ರೇಷನ್ ಕಾರ್ಡ್ ತಿದ್ದು ಪಡಿಯಲ್ಲಿ ದೊಡ್ಡ ಬದಲಾವಣೆ, ಯಾವ ಜಿಲ್ಲೆಗೆ ಯಾವ ದಿನಾಂಕ ನಿಗದಿ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ರಾಜ್ಯದಲ್ಲಿ ಈಗ ರೇಷನ್ ಕಾರ್ಡ್ ತಿದ್ದುಪಡಿ (Ration card correction) ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ (new ration card apply) ಸಲ್ಲಿಸುವುದಕ್ಕೆ ಜನಸಾಮಾನ್ಯರು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆ (Annabhagya) ಹಾಗೂ ಗೃಹಲಕ್ಷ್ಮಿ ಯೋಜನೆಯ (Gruhalakshmi) ಪ್ರಯೋಜನಗಳನ್ನು ಪಡೆಯಲು ರೇಷನ್ ಕಾರ್ಡ್ ಒಂದು ಕಡ್ಡಾಯ ದಾಖಲೆಯಾಗಿದೆ.

ಅಲ್ಲದೆ ಅದರಲ್ಲಿ ಮಾಹಿತಿಗಳು ಸರಿಯಾಗಿರುವುದು ಮತ್ತು ಕುಟುಂಬದ ಮುಖ್ಯಸ್ಥ ಸ್ಥಾನದಲ್ಲಿ ಮಹಿಳೆ ಇರುವುದು ಮುಖ್ಯವಾಗಿದೆ. ಹಾಗಾಗಿ ಜನಸಾಮಾನ್ಯರ ಸಮಸ್ಯೆಯನ್ನು ಅರಿತ ಆಹಾರ ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿಗೆ ಸಮಯವಕಾಶ ಮಾಡಿಕೊಟ್ಟಿದೆ, ಆದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸ್ವೀಕರಿಸುತ್ತಿಲ್ಲ.

ರೇಷನ್ ಕಾರ್ಡ್ ತಿದ್ದುಪಡಿ / ಹೊಸ ಸದಸ್ಯರ ಸೇರ್ಪಡೆಗೆ ಇನ್ಮೇಲೆ ಈ ದಾಖಲೆಗಳ ಕಡ್ಡಾಯ ಸರ್ಕಾರದಿಂದ ಜಾರಿ ಆಯ್ತು ಹೊಸ ಆದೇಶ.!

ಕಳೆದ ತಿಂಗಳು ಕೂಡ ರೇಷನ್ ಕಾರ್ಡ್ ತಿದ್ದುಪಡಿಗೆ ನಾಲ್ಕು ದಿನಗಳ ಅವಕಾಶ ನೀಡಿತ್ತು ಆದರೆ ಆ ಸಮಯದಲ್ಲಿ ಸರ್ವರ್ ಸಮಸ್ಯೆ (Server problem) ಮತ್ತು ರಜಾದಿನಗಳು ಹೆಚ್ಚಿದ್ದರಿಂದ ಎಲ್ಲರೂ ಈ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮತ್ತೊಮ್ಮೆ ಅವಕಾಶ ನೀಡುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು.

ಅದೇ ರೀತಿ ಈಗ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಸೂಚಿಸಿದ ಸೇವಾ ಕೇಂದ್ರಗಳು ಅಥವಾ CSC ಕೇಂದ್ರಗಳು ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಇನ್ಯಾವುದೇ ಪ್ರೈವೇಟ್ ಸೆಕ್ಟರ್ ನಲ್ಲಿ ಕೂಡ ರೇಷನ್ ಕಾರ್ಡ್ ನಲ್ಲಿರುವ ಕೆಲವು ಮಾಹಿತಿಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಬಾರಿ ಕೂಡ ಸರ್ವರ್ ಮೇಲೆ ಬೀಳುವ ಒತ್ತಡವನ್ನು ತಪ್ಪಿಸಲು ಹಾಗೂ ಜನಸಾಮಾನ್ಯರಿಗೆ ಅನುಕೂಲತೆ ಮಾಡಿಕೊಡಲು ಜಿಲ್ಲಾವಾರು ವ್ಯವಸ್ಥೆ (districtvise) ಮಾಡಿಕೊಳ್ಳಲಾಗಿದೆ ಹಾಗೂ ಪ್ರತಿ ಜಿಲ್ಲೆಗೂ ಪ್ರತ್ಯೇಕ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಇನ್ಮುಂದೆ ಬಸ್ ಗಳಲ್ಲಿ ಕಂಡಕ್ಟರ್ ಜೊತೆ ಚಿಲ್ಲರೆ ಜಗಳ ಬಂದ್ ಸರ್ಕಾರದಿಂದ ಹೊಸ ಯೋಜನೆ ಜಾರಿ.!

ಈ ಅಂಕಣದಲ್ಲೂ ಯಾವ ಜಿಲ್ಲೆಗೆ ಯಾವ ದಿನಾಂಕ ನಿಗದಿಪಡಿಸಲಾಗಿದೆ ಹಾಗೂ ಏನೆಲ್ಲಾ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

ಯಾವೆಲ್ಲ ತಿದ್ದುಪಡಿಗಳನ್ನು ಮಾಡಿಸಬಹುದು:-

● ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು
● ಈಗಾಗಲೇ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರು ಮೃ’ತಪಟ್ಟಿದ್ದರೆ ಅವರ ಹೆಸರನ್ನು ತೆಗೆದುಹಾಕುವುದು ಆದರೆ ಯಾವುದೇ ಜೀವಂತ ವ್ಯಕ್ತಿಯ ಹೆಸರು ತೆಗೆದು ಹಾಕಲು ಅವಕಾಶವಿಲ್ಲ.
● ಹೆಸರುಗಳಲ್ಲಿ ವ್ಯತ್ಯಾಸವಿದ್ದರೆ ತಿದ್ದುಪಡಿ
● ವಿಳಾಸ ಬದಲಾವಣೆ
● ನ್ಯಾಯಬೆಲೆ ಅಂಗಡಿ ಬದಲಾವಣೆ
● ಕುಟುಂಬದ ಮುಖ್ಯಸ್ಥರ ಸ್ಥಾನದ ಹೆಸರಿನಲ್ಲಿ ಬದಲಾವಣೆ.

PPF & ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣ ಕಟ್ಟುತ್ತ ಇರುವವರು ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ, ಇಲ್ಲದಿದ್ರೆ ನಿಮ್ಮ ಖಾತೆ ಬಂದ್ ಆಗುತ್ತೆ ಎಚ್ಚರ.!

ಯಾವ ಜಿಲ್ಲೆಯವರು ಯಾವ ದಿನಾಂಕದಂದು ತಿದ್ದುಪಡಿ ಮಾಡಿಸಿಕೊಳ್ಳಬಹುದು:-

● ಕಲ್ಬುರ್ಗಿ ವಿಭಾಗಕ್ಕೆ ಸೇರಿದ ಜಿಲ್ಲೆಗಳಾದ ಬೀದರ್, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲ್ಬುರ್ಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಗೆ ಸೇರಿದ ಪಡಿತರದಾರರು 06.09.2023 ರಿಂದ 08.09.2023 ಬೆಳಗ್ಗೆ 10 ರಿಂದ ಸಂಜೆ 6ರ ಒಳಗಡೆ ತಿದ್ದುಪಡಿ ಮಾಡಿಸಿಕೊಳ್ಳಬಹುದು.

● ಬೆಳಗಾವಿ ಮತ್ತು ಮೈಸೂರು ವಿಭಾಗಕ್ಕೆ ಸೇರಿದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಿಗೆ 12.09.2023 ರಿಂದ 14.09.2023 ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ತಿದ್ದುಪಡಿ ಮಾಡಿಸಿಕೊಳ್ಳಬಹುದು.

PPF & ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣ ಕಟ್ಟುತ್ತ ಇರುವವರು ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ, ಇಲ್ಲದಿದ್ರೆ ನಿಮ್ಮ ಖಾತೆ ಬಂದ್ ಆಗುತ್ತೆ ಎಚ್ಚರ.!

● ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಭಾಗಕ್ಕೆ ಸೇರಿದ ಪಡಿತರಚೀಟಿದಾರರು ತಮ್ಮ ತಿದ್ದುಪಡಿಗಳನ್ನು 09.09.2023 ರಿಂದ 11.09.2023 ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ತಿದ್ದುಪಡಿ ಮಾಡಿಸಿಕೊಳ್ಳಬಹುದು.

Leave a Comment

%d bloggers like this: