ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ ಮೂರೇ ಮೂಲವ್ಯಾಧಿ ದಿನಗಳಲ್ಲಿ ಸಂಪೂರ್ಣ ನಿವಾರಣೆ ಆಗುತ್ತೆ.

ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಸಮಸ್ಯೆ ಎನ್ನುವಂತಹದ್ದು ಸಾಮಾನ್ಯವಾಗಿಬಿಟ್ಟಿದೆ ಅನೇಕ ಜನರು ಈ ಒಂದು ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮೂಲವಾದಿ ಸಮಸ್ಯೆಗೆ ನಾನಾ ರೀತಿಯ ಕಾರಣಗಳನ್ನು ನಾವು ನೋಡಬಹುದು ಹೆಚ್ಚಿನದಾಗಿ ಜನರು ತಮ್ಮ ದೇಹಕ್ಕೆ ಆಗದೇ ಇರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿರುವುದು ಈ ಒಂದು ಮೂಲವ್ಯಾಧಿಗೆ ಕಾರಣ ಎಂದು ಹೇಳಬಹುದು. ಈ ಮೂಲವ್ಯಾಧಿಯ ಪ್ರಾರಂಭಿಕ ವಾದಂತಹ ಲಕ್ಷಣ ಎಂದರೆ ರಕ್ತಸ್ರಾವ ಉಂಟಗುವುದು ಇದು ಕಡು ಕೆಂಪು, ನೋವು ರಹಿತ, ಮಲ ವಿಸರ್ಜನೆ ಜತೆಗೆ ರಕ್ತ ಹೋಗುತ್ತದೆ. ಕೆಲವು ಸಂದರ್ಭದಲ್ಲಿ ದಪ್ಪಗಾದ ಲೋಳೆ ಪೊರೆಯು ಕೆಳಗೆ ಜಾರುತ್ತದೆ. ಈ ಒಂದು ಮೂಲಕ ಸಮಸ್ಯೆಗೆ ನಾವು ಕೆಲವೊಂದು ಬಾರಿ ಮನೆಯಲ್ಲಿ ಮನೆಮದ್ದುಗಳನ್ನು ಮಾಡಿಕೊಳ್ಳಬೇಕು ನಮ್ಮ ಮೂಲವೇದಿ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದು.

WhatsApp Group Join Now
Telegram Group Join Now

ಈ ಮೂಲಕ ದಿಗೆ ಒಂದು ಉತ್ತಮವಾದಂತಹ ಮನೆಮದ್ದು ಎಂದರೆ ಅದು ಮಂಗರವಳ್ಳಿ ಇದು ಒಂದು ಬಳ್ಳಿ ಜಾತಿಯ ಸಸ್ಯ ವರ್ಗಕ್ಕೆ ಸೇರಿದ್ದು ಇತರ ಮರಗಳನ್ನು ಆಶ್ರಯಿಸಿದ ಬೆಳೆಯುವಂತಾಗಿದೆ. ಈ ಒಂದು ಜಾತಿಯ ಬಳ್ಳಿಯನ್ನು ಹಪ್ಪಳದ ಖಾರಕ್ಕೆ ಅತೀ ಅವಶ್ಯಕವಾಗಿ ಬಳಸುತ್ತಾರೆ. ಇದರ ಕಾಂಡವು ಮೃದುವಾಗಿರುತ್ತದೆ ಹಾಗೆಯೆ ಇದು ಬೇರೆ ಗಿಡಗಳನ್ನು ಆಶ್ರಯಿಸಿ 15 ರಿಂದ 20 ಅಡಿ ಉದ್ದ ಬೆಳೆಯುವುದು. ಇದರ ಹಸಿರು ಬಣ್ಣದ ಕಾಂಡವು ರಸಭರಿತವಾಗಿ ಕೂಡಿರುತ್ತದೆ, ಚಪ್ಪಟೆಯಾಗಿ, ಚೌಕ ಕೋನದಂತೆ ಈಒಂದು ಬಳ್ಳಿ ಇರುತ್ತದೆ. ಈ ಬಳ್ಳಿಯು ಗಿಣ್ಣುಗಳಾಗಿ ಬೇರ್ಪಟ್ಟಿರುತ್ತದೆ ಪ್ರತಿ ಗಿಣ್ಣಿನಲ್ಲಿ ಒಂದು ಚಿಕ್ಕದಾದ ಹಸಿರೆಲೆ ಇರುತ್ತದೆ. ಇದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ ಮೂಳೆ ಮುರಿದಾಗ ಮಂಗರವಳ್ಳಿಯ ಕಾಂಡವನ್ನು ಜಜ್ಜಿ ಮುರಿದ ಸ್ಥಳದಲ್ಲಿ ಪಟ್ಟು ಹಾಕಬೇಕು. ನಾಟಿವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಳೆ ಮುರಿದಾಗ ಈ ಬಳ್ಳಿಯನ್ನು ಚಿಕಿತ್ಸೆಗೆ ಉಪಯೋಗಿಸುತ್ತಾರೆ.

ಮೂಲವ್ಯಾಧಿಯಿಂದ ಬಳಲುವವರು ಮಂಗರವಳ್ಳಿಯನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಬೆರೆಸಿ ಕುಡಿಯಬೇಕು ಮತ್ತು ಮೂಲವ್ಯಾಧಿಯ ಮೊಳಕೆಗೆ ಲೇಪಿಸಬೇಕು. ಗಾಯಗಳು ಏನಾದರು ಆಗಿದ್ದರೆ ಮಂಗರವಳ್ಳಿ ಜಜ್ಜಿ ಲೇಪಿಸಿದಲ್ಲಿ ಬೇಗನೇ ಮಾಯುತ್ತದೆ. ಅಷ್ಟೇ ಅಲ್ಲದೆ ಚರ್ಮರೋಗಗಳಿಂದ ಬಳಲುವವರು ಮಂಗರವಳ್ಳಿ ಜಜ್ಜಿ ರಸ ತೆಗೆದು ಎರಡು ಚಮಚ ರಸವನ್ನು ಸೇವಿಸುವುದಲ್ಲದೇ ಮೇಲೆ ಲೇಪಿಸಬೇಕು. ಮೂತ್ರ ಕಟ್ಟಿದಲ್ಲಿ ಇದರ ಒಣಗಿದ ಕಾಂಡದ ಪುಡಿಯಿಂದ ಕಷಾಯ ತಯಾರಿಸಿ ಕುಡಿಯಬೇಕು. ಅಷ್ಟೇ ಅಲ್ಲದೆ ಅಡುಗೆಗು ಸಹ ಇದನ್ನು ಬಳಸಿತ್ತಾರೆ ಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆದು ತೊಳೆದು ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಈರುಳ್ಳಿ, ಹಸಿರು ಮೆಣಸಿನಕಾಯಿಯೊಂದಿಗೆ ಬಾಣಲೆಯಲ್ಲಿ ಸ್ವಲ್ಲ ಎಣ್ಣೆ ಹಾಕಿ ಬಾಡಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ತೆಂಗಿನತುರಿಯನ್ನು ಇದಕ್ಕೆ ಸೇರಿಸಿ ರುಬ್ಬಿಕೊಳ್ಳಬೇಕು.

ಈ ಚಟ್ನಿ ಕೆಮ್ಮು, ನೆಗಡಿಯಿಂದ ಬಳಲುವವರಿಗೆ ಉತ್ತಮವಾದುದು. ನಾರಿನಂಶ ಹೆಚ್ಚಿರುವ ಆಹಾರ ಸೇವಿಸಿದಾಗ ಮೂಲವ್ಯಾಧಿಯನ್ನು ತಡೆಗಟ್ಟಬಹುದು. ಹೀಗೊಂದು ಮಂಗರವಳ್ಳಿ ಬಳ್ಳಿಯಲ್ಲಿ ನಾರಿನ ಅಂಶ ಹೆಚ್ಚಾಗಿದ್ದು ಮೂಲವಾದಿ ಸಮಸ್ಯೆಗೆ ಇದು ಹೇಳಿಮಾಡಿಸಿದಂತಹ ಕೆಲಸ ಮಾಡುತ್ತದೆ. ಹಳ್ಳಿಗಳ ಕಡೆ ಇರುವಂತಹ ನಾಟಿವೈದ್ಯರು ಹೇಳುವಂತೆ ಈ ಒಂದು ಮಂಗರಬಳ್ಳಿ ಬಳ್ಳಿಯನ್ನು ನೀವು ಸೇವನೆ ಮಾಡಿದ್ದೆ ಆದಲ್ಲಿ ನಿಮ್ಮ ಮೂಲವ್ಯಾಧಿ ಸಮಸ್ಯೆ ಅತಿವೇಗವಾಗಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಮಂಗರವಳ್ಳಿ ಇಂದ ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದು ಹೇಗೆ ಮಾಡಬೇಕು ಎಂದು ನೋಡುವುದಾದರೆ.

ಮಂಮಂಗರವಳ್ಳಿ ತೆಗೆದುಕೊಂಡು ಅದನ್ನು ಚೆನ್ನಾಗಿ ಸಿಪ್ಪೆ ತೆಗೆದು ಕೊಳ್ಳಿ, ಸಿಪ್ಪೆ ತೆಗೆಯುವಂತಹ ಸಂದರ್ಭದಲ್ಲಿ ನಿಮ್ಮ ಕೈಗಳು ಕಡಿತಕ್ಕೆ ಒಳಗಾಗಬಹುದು ಆದ್ದರಿಂದ ನೀವು ಹ್ಯಾಂಡ್ ಗ್ಲೌಸ್ ಅಥವಾ ಪ್ಲಾಸ್ಟಿಕ್ ಕವರನ್ನು ಕೈಗಳಿಗೆ ಹಾಕಿಕೊಂಡು ನಂತರ ಮಂಗರವಳ್ಳಿ ಮೇಲಿನ ಸಿಪ್ಪೆಯನ್ನು ತೆಗೆದು ಕೊಳ್ಳಬಹುದು. ಸಿಪ್ಪೆಯನ್ನು ತೆಗೆದು ನಂತರ ಒಳಗೆ ಇರುವಂತಹ ದಿಂಡನ್ನು ತೆಗೆದುಕೊಂಡು ಸಣ್ಣ ಸಣ್ಣ ಪೀಸ್ ಗಳನ್ನಾಗಿ ಕಟ್ ಮಾಡಿಕೊಳ್ಳಿ, ಮಾಡಿದ ನಂತರ ಒಂದು ಕುಟ್ಟೋ ಕಲ್ಲಿನ್ನು ತೆಗೆದುಕೊಂಡು ಈ ಒಂದು ಮಂಗರವಳ್ಳಿಯನ್ನು ಹಾಕಿ ಚೆನ್ನಾಗಿ ಕುಟ್ಟಿ ಪೇಸ್ಟ್ ಮಾಡಿಕೊಳ್ಳಿ. ನಂತರ ಒಂದು ಲೋಟ ತೆಳು ಮಜ್ಜಿಗೆಯನ್ನು ತೆಗೆದುಕೊಂಡು ನೀವು ಪೇಸ್ಟ್ ಮಾಡಿಕೊಂಡಿರುವಂತೆ ಮಂಗರವಳ್ಳಿ ಪೇಸ್ಟನ್ನು ಅದರ ಒಳಗಡೆ ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬೇಕಿದ್ದಲ್ಲಿ ನೀವು ರುಚಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಕೊಳ್ಳಬಹುದು.

ಈ ಒಂದು ಮಜ್ಜಿಗೆಯನ್ನು ನೀವು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಕುಡಿಯ ಬೇಕು. ನೀವು ಖಾಲಿ ಹೊಟ್ಟೆಯಲ್ಲಿ ಕುಡಿದ ನಂತರ ಅರ್ಧ ಅಥವಾ ಒಂದು ಗಂಟೆಯ ಒಳಗೆ ಏನನ್ನೂ ಸೇವಿಸಬಾರದು. ಈ ಒಂದು ಮಂಗರವಳ್ಳಿ ಮತ್ತು ಮಜ್ಜಿಗೆಯ ಮಿಶ್ರಣವನ್ನು ನೀವು ಮೂರು ದಿನಗಳ ಕಾಲ ಸೇವನೆ ಮಾಡಬೇಕು. ನೀವು ಇದನ್ನು ಕುಡಿಯುವಂತಹ ಒಂದು ವಾರಗಳಲ್ಲಿ ನೀವು ಮಾಂಸಹಾರಿಗಳ ಆಗಿದ್ದರೆ ಯಾವುದೇ ರೀತಿಯಾದಂತಹ ಮಾಂಸ, ಮೊಟ್ಟೆಯನ್ನು ಸೇವನೆ ಮಾಡಬಾರದು. ನಿಮಗೆ ಎಷ್ಟೇ ದೊಡ್ಡದಾದ ಮೂಲವ್ಯಾಧಿ ಸಮಸ್ಯೆ ಇದ್ದರೂ ಸಹ ಈ ಒಂದು ಡ್ರಿಂಕ್ ಅನ್ನು ನೀವು ಕುಡಿದರೆ ನಿಮ್ಮ ಮೂಲವ್ಯಾಧಿ ಸಮಸ್ಯೆ ಖಂಡಿತವಾಗಿಯೂ ಗುಣವಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now