2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ (Karnataka government) ಜನತೆಗೆ ನೂತನ ಸರ್ಕಾರ ವತಿಯಿಂದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಕೂಡ ಸರ್ಕಾರ ಹಲವು ಯೋಜನೆಗಳ ಪ್ಲಾನ್ ಮಾಡಿಕೊಂಡಿದ್ದು ರಾಜ್ಯದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಇವುಗಳಲ್ಲಿ ವಿಶೇಷ ಯೋಜನೆಗಳ ಮೂಲಕ ಸಾಲ ಸೌಲಭ್ಯದ ನೆರವನ್ನು ಕೂಡ ನೀಡುತ್ತಿದೆ.
ಆ ನಿಟ್ಟಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ (KMDC Loan facility) ಕೂಡ ಹಲವು ಯೋಜನೆಗಳು ಜಾರಿಯಲ್ಲಿದವೆ. ಈ ಯೋಜನೆಗಳಲ್ಲಿ ಮನೆಯಲ್ಲಿರುವ ಹೆಣ್ಣುಮಕ್ಕಳಿಗಾಗಿಯೇ ಸಾಲ ನೀಡುವ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ (Shrama Shakthi Vishesha Mahila Yojane) ಸಹಾ ಸೇರಿದೆ.
ಕಬ್ಬು ಬೆಳೆಗಾರರಿಗೆ ಬಂಪರ್ ಸುದ್ದಿ, ಹೊಸದರ ನಿಗದಿ ಮಾಡಿದ ಕೇಂದ್ರ ಸರ್ಕಾರ, ಪ್ರತಿ ಟನ್ ಗೆ 5,000ರೂ. ಹೆಚ್ಚಳ.!
ಈ ಯೋಜನೆ ವತಿಯಿಂದ ಹೆಣ್ಣು ಮಕ್ಕಳು ಸರ್ಕಾರದಿಂದ 25,000 ನೆರವು ಪಡೆಯಬಹುದು. ಇದು ಹೇಗೆ ಸಾಧ್ಯ? ಏನೆಲ್ಲಾ ದಾಖಲೆಗಳು ಬೇಕು? ಇರುವ ಕಂಡೀಷನ್ ಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ? ಕಡೆಯ ದಿನಾಂಕ ಯಾವುದು ಎನ್ನುವ ಎಲ್ಲಾ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಸಂಸ್ಥೆ:- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ
ಯೋಜನೆ ಹೆಸರು:- ಶಮಶಕ್ತಿ ಮಹಿಳಾ ವಿಶೇಷ ಯೋಜನೆ.
ಈ ತಿಂಗಳ ಅನ್ನಭಾಗ್ಯ ಹಣ & ಗೃಹಲಕ್ಷ್ಮಿ ಯೋಜನೆಯ 2000 ಹಣ ಬರಲು ಈ 3 ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಹಣ ಬರಲ್ಲ.!
ಪ್ರಯೋಜನ:-
● ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ವಿಧವೆಯರು, ವಿಚ್ಛೇಧಿತರ, ಅವಿವಾಹಿತ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅಲ್ಪಸಂಖ್ಯಾತರ ವರ್ಗದ ಅಸಹಾಯಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಯನ್ನು ಜಾರಿಗೆ ತರಲಾಗಿದೆ.
● ಈ ಯೋಜನೆಯಡಿ ಅರ್ಹ ಮಹಿಳೆಯರು ಸೂಕ್ತ ದಾಖಲೆ ಜೊತೆ ಅರ್ಜಿ ಸಲ್ಲಿಸಿದರೆ 50,000 ಸಾಲ ಸೌಲಭ್ಯ ದೊರೆಯಲಿದೆ. ಇದರಲ್ಲಿ 50%ರಷ್ಟು ಸಹಾಯಧನವಾಗಿ ಸಿಗಲಿದೆ. ಅಂದರೆ ನಿಮಗೆ ಸಿಗುವ 50,000ರೂ. ನೆರವಿನಲ್ಲಿ ನೀವು 25,000ರೂ. ಹಣವನ್ನು ಮಾತ್ರ ಸಾಲವಾಗಿ ಪಡೆಯುತ್ತೀರಿ, 25,000ರೂ. ಸಬ್ಸಿಡಿಯಾಗಿ ಸಿಗಲಿದೆ.
● ಈ ಹಣವನ್ನು ಮಹಿಳೆಯರು ತಮ್ಮ ಕೌಶಲ್ಯ ಅಭಿವೃದ್ಧಿ ಪಡಿಸಿಕೊಂಡು ಉದ್ಯಮ ಸ್ಥಾಪಿಸಿಕೊಳ್ಳಲು ಆರಂಭಿಕ ಬಂಡವಾಳವಾಗಿ ಉಪಯೋಗಿಸಿಕೊಳ್ಳಬಹುದು.
ಅರ್ಹತೆಗಳು:-
● ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
● ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
● ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
● ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 3,50,000/- ಗಿಂತ ಕಡಿಮೆ ಇರಬೇಕು.
● ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು.
● ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ(ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.
ಬೇಕಾಗುವ ದಾಖಲೆಗಳು:-
● ಯೋಜನಾ ವರದಿ
● ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
● ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
● ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
● ಬ್ಯಾಂಕ್ ಪಾಸ್ ಬುಕ್ ಪ್ರತಿ
● ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ
● ಸ್ವಯಂ ಘೋಷಣೆ ಪತ್ರ.
● ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು
kmdconline.karnataka.gov.in ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25.09.2023