ನಿಮ್ಮಲ್ಲಿರುವ ಉಳಿತಾಯದ ಹಣವನ್ನು ಒಂದೊಳ್ಳೆ ಯೋಜನೆಯಲ್ಲಿ ಹೂಡಿಕೆ ಮಾಡಿ ಅದರಿಂದ ಪ್ರತಿ ತಿಂಗಳು ಒಂದು ನಿಶ್ಚಿತವಾದ ಆದಾಯವನ್ನು ಗಳಿಸಬೇಕು ಎನ್ನುವ ಪ್ಲಾನಿಂಗ್ ನಲ್ಲಿ ಇದ್ದರೆ ನೀವು ಈಗ SBI (State bank of Mysore) ನ ಹೊಸ ಯೋಜನೆಯನ್ನು ಆರಂಭಿಸಬಹುದು. SBI ಬ್ಯಾಂಕ್ ಮಾತ್ರವಲ್ಲದೆ ಅಂಚೆ ಕಚೇರಿ ಸೇರಿದಂತೆ ದೇಶದ ಅನೇಕ ಹಣಕಾಸಿನ ಸಂಸ್ಥೆಗಳು ಈ ರೀತಿ ನೀವು ಮಾಡಿರುವ ಹೂಡಿಕೆಗೆ ಬಡ್ಡಿರೂಪದ ಹಣವನ್ನು ನೀಡುತ್ತವೆ.
ಆದರೆ SBI ಈಗ ಆರಂಭಿಸಿರುವ SBI New Annuity scheme ನಲ್ಲಿ ಉಳಿದ ಎಲ್ಲಾ ಯೋಜನೆಗಿಂತ ಹೆಚ್ಚು ಲಾಭ ಸಿಗುತ್ತದೆ. ಈ ಯೋಜನೆ ಬಗ್ಗೆ ಕೆಲ ಪ್ರಮುಖ ವಿವರಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ, ಕೊನೆಯವರೆಗೂ ತಪ್ಪದೆ ಕೊನೆಯವರೆಗೂ ಓದಿ.
● ಭಾರತದ ನಾಗರಿಕರೆಲ್ಲರೂ ಕೂಡ ಈ ಯೋಜನೆಯ ಖಾತೆ ತೆರೆಯಬಹುದು
● 18 ವರ್ಷ ವಯಸ್ಸಿನ ಒಳಗಿನವರ ಹೆಸರಿನಲ್ಲಿಯೂ ಕೂಡ ಈ ಯೋಜನೆಯ ಖಾತೆಯನ್ನು ತೆರೆಯಬಹುದು.
● ಒಂಟಿಯಾಗಿ ಅಥವಾ ಜಂಟಿಯಾಗಿ ಕೂಡ ಈ ಯೋಜನೆ ಖಾತೆಯನ್ನು ತೆರೆಯಬಹುದು.
● ಯೋಜನೆಯ ಮೆಚ್ಯುರಿಟಿ ಅವಧಿ 3, 5, 7 ಮತ್ತು 10 ವರ್ಷಗಳು ಇರುತ್ತವೆ. ಇದರಲ್ಲಿ ನಿಮ್ಮ ಅವಶ್ಯಕತೆಗೆ ಅನುಸಾರವಾದ ಅವಧಿಯನ್ನು ಆಯ್ದುಕೊಳ್ಳಬಹುದು ಆದರೆ ಯೋಜನೆ ಆರಂಭಿಸುವುದಕ್ಕೂ ಮುನ್ನವೇ ಇದರ ಬಗ್ಗೆ ಪ್ಲಾನ್ ಮಾಡಿ ನಿಗಧಿ ಪಡಿಸಬೇಕು.
● ಈ ಯೋಜನೆಯಲ್ಲಿ ನೀವು ಕನಿಷ್ಠ ಮೊತ್ತ 25,000 ವನ್ನಾದರೂ ಹೂಡಿಕೆ ಮಾಡಬೇಕು, ಗರಿಷ್ಠ ಯಾವುದೇ ಮಿತಿ ಇಲ್ಲ.
● ಈ ಯೋಜನೆಯಡಿ ನಿಮಗೆ ಪ್ರತಿ ತಿಂಗಳು 1,000ರೂ. ಆದರೂ ಬರುವ ರೀತಿ ನೀವು ಹಣವನ್ನು ಹೂಡಿಕೆ ಮಾಡಬೇಕು, ಗರಿಷ್ಠ ಮಿತಿ ಇಲ್ಲ.
● ನೀವು ಹೂಡಿಕೆ ಮಾಡಿದ ಹಣದ ಮೇಲೆ ಲೋನ್ ಸೌಲಭ್ಯ ಕೂಡ ಸಿಗುತ್ತದೆ. ನಿಮ್ಮ ಹೂಡಿಕೆ ಹಣದ 75% ರಷ್ಟು ನೀವು ಸಾಲ ಪಡೆಯಬಹುದು.
● ಸದ್ಯಕ್ಕೆ ಈ ಯೋಜನೆಗೆ ಅನ್ವಯಿಸುವ ಬಡ್ಡಿದರ ಎಷ್ಟಿದೆ ಎಂದರೆ ನೀವು 1 – 3 ವರ್ಷಗಳ ಅವಧಿಗೆ ಹಣವನ್ನು ಹೂಡಿಕೆ ಮಾಡುವುದಾದರೆ 5.30% , 7 – 10 ವರ್ಷದ ಅವಧಿಗೆ ಹೂಡಿಕೆ ಮಾಡಿದರೆ 5.40% ಬಡ್ಡಿ ದರ ಸಿಗುತ್ತದೆ.
● ಎಲ್ಲಾ ಯೋಜನೆಗಳಂತೆ ಈ ಯೋಜನೆಯಲ್ಲೂ ಕೂಡ ಸೀನಿಯರ್ ಸಿಟಿಜನ್ ಗಳಿಗೆ 0.50% ಹೆಚ್ಚುವರಿಯಾಗಿ ಬಡ್ಡಿದರ ಅನ್ವಯವಾಗುತ್ತದೆ.
● ನೀವು SBI ನಲ್ಲಿ ಕೆಲಸ ಮಾಡುವ ಪರ್ಮನೆಂಟ್ ಎಂಪ್ಲಾಯ್ ಆಗಿದ್ದರೆ 6.40% ಸಿಗುತ್ತದೆ.
● ಉದಾಹರಣೆಯೊಂದಿಗೆ ಈ ಯೋಜನೆಯ ವಿವರವನ್ನು ಹೇಳುವುದಾದರೆ ನೀವು 1 ಲಕ್ಷ ರೂಪಾಯಿಯನ್ನು 3 ವರ್ಷದ ಅವಧಿವರೆಗೆ ಈ ಯೋಜನೆಯಡಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 3,259 ರೂ. ನಿಮ್ಮ ಖಾತೆಗೆ ಬರುತ್ತದೆ. ನೀವೇನಾದರೂ 2 ಲಕ್ಷ ಹಣವನ್ನು ಇದೇ ಅವಧಿಗೆ ಹೂಡಿಕೆ ಮಾಡಿದರೆ 6,451ರೂ. ಪ್ರತಿ ತಿಂಗಳು ಬರುತ್ತದೆ.
● ಇದರಲ್ಲಿ ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ ಇದರಲ್ಲಿ ಬಡ್ಡಿ ರೂಪದ ಹಣದ ಜೊತೆಗೆ ನಿಮ್ಮ ಅಸಲನ್ನು ಕೂಡ ಕಂತುಗಳ ರೂಪದಲ್ಲಿ ಕೊಡುತ್ತಾರೆ. ಹಾಗಾಗಿ ಉಳಿದ ಬ್ಯಾಂಕ್ ಗಿಂತ ದೊಡ್ಡ ಮೊತ್ತದ ಹಣ ಬರುತ್ತದೆ ಈ ಯೋಜನೆ ಬಗ್ಗೆ ಇನ್ನಷ್ಟು ವಿವರ ಬೇಕಾದರೆ SBI ನ ಶಾಖೆಗೆ ಭೇಟಿ ಕೊಡಿ ಅಥವಾ SBI ಅಧಿಕೃತ ವೆಬ್ಸೈಟ್ ಭೇಟಿ ಕೊಟ್ಟು ಸರ್ಚ್ ಮಾಡುವ ಮೂಲಕ ತಿಳಿದುಕೊಳ್ಳಿ.
ಕೊನೆಗೂ ಬಂತು, ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ಸ್ಟೇಟಸ್ ಚೆಕ್ ಮಾಡುವ ಆಪ್ಷನ್.!