LIC (Life Insurance Corporation of India) ಸಂಸ್ಥೆ ಒಂದು ಜನಸಾಮಾನ್ಯರ ನಂಬಿಕಸ್ಥ ಸಂಸ್ಥೆಯಾಗಿದೆ. ಅದರಲ್ಲೂ ಜೀವ ವಿಮಾ (Life Insurances) ಪಾಲಿಸಿಗಳಿಗೆ ಭಾರತದಲ್ಲಿ ಹೆಸರುವಾಸಿಯಾಗಿರುವ ಈ ಸಂಸ್ಥೆ ಮೂಲಕ ಅನೇಕ ಜನರು ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ, ಕುಟುಂಬದಲ್ಲಿ ಹಿರಿಯರ ಅಥವಾ ಮಕ್ಕಳ ಭದ್ರತೆಗಾಗಿ LIC ಕಂಪನಿಯಲ್ಲಿ ಪಾಲಿಸಿಗಳನ್ನು (Policy) ಖರೀದಿಸುತ್ತಾರೆ.
ದುಡಿಯುವ ವಯಸ್ಸಿನಲ್ಲಿ ಮಕ್ಕಳ ಹೆಸರಿನಲ್ಲಿ ಅಥವಾ ಅವರ ಹೆಸರಿನಲ್ಲಿಯೇ ಸಣ್ಣ ಮೊತ್ತದ ಹಣವನ್ನು ಪ್ರೀಮಿಯಂ ರೂಪದಲ್ಲಿ ಕಟ್ಟಿಕೊಂಡು ಬಂದರೆ ಸಪಾಲಿಸಿ ಮೆಚ್ಯುರ್ ಆದ ವೇಳೆಗೆ ಬಹುದೊಡ್ಡ ಮೊತ್ತವನ್ನು ರಿಟರ್ನ್ ಪಡೆಯಬಹುದು. ಅದು ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚಿಗೆ ಅಥವಾ ಪಾಲಿಸಿದಾರನು ಹೊಂದಿದ್ದ ಕನಸಿನ ಮನೆ ಖರೀದಿಗೆ ಅನುಕೂಲ ಆಗುತ್ತಿದೆ.
ಕಾಲಕ್ಕೆ ತಕ್ಕ ಹಾಗೆ ತನ್ನ ರೂಪುರೇಷಗಳನ್ನು ಬದಲಾಯಿಸಿಕೊಂಡ LIC ಇನ್ನೂ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಈ ವಸಂತಕ್ಕೆ LIC ಗೆ 67 ವರ್ಷ ಪೂರೈಸುತ್ತದೆ. ಹಾಗೆಯೇ ಈಗ ದೇಶದಾದ್ಯಂತ ಕಂಪನಿಯು 27.74 ಗ್ರಾಹಕರನ್ನು ಹೊಂದಿದೆ. ಈ ಶುಭ ಸಂದರ್ಭದಲ್ಲಿ ಅಧ್ಯಕ್ಷರು ತಮ್ಮ ಗ್ರಾಹಕರನ್ನು ಕುರಿತು ವಿಭಿನ್ನ ರೀತಿಯಲ್ಲಿ ವಂದನೆ ಸಲ್ಲಿಸಿ ಕಂಪನಿಯ ಬಗ್ಗೆ ಮಾತಾಡಿ ಹಾಗೆ 67 ವರ್ಷ ಪೂರೈಸುತ್ತಿರುವ ಸಂಭ್ರಮದಲ್ಲಿ LIC ಪಾಲಿಸಿ ಹೊಂದಿರುವವರಿಗೆ ಗುಡ್ ನ್ಯೂಸ್ ಕೂಡ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ನಮ್ಮ ಕಂಪನಿ ಸದಾ ನಂಬಿಕೆಗೆ ಹೆಸರಾಗಿದ್ದು ಷೇರುದಾರರು , ಪಾಲಿಸಿದಾರರು, ಉದ್ಯೋಗಿಗಳು ಅನೇಕ ವರ್ಷದಿಂದ ನಮ್ಮ ಜೊತೆಯಾಗಿದ್ದಾರೆ.LIC ಈ ಒಂದು ಪಯಣ ಸಾಮಾನ್ಯವಾಗಿರದೆ, ಹಲವು ವರ್ಷದ ಶ್ರಮದಿಂದ ಕೂಡಿದೆ. ಇದಕ್ಕೆ ಸಹಕರಿಸಿದ ಸರ್ವರಿಗೂ ವಂದನೆ ಎಂದು LIC ಅಧ್ಯಕ್ಷ ಸಿದ್ಧಾರ್ಥ ಮೊಹಂತಿ (LIC President Siddhartha Mohanty) ಹೇಳಿದ್ದಾರೆ.
SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್ ಇಂದಿನಿಂದ ಹೊಸ ಸೇವೆ ಜಾರಿ.!
LIC ಪಾಲಿಸಿಗಳನ್ನು ಖರೀದಿಸಿದವರಿಗೆ ಇದ್ದ ಒಂದೇ ಒಂದು ಸಮಸ್ಯೆ ಎಂದರೆ ಅವರು ಯೋಜನೆಗಳನ್ನು ಖರೀದಿಸುವಾಗ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ತಮ್ಮ ಪ್ರೀಮಿಯಂ ಗಳನ್ನು (premium) ಪಾವತಿಸಲು ತಮಗೆ ಅನುಕೂಲಕರವಾದ ಯೋಜನೆಯನ್ನು ಆಯ್ದುಕೊಳ್ಳುತ್ತಾರೆ. ಆದರೆ ಯಾವುದೋ ಕಾರಣದಿಂದಾಗಿ ಅವರಿಗೆ ಅವರ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟಲು ಆಗುವುದಿಲ್ಲ.
ಆಗ LIC ಸಂಸ್ಥೆ ಕೂಡ ಅವರ ಸಮಸ್ಯೆಗಳಿಗೆ ಸ್ಪಂದಿಸಿ 15ರಿಂದ 30 ದಿನಗಳ ಗ್ರೇಸ್ ಅವಧಿಯನ್ನು ಕೂಡ ನೀಡುತ್ತದೆ. ಆದರೆ ಈ ಸಮಯದಲ್ಲೂ ಕೂಡ ಅದಲ್ಲದೆ ಒಂದು ಎರಡು ಕಂತುಗಳು ಮಾತ್ರವಲ್ಲದೇ ಅದಕ್ಕಿಂತ ಹೆಚ್ಚಿನ ಪ್ರೀಮಿಯಂ ಗಳನ್ನು ಪಾವತಿಸಲು ವಿಫಲರಾದಲ್ಲಿ ಪಾಲಿಸಿಗಳನ್ನು ಲ್ಯಾಪ್ಸ್ (Policy Laps) ಮಾಡಲಾಗುತ್ತದೆ.
SSC ಬೃಹತ್ ನೇಮಕಾತಿ, 7547 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.! ವೇತನ 69,100/-
ಇದರಿಂದ ಗ್ರಾಹಕರು ಬಹಳಷ್ಟು ಸಮಸ್ಯೆಗೆ ಒಳಗಾಗುತ್ತಿದ್ದರು ಈಗ LIC ಈ ಕುರಿತು ತನ್ನ ಗ್ರಾಹಕರಿಗೆ ಒಂದು ಅವಕಾಶ ನೀಡುತ್ತಿದೆ. ಅದೇನೆಂದರೆ, ಈಗ LIC ಲಾಪ್ಸ್ ಆಗಿರುವ ಗ್ರಾಹಕರು ತಮ್ಮ ವಿಳಂಬ ಶುಲ್ಕ (Penalty fee) ಹಾಗೂ ಯೋಜನೆಗಳನ್ನು ನವೀಕರಿಸುವುದಕ್ಕೆ ನವೀಕರಣ ಶುಲ್ಕ ಪಾವತಿ ಮಾಡುವ ಮೂಲಕ ಮತ್ತೆ ತಮ್ಮ ಯೋಜನೆಯನ್ನು ಪುನರಾರಂಭಿಸಬಹುದು.
ಇದೇ ಸೆಪ್ಟೆಂಬರ್ ತಿಂಗಳಿಂದ ಈ ರೀತಿಯ ಒಂದು ಅವಕಾಶವನ್ನು LIC ನೀಡುತ್ತಿದ್ದು ಇವುಗಳನ್ನು ಪುನರಾರಂಭಿಸಲು ನೀವು ನಿಮ್ಮ LIC ಪಾಲಿಸಿ ದಾಖಲೆಗಳು ಹಾಗೂ ಪೆನಾಲ್ಟಿ ಶುಲ್ಕ ದೊಂದಿಗೆ ಹತ್ತಿರದಲ್ಲಿರುವ LIC ಶಾಖೆಗೆ ಭೇಟಿ (LIC branch) ಕೊಡಬಹುದು ಅಥವಾ ನಿಮ್ಮ LIC ಏಜೆಂಟ್ (LIC Agent) ನ್ನು ಕೂಡ ಸಂಪರ್ಕಿಸಬಹುದು. ಈಗಿರುವ ಮಾಹಿತಿ ಪ್ರಕಾರ ನಿಮ್ಮ ಯೋಜನೆಯು 3 ಲಕ್ಷದಾಗಿದ್ದರೆ ನೀವು ಅದರಲ್ಲಿ 30% ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ನಿಮ್ಮ LIC ಶಾಖೆಯಲ್ಲಿ ಅಥವಾ LIC ಅಧಿಕೃತ ವೆಬ್ ಸೈಟ್ ನಲ್ಲಿ ಪಡೆಯಿರಿ.