ನರೋಲಿ ಅಥವಾ ನರಹುಲಿ ಅಥವಾ ಸ್ಕಿನ್ ಟ್ಯಾಗ್ ಎಂದು ಇದನ್ನು ಕರೆಯುತ್ತಾರೆ. ಚರ್ಮದ ಮೇಲೆ ಸ್ವಲ್ಪ ಹೆಚ್ಚಾಗಿ ಬೆಳೆದು ಅದು ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಇದರಿಂದ ನೋವು ಆಗುವುದಿಲ್ಲ ಆದರೆ ಒಂದು ರೀತಿಯ ಕಿರಿಕಿರಿ ಉಂಟಾಗುತ್ತದೆ. ಯಾಕೆಂದರೆ ಇದನ್ನು ಮುಟ್ಟಿ ಮತ್ತೊಂದು ಕಡೆ ಮುಟ್ಟಿದಾಗ ಅದು ಸ್ಪ್ರೆಡ್ ಆಗುವ ಸಾಧ್ಯತೆ ಇರುತ್ತದೆ. ಕುತ್ತಿಗೆ ಭಾಗದಲ್ಲಿ, ಹೊಟ್ಟೆ ಭಾಗದಲ್ಲಿ,ಕಂಕುಳಲ್ಲಿ ಅಥವಾ ಮುಖದಲ್ಲೂ ಕೂಡ ಇದು ಬರುತ್ತದೆ.
ಈ ರೀತಿ ನರಹುಲಿ ಇರುವುದು ಅನೇಕರಿಗೆ ಇಷ್ಟ ಆಗುವುದಿಲ್ಲ ಅದನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಅವರಿಗೆಲ್ಲ ಈ ಅಂಕಣದಲ್ಲಿ ನ್ಯಾಚುರಲ್ ಆಗಿ ಹೇಗೆ ನರೋಲಿ ಉದುರಿ ಹೋಗುವಂತೆ ಮಾಡಬಹುದು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ. ಈಗ ನಾವು ಹೇಳುವ ಈ ಆಯುರ್ವೇದಿಕ್ ವಿಧಾನದಿಂದ ನೀವು ಪ್ರಯತ್ನಿಸಿದರೆ ಬಹಳ ಕಡಿಮೆ ಸಮಯದಲ್ಲಿ ಇದು ಉದುರಿ ಹೋಗುತ್ತದೆ.
SBI ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್.! ಈ ಯೋಜನೆಯಲ್ಲಿ 5,000 ಹೂಡಿಕೆ ಮಾಡಿ ಸಾಕು 49 ಲಕ್ಷ ಸಿಗುತ್ತೆ.!
● ನೀವು ಇದಕ್ಕಾಗಿ ಒಂದು ಮನೆ ಮದ್ದು ತಯಾರಿಸಿಕೊಳ್ಳಬೇಕು, ಇದನ್ನು ತಯಾರಿಸುವಾಗ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತು ಬಳಕೆ ಮಾಡಬಾರದು. ಸ್ಟೀಲ್ ಕಪ್ ಹಾಗೂ ಚಮಚ ತೆಗೆದುಕೊಳ್ಳಿ. ಆ ಕಪ್ ಒಳಗಡೆ ಒಂದು ಚಿಟಿಕೆ ಗೆ ಸೋಡಾ ಒಂದು ಚಿಟಿಕೆ ಸುಣ್ಣ ಹಾಗೂ ಎರಡು ಮೂರು ಹನಿ ನಿಂಬೆ ರಸವನ್ನು ಹಾಕಿ ಸ್ಪೂನ್ ಸಹಾಯದಿಂದ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ನರೋಲಿ ಇರುವ ಜಾಗಕ್ಕೆಲ್ಲ ಅಪ್ಲೈ ಮಾಡುತ್ತಾ ಬನ್ನಿ ಆದರೆ ಯಾವುದೇ ಕಾರಣಕ್ಕೂ ನರೋಲಿ ಇಲ್ಲದ ಜಾಗಕ್ಕೆ ಅಪ್ಲೈ ಮಾಡಬೇಡಿ ಯಾಕೆಂದರೆ ಇದರಲ್ಲಿ ಸುಣ್ಣ ಇರುವುದರಿಂದ ಕಪ್ಪಾಗಬಹುದು. ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿ ಸಾಕು ಎರಡು ಮೂರು ದಿನಗಳಲ್ಲಿ ನರೋಲಿ ಉದುರಿ ಹೋಗುತ್ತದೆ.
● ಮತ್ತೊಂದು ವಿಧಾನ ಇದೆ, ನರೋಲಿ ಮಾತ್ರವಲ್ಲದೆ ಇನ್ನೂ ಅನೇಕ ಚರ್ಮ ರೋಗಗಳಿಗೆ ಈ ಮನೆಮದ್ದನ್ನು ಮಾಡುತ್ತಾರೆ. ಹುಳುಕಡ್ಡಿ ಆದಾಗ ಅಥವಾ ನವೆ ಆಗುತ್ತಿದ್ದರೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸಿಪ್ಪೆ ಬಿಡಿಸಿ ಅದನ್ನು ತುರಿಕೆ ಇರುವ ಜಾಗಕ್ಕೆ ಉಜ್ಜುತ್ತಾರೆ. ಈ ರೀತಿ ಮಾಡುವುದರಿಂದ ಅದು ಕಡಿಮೆ ಆಗುತ್ತದೆ ಇದೇ ವಿಧಾನವನ್ನು ನರೋಲಿ ಗೂ ಕೂಡ ಅಪ್ಲೈ ಮಾಡಲಾಗುತ್ತದೆ. ಬೆಳ್ಳುಳ್ಳಿಯನ್ನು ಚಚ್ಚಿ ನರೋಲಿ ಇರುವ ಜಾಗಕ್ಕೆ ಇಡಿ, ಬ್ಯಾಂಡೆಡ್ ಟೇಪ್ ಕೂಡ ಹಾಕಬಹುದು. ಈ ವಿಧಾನದಿಂದ ಕೂಡ ನರೋಲಿ, ಉದುರಿ ಹೋಗುವ ರೀತಿ ಮಾಡಬಹುದು. ಇದನ್ನು ಸಹ ದಿನದಲ್ಲಿ ಎರಡು ಬಾರಿ ಮಾಡಿದರೆ ಶೀಘ್ರವಾಗಿ ಉತ್ತಮ ಪ್ರತಿಫಲ ಸಿಗುತ್ತದೆ.
● ಮೂರನೇ ವಿಧಾನ ಏನೆಂದರೆ ಅಂಗಡಿಗಳಲ್ಲಿ ಆಪಲ್ ಸೀಡ್ ವಿನೇಗರ್ ಎನ್ನುವ ಸೊಲ್ಯೂಷನ್ ಸಿಗುತ್ತದೆ. ಇದನ್ನು ತಂದು ನೀವು ಹೇಗೆ ಈ ಮೇಲೆ ತಿಳಿದ ವಿಧಾನದಲ್ಲಿ ನರೋಲಿ ಇರುವ ಜಾಗಕ್ಕೆ ಅದನ್ನು ಅಪ್ಲೈ ಮಾಡುತ್ತಿದ್ದಿರೋ ಅದೇ ರೀತಿ ಈ ಆಪಲ್ ಸೀಡ್ ವಿನೆಗರ್ ಕೂಡ ಅಪ್ಲೈ ಮಾಡಿ. ಈ ರೀತಿ ಮಾಡಿದರೆ ಒಂದೆರಡು ದಿನಗಳಲ್ಲೇ ನರೋಲಿ ಮಾಯ ಆಗುತ್ತದೆ.
● ನರೋಲಿ ಆದಾಗ ತಕ್ಷಣವೇ ಈ ಮನೆ ಮದ್ದುಗಳನ್ನು ಪ್ರಯೋಗ ಮಾಡುವುದರಿಂದ ಉತ್ತಮ ರಿಸಲ್ಟ್ ಕಾಣಬಹುದು, ಒಂದು ವೇಳೆ ನರೋಲಿ ಬಹಳ ದೊಡ್ಡದಿದ್ದರೆ ಸ್ವಲ್ಪ ಹೆಚ್ಚು ಸಮಯ ಬೇಕಾಗಬಹುದು. ಆಗ ತಪ್ಪದೇ ಪ್ರತಿದಿನವೂ ಕೂಡ ಇದನ್ನು ಮಾಡಿದರೆ ಖಂಡಿತವಾಗಿಯೂ ಒಳ್ಳೆ ರಿಸಲ್ಟ್ ಬರುತ್ತದೆ.