ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರೆಂಟಿ ಕಾರ್ಡ್ ಯೋಜನೆಗಳಲ್ಲಿ ಅತಿ ದೊಡ್ಡ ಬಜೆಟ್ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಆಗಸ್ಟ್ 30ರಂದು ಲಾಂಚ್ (launch) ಆಗಿದೆ. ಸರ್ಕಾರವು ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಕುಟುಂಬದ ಯಜಮಾನಿ ಸ್ಥಾನದಲ್ಲಿರುವ ಮಹಿಳೆಯು ಆಕೆಯ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆ ಕೊಟ್ಟು ನೋಂದಾಯಿಸಿಕೊಳ್ಳಲು ಸೂಚಿಸಿತ್ತು.
ಅದೇ ಪ್ರಕಾರಕ್ಕೆ ನಮ್ಮ ರಾಜ್ಯದ 1.28 ಕೋಟಿ ಮಹಿಳೆಯರು ಆಗಸ್ಟ್ 30ರ ವರೆಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು ಇವರೆಲ್ಲರಿಗೂ ಕೂಡ ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿದೆ. ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯಲು ಅರ್ಹರಾಗಿ ಅರ್ಜಿ ಸಲ್ಲಿಸಿದ್ದ ಹಲವು ಮಹಿಳೆಯರು ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದರ ಕುರಿತು ಸರ್ಕಾರದಿಂದ ಅಭಿನಂದನೆಯ SMS ಸಂದೇಶ ಪಡೆದಿದ್ದಾರೆ.
SBI ನಲ್ಲಿ ಖಾತೆ ಇದ್ದವರಿಗೆ ವಿಶೇಷ ಸೂಚನೆ, ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ ಮುಗಿಸುವುದು ಕಡ್ಡಾಯ.!
ಸರ್ವರ್ ಒತ್ತಡ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ SMS ಪಡೆಯಲು ಸಾಧ್ಯವಾಗದೇ ಇದ್ದವರು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ಕುರಿತು ಸಂದೇಶ ಪಡೆದಿದ್ದಾರೆ. ಆದರೆ ಅನೇಕರಿಗೆ ಈ ಎರಡು SMS ಕೂಡ ಬಂದಿಲ್ಲ, ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹಣ ಹೋಗಿದೆ. ಹಾಗಾಗಿ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಸರ್ಕಾರವು ಈಗ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ಆಪ್ಷನ್ (Gruhalakshmi status track option) ಅನ್ನು ಕೂಡ ಬಿಡುಗಡೆ ಮಾಡಿದೆ.
ನೀವು ನೇರವಾಗಿ ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು. ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿದರೆ ನಿಮ್ಮ ಅರ್ಜಿಯ ಕುರಿತ ಸ್ಟೇಟಸ್ ಸಿಗುತ್ತದೆ.
SBI ಬ್ಯಾಂಕ್ ನಲ್ಲಿ ನೇಮಕಾತಿ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
● ಮೊದಲಿಗೆ https://sevasindhugs.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
● ಪೇಜ್ ಓಪನ್ ಆಗಿ ಡ್ಯಾಶ್ ಬೋರ್ಡ್ ಕಾಣುತ್ತದೆ. ಅದರಲ್ಲಿ Application Tracker ಹಾಗೂ Log in ಎನ್ನುವ ಎರಡು ಆಪ್ಷನ್ ಗಳು ಕಾಣುತ್ತದೆ.
● Application Tracker ಎನ್ನುವುದರ ಮೇಲೆ ಕ್ಲಿಕ್ ಮಾಡಿ
● ನಿಮ್ಮ RC Num. ಕೇಳಲಾಗುತ್ತದೆ, 12 ಅಂಕಿ ಉಳ್ಳ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ Search ಮೇಲೆ ಕ್ಲಿಕ್ ಮಾಡಿ.
● ಸರ್ಚ್ ಮೇಲೆ ಕ್ಲಿಕ್ ಕೊಟ್ಟ ತಕ್ಷಣ ಆ ರೇಷನ್ ಕಾರ್ಡಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಸಂಪೂರ್ಣ ವಿವರ ಬರುತ್ತದೆ.
● ನರೇಷನ್ ಕಾರ್ಡ್ ಸಂಖ್ಯೆ ಗೃಹಲಕ್ಷ್ಮಿ ಯೋಜನೆಗೆ ಅಪ್ಲಿಕೇಶನ್ ಹಾಕಿರುವವರ ಹೆಸರು, ಗೃಹಲಕ್ಷ್ಮಿ ಯೋಜನೆ ಸಹಾಯಧನ ವರ್ಗಾವಣೆ ಆಗಿರುವ ದಿನಾಂಕ ಮತ್ತು ಅದರ ಸ್ಟೇಟಸ್ ಕೂಡ ಬಂದಿರುತ್ತದೆ .ಸ್ಟೇಟಸ್ ಅಲ್ಲಿ Success ಎಂದು ಬಂದಿದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುತ್ತದೆ ಎಂದು ಅರ್ಥ.
● ಈ ಸ್ಟೇಟಸ್ ಆಪ್ಷನ್ ನಲ್ಲಿ Push to DBT ಎಂದು ಇದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿದೆ ಶೀಘ್ರದಲ್ಲಿ ಹಣ ಜಮೆಯಾಗುತ್ತದೆ ಎಂದು ಅರ್ಥೈಸಿಕೊಳ್ಳಬಹುದು.
● ಸರ್ಕಾರ ನೇರವಾಗಿ ಆಧಾರ್ ಕಾರ್ಡ್ ಮೂಲಕ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿರುವ ಕಾರಣ ಆಧಾರ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದವರಿಗೆ Bank account not linked ಎಂದು ಬರುತ್ತದೆ. ಈ ರೀತಿ ಇದ್ದವರಿಗೆ ಹಣ ವರ್ಗಾವಣೆ ಆಗುವುದಿಲ್ಲ ತಕ್ಷಣ ಅವರು ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋಗಿ Aadhar Seeding NPCI Mapping ಗೆ ಅರ್ಜಿ ಸಲ್ಲಿಸಿ ಸರಿ ಪಡಿಸಿಕೊಳ್ಳಬೇಕು.