ರಾಜ್ಯದಲ್ಲಿ 195 ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ.! ಈ ತಾಲೋಕಿನ ರೈತರಿಗೆ ಸರ್ಕಾರದಿಂದ ಸಿಗಲಿದೆ ನೆರವು.! ಏನೆಲ್ಲಾ ಸಿಗಲಿದೆ ನೋಡಿ.!

 

ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಬೀಳಬೇಕಿದ್ದ ಮುಂಗಾರು ಮಳೆ ದುರ್ಬಲಗೊಂಡು ವಾಡಿಕೆಗಿಂತ 56% ಪರ್ಸೆಂಟ್ ಕಡಿಮೆ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಊಹಿಸಲಾಗಿತ್ತು ಸಾಮಾನ್ಯಕಿಂತ 29% ಹೆಚ್ಚು ಮಳೆಯಾದರೂ ಅದು ಒಂದೇ ವಾರಕ್ಕೆ ಕೇಂದ್ರೀಕೃತವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಕೂಡ ಸಾಮಾನ್ಯಕ್ಕಿಂತ 73% ಕಡಿಮೆ ಮಳೆಯಾಗಿದ್ದು ರಾಜ್ಯದಲ್ಲಿ ಬರದ (drought) ವಾತಾವರಣ ಸೃಷ್ಟಿಯಾಗಿದೆ.

125 ವರ್ಷಗಳಲ್ಲಿ ಈ ವರ್ಷವೇ ಅತಿ ಕಡಿಮೆ ಮಳೆ ದಾಖಲಾಗಿದ್ದು ಕೇಂದ್ರ ಸರ್ಕಾರ ಬರ ಕೈಪಿಡಿ 2020 ರ (Cental government guidelines) ಅನ್ವಯ ಕಡ್ಡಾಯ ಮತ್ತು ತತ್ಪರಿಣಾಮ ಸೂಚಕಗಳ ನಿರಂತರ ಮೇಲ್ವಿಚಾರಣೆ ಆಧಾರದ ಮೇಲೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) 01.06.2023 ರಿಂದ 19.08.2023 ರ ಅವಧಿ 60% ಗಿಂತ ಕಡಿಮೆ ಮಳೆ ಬಿದ್ದಿರುವ ಪ್ರದೇಶ ಮತ್ತು ಶುಷ್ಕ ವಾತಾವರಣ.

ಕೃಷಿ ಇಲಾಖೆಯಿಂದ ರೈತರಿಗೆ ಟಾರ್ಪಲಿನ್ ವಿತರಣೆ.! ಆಸಕ್ತ ರೈತರು ಅರ್ಜಿ ಸಲ್ಲಿಸಿ ಟಾರ್ಪಲ್ ಪಡೆಯಿರಿ.!

ತೇವಾಂಶ ಕೊರತೆ, ಉಪಗ್ರಹ ಆಧಾರಿತ ಬೆಳೆ ಸೂಚಾಂಕ, ಬೆಳೆ ಬಿತ್ತನೆ ಪ್ರದೇಶ ಮತ್ತು ಜಲ ಸಂಪನ್ಮೂಲ ಸೂಚ್ಯಾಂಕದಲ್ಲಿನ ತೀವ್ರತೆಯನ್ನು ಆಧರಿಸಿ 113 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ವರದಿ ನೀಡಿತ್ತು. ನಂತರ 22.08.2023 ರಂದು ನಡೆದ ಸಚಿವ ಸಂಪುಟದಲ್ಲಿ ನೈರುತ್ಯ ಮುಂಗಾರಿನ ಕೊರತೆಯಿಂದ ಉಂಟಾದ ಬರ ಪರಿಸ್ಥಿತಿ ಕುರಿತು ಸುದೀರ್ಘವಾಗಿ ಚರ್ಚಿಸಿ ಇನ್ನುಳಿದ 134 ತಾಲ್ಲೂಕುಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ಆಯಾ ಜಿಲ್ಲಾಧಿಕಾರಿಗಳು ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಂಡ ರಚಿಸಿ ಮೊಬೈಲ್ ಆಪ್ ಮೂಲಕ ಬೆಳೆ ಹಾನಿ ಧೃಡೀಕರಣ ಮತ್ತು ಅಲ್ಲಿನ ತೀವ್ರ ಪರಸ್ಥಿತಿ ಕುರಿತು ವರದಿ ತರುವಂತೆ ಹೇಳಿತ್ತು.

ಅಂತಿಮವಾಗಿ 13.09.2023 ರಂದು ನಡೆದ ಸಚಿವ ಸಂಪುಟ ಉಪ ಸಮಿತಿಯು (Cabinet) ಎಲ್ಲ ವರದಿಗಳನ್ನು ಪರಿಶೀಲಿಸಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು 34 ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲು ತುರ್ತು ಬರ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರ ಅನುಮೋದನೆ ಪಡೆಯಲು ತೀರ್ಮಾನಿಸಲಾಯಿತು.

2023ರ ಈ ವರ್ಷದಲ್ಲಿ 2BHK ಮನೆ ಕಟ್ಟಿಸಲು ಎಷ್ಟು ಖರ್ಚಾಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಅಂತಿಮವಾಗಿ ಕೇಂದ್ರ ಸರ್ಕಾರದ ಬರ ನಿರ್ವಹಣಾ ಕೈಪಿಡಿ 2020ರ ಅನ್ವಯ ಬರ ಘೋಷಣೆ ಮಾರ್ಗಸೂಚಿ ಮಾನದಂಡಗಳ ಅನ್ವಯ, ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ ವರದಿಯಾನುಸಾರ 2023ರ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕಿಗಳ ಪೈಕಿ 195 ತಾಲೂಕುಗಳಲ್ಲಿ ಬರಪರಿಸ್ಥಿತಿ ಕಂಡು ಬಂದಿದ್ದು 161 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲು ಅಲ್ಲಿಯವರೆಗೂ ಘೋಷಿಸಿ ಆದೇಶಿಸಲಾಗಿದೆ.

ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಈ ಘೋಷಣೆಗೆ ಸಹಿ ಹಾಕಿದ್ದಾರೆ ಮತ್ತು ರಾಜ್ಯಪಾಲರ ಆದೇಶದ ಅನುಸಾರ ಕಂದಾಯ ಇಲಾಖೆಯಿಂದ ಈ ಕುರಿತು ಅಧಿಕೃತ ಪಟ್ಟಿ ಕೂಡ ಬಿಡುಗಡೆ ಆಗಿದೆ. ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಮತ್ತು ನೋಂದಣಿ ಹಾಗೂ ಮುದ್ರಣ ವಿಭಾಗದ ಜಂಟಿ ಕಾರ್ಯದರ್ಶಿಗಳ ಸಹಿಯನ್ನು ಒಳಗೊಂಡ ಪ್ರಸ್ತಾವನೆಯ ವಿವರವುಳ್ಳ ಮತ್ತು ಅನುಬಂಧ 1 ಹಾಗೂ ಅನುಬಂಧ 2ರ ಪಟ್ಟಿಯಲ್ಲಿ ತೀವ್ರ ಬರಪೀಡಿದ ಹಾಗೂ ಸಾಧಾರಣ ಬರಪೀಡಿತ ತಾಲೂಕುಗಳನ್ನು ಜಿಲ್ಲೆಯಾನುಸಾರ ಪಟ್ಟಿ ಮಾಡಿ ಬಿಡುಗಡೆ ಮಾಡಲಾಗಿದೆ.

ಸ್ವಲ್ಪ ತಲೆನೋವು ಅಂತ ನಿರ್ಲಕ್ಷ್ಯ ಮಾಡ್ಬೇಡಿ ಈ ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ.!

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ಬಳ್ಳಾರಿ, ಕೊಪ್ಪಳ, ರಾಯಚೂರು, ಕಲ್ಬುರ್ಗಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಉಡುಪಿ ಉತ್ತರ ಕನ್ನಡ, ಯಾದಗಿರಿ, ವಿಜಯನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಈ ಜಿಲ್ಲೆಯ ತಾಲೂಕುಗಳು ಪಟ್ಟಿಗೆ ಸೇರಿವೆ.

Leave a Comment

%d bloggers like this: