ಸಣ್ಣ ಸಣ್ಣ ಉಳಿತಾಯ ಯೋಜನೆಯಾಗಿದ್ದರೂ (Small Saving Scheme) ಕೂಡ ಭವಿಷ್ಯದಲ್ಲಿ ಒಂದೊಳ್ಳೆ ಲಾಭ ತಂದು ಕೊಡುವ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF Scheme) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳನ್ನು (SSY Scheme) ಉತ್ತಮ ಉದಾಹರಣೆಗಳಾಗಿ ಹೇಳಬಹುದು. ಅಂಚೆ ಕಛೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಪಡೆಯಬಹುದಾದ ಈ ಯೋಜನೆಗಳ ಮೂಲಕ ಭವಿಷ್ಯದ ದೊಡ್ಡ ಕನಸಿಗಾಗಿ ಹಣದ ಉಳಿತಾಯ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕುಟುಂಬದಲ್ಲಿರುವ ಹೆಣ್ಣು ಮಗಳ ಹೆಸರಿನಲ್ಲಿ ತೆರೆಯುವುದರಿಂದ ಆಕೆಗೆ 18 ವರ್ಷ ತುಂಬಿದ ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ದಿಮೆ ಆರಂಭಕ್ಕಾಗಿ ಅಥವಾ ಮದುವೆ ಖರ್ಚಿಗಳಿಗೆ ಹಣ ಹಿಂಪಡೆಯಬಹುದು ಮತ್ತು 21 ವರ್ಷವಾದ ಬಳಿಕ ಯೋಜನೆ ಮೆಚ್ಯುರ್ ಆದಾಗ ಪೂರ್ತಿ ಹಣವನ್ನು ಪಡೆದು ಆಕೆಗೆ ಅವಶ್ಯಕತೆ ಇರುವ ಯಾವುದಾದರೂ ಕೆಲಸ ಕಾರ್ಯಗಳಿಗೆ ಅದನ್ನು ಬಳಸಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗಿಲ್ಲವೇ, ಈ ಸಣ್ಣ ಕೆಲಸ ಮಾಡಿ ಖಾತೆಗೆ ಹಣ ಬರುತ್ತದೆ.!
ನರೇಂದ್ರ ಮೋದಿಯವರು (PM Narendra Modi) ಇಂತಹದೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈಗ ದೇಶದಲ್ಲಿ ಕೋಟ್ಯಾಂತರ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲಾಗಿದೆ. ಆದರೆ ಈ ಯೋಜನೆ ವಿಶೇಷತೆ ಏನೆಂದರೆ, ಈ ಯೋಜನೆಯನ್ನು ಕೇವಲ ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖರೀದಿಸಬಹುದು.
ಅದೇ ರೀತಿ ಗಂಡು ಮಕ್ಕಳಿಗೆ, ಯುವ ಜನತೆಗೆ, ಯಾವುದೇ ವಯಸ್ಸಿನವರಿಗೆ ಖರೀದಿಸಲು ಅನುಕೂಲವಾಗುವಂತಹ ಬಹುತೇಕ ವಿಷಯಗಳಲ್ಲಿ SSY ಹೋಲುವ ಮತ್ತೊಂದು ಯೋಜನೆ ಎಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ (PPF Scheme). ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಕೂಡ ಭವಿಷ್ಯದ ಒಂದು ದೊಡ್ಡ ಕನಸಿಗೆ ಸಣ್ಣ ಸಣ್ಣ ಉಳಿತಾಯದಿಂದ ಹಣ ಕೂಡಿಡಬಹುದು.
ವಿಷ್ಣು, ಲಲಿತ ಸಹಸ್ರ ನಾಮಗಳ ಬಗ್ಗೆ ವೈದ್ಯರು ಹೇಳಿದ ಸತ್ಯಾಂಶ, ಮಂತ್ರ ಪಠಿಸಿದ್ರೆ ಮಕ್ಕಳಾಗುತ್ತ.? ನೀವೆ ನೋಡಿ.!
ಈ ಎರಡು ಯೋಜನೆಗಳ ಪ್ರಯೋಜನವನ್ನು ಅಂಚೆ ಕಚೇರಿ ಹಾಗೂ ರಾಷ್ಟ್ರೀಕತ ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳಬಹುದು ಈ ಎರಡು ಯೋಚನೆಗಳು ಕೂಡ ಕೇಂದ್ರ ಸರ್ಕಾರದ ಯೋಜನೆಗಳಾಗಿವೆ ಹಾಗಾಗಿ ಈ ಯೋಜನೆಗಳ ಖಾತೆ ತೆರೆದಿರುವವರಿಗೆ (Account Holders) ಸರ್ಕಾರವು ಒಂದು ಸೂಚನೆಯನ್ನು ನೀಡಿದೆ. ಈ ಯೋಜನೆಗಳನ್ನು ಆರಂಭಿಸುವಾಗಲೇ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ (Aadhar and Pancard attached to account) ಇದ್ದಲ್ಲಿ ಪಾನ್ ಕಾರ್ಡ್ ಅನ್ನು ಕಡ್ಡಾಯ ದಾಖಲೆಯಾಗಿ ನೀಡಲೇಬೇಕು.
ಆದರೆ ಆ ಸಮಯದಲ್ಲಿ ಯಾರಿಗಾದರೂ ಖಾತೆ ತೆರೆದಾಗ ಆಧಾರ್ ಕಾರ್ಡ್ ನೀಡಲು ಸಾಧ್ಯವಾಗದೇ ಇದ್ದರೆ ಅಥವಾ ನಂತರ ಪಾನ್ ಕಾರ್ಡ್ ಹೊಂದಿದಾಗ ಅದನ್ನು ಸಲ್ಲಿಸಲು ಸಾಧ್ಯವಾಗದೆ ಇದ್ದರೆ ಶೀಘ್ರವಾಗಿ ತಮ್ಮ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಸಹಕಾರ ಸೂಚನೆ ನೀಡಿದೆ.
ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭ ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳೇನು ನೋಡಿ.!
ಒಂದು ವೇಳೆ ಇದನ್ನು ಮಾಡದಿದ್ದಲ್ಲಿ ಅಂಚೆ ಕಚೇರಿಯಲ್ಲಿ ಮಾಡಿದ ಹೂಡಿಕೆಗಳಿಗೆ ಯಾವುದೇ ರೀತಿಯ ಬಡ್ಡಿ ರೂಪದ ಹಣ ಸಿಗುವುದಿಲ್ಲ, ಅದನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ. ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಅವರ PPF ಅಥವಾ SSY ಖಾತೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
ಹೂಡಿಕೆದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಮೆಚ್ಯೂರಿಟಿ ಮನಿ ಕ್ರೆಡಿಟ್ ಪಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಶೀಘ್ರವೇ ಈ ಪ್ರಕ್ರಿಯೆ ಪೂರ್ತಿಗೊಳಿಸಬೇಕು. ಒಂದು ವೇಳೆ ಆರು ತಿಂಗಳ ಅವಧಿಯಲ್ಲಿ ತನ್ನ ಆಧಾರ್ ಸಂಖ್ಯೆಯನ್ನು ಒದಗಿಸದಿದ್ದರೆ ಅಲ್ಲಿಯವರೆಗೂ ಅವರ PPF ಅಥವಾ SSY ಖಾತೆ ನಿಷ್ಕ್ರಿಯವಾಗುತ್ತದೆ ಎನ್ನುವ ಖಡಕ್ ಎಚ್ಚರಿಕೆಯನ್ನು ನೀಡಿದೆ.