ಪ್ರಧಾನಮಂತ್ರಿ ನರೇಂದ್ರ ಮೋದಿ (P.M Narendra Modi) ಅವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ದೇಶದ ನಾಗರಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಭಾರತವನ್ನು ಡಿಜಿಟಲೀಕರಣ ಮಾಡುವಂತಹ ಮಹತ್ವದ ಹೆಜ್ಜೆ ಇಟ್ಟಿರುವ ಇವರು ಆರ್ಥಿಕ ಕ್ಷೇತ್ರದಲ್ಲೂ ಹೊಸ ಕ್ರಾಂತಿಯನ್ನು ಮಾಡುತ್ತಿದ್ದಾರೆ.
ಈಗ ಪ್ರತಿಯೊಬ್ಬ ದೇಶದ ನಾಗರಿಕನ ಹೆಸರಿನಲ್ಲೂ ಕೂಡ ಬ್ಯಾಂಕ್ ಖಾತೆ (Bank account) ಇದೆ. ಇದರ ಮೂಲಕ ಪ್ರತಿಯೊಬ್ಬರ ಆರ್ಥಿಕ ವಹಿವಾಟಿನ ಲೆಕ್ಕಾಚಾರದ ಸರ್ಕಾರದ ಸುಪರ್ದಿಯಲ್ಲಿ ಇರುತ್ತದೆ. ಎಲ್ಲರಿಗೂ ಕೂಡ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು ಯೋಜನೆ ರೂಪಿಸಿದ ಖ್ಯಾತಿಯು ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ.
ರಾಜ್ಯದ ಈ 114 ತಾಲೂಕಿನ ಜನರಿಗೆ 10Kg ಪಡಿತರ ಅಕ್ಕಿ ನೀಡುವುದಾಗಿ ಮಹತ್ವದ ಘೋಷಣೆ ಮಾಡಿದ ಆಹಾರ ಸಚಿವರು.!
ಪ್ರಧಾನಮಂತ್ರಿ ಜನ್ ಧನ್ ಖಾತೆ (PM jan dhan bank account ) ಎನ್ನುವ ಯೋಜನೆಯನ್ನು ಆರಂಭಿಸಿದ ಇವರ ಈ ಯೋಜನೆ ಪ್ರಯೋಜನವು ದೇಶದ ಕಟ್ಟಕಡೆಯ ಹಳ್ಳಿಯವರೆಗೂ ಕೂಡ ತಲುಪಿದೆ. ದೇಶದ 47 ಕೋಟಿ ಜನರು ಜನ್ ಧನ್ ಖಾತೆ ಹೊಂದಿದ್ದಾರೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಕೂಡ ಬ್ಯಾಂಕ್ ಖಾತೆಗಳನ್ನು ಹೊಂದಲು ಸಾಧ್ಯವಾಗಿದೆ.
ತಮ್ಮ ವಿದ್ಯಾರ್ಥಿ ವೇತನ, ಕೆಲಸದ ವೇತನ ಅಥವಾ ಪಿಂಚಣಿ ಮುಂತಾದವುಗಳಲ್ಲವನ್ನು ಈಗ ಈ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಿದ್ದಾರೆ. ಈ ಜನ್ ಧನ್ ಖಾತೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಲವಾರು ಸುದ್ದಿಗಳು ಹರಿದಾಡುತ್ತಾ ಇರುತ್ತವೆ. ಸರ್ಕಾರ ಲಕ್ಷಾಂತರ ಹಣವನ್ನು ಜನ್ ಧನ್ ಖಾತೆದಾರರಿಗೆ ವರ್ಗಾವಣೆ ಮಾಡುತ್ತದೆ ಎನ್ನುವುದು ಇದರಲ್ಲಿ ಸೇರುವ ಸೇರಿರುವ ಪ್ರಮುಖ ಗಾಳಿ ಸುದ್ದಿ.
ನೇರವಾಗಿ ಸರ್ಕಾರ ಈ ಖಾತೆಗಳಿಗೆ ಹಣ ವರ್ಗಾವಣೆ ಮಾಡದೆ ಇದ್ದರೂ ಇದೇ ರೀತಿ ಅನುಕೂಲವಾಗುವಂತಹ ಸಾಕಷ್ಟು ಪ್ರಯೋಜನವನ್ನು ನೀಡಿರುವುದಂತೂ ಸುಳ್ಳಲ್ಲ. ಈಗ ಜನ ಧನ್ ಖಾತೆ ಹೊಂದಿರುವವರಿಗೆ ಸರ್ಕಾರದಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
● ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಮೊತ್ತದ ಹಣವನ್ನು ಹೊಂದಿರಲೇಬೇಕು ಎನ್ನುವ ನಿಯಮ ಇದೆ ಆದರೆ ಜನ್ ಧನ್ ಖಾತೆ ತೆರೆದ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು (minimum balance rule not applicable) ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇಲ್ಲ ಇವರಿಗೆ ಈ ನಿಯಮ ಅನ್ವಯಿಸುವುದಿಲ್ಲ.
● ಹೆಚ್ಚುವರಿಯಾಗಿ ರೂಪೇ ಡೆಬಿಟ್ ಕಾರ್ಡ್ (Rupay debit card) ಕೂಡ ನೀಡಲಾಗಿದೆ. ಈ ಖಾತೆಯಲ್ಲಿ ನೀವು ಬಯಸಿದರೆ ಓವರ್ ಡ್ರಾಫ್ಟ್ ಗಾಗಿ (over draft) ಬ್ಯಾಂಕ್ ಗೆ 10,000 ರೂಪಾಯಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಸಂಪರ್ಕಿಸಬೇಕು.
● ಜನ್ ಧನ್ ಖಾತೆ ಹೊಂದಿದ ಗ್ರಾಹಕರು ಆಕಸ್ಮಿಕವಾಗಿ ಮೃ’ತ ಪಟ್ಟರೆ 1 ಲಕ್ಷ ರೂಪಾಯಿ ಅಪಘಾತ ವಿಮಾ ಪಾಲಿಸಿ (Insurance policy) ಸೇರಿದಂತೆ ಹಲವು ಪ್ರಯೋಜನಗಳು ಸಿಗುತ್ತದೆ.
● ಹೆಚ್ಚುವರಿಯಾಗಿ 30,000 ರೂಪಾಯಿ ಜೀವ ವಿಮಾ ಪಾಲಿಸಿ ಕೂಡ ನೀಡಲಾಗುತ್ತದೆ. ಆಕಸ್ಮಿಕವಾಗಿ ಮ’ರ’ಣ ಹೊಂದಿದಲ್ಲಿ ಆ ಖಾತೆದಾರರ ಕುಟುಂಬ ಕ್ಕೆ ಜೀವ ವಿಮಾ ಪಾಲಿಸಿಯ 1 ಲಕ್ಷ ರೂಪಾಯಿ ವಿಮಾ ಸೌಲಭ್ಯ ಸಿಗುತ್ತದೆ. ನ್ಯಾಚುರಲ್ ಆಗಿ ಖಾತೆದಾರ ಮೃ’ತಪಟ್ಟರು ಕೂಡ 30,000 ರೂಪಾಯಿ ವಿಮಾ ರಕ್ಷಣೆಯ ಮೊತ್ತವನ್ನು ಆ ಕುಟುಂಬಕ್ಕೆ ನೀಡಲಾಗುತ್ತದೆ.
ಇನ್ಮುಂದೆ ಬಸ್ ಗಳಲ್ಲಿ ಕಂಡಕ್ಟರ್ ಜೊತೆ ಚಿಲ್ಲರೆ ಜಗಳ ಬಂದ್ ಸರ್ಕಾರದಿಂದ ಹೊಸ ಯೋಜನೆ ಜಾರಿ.!
● ಜನ್ ಧನ್ ಖಾತೆ ತೆರದ ಗ್ರಾಹಕನಿಗೆ ಆಗುವ ಅತಿ ದೊಡ್ಡ ಲಾಭ ಏನೆಂದರೆ ಈ ಖಾತೆ ತೆರೆದವರು ತಮ್ಮ ವೇತನ, ಸಾಮಾಜಿಕ ಭದ್ರತಾ ಯೋಜನೆಯಡಿಯ ಪಿಂಚಣಿಗಳು ಅಥವಾ ಮತ್ಯಾವುದೆ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಪಡೆದು ಅವಶ್ಯಕತೆ ಇದ್ದಾಗ ಅದನ್ನು ಬಳಸಿಕೊಳ್ಳಬಹುದು. ಸರ್ಕಾರದ ಯೋಜನೆಗಳ DBT ಹಣ ಕೂಡ ನೇರವಾಗಿಯೇ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುವುದರಿಂದ ಅತಿ ದೊಡ್ಡ ಮಟ್ಟದಲ್ಲಿ ಸಹಾಯವಾಗಿದೆ.