ಆಸ್ತಿ ರಿಜಿಸ್ಟರ್ ಯಾವ ವಿಧಾನದಲ್ಲಿ ಮಾಡಿದರೆ ಬೆಸ್ಟ್, ಕ್ರಯ ಪತ್ರ ಮತ್ತು ದಾನ ಪತ್ರದ ನಡುವಿನ ವ್ಯತ್ಯಾಸವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ನಮ್ಮ ಭಾರತದಲ್ಲಿ ಆಸ್ತಿ ಹಕ್ಕನ್ನು (Property rights) ಹಲವಾರು ರೀತಿಯಲ್ಲಿ ವರ್ಗಾವಣೆ ಮಾಡಬಹುದು. ದಾನ, ಕ್ರಯ, ವಿಭಾಗದ ಮೂಲಕ ವೀಲ್ ಮಾಡುವ ಮೂಲಕ ಅಥವಾ ಉಡುಗೊರೆಯಾಗಿ ಕೊಡುವ ಮೂಲಕ ಹೀಗೆ ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ.

ಆದರೆ ಆಸ್ತಿ ರಿಜಿಸ್ಟರ್ (Register) ಮಾಡುವಾಗ ಅದನ್ನು ದಾನ ಪತ್ರ ಮಾಡಿಸುವ ಮೂಲಕ ಕ್ರಯ ಪತ್ರ ಮಾಡಿಸುವ ಮೂಲಕ ಅಥವಾ ವಿಭಾಗ ಪತ್ರ ಮಾಡಿಸುವ ಮೂಲಕ ರಿಜಿಸ್ಟರ್ ಮಾಡಿಸುತ್ತಾರೆ. ಅದರಲ್ಲೂ ಹೆಚ್ಚಿನ ಜನರು ದಾನ ಪತ್ರದ ವಿಧಾನ ಅಥವಾ ಕ್ರಯ ಪತ್ರದ ವಿಧಾನವನ್ನು ಅನುಸರಿಸುತ್ತಾರೆ. ದಾನ ಪತ್ರ ಹಾಗೂ ಕ್ರಯಪತ್ರ ಈ ಎರಡು ವಿಧಾನಗಳಲ್ಲಿ ಯಾವುದು ಬೆಸ್ಟ್? ಯಾಕೆ? ಇವುಗಳ ನಡುವಿನ ವ್ಯತ್ಯಾಸವೇನು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ರಾಜ್ಯದ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ ಬಿಡುಗಡೆ.! ಒಂದೇ ಸಲಕ್ಕೆ ಸಿಗಲಿದೆ 25,000/- ಅರ್ಜಿ ಸಲ್ಲಿಸೋದು ಹೇಗೆ ನೋಡಿ.!

● ದಾನ ಪತ್ರ ಎಂದರೆ ಒಬ್ಬ ವ್ಯಕ್ತಿಯು ತನ್ನ ಆಸ್ತಿ ಹಕ್ಕನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ತನಗೆ ಬೇಕಾದ ವ್ಯಕ್ತಿಗೆ ಮಾಡಿಕೊಡುವುದು, ಆದರೆ ಈ ರೀತಿ ದಾನ ಪತ್ರ ಮಾಡುವ ಕೆಲವೊಂದು ಕಂಡೀಶನ್ ಗಳನ್ನು ಪರಸ್ಪರ ವ್ಯಕ್ತಿಗಳು ಹಾಕಿಕೊಂಡಿರುತ್ತಾರೆ. ಉದಾಹರಣೆಗೆ ಒಬ್ಬ ವ್ಯಕ್ತಿಯು ಆತನ ಮೊಮ್ಮಗನಿಗೆ ತನ್ನ ಆಸ್ತಿ ಹಕ್ಕನ್ನು ಮಾಡಿಕೊಟ್ಟಾಗ ತಾತ ಹಾಕಿದ್ದ ಕಂಡಿಷನನ್ನು ಮೊಮ್ಮಗ ಪಾಲಿಸದೆ ಇದ್ದರೆ ರಿಜಿಸ್ಟರ್ ರದ್ದುಪಡಿಸಿ ಮತ್ತೆ ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಇರುತ್ತದೆ.

● ಕ್ರಯಾಪತ್ರ ಎಂದರೆ ಒಬ್ಬ ವ್ಯಕ್ತಿಯು ತನ್ನ ಆಸ್ತಿಯನ್ನು ಮಾರಾಟ ಮಾಡಿ ಖರೀದಿಸುವಾತನಿಗೆ ಮಾಡಿಕೊಡುವ ಪತ್ರವಾಗಿದೆ. ಹಣ ಅಥವಾ ಹಣದ ರೂಪದಲ್ಲಿ ಬೇರೆ ಏನನ್ನಾದರೂ ಮಾರಾಟ ಮಾಡುವ ವ್ಯಕ್ತಿಯು ಖರೀದಿ ಮಾಡುವವರಿಂದ ಪಡೆದಿರುತ್ತಾನೆ ಹಾಗಾಗಿ ಇದನ್ನು ಖರೀದಿ ಪತ್ರ ಎಂದು ಕೂಡ ಕರೆಯುತ್ತಾರೆ. ಹೆಚ್ಚಾಗಿ ಹಣದ ರೂಪದ ವ್ಯವಹಾರವೇ ನಡೆದಿರುವುದರಿಂದ ಈ ಸಂದರ್ಭಗಳಲ್ಲಿ ಯಾವುದೇ ರೀತಿಯ ಕಂಡೀಷನ್ ಗಳು ಇರುವುದಿಲ್ಲ.

LIC ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಪ್ರಥಮ ವರ್ಷದ PUC, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ.!

● ಇವೆರಡರ ನಡುವಿನ ವ್ಯತ್ಯಾಸದ ಬಗ್ಗೆ ಹೇಳುವುದಾದರೆ ದಾನ ಪತ್ರವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಕೊಡುವುದರಿಂದ ಇದನ್ನು ಪುಕ್ಕಟೆ ಕೊಡುವುದು ಎಂದು ಹೇಳಬಹುದು, ಕ್ರಯಾ ಪತ್ರ ಮಾರಾಟ ಆಗಿದೆ ಎನ್ನುವುದನ್ನು ಹೇಳುತ್ತದೆ. ಹಾಗಾಗಿ ದಾನಪತ್ರ ಎಂದ ತಕ್ಷಣ ನಡುವೆ ಹಣಕಾಸು ವಹಿವಾಟು ನಡೆದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು, ಕ್ರಯ ಪತ್ರ ಎಂದ ತಕ್ಷಣ ಇದು ಮಾರಾಟವಾಗಿರುವುದರಿಂದ ಹಣದ ವ್ವವಹಾರ ಇದ್ದೇ ಇರುತ್ತದೆ ಎಂದು ಅರ್ಥೈಸಿಕೊಳ್ಳಬಹುದು.

● ದಾನ ಪತ್ರವನ್ನು ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ತನಗೆ ಇಷ್ಟ ಬಂದ ವ್ಯಕ್ತಿಗೆ ಮಾಡಿಕೊಡುತ್ತಾನೆ ಆದರೆ ಕ್ರಯ ಪತ್ರದಲ್ಲಿ ಇಷ್ಟ ಬಂದ ವ್ಯಕ್ತಿಗೆ ಎನ್ನುವುದು ಬರುವುದಿಲ್ಲ ಸಾಮಾನ್ಯವಾಗಿ ಎಲ್ಲರೂ ಯಾರು ಹೆಚ್ಚಾಗಿ ಯಾರು ಹಣ ಕೊಡುತ್ತಾರೋ ಅವರಿಗೆ ಕ್ರಯ ಮಾಡಿಕೊಡುತ್ತಾರೆ.

ಕೊನೆಗೂ ಬಂತು, ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ಸ್ಟೇಟಸ್ ಚೆಕ್ ಮಾಡುವ ಆಪ್ಷನ್.!

● ಈ ಮೇಲೆ ಹೇಳಿದಂತೆ ದಾನಪತ್ರ ಮಾಡುವಾಗ ಹಾಕಿದ್ದ ಕಂಡಿಷನ್ ಪೂರೈಸದೆ ಇದ್ದರೆ ರಿಜಿಸ್ಟರ್ ಅನ್ನು ಮುರಿಯಬಹುದು ಆದರೆ ಕ್ರಯ ಮಾಡುವ ವಿಧಾನದಲ್ಲಿ ಒಂದು ಬಾರಿ ಕ್ರಯವಾದ ಮೇಲೆ ಆ ಮ್ಯೂಟೇಶನ್ ರದ್ದುಪಡಿಸುವಿಕೆ ಬಹಳ ಕ’ಷ್ಟ.
● ಕುಟುಂಬದೊಳಗೆ ಆಸ್ತಿ ವರ್ಗಾವಣೆ ಮಾಡುವಾಗ ದಾನ ಪತ್ರದ ಮೂಲಕ ಮಾಡಿಸಿದರೆ ರಿಜಿಸ್ಟ್ರೇಷನ್ ಮತ್ತು ಸ್ಟ್ಯಾಂಪ್ ಡ್ಯೂಟಿ ಚಾರ್ಜಸ್ ಕಡಿಮೆಯಾಗುತ್ತದೆ. ಆದರೆ ಕ್ರಯ ಪತ್ರದಲ್ಲಿ ನಿಮ್ಮ ಜಮೀನಿನ ಮೌಲ್ಯದ 5% ತೆರಿಗೆ ಹಾಗೂ ನೋಂದಣಿ ಶುಲ್ಕವನ್ನು ಕಟ್ಟಬೇಕಾಗುತ್ತದೆ.

● ಎರಡರಲ್ಲಿ ಯಾವುದು ಬೆಸ್ಟ್ ಎಂದು ಹೇಳುವುದಾದರೆ ನಮ್ಮ ಭಾರತದ ಕಾನೂನಿನ ಪ್ರಕಾರ ಯಾವುದೇ ಆಸ್ತಿಯನ್ನು ಬರೀ ಬಾಯಿ ಮಾತಿನಲ್ಲಿ ಮಾಡುವಂತಿಲ್ಲ ಅದನ್ನು ನೋಂದಣಿ ಮಾಡಿಸುವುದು ಕಡ್ಡಾಯ. ಅದು ಯಾವುದೇ ರೂಪದಲ್ಲಿ ವರ್ಗಾವಣೆ ಮಾಡಿದರು ಅದಕ್ಕೆ ಕರಾರು ಪತ್ರ ಮತ್ತು ರಿಜಿಸ್ಟರ್ ಪತ್ರ ಮಾಡಿಸಿದರೆ ಒಳಿತು.

Leave a Comment

%d bloggers like this: