ಸಿದ್ದರಾಮಯ್ಯ (Siddaramaih cabinet) ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕೃಷ್ಣ ಭೈರೇಗೌಡ (Revenue Minister) ತಮ್ಮ ಇಲಾಖೆಯ ಕಾರ್ಯವಿಧಾನಗಳಲ್ಲಿ ಸಾಕಷ್ಟು ಸುಧಾರಣೆ ತಂದು ಜನಸಾಮಾನ್ಯರಿಗೆ ಇನ್ನಷ್ಟು ಅನುಕೂಲತೆ ಮಾಡಿಕೊಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.
ಕಳೆದ ತಿಂಗಳಷ್ಟೇ ಆಸ್ತಿ ರಿಜಿಸ್ಟರ್ (property Registration) ಮಾಡುವಾಗ ಆಸ್ತಿ ಮಾಲಿಕತ್ವದ ಬಗ್ಗೆ ವಿವಾದವಾದರೆ ಅಥವಾ ತಕರಾರು ಅರ್ಜಿ ಸಲ್ಲಿಕೆಯಾದರೆ ತಕ್ಷಣ ಆ ರಿಜಿಸ್ಟರ್ ರದ್ದು(Register cancel) ಪಡಿಸಲಾಗುವುದು ಎನ್ನುವ ಎಚ್ಚರಿಕೆ ನೀಡಿದ ಸಚಿವರು ನೆನ್ನೆ ಇದ್ದಕ್ಕಿದ್ದಂತೆ ತಮ್ಮ ಇಲಾಖೆಯ ಅಧೀನ ಕಚೇರಿಗಳಿಗೆ ಭೇಟಿಕೊಟ್ಟು ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಪರೀಕ್ಷಿಸಿದ್ದಾರೆ.
ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮ ಮತ್ತು ಹಿರೇಹೊನ್ನಳ್ಳಿ ಗ್ರಾಮದಲ್ಲಿರುವ ಉಪ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ಕಾರ್ಯವೈಖರಿ (visit to Thahashildar office) ಹಾಗೂ ಸಾರ್ವಜನಿಕ ಸೇವೆಗಳ ಪರಿಶೀಲನೆ ನಡೆಸಿದ ಸಚಿವರ ನಂತರ ನೇರವಾಗಿ ಮಾಹಿತಿ ಕೊಡದೆ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಕಚೇರಿಯ ವ್ಯವಹಾರವನ್ನು ಗಮನಿಸಿದ್ದಾರೆ.
ವಿವಿಧ ವಿಭಾಗಗಳ ಕಾರ್ಯವೈಖರಿ ಕುರಿತು ಮಾಹಿತಿ ಸಂಗ್ರಹಿಸಿ ಇ-ಫೈಲ್ ವ್ಯವಸ್ಥೆ (e-filing) ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ಕೂಡ ನೀಡಿದ್ದಾರೆ. ಕಂದಾಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ತಾಂಡವಾಡುತ್ತಿದೆ ಅದರ ಜೊತೆಗೆ ಮಧ್ಯವರ್ತಿಗಳ ಕಾಟ ಕೂಡ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದನ್ನು ಸ್ವತಃ ತಾವು ಕೂಡ ಒಪ್ಪಿಕೊಂಡಿರುವ ಸಚಿವರು ಆಡಳಿತದಲ್ಲಿ ಇ-ಫೈಲಿಂಗ್ ವ್ಯವಸ್ಥೆ ಜಾರಿಗೆ ತರುವುದರಿಂದ ಇದಕ್ಕೆ ಕಡಿವಾಣ ಹಾಕಬಹುದು ಎನ್ನುವ ಭರವಸೆಗೆ ನುಡಿಗಳನ್ನು ನುಡಿದ್ದಾರೆ. ಈ ಕುರಿತು ನಮ್ಮ ಇಲಾಖೆಯ ಅಧಿಕಾರಿಗಳಿಗೆ ನೀಡಿರುವ ಸೂಚನೆ ಬಗ್ಗೆ ಮಾಧ್ಯಮ ವರದಿಗಳೊಂದಿಗೆ ಸುದ್ದಿ ಹಂಚಿಕೊಂಡ ಅವರು ಹಲವಾರು ಪ್ರಮುಖ ವಿಷಯಗಳ ಬಗ್ಗೆ ತಿಳಿಸಿದ್ದಾರೆ.
ಮೊದಲಿಗೆ ನೇರವಾಗಿ ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ BJP ಸರ್ಕಾರವನ್ನು ಈ ರೀತಿ ಆಡಳಿತದಲ್ಲಿ ಇ-ಫೈಲಿಂಗನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರದ ಕಾರಣ ಆ ಯೋಜನೆ ಸಂಪೂರ್ಣವಾಗಿ ವಿಫಲವಾಯಿತು ಆದರೆ ಕಾಂಗ್ರೆಸ್ ಸರ್ಕಾರ ಈ ರೀತಿ ಕಾಗದ ರಹಿತ ವ್ಯವಹಾರ ಅಳವಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರವನ್ನು ತೊಲಗಿಸುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಿಲ್ಲದಂತೆ ಸೇವೆ ಒದಗಿಸುತ್ತಿರುವುದನ್ನು ಖಾತ್ರಿಪಡಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಇದನ್ನು ಜಾರಿಗೆ ತರುತ್ತಿದೆ ಎಂದು ಭರವಸೆ ನೀಡಿದರು. ಇ-ಫೈಲಿಂಗ್ ಅಳವಡಿಸಿಕೊಳ್ಳುವುದರಿಂದ ಇನ್ನು ಮುಂದೆ ಹೆಚ್ಚಿನ ಕಡತಗಳು ಆನ್‌ಲೈನ್‌ನಲ್ಲಿ ಕ್ಲಿಯರ್ ಆಗುತ್ತವೆ ಎಂದು ಕೂಡ ತಿಳಿಸಿದರು.
ಪ್ರತಿ ಕಡತವನ್ನು ಆನ್‌ಲೈನ್‌ನಲ್ಲಿ ಬೆಂಗಳೂರಿಗೆ ಕಳುಹಿಸಲು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಜನ ಸಾಮಾನ್ಯರ ಕುಂದುಕೊರತೆಗಳು, ವಿವಾದಿತ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ ವಿಳಂಬ ಇವುಗಳ ಬಗ್ಗೆ ಕೂಡ ಉತ್ತರಿಸಿದ ಅವರು ಸಕಾಲದಡಿ ಹೆಚ್ಚಿನ ಅರ್ಜಿಗಳನ್ನು ಪರಿಹರಿಸಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಸುಮಾರು 180 ಕಡತಗಳು ಬಾಕಿ ಉಳಿದಿದ್ದು, ಅವುಗಳಲ್ಲಿ ಹೆಚ್ಚಿನವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡ ನಂತರ ವಿಲೇವಾರಿ ಮಾಡಲಾಗಿದೆ ಎಂದರು. ಹಾಗೆಯೇ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಆಧರಿಸಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಗುರುತಿಸಿ ಪ್ರತಿ ವರ್ಷ ಸನ್ಮಾನಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.