ಶಿಕ್ಷಣ (Education) ಪಡೆಯಬೇಕು ಎನ್ನುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಹಣಕಾಸಿನ ತೊಂದರೆ ಕಾರಣದಿಂದ ಕನಸಿನಿಂದ ವಂಚಿತರಾಗಬಾರದು ಎಂದು ಸರ್ಕಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ನೆರವನ್ನು ನೀಡುತ್ತಿದೆ. ಸರ್ಕಾರದ ಜೊತೆಗೆ ಅನೇಕ ಖಾಸಗಿ ಸಂಘ ಸಂಸ್ಥೆಗಳು, NGO ಗಳು ಕೂಡ ಸ್ಕಾಲರ್ಶಿಪ್ ನೀಡುತ್ತಿದೆ. ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಈ ರೀತಿ ಅನೇಕ ವಿದ್ಯಾರ್ಥಿ ವೇತನದ ಯೋಜನೆಗಳು ಇವೆ. ವಿದ್ಯಾಧನ ವಿದ್ಯಾರ್ಥಿವೇತನ, ಅಬ್ದುಲ್ ಕಲಾಂ ಆರ್ಥಿಕ ನೆರವು ಯೋಜನೆ, ಸಯ್ಯಾಜಿ ರಾವ್ ಗಾಯಕ್ವಾಡ್ ಸಾರಥಿ ವಿದ್ಯಾರ್ಥಿ ವೇತನ, ಕಡಿಮೆ ಬಡ್ಡಿಯಲ್ಲಿ ಅಥವಾ ಬಡ್ಡಿ ರಹಿತವಾಗಿ ಶೈಕ್ಷಣಿಕ ಸಾಲ ಇನ್ನು ಮುಂತಾದ ಸೌಲಭ್ಯಗಳು ಲಭ್ಯವಿದೆ.
ಈ ಮನೆ ಮದ್ದು ಮಾಡಿ ಸಾಕು.! ನರೋಲಿ ಒಂದೇ ದಿನದಲ್ಲಿ ಉದುರಿ ಹೋಗುತ್ತದೆ.! 100% ಫಲಿತಾಂಶ
ಇದರಲ್ಲಿ ಈ ಅಂಕಣದಲ್ಲಿ ಪ್ರತಿ ವರ್ಷವೂ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆಯಾದ ಸರೋಜಿನಿ ದಾಮೋದರನ್ ವಿದ್ಯಾಧನ್ ವಿದ್ಯಾರ್ಥಿ ವೇತನದ (Sarojini Damodaran Scholorship) ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಇದು ಭಾರತದಾದ್ಯಂತ ನೀಡುವ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನವಾಗಿದ್ದು ಪ್ರತಿ ವರ್ಷವೂ ಕೂಡ ಸ್ಕಾಲರ್ಶಿಪ್ ಪಡೆಯುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗುತ್ತದೆ.
ಅಂತೆಯೇ 2023-24ನೇ ಸಾಲಿನಲ್ಲಿ 10ನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಈ ಯೋಜನೆಗೆ ಇರುವ ನೀತಿ ನಿಯಮಗಳನ್ನು ಪೂರೈಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ. ದೇಶದ 27 ರಾಜ್ಯಗಳಿಂದ ಈ ಯೋಜನೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಆಯ್ಕೆಯಾದ 4,700ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ.
SBI ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್.! ಈ ಯೋಜನೆಯಲ್ಲಿ 5,000 ಹೂಡಿಕೆ ಮಾಡಿ ಸಾಕು 49 ಲಕ್ಷ ಸಿಗುತ್ತೆ.!
ಯೋಜನೆ ಹೆಸರು:- ಸರೋಜಿನಿ ದಾಮೋದರ ವಿದ್ಯಾಧನ್ ವಿದ್ಯಾರ್ಥಿ ವೇತನ.
ವಿದ್ಯಾರ್ಥಿ ವೇತನದ ಮೊತ್ತ:- ಒಟ್ಟು 20,000
● ಪ್ರಥಮ ವರ್ಷದ ಪಿಯುಸಿಯಲ್ಲಿ 10,000
● ದ್ವಿತೀಯ ವರ್ಷದ ಪಿಯುಸಿಯಲ್ಲಿ 10,000
ಅರ್ಹತೆಗಳು:-
● ಈ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಯ ಕುಟುಂಬದ ಆದಾಯವು 2 ಲಕ್ಷಕ್ಕಿಂತ ಒಳಗಿರಬೇಕು.
● ವಿದ್ಯಾರ್ಥಿಯು 2024ನೇ ಸಾಲಿನಲ್ಲಿ 10ನೇ ತರಗತಿ ಉತ್ತೀರ್ಣವಾಗಿದ್ದು 85% ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:-
● ಅರ್ಹ ವಿದ್ಯಾರ್ಥಿಗಳು ಫೌಂಡೇಶನ್ ನ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ತುಂಬಿಸಬೇಕು.
● ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿದರೆ ಅರ್ಜಿ ಸಲ್ಲಿಕೆ ಪೂರ್ತಿಯಾಗುತ್ತದೆ
ಆಯ್ಕೆ ವಿಧಾನ:-
● ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಅವರನ್ನು ಪರೀಕ್ಷೆ ಹಾಗೂ ಸಂದರ್ಶನಕ್ಕೆ ಕರೆಯಲಾಗುತ್ತದೆ.
● ಪರೀಕ್ಷೆ ದಿನಾಂಕ ಹಾಗೂ ಸಂದರ್ಶನ ದಿನಾಂಕವನ್ನು ವಿದ್ಯಾರ್ಥಿ ನೀಡುವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಅಡ್ರೆಸ್ಸಿಗೆ ಕಳುಹಿಸಿಕೊಡಲಾಗುತ್ತದೆ.
● ಪರೀಕ್ಷೆ ಮತ್ತು ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಹ ಎರಡು ವರ್ಷ ವರ್ಷಕ್ಕೆ 10,000 ದಂತೆ ವಿದ್ಯಾರ್ಥಿ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಡೆಯುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ವಿದ್ಯಾರ್ಥಿಯ ಆಧಾರ್ ಕಾರ್ಡ್
● ಬ್ಯಾಂಕ್ ಖಾತೆ ವಿವರ
● ಪ್ರಸಕ್ತ ಶಾಲೆನಲ್ಲಿ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಬಗ್ಗೆ ಗುರುತಿನ ಚೀಟಿ
● 10ನೇ ತರಗತಿ ಅಂಕಪಟ್ಟಿ
● ಆದಾಯ ಪ್ರಮಾಣ ಪತ್ರ
● ಅಂಗವಿಕಲ ವಿದ್ಯಾರ್ಥಿಯಾಗಿದ್ದ ಪಕ್ಷದಲ್ಲಿ ಪ್ರಮಾಣ ಪತ್ರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ.