ಬಸ್ ನಲ್ಲಿ ಪ್ರಯಾಣಿಸುವವರಿಗೆ ಬಹಳ ತಲೆನೋವಾಗಿದ್ದ ಕೆಲಸ ಟಿಕೆಟ್ ತೆಗೆದುಕೊಳ್ಳಲು ಬೇಕಾದ ಚಿಲ್ಲರೆ ಇಲ್ಲದೆ ದೊಡ್ಡ ನೋಟು ಕೊಟ್ಟು ಕಂಡಕ್ಟರ್ ಜೊತೆಗೆ ಮ’ನ’ಸ್ತಾ’ಪ ಮಾಡಿಕೊಳ್ಳುವುದು. ಬೆಳ್ಳಂಬೆಳಗ್ಗೆ ಅಥವಾ ಆಗಷ್ಟೇ ಡಿಪೋದ ನಿಂದ ಹೊರಟ ಬಸ್ ಗಳಲ್ಲಿ ಎಲ್ಲರೂ ಈ ರೀತಿ ಚಿಲ್ಲರೆ ಕೇಳಿದರೆ ಕಂಡಕ್ಟರ್ ಗೂ ತಾಳ್ಮೆ ಕೆರಳದೇ ಇರದು.
ಇದರಿಂದಾಗಿ ಅನೇಕ ಬಾರಿ ಬಸ್ ಪ್ರಯಾಣಿಕರ ಹಾಗೂ ಕಂಡಕ್ಟರ್ ಮಧ್ಯೆ ಚಿಲ್ಲರೆಗಾಗಿಯೇ ಜಗಳ ನಡೆದು ತಾರತಕ್ಕೇರಿರುವ ಉದಾಹರಣೆಗಳಿವೆ. ಆಗೆಲ್ಲಾ ಪ್ರಯಾಣಿಕರು ಅಂಗಡಿಗಳಲ್ಲಿ ಇರುವಂತೆ ಬಸ್ ನಲ್ಲೂ QR Code ಇದ್ದರೆ ಸ್ಕ್ಯಾನ್ ಮಾಡಿ ನೆಮ್ಮದಿಯಾಗಿ ಇರಬಹುದಿತ್ತು ಎಂದು ಅನೇಕರು ಗೊಣಗುಟ್ಟಿದ್ದಾರೆ. ಈಗ ಇಂತದೊಂದು ಮಾಸ್ಟರ್ ಪ್ಲಾನ್ ರೆಡಿ ಆಗುತ್ತಿದೆ, ಪ್ರಾಯೋಗಿಕವಾಗಿ ಇದಕ್ಕೆ ಚಾಲನೆ ಕೂಡ ದೊರೆತಿದೆ.
ಇನ್ನು ಮುಂದೆ ಕರ್ನಾಟಕದ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ (KSRTC) ಈ ರೀತಿ ವ್ಯವಸ್ಥೆ ಬಂದರೆ ಸಾಧ್ಯತೆ ಬಲವಾಗಿದೆ. ಅನೇಕ ಕಾರಣಗಳಿಂದಾಗಿ ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಕಿರೀಟ ಪಡೆದಿರುವ KSRTC ಇಂತಹದೊಂದು ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಚಿಂತೆ ನಡೆಸಿ ಪ್ರಾಯೋಗಿಕವಾಗಿ ಮೊದಲಿಗೆ ಹುಬ್ಬಳ್ಳಿ ಡಿಪೋ-3 ರಲ್ಲಿ (Hubballi depo) ಈ ವ್ಯವಸ್ಥೆಯನ್ನು ಜಾರಿ ಕೂಡ ಮಾಡಲಾಗಿದೆ.
ಸೆಪ್ಟೆಂಬರ್ 1ನೇ ತಾರೀಖಿನಿಂದಾಗಿ ಈ ಡಿಪೋ ಬಸ್ ಗಳಲ್ಲಿ ಕಂಡಕ್ಟರ್ ಬಳಿ ಇರುವ QR Code ಸ್ಕ್ಯಾನ್ ಮಾಡಿ ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಮುಂತಾದ UPI ಆಧಾರಿತ ಆಪ್ ಮೂಲಕ ಹಣ ವರ್ಗಾವಣೆ ಮಾಡಿ ಟಿಕೆಟ್ ಪಡೆದುಕೊಳ್ಳಬಹುದು. ಹೇಗೆ ಜನರು ಯಾವುದೇ ಶಾಪಿಂಗ್ ಗೆ ಹೋದಾಗ ಅಂಗಡಿಗಳಲಿದ್ದ QR Code ಸ್ಕ್ಯಾನ್ ಮಾಡಿ ಅಮೌಂಟ್ ಟ್ರಾನ್ಸ್ಫರ್ ಮಾಡಿ ಬರುತ್ತಿದ್ದರು.
ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗಿಲ್ಲವೇ, ಈ ಸಣ್ಣ ಕೆಲಸ ಮಾಡಿ ಖಾತೆಗೆ ಹಣ ಬರುತ್ತದೆ.!
ಅದೇ ರೀತಿ ಇನ್ನು ಮುಂದೆ KSRTC ಬಸ್ ಹತ್ತಿ ಸ್ಕ್ಯಾನ್ ಮಾಡಿ ಟಿಕೆಟ್ ಚಾರ್ಜ್ ಎಷ್ಟು ಇರುತ್ತದೆ ಅಷ್ಟನ್ನು ಮಾತ್ರ ಟ್ರಾನ್ಸ್ಫರ್ ಮಾಡಿ ಟಿಕೆಟ್ ಪಡೆದು ನೆಮ್ಮದಿಯಾಗಿ ಪ್ರಯಾಣಿಸಬಹುದು. ವಾಯುವ್ಯ ಕರ್ನಾಟಕ ಸಾರಿಗೆಯ (NWRTC) ಹುಬ್ಬಳ್ಳಿ ಡಿಪೋದಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿರುವ ಇದಕ್ಕೆ ಪ್ರಯಾಣಿಕರಿಂದ ಉತ್ತಮ ರೆಸ್ಪಾನ್ಸ್ ಕಂಡುಬಂದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಕೂಡ ಇದೇ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಅಧಿಕಾರಿಗಳು ಮಾಹಿತಿ ಬಿಟ್ಟು ಕೊಟ್ಟಿದ್ದಾರೆ.
ಹಾಗೆ ಪ್ರಯಾಣಿಕರಿಂದ ಕೂಡ ಈ ರೀತಿಯ ಒಂದು ವ್ಯವಸ್ಥೆಯ ನಿರೀಕ್ಷೆ ಇದ್ದ ಕಾರಣ ಖಂಡಿತವಾಗಿಯೂ ಸಂಸ್ಥೆ ಕೈಗೊಂಡಿರುವ ಯೋಜನೆ ಯಶಸ್ವಿಯಾಗುತ್ತದೆ ಎಂದೇ ನಿರೀಕ್ಷಿಸಬಹುದಾಗಿದೆ. ಇದಕ್ಕೂ ಮುನ್ನ ವಾರದ ಪಾಸ್ ಹಾಗೂ ತಿಂಗಳ ಪಾಸ್ ಪಡೆಯಲು ಈ ರೀತಿ ಡಿಜಿಟಲ್ ಆಪ್ ಗಳ ಸಹಾಯ ಸಿಗುತ್ತಿತ್ತು, ಪ್ರತಿದಿನವೂ ಬಸ್ ಹತ್ತಿ ಸ್ಕ್ಯಾನ್ ಮಾಡುವ ಮೂಲಕ ಪ್ರಯಾಣಿಕರು ಇದನ್ನು ಖಾತ್ರಿ ಪಡಿಸಿ ಕಂಡಕ್ಟರ್ ಗೆ ತೋರಿಸುತ್ತಿದ್ದರು.
ವಿಷ್ಣು, ಲಲಿತ ಸಹಸ್ರ ನಾಮಗಳ ಬಗ್ಗೆ ವೈದ್ಯರು ಹೇಳಿದ ಸತ್ಯಾಂಶ, ಮಂತ್ರ ಪಠಿಸಿದ್ರೆ ಮಕ್ಕಳಾಗುತ್ತ.? ನೀವೆ ನೋಡಿ.!
ಇದು ಪ್ರತಿದಿನವೂ ಬಸ್ಗಳಲ್ಲಿ ಓಡಾಡುವವರಿಗೆ ಅನುಕೂಲ ಆಗುತ್ತಿತ್ತು. ಆದರೆ ಈಗ ಎಲ್ಲರಿಗೂ ಅನುಕೂಲವಾಗುವಂತಹ ಮಹತ್ವದ ನಿರ್ಧಾರವನ್ನು KSRTC ಕೈಗೊಂಡಿದೆ. ಇನ್ನು ಮುಂದೆ ಆರಾಮಾಗಿ ಹಣ ಇಲ್ಲದಿದ್ದರೂ ಚಿಂತೆ ಇಲ್ಲದೆ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ನೆಮ್ಮದಿಯಾಗಿ ಬಸ್ ಹತ್ತಬಹುದು. ಈ ನಗದು ರಹಿತ ಪಾವತಿ ಕ್ರಮದಿಂದಾಗಿ ಪ್ರಯಾಣಿಕರಿಗೆ ಎಷ್ಟು ಅನುಕೂಲತೆ ಆಗಲಿ ಸಿಬ್ಬಂದಿಗೂ ಕೂಡ ಅಷ್ಟೇ ಅನುಕೂಲ ಆಗಲಿದೆ ಎನ್ನುವುದು ಅಷ್ಟೇ ಸತ್ಯ.