ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹಣಕಾಸಿನ ಅನಾನುಕೂಲತೆ ಕಾರಣದಿಂದಾಗಿ ಯಾವ ಮಗು ಕೂಡ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸರ್ಕಾರ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿ ಮಾಡಿ ಹದಿನಾಲ್ಕು ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿದೆ.
ನಂತರದಲ್ಲೂ ಕೂಡ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಸರ್ಕಾರದ ವತಿಯಿಂದಾಗಿ ಸಹಾಯಧನ, ವಿದ್ಯಾರ್ಥಿ ವೇತನ ಪ್ರೋತ್ಸಾಹ ಧನ ಈ ಸೌಲಭ್ಯಗಳು ಕೂಡ ಸಿಗುತ್ತಿವೆ. ಸರ್ಕಾರ ಮಾತ್ರವಲ್ಲದೇ ಸರ್ಕಾರೇತರವಾಗಿ ಕೂಡ ಅನೇಕ ಸಂಘ ಸಂಸ್ಥೆಗಳು, NGO ಗಳು, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿ ವರ್ಗಕ್ಕೆ ಸಹಾಯ ಹಸ್ತ ಚಾಚುತ್ತಿವೆ.
ಕೊನೆಗೂ ಬಂತು, ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ಸ್ಟೇಟಸ್ ಚೆಕ್ ಮಾಡುವ ಆಪ್ಷನ್.!
ಅಂತೆಯೇ ಈಗ ದೇಶದಲ್ಲಿ ಪ್ರತಿಷ್ಠಿತ ಬ್ಯಾಂಕ್ ಎಂದು ಹೆಸರುವಾಸಿಯಾಗಿರುವ LIC (Life Insurance Corporation of India) ಸಂಸ್ಥೆ ಕೂಡ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತನ್ನ ಸಂಸ್ಥೆ ವತಿಯಿಂದ ವಿದ್ಯಾರ್ಥಿ ವೇತನ ನೀಡುತ್ತಿದೆ. 2023-24ನೇ ಸಾಲಿನಲ್ಲಿ LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC housing finance limited ) ಪ್ರಯೋಜನವನ್ನು ಭಾರತದ ಎಲ್ಲಾ ಹಿಂದುಳಿದ ವರ್ಗದ ಪ್ರಥಮ ವರ್ಷದಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದು.
LIC HFL ವಿದ್ಯಾಧನ್ ವಿದ್ಯಾರ್ಥಿವೇತನ 2023 (Vidyadhan Scholarship 2023) ಸೌಲಭ್ಯ ಪಡೆಯಲು ಏನೆಲ್ಲಾ ಕಂಡೀಷನ್ ಗಳು ಇವೆ ಮತ್ತು ಯಾವೆಲ್ಲಾ ದಾಖಲೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ತಪ್ಪದೆ ಶೇರ್ ಮಾಡಿ.
SBI ನಲ್ಲಿ ಖಾತೆ ಇದ್ದವರಿಗೆ ವಿಶೇಷ ಸೂಚನೆ, ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ ಮುಗಿಸುವುದು ಕಡ್ಡಾಯ.!
ಯೋಜನೆಯ ಹೆಸರು:- LIC HFL ವಿದ್ಯಾಧನ್ ವಿದ್ಯಾರ್ಥಿ ವೇತನ…
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
● ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ 11ನೇ ತರಗತಿ ಅಥವಾ ಪದವಿ ಮೊದಲ ವರ್ಷದ ಅಥವಾ ಸ್ನಾತಕೋತ್ತರ ಪದವಿಯ ಮೊದಲನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡಲು ದಾಖಲಾಗಿರಬೇಕು.
● ಹಿಂದಿನ ವರ್ಷದ ಪರೀಕ್ಷೆಗಳಲ್ಲಿ ಕನಿಷ್ಠ 60% ಕ್ಕಿಂತ ಕಡಿಮೆ ಇಲ್ಲದ ಅಂಕದೊಂದಿಗೆ ಉತ್ತೀರ್ಣರಾಗಿರಬೇಕು.
● ಕುಟುಂಬದ ಆದಾಯವು ಎಲ್ಲಾ ಮೂಲಗಳಿಂದಲೂ 3,60,000 ಮೀರಿರಬಾರದು
● ಅರ್ಜಿ ಸಲ್ಲಿಸಲು ಕೇಳಿರುವ ಎಲ್ಲಾ ದಾಖಲೆಗಳನ್ನು ಕೂಡ ಹೊಂದಿರಬೇಕು.
ಬೇಕಾಗುವ ದಾಖಲೆಗಳು:-
● ವಿದ್ಯಾರ್ಥಿಯ ಆಧಾರ್ ಕಾರ್ಡ್
● ಹಿಂದಿನ ವರ್ಷದ ಪರೀಕ್ಷೆಯ ಅಂಕಪಟ್ಟಿ
● ಆದಾಯ ಪ್ರಮಾಣ ಪತ್ರ
● ಜಾತಿ ಪ್ರಮಾಣ ಪತ್ರ
● ಅಂಗವಿಕಲರಾಗಿದ್ದರೆ ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ
● ಪ್ರಸಕ್ತ ವರ್ಷದಲ್ಲಿ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಬಗ್ಗೆ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಡೆದ ಗುರುತಿನ ಚೀಟಿ
● ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ
● ಇತ್ತೀಚಿನ ಭಾವಚಿತ್ರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
SBI ನಲ್ಲಿ ಖಾತೆ ಇದ್ದವರಿಗೆ ವಿಶೇಷ ಸೂಚನೆ, ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ ಮುಗಿಸುವುದು ಕಡ್ಡಾಯ.!
ಅರ್ಜಿ ಸಲ್ಲಿಸುವ ವಿಧಾನ:-
https://www.buddy4study.com/page/lic-hfl-vidhyadhan-scholarship ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಯೋಜನಗಳು:-
● 11ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮಟ್ಟಕ್ಕೆ ಅನುಗುಣವಾಗಿ ರೂ.25,000 ವರೆಗೂ ಕೂಡ ವಿದ್ಯಾರ್ಥಿ ವೇತನ ಸಿಗುತ್ತದೆ.
● PUC ವಿದ್ಯಾರ್ಥಿಗಳಿಗೆ 2 ವರ್ಷಗಳವರೆಗೆ ರೂ.15,000
● ಪದವಿ ವಿದ್ಯಾರ್ಥಿಗಳಿಗೆ 3 ವರ್ಷಗಳವರೆಗೆ ರೂ.25,000
● ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 2 ವರ್ಷಗಳವರೆಗೆ ರೂ.20,000.
SBI ಬ್ಯಾಂಕ್ ನಲ್ಲಿ ನೇಮಕಾತಿ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!