ಯಾರಿಗೆಲ್ಲಾ ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಬಂದಿಲ್ಲ, ಅವರು ಹಣ ಬರುತ್ತೋ ಇಲ್ವೋ ಅಂತ ಈ ವಿಧಾನದ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

 

ಕಾಂಗ್ರೆಸ್ ಪಕ್ಷವು (Congress) ಘೋಷಣೆ ಮಾಡಿದ್ದ ಪಂಚಖಾತ್ರಿ ಯೋಜನೆಗಳಲ್ಲಿ (five Guarantee) ರಾಜ್ಯದ ಜನತೆ ಈಗ ನಾಲ್ಕು ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಶಕ್ತಿಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಬಳಿಕ ಗೃಹಲಕ್ಷ್ಮಿ ಯೋಜನೆ ಆಗಸ್ಟ್ ತಿಂಗಳಲ್ಲಿ ಜಾರಿಗೆ ಬಂದಿದೆ. ಆಗಸ್ಟ್ 30ನೇ ತಾರೀಕು ಮೈಸೂರಿನಲ್ಲಿ (Mysore) ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿ ಯೋಜನೆಗೆ ಚಾಲನೆ (Gruhalakshmi launch) ನೀಡಲಾಗಿದೆ.

ಅಂದಿನಿಂದ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಜುಲೈ 19 ರಿಂದ ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವ ಹಾಗೂ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿರುವ ಮಹಿಳೆಯು (Head of the family women) ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದೆಂದು ಅವಕಾಶ ನೀಡಿತ್ತು.

ನಾಳೆಯಿಂದ ದೇಶದಾದ್ಯಂತ ಈ 13 ನಿಯಮಗಳು ಬದಲಾಗಿದೆ.! ಸಾರ್ವಜನಿಕರು ತಪ್ಪದೆ ಇದನ್ನು ತಿಳಿದುಕೊಳ್ಳಿ.!

ಆ ಪ್ರಕಾರವಾಗಿ 1.28 ಕೋಟಿ ಮಹಿಳಾ ಫಲಾನುಭವಿಗಳು ಯೋಜನೆಗೆ ಇದುವರೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಸರ್ಕಾರದ ಅಂಕಿಅಂಶ ಹೇಳುತ್ತಿದೆ. ಅವರಿಗೆಲ್ಲರಿಗೂ ಕೂಡ ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ಸರ್ಕಾರದ ವತಿಯಿಂದ ಸಹಾಯಧನ ವರ್ಗಾವಣೆ ಆಗಿದೆ. ಇನ್ನು ಮುಂದೆ ಪ್ರತಿ ತಿಂಗಳು ಕೂಡ ಅವರು ಕುಟುಂಬ ನಿರ್ವಹಣೆಗಾಗಿ ಸರ್ಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆ ಅಡಿ 2000ರೂ. ಸಹಾಯಧನವನ್ನು ಪಡೆಯಲಿದ್ದಾರೆ.

ಆಗಸ್ಟ್ 30ರಂದೇ ಅನೇಕ ಮಹಿಳೆಯರು ತಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದರ ಕುರಿತು ಸರ್ಕಾರದ ವತಿಯಿಂದ ಸಂದೇಶ ಪಡೆದಿದ್ದರು, ಇನ್ನು ಕೆಲವರಿಗೆ ತಮ್ಮ ಬ್ಯಾಂಕ್ ಗಳಿಂದ ಹಣ ವರ್ಗಾವಣೆ ಆಗಿರುವ ಕುರಿತು SMS ಬಂದಿದೆ. ಎಲ್ಲರಿಗೂ ಈ ಸಂದೇಶ ತಲುಪಿಲ್ಲದ ಕಾರಣ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವವರು ಯಾವ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ಗೊಂದಲದಲ್ಲಿದ್ದಾರೆ. ಹಾಗೆ ಇನ್ನು ಕೆಲವರು ನಮಗೆ SMS ಬಂದಿಲ್ಲ ಹೀಗಾಗಿ ನಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೋ ಅಥವಾ ತಡೆಹಿಡಿಯಲಾಗಿದೆಯೋ ಅಥವಾ ರದ್ದಾಗಿದೆಯೋ ಎನ್ನುವ ಗೊಂದಲದಲ್ಲಿ ಇದ್ದಾರೆ.

SBI New Annuity Deposit ಸ್ಕೀಮ್, ಕೇವಲ ಒಂದು ಸಲ 1 ಲಕ್ಷ ಕಟ್ಟಿದ್ರೆ ಸಾಕು ಪ್ರತಿ ತಿಂಗಳು ಸಿಗಲಿದೆ 3,259/- ರೂಪಾಯಿ

ಈ ಎಲ್ಲಾ ಗೊಂದಲಕ್ಕೂ ಕೂಡ ಪರಿಹಾರ ನೀಡುವ ಸಲುವಾಗಿ ಸರ್ಕಾರ ಹೊಸ ನಿರ್ಧಾರಕ್ಕೆ ಬಂದಿದೆ. ಪಂಚಖಾತ್ರಿ ಯೋಜನೆಗಳಿಗಾಗಿ ರೂಪಿಸಿದ್ದ ಸೇವಾ ಸಿಂಧು ಪೋರ್ಟಲ್ (Gruhalakshmi application status check through Sevasindhu portal) ಮೂಲಕ ಅರ್ಜಿಗಳ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಈಗ ನಾವು ಹೇಳುವ ವಿಧಾನದ ಮೂಲಕ ನೀವು ಸಹಾ ನಿಮ್ಮ ಅರ್ಜಿ ಸ್ಥಿತಿ ಏನಾಗಿದೆ ಒಂದು ವೇಳೆ ಹಣ ವರ್ಗಾವಣೆ ಆಗಿದ್ದರೆ ಯಾವ ದಿನಾಂಕದಂದು ಯಾವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಎಂದು ತಿಳಿದುಕೊಳ್ಳಬಹುದು.

● ಮೊದಲಿಗೆ https://sevasindhugs.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಗ್ಯಾರಂಟಿ ಯೋಜನೆಗಳ ಪೇಜ್ ಓಪನ್ ಆಗುತ್ತದೆ.
● ಗೃಹಲಕ್ಷ್ಮಿ ಯೋಜನೆ ಎನ್ನುವುದನ್ನು ಸೆಲೆಕ್ಟ್ ಮಾಡಿ
● ಪೇಜ್ ಓಪನ್ ಆಗಿ ಡ್ಯಾಶ್ ಬೋರ್ಡ್ ಕಾಣುತ್ತದೆ. ಅದರಲ್ಲಿ Application Tracker ಹಾಗೂ Log in ಎನ್ನುವ ಎರಡು ಆಪ್ಷನ್ ಗಳು ಕಾಣುತ್ತದೆ.

ಆಸ್ತಿ ರಿಜಿಸ್ಟರ್ ಯಾವ ವಿಧಾನದಲ್ಲಿ ಮಾಡಿದರೆ ಬೆಸ್ಟ್, ಕ್ರಯ ಪತ್ರ ಮತ್ತು ದಾನ ಪತ್ರದ ನಡುವಿನ ವ್ಯತ್ಯಾಸವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● Application Tracker ಎನ್ನುವುದರ ಮೇಲೆ ಕ್ಲಿಕ್ ಮಾಡಿ
● ನಿಮ್ಮ RC Num. ಕೇಳಲಾಗುತ್ತದೆ, 12 ಅಂಕಿ ಉಳ್ಳ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ Search ಮೇಲೆ ಕ್ಲಿಕ್ ಮಾಡಿ.
● ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಸಂಪೂರ್ಣ ವಿವರ ಬರುತ್ತದೆ.
● ರೇಷನ್ ಕಾರ್ಡ್ ಸಂಖ್ಯೆ, ಗೃಹಲಕ್ಷ್ಮಿ ಯೋಜನೆಗೆ ಅಪ್ಲಿಕೇಶನ್ ಹಾಕಿರುವವರ ಹೆಸರು, ಗೃಹಲಕ್ಷ್ಮಿ ಯೋಜನೆ ಸಹಾಯಧನ ವರ್ಗಾವಣೆ ಆಗಿರುವ ದಿನಾಂಕ ಮತ್ತು ಅದರ ಸ್ಟೇಟಸ್ ಕೂಡ ಬಂದಿರುತ್ತದೆ .ಸ್ಟೇಟಸ್ ಅಲ್ಲಿ Success ಎಂದು ಬಂದಿದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುತ್ತದೆ ಎಂದು ಅರ್ಥ.

● ಈ ಸ್ಟೇಟಸ್ ಆಪ್ಷನ್ ನಲ್ಲಿ Push to DBT ಎಂದು ಇದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿದೆ ಶೀಘ್ರದಲ್ಲಿ ಹಣ ಜಮೆಯಾಗುತ್ತದೆ ಎಂದು ಅರ್ಥೈಸಿಕೊಳ್ಳಬಹುದು.
● ಆಧಾರ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದವರಿಗೆ Bank account not linked ಎಂದು ಬರುತ್ತದೆ. ಈ ರೀತಿ ಇದ್ದವರಿಗೆ ಹಣ ವರ್ಗಾವಣೆ ಆಗುವುದಿಲ್ಲ ತಕ್ಷಣ ಅವರು ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋಗಿ Aadhar Seeding NPCI Mapping ಗೆ ಅರ್ಜಿ ಸಲ್ಲಿಸಿ ಸರಿ ಪಡಿಸಿಕೊಳ್ಳಬೇಕು.

ಆಸ್ತಿ ರಿಜಿಸ್ಟರ್ ಯಾವ ವಿಧಾನದಲ್ಲಿ ಮಾಡಿದರೆ ಬೆಸ್ಟ್, ಕ್ರಯ ಪತ್ರ ಮತ್ತು ದಾನ ಪತ್ರದ ನಡುವಿನ ವ್ಯತ್ಯಾಸವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ನೀವು ಗೃಹಲಕ್ಷ್ಮಿ ಯೋಜನೆಗೆ ವೇಳಾಪಟ್ಟಿ ತಿಳಿದುಕೊಳ್ಳಲು ಸಂದೇಶ ಕಳುಹಿಸಿದ ಸಹಾಯವಾಣಿ ಸಂಖ್ಯೆಯಾದ (helpline num.) 8147500500 ರೇಷನ್ ಕಾರ್ಡ್ ಸಂಖ್ಯೆಯನ್ನು ಮತ್ತೊಮ್ಮೆ ಕಳುಹಿಸುವ ಮೂಲಕ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೇ ತಿಳಿದುಕೊಳ್ಳಬಹುದು.
● 1902 ಈ ಸಹಾಯವಾಣಿ ಸಂಖ್ಯೆಗೂ ಕರೆ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

Leave a Comment

%d bloggers like this: