ರೇಷನ್ ಕಾರ್ಡ್ ತಿದ್ದುಪಡಿ / ಹೊಸ ಸದಸ್ಯರ ಸೇರ್ಪಡೆಗೆ ಇನ್ಮೇಲೆ ಈ ದಾಖಲೆಗಳ ಕಡ್ಡಾಯ ಸರ್ಕಾರದಿಂದ ಜಾರಿ ಆಯ್ತು ಹೊಸ ಆದೇಶ.!

 

ರಾಜ್ಯದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು (New ration card) ಹಾಗೂ ತಿದ್ದುಪಡಿ ಮಾಡಿಸುವವರ (Ration card correction) ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಚುನಾವಣೆ ನೀತಿ ಸಂಹಿತೆ (code of conduct) ರಾಜ್ಯದಲ್ಲಿ ಜಾರಿ ಇದ್ದ ಕಾರಣದಿಂದಾಗಿ ಕಳೆದ BJP ಸರ್ಕಾರದ ಅವಧಿಯಲ್ಲಿಯೇ 3 ಲಕ್ಷ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೂ ಅದರ ವಿಲೇವಾರಿಯ ನಡೆದಿಲ್ಲ.

ಇತ್ತೀಚಿಗೆ ನಡೆದ ಒಂದು ಸುದ್ದಿಗೋಷ್ಠಿಯಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (food and civil supply department Minister K.H Muniyappa) ರವರು ಶೀಘ್ರದಲ್ಲಿಯೇ ಆ ಕಾರ್ಡುಗಳ ಪರಿಶೀಲನೆ ನಡೆಸಿ ವಿಲೇವಾರಿ ಮಾಡಲಾಗುವುದು ಎಂದು ಸೂಚನೆ ನೀಡಿದ್ದಾರೆ.

ಇನ್ಮುಂದೆ ಬಸ್ ಗಳಲ್ಲಿ ಕಂಡಕ್ಟರ್ ಜೊತೆ ಚಿಲ್ಲರೆ ಜಗಳ ಬಂದ್ ಸರ್ಕಾರದಿಂದ ಹೊಸ ಯೋಜನೆ ಜಾರಿ.!

ಹಾಗೆಯೇ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿ ಆದ ಮೇಲೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಹಾಗೂ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದಕ್ಕೆ ಜನ ಕಾಯುತ್ತಿರುವುದರಿಂದ ಇದರ ಬಗ್ಗೆ ಕೂಡ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ರೇಷನ್ ಕಾರ್ಡ್ ಗೆ ಸದ್ಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಆದರೆ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ಹೆಸರು, ವಿಳಾಸ ತಿದ್ದುಪಡಿ ಅಥವಾ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಹೆಸರು ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ ಅಥವಾ ಹಳೆ ಸದಸ್ಯರ ಹೆಸರು ತೆಗೆದು ಹಾಕುವುದು, ನ್ಯಾಯಬೆಲೆ ಅಂಗಡಿಗಳನ್ನು ಬದಲಾಯಿಸುವುದು ಈ ರೀತಿಯ ತಿದ್ದುಪಡಿಗಳಿದ್ದರೆ ಮಾಡಿಸಿಕೊಳ್ಳಬಹುದು ಇದಕ್ಕಾಗಿ ಅವಕಾಶ ನೀಡಲಾಗುತ್ತದೆ ಎಂದಿದ್ದರು.

PPF & ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣ ಕಟ್ಟುತ್ತ ಇರುವವರು ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ, ಇಲ್ಲದಿದ್ರೆ ನಿಮ್ಮ ಖಾತೆ ಬಂದ್ ಆಗುತ್ತೆ ಎಚ್ಚರ.!

ಅಂತೆಯೇ ಈಗ ಸೆಪ್ಟೆಂಬರ್ 1 ರಿಂದ 10ನೇ ತಾರೀಖಿನವರೆಗೆ ಈ ರೀತಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದ್ದು ಯಾವೆಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ ಹಾಗೂ ಯಾವ ರೀತಿ ತಿದ್ದುಪಡಿ ಕಾರ್ಯ ನಡೆಯುತ್ತದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅಥವಾ ಸೇರ್ಪಡೆಗೆ ಬೇಕಾಗುವ ದಾಖಲೆಗಳು:-

● ಪ್ರಸ್ತುತವಾಗಿ ಇರುವ ರೇಷನ್ ಕಾರ್ಡ್
● ಪಡಿತರ ಚೀಟಿಯಲ್ಲಿರುವ ಸದಸ್ಯರ ಆಧಾರ್ ಕಾರ್ಡ್ ಮತ್ತು ಒಬ್ಬ ಸದಸ್ಯರ ಬಯೋಮೆಟ್ರಿಕ್ ಮಾಹಿತಿ
● 5 ವರ್ಷದ ಒಳಗಿರುವ ಮಕ್ಕಳ ಸೇರ್ಪಡೆ ಮಾಡಬೇಕಿದ್ದರೆ ಅವರ ಜನನ ಪ್ರಮಾಣ ಪತ್ರ
● 5 ವರ್ಷ ಮೇಲ್ಪಟ್ಟ ಸದಸ್ಯರ ಸೇರ್ಪಡೆ ಮಾಡಬೇಕಿದ್ದರೆ ಅವರ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಮಾಹಿತಿ
● ಪಡಿತರ ಚೀಟಿಯಲ್ಲಿರುವ ಮೃ’ತ ಸದಸ್ಯರ ಹೆಸರು ತೆಗೆದು ಹಾಕಬೇಕಿದ್ದಲ್ಲಿ ಅವರ ಮರಣ ಪ್ರಮಾಣ ಪತ್ರ.
● ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ.

ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗಿಲ್ಲವೇ, ಈ ಸಣ್ಣ ಕೆಲಸ ಮಾಡಿ ಖಾತೆಗೆ ಹಣ ಬರುತ್ತದೆ.!

ಅರ್ಜಿ ಸಲ್ಲಿಸುವ ವಿಧಾನ:-

● ತಿದ್ದುಪಡಿಗಾಗಿ ಅರ್ಜಿಯನ್ನು ಆನ್ ಲೈನ್ ನಲ್ಲಿ ಮೂಲಕ ಸಲ್ಲಿಸಬೇಕು.
● ಬೆಂಗಳೂರು ಒನ್/ ಕರ್ನಾಟಕ ಒನ್/ ಖಾಸಗಿ ಫ್ರಾಂಚೈಸಿಗಳು/ ಜನಸ್ನೇಹಿ ಕೇಂದ್ರ / ಗ್ರಾಮ ಪಂಚಾಯತ್ / ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡ ಅವಕಾಶವಿದೆ.
● ಅರ್ಜಿ ತಿದ್ದುಪಡಿಯ ವಿಷಯ ಹಾಗೂ ಅದಕ್ಕೆ ಕೇಳಿರುವ ಪೂರಕ ದಾಖಲೆಗಳನ್ನು ತಪ್ಪದೆ ಒದಗಿಸಬೇಕು.

● ಅರ್ಜಿದಾರರಿಗೆ ವಿವಿಧ ಹಂತಗಳಲ್ಲಿ SMS ಮೂಲಕ ಅರ್ಜಿ ಸ್ಥಿತಿ ತಿಳಿಸಲಾಗುತ್ತದೆ. ಅಧಿಕಾರಿಯು ಅರ್ಜಿಯ ಪರಿಶೀಲನೆಗಾಗಿ ಅವರ ವಾಸಸ್ಥಳಕ್ಕೆ ಭೇಟಿ ನೀಡುವುದರ ಬಗ್ಗೆ ಅವರ ಅರ್ಜಿಯ ಅನುಮೋದನೆ ಅಥವಾ ತಿರಸ್ಕಾರವಾಗುವುದರ ಬಗ್ಗೆ ಕೂಡ ಮಾಹಿತಿ ತಿಳಿಸಲಾಗುತ್ತದೆ.
● ಪಡಿತರ ಚೀಟಿಯನ್ನು ಸ್ಪೀಡ್ ಪೋಸ್ಟ್ (Speed Post) ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.
● ಗರಿಷ್ಠ 40 ಕೆಲಸದ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ತಿಯಾಗುತ್ತದೆ.

Leave a Comment

%d bloggers like this: