ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking jobs) ಉದ್ಯೋಗ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುವವರು ಅಥವಾ ಈಗಷ್ಟೇ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿರುವವರು ಅಥವಾ ಹಲವು ವರ್ಷಗಳಿಂದ ಉದ್ಯೋಗ ಅರಸುತ್ತಿರುವ ನಿರುದ್ಯೋಗಿಗಳು ಅಥವಾ ಈಗಾಗಲೇ ಉದ್ಯೋಗದಲ್ಲಿದ್ದುಕೊಂಡು ಬ್ಯಾಂಕ್ ಕ್ಷೇತ್ರಕ್ಕೆ ಉದ್ಯೋಗ ಬದಲಾಯಿಸಬೇಕು ಎಂದು ಆಸಕ್ತಿ ಹೊಂದಿರುವವರು ಎಲ್ಲರಿಗೂ ಕೂಡ SBI (State bank of Mysore recruitments) ಬ್ಯಾಂಕ್ ವತಿಯಿಂದ ಸಿಹಿ ಸುದ್ದಿ ಇದೆ.
SBI 6,000ಕ್ಕೂ ಹೆಚ್ಚು ಅಪ್ರೆಂಟಿಸ್ (Apprentice) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಹಾಗೆ ಅಧಿಸೂಚನೆಯನ್ನು(notification) ಕೂಡ ಹೊರಡಿಸಿದ್ದು ಅರ್ಜಿ ಸಲ್ಲಿಸುವುದಕ್ಕೆ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ವಿಧಿಸಿದೆ. ಅದನ್ನು ಪೂರ್ತಿ ಗೊಳಿಸುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನೋಟಿಫಿಕೇಶನ್ ನಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ.
ಉದ್ಯೋಗ ಸಂಸ್ಥೆ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI).
ಹುದ್ದೆ:- ಅಪ್ರೆಂಟಿಸ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 6160
ಉದ್ಯೋಗ ಸ್ಥಳ:-
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ರಾಜ್ಯದ ಮಿತಿಯೊಳಗೆ…
● ಚಾಮರಾಜನಗರ
● ಮೈಸೂರು
● ಮಂಡ್ಯ
● ರಾಮನಗರ
● ಬೆಂಗಳೂರು
● ಹಾಸನ
● ಶಿವಮೊಗ್ಗ.
ವೇತನ ಶ್ರೇಣಿ:- ಕನಿಷ್ಠ 15000 ಮಾಸಿಕವಾಗಿ…
ಶೈಕ್ಷಣಿಕ ವಿದ್ಯಾರ್ಹತೆ:-
● ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ತಿಗೊಳಿಸಿರಬೇಕು.
● ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳನ್ನು ಕೂಡ ಹೊಂದಿರಬೇಕು.
ಇಂಥವರಿಗೆ ಇನ್ಮುಂದೆ ಗ್ಯಾಸ್ ಸಿಲಿಂಡರ್ ಮೇಲೆ 200 ಅಲ್ಲ 400 ರೂಪಾಯಿ ಸಬ್ಸಿಡಿ ಸಿಗುತ್ತೆ.!
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 20 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳು.
ವಯೋಮಿತಿ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 05 ವರ್ಷಗಳು
● OBC ಅಭ್ಯರ್ಥಿಗಳಿಗೆ 03 ವರ್ಷಗಳು.
ಅರ್ಜಿ ಶುಲ್ಕ.
● SC / ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
● ಉಳಿದ ಅಭ್ಯರ್ಥಿಗಳಿಗೆ ರೂ.300
● ಆನ್ಲೈನ್ ಪೇಮೆಂಟ್ ಮೂಲಕ ಅರ್ಜಿ ಶುಲ್ಕ ಪಾವತಿಸಿ ತಪ್ಪದೇ ಇ-ರಸೀದಿ ಪಡೆದುಕೊಳ್ಳಬೇಕು.
ಇಂಥವರಿಗೆ ಇನ್ಮುಂದೆ ಗ್ಯಾಸ್ ಸಿಲಿಂಡರ್ ಮೇಲೆ 200 ಅಲ್ಲ 400 ರೂಪಾಯಿ ಸಬ್ಸಿಡಿ ಸಿಗುತ್ತೆ.!
ಪರೀಕ್ಷಾ ವಿಧಾನ:-
● ಅಭ್ಯರ್ಥಿಗಳನ್ನು ಕಂಪ್ಯೂಟರ್ ಬೇಸ್ಡ್ ಸ್ಪರ್ಧಾತಕ ಪರೀಕ್ಷೆ ನಡೆಸಿ ಆಯ್ದುಕೊಳ್ಳಲಾಗುತ್ತದೆ.
● ಪ್ರಾಂತ್ಯಾವಾರು ಭಾಷೆಗಳ ಬಗ್ಗೆ ಕೂಡ ಪರೀಕ್ಷೆ ಇರುತ್ತದೆ.
● ಸಂದರ್ಶನ
● ದಾಖಲೆಗಳ ಪರಿಶೀಲನೆ
● ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ:-
● ಈ ಮೇಲಿನ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು SBI ನ ಅಧಿಕೃತ ವೆಬ್ಸೈಟ್ ಆದ sbi.co.in ವೆಬ್ಸೈಟ್ ಗೆ ಭೇಟಿಕೊಡಿ.
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಇರುವ ಲಿಂಕ್ ಕ್ಲಿಕ್ ಮಾಡಿ, ಎಲ್ಲ ವಿವರಗಳನ್ನು ಭರ್ತಿ ಮಾಡಿ, ಅದೇ ರೀತಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಅರ್ಜಿ ಸಲ್ಲಿಕೆ ಪೂರ್ತಿಯಾದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಿ.
LIC ಕಟ್ಟುತ್ತಿದ್ದವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.!
ಪ್ರಮುಖ ದಿನಾಂಕಗಳು:-
● ಈ ಹುದ್ದೆಗಳ ಕುರಿತು ಅದು ಸೂಚನೆ ಹೊರಡಿಸಿದ ದಿನಾಂಕ – 21 ಆಗಸ್ಟ್, 2023
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 01 ಸೆಪ್ಟೆಂಬರ್, 2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 21 ಸೆಪ್ಟೆಂಬರ್, 2023
● ಪರೀಕ್ಷೆ ನಡೆಯುವ ದಿನಾಂಕ – ಅಕ್ಟೋಬರ್/ ನವೆಂಬರ್ 2023.