ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ನಂಬರ್ 1 ಸ್ಥಾನದಲ್ಲಿರುವ SBI (State bank of Mysore) ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಆಗಿದೆ. ಗ್ರಾಹಕರ ನಂಬಿಕಸ್ಥ ಬ್ಯಾಂಕ್ ಆಗಿರುವ ಕಾರಣದಿಂದಾಗಿ ಜೊತೆಗೆ SBI ಬ್ಯಾಂಕ್ ನಿಂದ ಗ್ರಾಹಕರಿಗೆ ಸಿಗುತ್ತಿರುವ ಸುಲಭ ಸೇವೆಗಳ ಕಾರಣದಿಂದಾಗಿ ಪ್ರತಿ ವರ್ಷವೂ ಕೂಡ SBI ನಲ್ಲಿ ಖಾತೆ ತೆರೆಯುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ.
ಇದಕ್ಕೆ ತಕ್ಕ ಹಾಗೆ ಗ್ರಾಹಕರ ಅಭಿಲಾಷೆಗಳಿಗೆ ಮತ್ತು ಅವಸರಕ್ಕೆ ಹೊಂದುವ ಹಾಗೆ ಅಪ್ಡೇಟ್ ಮಾಡಿಕೊಂಡು ಹೊಸ ಹೊಸ ಸೇವೆಗಳನ್ನು ಒದಗಿಸುತ್ತದೆ. SBI ಬ್ಯಾಂಕ್ ನಲ್ಲಿ ಕೇಂದ್ರ ಸರ್ಕಾರದ ಉಳಿತಾಯ ಯೋಜನೆ ಹಾಗೂ ವಿಮೆಗಳನ್ನು ಆರಂಭಿಸಬಹುದು, ಕೇಂದ್ರ ಸರ್ಕಾರ ರೂಪಿಸುವ ಯೋಜನೆಗಳಡಿಯಲ್ಲಿ ಸಾಲ ಸೌಲಭ್ಯ, ಸಬ್ಸಿಡಿ ರೂಪದ ಸಾಲ ಸೌಲಭ್ಯ ಪಡೆಯಬಹುದು.
SSC ಬೃಹತ್ ನೇಮಕಾತಿ, 7547 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.! ವೇತನ 69,100/-
ಹಾಗೆ ನಮ್ಮ ಠೇವಣಿಗಳಿಗೆ ಭದ್ರತೆ ಜೊತೆ ಉಳಿದ ಬ್ಯಾಂಕ್ ಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು ಹಾಗೂ ನಮ್ಮ ಭೂಮಿ ಹಾಗೂ ಬಂಗಾರದ ಮೇಲೆ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ಕೂಡ ಪಡೆಯಬಹುದು. ಇಷ್ಟೆಲ್ಲಾ ಪ್ರಯೋಜನ ನೀಡಿರುವ SBI ಬ್ಯಾಂಕ್ ಇವುಗಳ ಜೊತೆಗೆ ಗ್ರಾಹಕರಿಗೆ ಅನುಕೂಲವಾಗುವ ಕಾರಣಕ್ಕಾಗಿ, ಇಂಟರ್ನೆಟ್ ಬ್ಯಾಂಕಿಂಗ್ (Internet banking) ವ್ಯವಸ್ಥೆಯನ್ನು ಕೂಡ ನೀಡಿದೆ.
ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂಟರ್ನೆಟ್ ಇಂದ ಕ್ರಾಂತಿ ಆಗುತ್ತಿದೆ. ಬೆರಳ ತುದಿಯಲ್ಲಿ ಜನರು ಬ್ಯಾಂಕಿಂಗ್ ವ್ಯವಹಾರಗಳನ್ನು ಮುಗಿಸಿಕೊಂಡು ಹಣ ವ್ಯರ್ಥ ಹಾಗೂ ಸಮಯ ವ್ಯರ್ಥ ಆಗುವುದನ್ನು ತಪ್ಪಿಸುತ್ತಿದ್ದಾರೆ. ಈಗಾಗಲೇ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, UPI ಆಧಾರಿತ ಆಪ್ ಮೂಲಕ ಪೇಮೆಂಟ್ ಮಾಡಲು ಅವಕಾಶ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ATM ಯೂನೋ ಆಪ್ ಗಳ ಮೂಲಕ ಬ್ಯಾಂಕ್ ಸೇವೆಯನ್ನು ಪಡೆಯಲು ಅವಕಾಶ ನೀಡಿರುವ SBI ಈಗ ಇದರತ್ತ ಇನ್ನೊಂದು ದಿಟ್ಟ ಹೆಜ್ಜೆಯನ್ನು ಇಡುತ್ತಿದೆ.
ಜನಧನ್ ಖಾತೆ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 1.3 ಲಕ್ಷ.! ತಪ್ಪದೆ ಈ ಯೋಜನೆ ಲಾಭ ಪಡೆದುಕೊಳ್ಳಿ.!
ಈ ಭಾರಿ SBI ಹೊಸದಾಗಿ ರೂಪಿಸಿರುವ ಈ ಯೋಜನೆ ಮೂಲಕ ಇನ್ನು ಹೆಚ್ಚಿನ ಗ್ರಾಹಕರನ್ನು ತಲುಪಲಿದೆ ಎಂದು ಊಹಿಸಬಹುದಾಗಿದೆ. ಅದೇನೆಂದರೆ, ಸೋಶಿಯಲ್ ಮೀಡಿಯಾಗಳಲ್ಲಿ ಅತಿ ಹೆಚ್ಚು ಜನರು ಬಳಸುವ ಆಪ್ ಆದ ವಾಟ್ಸಪ್ (WhatsApp banking) ಮೂಲಕ ಇನ್ನು ಮುಂದೆ ಬ್ಯಾಂಕಿಂಗ್ ಸೌಲಭ್ಯ ಪಡೆಯಲು SBI ಅವಕಾಶ ನೀಡುತ್ತಿದೆ.
ವಾಟ್ಸಪ್ ತೆರೆದು QR Code ಸ್ಕ್ಯಾನ್ ಮಾಡುವ ಮೂಲಕ ನೀವು ಹಣ ವರ್ಗಾವಣೆ ಮಾಡಬಹುದು ಇತ್ತೀಚೆಗೆ ಆನ್ಲೈನ್ ಪೇಮೆಂಟ್ ವ್ಯವಸ್ಥೆಯಲ್ಲಿ ಸೈಬರ್ ವಂಚಕರಿಂದ ಸಮಸ್ಯೆ ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಈ ಬಾರಿ ಸುರಕ್ಷತೆ ಕಡೆ ಕೂಡ ಹೆಚ್ಚು ಗಮನ ಹರಿಸಿ ವಾಟ್ಸಾಪ್ ಬ್ಯಾಂಕಿಂಗ್ ಪದಿಚಯಿಸುವ ಮೂಲಕ ಜನರು ಸುರಕ್ಷಿತವಾಗಿ ಹಣ ವರ್ಗಾವಣೆ ಮಾಡುವಂತಾಗಲು ವ್ಯವಸ್ಥೆ ಮಾಡಿಕೊಟ್ಟಿದೆ.
ರಾಜ್ಯದ ಈ 114 ತಾಲೂಕಿನ ಜನರಿಗೆ 10Kg ಪಡಿತರ ಅಕ್ಕಿ ನೀಡುವುದಾಗಿ ಮಹತ್ವದ ಘೋಷಣೆ ಮಾಡಿದ ಆಹಾರ ಸಚಿವರು.!
ಈ ಸೌಲಭ್ಯವನ್ನು ಪಡೆಯಬೇಕೆಂದರೆ ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು, ನಿಮ್ಮ ಖಾತೆ ಸಂಖ್ಯೆಯನ್ನು SBI ವಾಟ್ಸಪ್ ಬ್ಯಾಂಕಿಂಗ್ ಆರಂಭಿಸಲು ಸೂಚಿಸಿರುವ ಸಹಾಯವಾಣಿಗೆ ಸಂಖ್ಯೆಗೆ ಸಂದೇಶ ಕಳುಹಿಸಿ ನೋಂದಾಯಿಸಿಕೊಳ್ಳಬೇಕು ನಂತರ ನೀವು ವಾಟ್ಸಪ್ ಆರಂಭಿಸಲು ಸಾಧ್ಯವಾಗುತ್ತದೆ.
ವಾಟ್ಸಪ್ ಬ್ಯಾಂಕಿಂಗ್ ನಲ್ಲಿ ಹಣದ ವರ್ಗಾವಣೆ ಮಾತ್ರವಲ್ಲದೆ ನೀವು ನಿಮ್ಮ ಅಕೌಂಟ್ ಬ್ಯಾಲೆನ್ಸ್, ಇತ್ತೀಚಿನ ವಹಿವಾಟಿನ ಡೀಟೇಲ್ಸ್ ಇನ್ನೂ ಮುಂತಾದ ಅನೇಕ ಸೇವೆಗಳನ್ನು IVR ಮಾದರಿಯಲ್ಲಿ ಪಡೆದುಕೊಳ್ಳಬಹುದು. ನೀವು SBI ಬ್ಯಾಂಕ್ ಶಾಖೆಗೆ ಅಥವಾ SBI ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟರೆ ನಿಮಗೆ ಈ ಯೋಜನೆ ಕುರಿತ ಸಂಪೂರ್ಣ ವಿವರ ಸಿಗುತ್ತದೆ.