ಕನಿಷ್ಠ 200 ರೂ. ಆದರೂ ಶಾಪಿಂಗ್ ಮಾಡಿ ಅದರ GST ಬಿಲ್ ನ್ನು ಮೇರಾ ಬಿಲ್ ಮೇರಾ ಅಧಿಕಾರ ಮೊಬೈಲ್ ಆಪ್ ನಲ್ಲಿ ಅಪ್‌ಲೋಡ್ ಮಾಡಬೇಕು. ಸದ್ಯಕ್ಕೀಗ ದೇಶದ ಕೆಲವೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದು ಅನ್ವಯಿಸುತ್ತಿದೆ. ಮುಂದಿನ ತಿಂಗಳುಗಳಲ್ಲಿ ದೇಶದಾದ್ಯಂತ ಎಲ್ಲರೂ ಭಾಗವಹಿಸುವ ಅವಕಾಶ ಸಿಗಲಿದೆ.

ರಾಜ್ಯದ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ ಬಿಡುಗಡೆ.! ಒಂದೇ ಸಲಕ್ಕೆ ಸಿಗಲಿದೆ 25,000/- ಅರ್ಜಿ ಸಲ್ಲಿಸೋದು ಹೇಗೆ ನೋಡಿ.!

● ಸೆಪ್ಟೆಂಬರ್ ತಿಂಗಳಿನಿಂದ ಸುಮಾರು 150 ವಿಧದ ಔಷಧಿಗಳು (Medicines) ಬೆಲೆ ಕಡಿಮೆಯಾಗಲಿದೆ.
● ನಿಮ್ಮ ಆಧಾರ್ ಕಾರ್ಡ್‌ (Aadhaar Card) ನಲ್ಲಿ ಏನಾದರೂ ದೋಷವಿದ್ದರೆ, ನೀವು ಅದನ್ನು ಸೆಪ್ಟೆಂಬರ್ 14 ರವರೆಗೆ ಉಚಿತವಾಗಿ ನವೀಕರಿಸಬಹುದು. ಈ ನಿಯಮವನ್ನು UIDAI ಜಾರಿಗೆ ತಂದಿದೆ. ಅದರ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡುವ ಮೂಲಕ ನೀವು ಅದನ್ನು ಉಚಿತವಾಗಿ ನವೀಕರಿಸಬಹುದು. ಇದು ಕಡೆ ಅವಕಾಶವಾಗಿದ್ದು ಮುಂದೆ ಇದಕ್ಕೆ ಶುಲ್ಕ ಪಾವತಿಸಬೇಕಾಗಿ ಬರಬಹುದು.

● ಸಣ್ಣ ಉಳಿತಾಯ ಖಾತೆ (Small Savings Account) ದಾರರು 30 ಸೆಪ್ಟೆಂಬರ್ 2023 ರೊಳಗೆ ಆಧಾರ್ ಪ್ಯಾನ್ (Aadhaar-PAN) ಪ್ಯಾನ್ ಲಿಂಕ್ ಮಾಡುವುದು ಅವಶ್ಯಕ, ನೀವು ಹಾಗೆ ಮಾಡದಿದ್ದರೆ ನಿಮ್ಮ ಉಳಿತಾಯ ಯೋಜನೆಗಳ ಖಾತೆ ನಿಷ್ಕ್ರಿಯಗೊಳ್ಳಬಹುದು.
● ಈ ತಿಂಗಳಿನಿಂದ ಟೋಲ್ ತೆರಿಗೆ (Toll Tax) ಹೆಚ್ಚಾಗುವ ಸಾಧ್ಯತೆ ಇದೆ.
● ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್ (Credit Card) ಬಳಕೆದಾರರಿಗೆ ADGA ರಿವಾರ್ಡ್ ಅಂಕಗಳ ಕುರಿತು ಸೆಪ್ಟೆಂಬರ್ ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.

LIC ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಪ್ರಥಮ ವರ್ಷದ PUC, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ.!

Leave a Comment

%d bloggers like this: