ಭಾರತ ದೇಶವು ಬಡತನದ ದೇಶವಾಗಿ ಉಳಿದರೂ ಪರವಾಗಿಲ್ಲ ಆದರೆ ಕುಡಿತದ ಚಟದಿಂದ ಮುಕ್ತವಾಗಿರುವ ದೇಶವಾಗಿರಬೇಕು ಎಂದು ಗಾಂಧೀಜಿಯವರು ಕನಸು ಕಂಡಿದ್ದರು. ಯಾಕೆಂದರೆ ಈ ರೀತಿ ಕುಡಿತದ ಚಟಕ್ಕೆ ಒಳಗಾಗುವುದರಿಂದ ಕುಟುಂಬ ಮಾತ್ರ ಅಲ್ಲದೆ ಸಮಾಜ ಆ ಮೂಲಕ ರಾಷ್ಟ್ರದ ಏಳಿಗೆಗೂ ಅದು ಪರೋಕ್ಷವಾಗಿ ಉಂಟಾಗುವ ಹಾನಿ ಆದ್ದರಿಂದ ಈ ರೀತಿ ಹೇಳಿದ್ದರು.
ಕುಡಿತದ ಅಭ್ಯಾಸ ಚಟವಾಗಿ ನಂತರ ಅದೊಂದು ಆಡಿಕ್ಷನ್ ಆಗಿ ಅದರ ಮೂಲಕ ಎಲ್ಲಾ ದುರಭ್ಯಾಸಗಳನ್ನು ಅಭ್ಯಾಸ ಮಾಡಿಕೊಂಡು ಕೆಲಸದ ಮೇಲೆ ಆಸಕ್ತಿ ತೋರದೆ, ಕೆಲಸ ಕಳೆದುಕೊಂಡು, ಹಣಕ್ಕಾಗಿ ಸಾಲ ಮಾಡಿ ಕೊಂಡು ಜೊತೆಗೆ ಮನೆ ಜವಾಬ್ದಾರಿಯನ್ನು ಮರೆತು ಹೆಂಡತಿ ಮತ್ತು ಮಕ್ಕಳನ್ನು ಕ’ಷ್ಟಕ್ಕೆ ದೂಡಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಮನೆಯಲ್ಲಿ ತಂದೆ, ಗಂಡ ಅಥವಾ ಮಗ ಹೀಗೆ ಯಾರೇ ಕುಡಿತದ ಚಟಕ್ಕೆ ಒಳಗಾಗಿದ್ದರೂ ಕೂಡ ಆ ಕುಟುಂಬಕ್ಕೆ ನೋ’ವು ತಪ್ಪಿದ್ದಲ್ಲ. ಬುದ್ಧಿ ಮಾತು ಹೇಳಿದರು ಕೂಡ ಅವರು ಅರ್ಥ ಮಾಡಿಕೊಳ್ಳದೆ ಇದೇ ರೀತಿ ಕುಡಿತದ ದಾಸರಾಗಿದ್ದರೆ ಅದನ್ನು ಬಿಡಿಸಲು ಮನೆಯವರು ಅವರಿಗೆ ಗೊತ್ತಾಗದ ರೀತಿ ಔಷಧಿ ಬಳಸಲೇ ಬೇಕಾಗುತ್ತದೆ. ಅವರಿಗೆ ಅಡ್ಡ ಪರಿಣಾಮ ಉಂಟಾಗದೇ ನ್ಯಾಚುರಲ್ ಆಗಿ ಅವರ ಕುಡಿತದ ಚಟವನ್ನು ಬಿಡಿಸಲು ಆಯುರ್ವೇದದಲ್ಲಿ ಹೇಳಿರುವ ಸುಲಭ ಮನೆಮದ್ದಿನ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಇದನ್ನು ಕುಡಿತದ ಚಟ ಇರುವವರು ಮಾತ್ರವಲ್ಲದೇ ತಂಬಾಕು, ಗುಟ್ಕಾ ಸೇವನೆ ಮಾಡುವವರು ಅಥವಾ ಇನ್ಯಾವುದೇ ರೀತಿಯ ದುಶ್ಚಟಕ್ಕೆ ಒಳಗಾಗಿರುವವರ ಚಟ ಬಿಡಿಸಲು ಕೂಡ ಉಪಯೋಗಿಸಬಹುದು. ಇದನ್ನು ಮಾಡುವುದು ಬಹಳ ಸುಲಭ. ಮೊದಲಿಗೆ ಏಲಕ್ಕಿ, ಬಜೇ ಬೇರು, ಒಣಶುಂಟಿ, ಓಂ ಕಾಳು ಹಾಗೂ ಜೀರಿಗೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಗ್ರೈಂಡ್ ಮಾಡಿಕೊಳ್ಳಬೇಕು.
ಸೆಪ್ಟೆಂಬರ್ 30 ರ ಬಳಿಕ ಇಂತವರ ಬ್ಯಾಂಕ್ ಅಕೌಂಟ್ ಬಂದ್.! RBI ನಿಂದ ಹೊಸ ಆದೇಶ…!
ಆ ಪುಡಿಯನ್ನು ಮತ್ತೊಮ್ಮೆ ಬಟ್ಟೆ ಸಹಾಯದಿಂದ ಶೋಧಿಸಿಕೊಳ್ಳಬೇಕು. ಫೈನ್ ನೈಸ್ ಪೌಡರ್ ಆದ ಆ ಮಿಶ್ರಣವನ್ನು ಒಂದು ಗಾಜಿನ ಕಂಟೇನರ್ ನಲ್ಲಿ ಇಟ್ಟುಕೊಳ್ಳಿ. 200ml ನೀರನ್ನು ಕುದಿಯಲು ಇಟ್ಟು, ಇದಕ್ಕೆ ಎರಡು ಚಮಚ ಈ ಪೌಡರನ್ನು ಹಾಕಿ ಆ ನೀರು 100ml ಆಗುವವರೆಗೂ ಚೆನ್ನಾಗಿ ಕುದಿಸಿ ಶೋಧಿಸದೆ ಆ ನೀರನ್ನು ಅವರಿಗೆ ಕುಡಿಯಲು ಕೊಡಿ.
ಇದರಿಂದ ದೇಹದಲ್ಲಿ ಪಾಸಿಟಿವ್ ಸ್ಟಿಮುಲೆಟ್ಸ್ ಹೆಚ್ಚಾಗುವುದರಿಂದ ಹಂತ ಹಂತವಾಗಿ ತಮಗಿರುವ ದುಶ್ಚಟದಿಂದ ದೂರ ಬರುತ್ತಾರೆ. ಇದನ್ನು ಅವರು ಮಾತ್ರ ಅಲ್ಲದೆ ಕುಟುಂಬದ ಎಲ್ಲರೂ ಕೂಡ ಸೇವಿಸಬಹುದು. ಆಯುರ್ವೇದಿಕ್ ಅಂಶಗಳಿರುವ ಈ ವಸ್ತುಗಳಿಂದ ತಯಾರಿಸಿದ ಈ ನೀರನ್ನು ಕುಡಿಯುವುದರಿಂದ ದೇಹದ ಟಾಕ್ಸಿನ್ ಅಂಶ ಹೊರಹೋಗುತ್ತದೆ ಜೊತೆಗೆ ಮೈಂಡ್ ಫ್ರೆಶ್ ಆಗುತ್ತದೆ.
ಕನಿಷ್ಠ ಒಂದು ತಿಂಗಳಾದರೂ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಈ ರೀತಿ ನೀರನ್ನು ಕೊಡುತ್ತಾ ಬನ್ನಿ. ಒಂದು ವೇಳೆ ಅವರು ಇದನ್ನು ಕುಡಿಯಲು ಒಪ್ಪದಿದ್ದ ವೇಳೆ ನಶಾ ಮುಕ್ತ ಚೂರ್ಣ ಎನ್ನುವ ಚೂರ್ಣ ಸಿಗುತ್ತದೆ, ಇದು ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲೂ ಸಿಗುತ್ತದೆ. ಇದನ್ನು ಅವರು ತಿನ್ನುವ ಆಹಾರಕ್ಕೆ ಹಾಕಿ ಕೊಡಬೇಕು. ಅವರಿಗೆ ಗೊತ್ತಾಗದ ರೀತಿಯಲ್ಲಿ ಇದನ್ನು ಆಹಾರಕ್ಕೆ ಸೇರಿಸಿ ಕೊಡಬಹುದು. ಆಗ ಅವರು ನಿಧಾನವಾಗಿ ಕುಡಿತದ ಅಭ್ಯಾಸ ಬಿಟ್ಟುಬಿಡುತ್ತಾರೆ. 90% ಮಂದಿ ಈ ಎರಡು ಮನೆಮದ್ದುಗಳ ಪ್ರಯೋಗದಿಂದಲೇ ಕುಳಿತಿದ ಚಟವನ್ನು ಬಿಟ್ಟು ಬಿಡುತ್ತಾರೆ.