ನಾವು ಎಷ್ಟೇ ಎಚ್ಚರಿಕೆಯಲ್ಲಿ ಕೆಲಸ ಮಾಡಿದರು ಸಹ ಕೆಲವೊಮ್ಮೆ ನಮ್ಮ ಕೈಗಳು ಅಥವಾ ಕಾಲ್ಗಳಿಗೆ ಏನಾದರೂ ಒಂದು ಗಾಯವನ್ನು ಮಾಡಿಕೊಳ್ಳುತ್ತಾ ಇರುತ್ತೇವೆ. ಹೌದು ಹೆಚ್ಚಾಗಿ ಹೆಂಗಸರು ಅಡುಗೆ ಮನೆಯಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅವರಿಗೆ ಎಣ್ಣೆ ಅಥವಾ ಬೆಂಕಿಯಿಂದ ಸುಟ್ಟು ಕೆಲವೊಂದಷ್ಟು ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಅವರು ಮಾಡಿಕೊಂಡಿರುವ ಸುಟ್ಟ ಗಾಯಗಳಿಗೆ ಕೆಲವೊಂದು ಮನೆಮದ್ದುಗಳನ್ನು ಮಾಡಬೇಕು ಹೌದು ನಮ್ಮ ಮನೆಗಳಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನು ನಾವು ಬಳಸಿಕೊಂಡರೆ ನಮಗೆ ಸುಟ್ಟಿರುವಂತಹ ಗಾಯಗಳಿಗೆ ಬೇಗನೆ ರಿಲೀಫ್ ಎನ್ನುವಂತಹದ್ದು ಸಿಗುತ್ತದೆ. ಹೆಣ್ಣೊಬ್ಬಳು ತ್ಯಾಗಮಯಿ ಆಗಿ ತಂದೆಯ ಮನೆಯಲ್ಲಿ ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ತಾಯಿಯಾಗಿ ಅಷ್ಟಲ್ಲದೆ ಹೆಂಡತಿಯಾಗಿ, ಸೊಸೆಯಾಗಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ತಾನೆ ಹೊತ್ತುಕೊಂಡು ಕುಟುಂಬದ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುತ್ತಾರೆ.
ಇಷ್ಟೆಲ್ಲ ಜವಾಬ್ದಾರಿಯ ಜೊತೆಗೆ ಮನೆಯಲ್ಲಿ ರುಚಿ ರುಚಿಯಾದ ಆಹಾರಗಳನ್ನು ಮಾಡುವಂತಹ ಒಂದು ದೊಡ್ಡ ಜವಾಬ್ದಾರಿಯೂ ಸಹ ಅವಳದೇ ಆಗಿರುತ್ತದೆ. ಮನೆಯಲ್ಲಿ ಎಷ್ಟೇ ಜನ ಇದ್ದರೂ ಸಹ ಅವಳೇ ಎಲ್ಲರಿಗೂ ಅಡಿಗೆಯನ್ನು ಮಾಡಿ ಅವರ ಹೊಟ್ಟೆಯನ್ನು ತುಂಬಿಸುತ್ತಾಳೆ ಅಂತಹ ಸಂದರ್ಭದಲ್ಲಿ ಅವರಿಗೆ ಎಷ್ಟೇ ಕಷ್ಟ ಆದರು ಅದೆಲ್ಲವನ್ನು ಸಹಿಸಿಕೊಂಡು ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾಳೆ. ಸುಟ್ಟಿರುವಂತಹ ಗಾಯಗಳಿಗೆ ನಾವು ಇಲ್ಲಿ ಕೆಲವು ಮನೆಮದ್ದುಗಳನ್ನು ತಿಳಿಸುತ್ತಿದ್ದೇವೆ. ಮೊದಲಿಗೆ ನಮ್ಮ ದೇಹದಲ್ಲಿ ಆಗುವಂತಹ ಸುಟ್ಟ ಗಾಯಗಳಿಗೆ ತಕ್ಷಣವೇ ಮನೆಯಲ್ಲಿ ಇರುವಂತಹ ಟೂತ್ಪೇಸ್ಟ್ ಹಚ್ಚಿಕೊಳ್ಳುವುದರಿಂದ ಸುಟ್ಟಗಾಯದಿಂದ ಆಗುವಂತಹ ಉರಿ ಅತೀ ವೇಗವಾಗಿ ಕಡಿಮೆಯಾಗುತ್ತದೆ. ನಮ್ಮ ಶರೀರದ ಭಾಗ ಸುಟ್ಟ ತಕ್ಷಣ ಹಸಿ ಮಣ್ಣಿನ್ನು ಹಚ್ಚುವುದರಿಂದ ತಕ್ಷಣವೇ ಉರಿ ಕಡಿಮೆಯಾಗುತ್ತದೆ, ಹಾಗೆಯೆ ಸುಟ್ಟ ಗಾಯದಿಂದ ಬರುವ ಗುಳ್ಳೆಗಳು ಹೇಳುವುದಿಲ್ಲ. ಹಾಗೆಯೆ ಸುಟ್ಟ ಗಾಯಕ್ಕೆ ಸತತವಾಗಿ ನೀರು ಬಿಡುತ್ತಿದ್ದರೆ ಸುಟ್ಟ ಗಾಯದ ನೋವು ಕಡಿಮೆಯಾಗುತ್ತದೆ.
ಹಾಗೆಯೇ ಚರ್ಮ ಸುಟ್ಟಿದ ಭಾಗಕ್ಕೆ ಹರಿಶಿಣ ವನ್ನು ಹಚ್ಚಿಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಜೇನುತುಪ್ಪವನ್ನು ಬೆರೆಸಿ ಸುಟ್ಟ ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ಹಾಗೆಯೇ ಸುಟ್ಟಗಾಯಗಳಿಗೆ ಬಿಳಿ ಎಳ್ಳನ್ನು ಚೆನ್ನಾಗಿ ತೇದು ಹಚ್ಚಿಕೊಂಡರೆ ಗಾಯದ ನೋವು ಬೇಗ ಕಡಿಮೆಯಾಗುತ್ತದೆ ಹಾಗೆಯೆ ಸುಟ್ಟ ಕಲೆಗಳು ಕೂಡ ಉಳಿಯುವುದಿಲ್ಲ. ನಂತರ ಸುಟ್ಟ ಗಾಯಕ್ಕೆ ತೆಂಗಿಯು ಕೂಡ ಮದ್ದು, ಎಣ್ಣೆಯು ಕೂಡ ಸುಟ್ಟಗಾಯಕ್ಕೆ ಒಳ್ಳೆಯ ಔಷಧಿ ಇದರಿಂದ ನೋವು ಶಮನವಾಗುತ್ತದೆ. ಹಾಗೆಯೆ ತುಳಸಿ ಎಲೆಯ ರಸವನ್ನು ಚನ್ನಾಗಿ ತೆಗೆದು ಸುಟ್ಟಗಾಯಕ್ಕೆ ಹಾಕುವುದರಿಂದ ಉರಿ ಕಡಿಮೆಯಾಗುತ್ತದೆ. ಯಾವುದೇ ರೀತಿಯಾದಂತಹ ಸುಟ್ಟಗಾಯಗಳು ಆದರೂ ಸರಿ ತಕ್ಷಣವೇ ತಣ್ಣೀರು ಹಾಕುವುದು ಅತ್ಯಂತ ಉತ್ತಮವಾದಂತಹ ಕ್ರಮವಾಗಿದೆ ಈ ಗಾಯದ ಮೇಲೆ ನಾವು ಕಣ್ಣೀರನ್ನು 15 ನಿಮಿಷಗಳ ಆದರೂ ಹಾಕುತ್ತಲೇ ಇರಬೇಕು ಆಗ ನಮ್ಮ ಸುಟ್ಟಗಾಯದ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಪ್ರತಿ ಮನೆಗಳಲ್ಲಿಯೂ ಸಹ ಒಂದು ಪ್ರಥಮ ಚಿಕಿತ್ಸೆಯ ಕೆಲವೊಂದು ಸಾಮಾನ್ಯ ವಸ್ತುಗಳನ್ನು ಇಟ್ಟುಕೊಂಡಿರಬೇಕು ನಾವು ಉಪಯೋಗ ಮಾಡಲಿ ಅಥವಾ ಮಾಡದೇ ಇರಲಿ ನಮ್ಮ ಮನೆಯಲ್ಲಿ ಪ್ರಾಥಮಿಕ ಚಿಕಿತ್ಸಾ ವಿಧಾನವನ್ನು ಅನುಸರಿಸಬೇಕು.
ನಾವು ತಂದು ಇಟ್ಟುಕೊಂಡಿರುವ ಕ್ರಿಯೆಗಳ ದಿನಾಂಕವನ್ನು ಆಗಾಗ ಪರಿಶೀಲಿಸುತ್ತಾ ಇರಬೇಕು. ಗಾಯಗಳಾದ ನಂತರ ತಣ್ಣೀರಿನಿಂದ ಚೆನ್ನಾಗಿ ತೊಳೆದು ನಂತರ ಅದಕ್ಕೆ ಕ್ರೀಮ್ ಗಳನ್ನು ಹಾಕುವುದರಿಂದ ನಮ್ಮ ಗಾಯ ಅತಿವೇಗವಾಗಿ ನಿವಾರಣೆಯಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಏನು ಮಾಡುತ್ತಾರೆ ಎಂದರೆ ಸುಟ್ಟಗಾಯಗಳು ಆದ ನಂತರ ಆ ನೋವು ನಿವಾರಣೆಗೆ ಕೆಲವೊಂದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಜನರಿಗೆ ಅಡ್ಡಪರಿಣಾಮಗಳೇ ಹೆಚ್ಚು ಆದ್ದರಿಂದ ನಾವು ಸುಟ್ಟಗಾಯಗಳಿಗೆ, ಕೆಲವೊಂದು ಚಿಕ್ಕ ಪುಟ್ಟ ಗಾಯಗಳಿಗೆ ಅಗತ್ಯವಿಲ್ಲದಿದ್ದರೂ ಸಹ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ. ಹಾಗೆಯೇ ಸುಟ್ಟಿರುವಂತಹ ಚರ್ಮವನ್ನು ನಾವು ಬಿಸಿಲಿಗೆ ತೋರಿಸಬಾರದು ಸುಟ್ಟ ಚರ್ಮವನ್ನು ಬಿಸಿಲಿಗೆ ಒಡ್ಡಿದಾಗ ನಮ್ಮ ಗಾಯದ ಉರಿ ಹೆಚ್ಚಾಗುತ್ತದೆ ಆದ್ದರಿಂದ ನಾವು ಅಂತಹ ಸಂದರ್ಭದಲ್ಲಿ ಸುಟ್ಟಂತಹ ಜಾಗಕ್ಕೆ ಒಂದು ಶುಬ್ರ ವಾದಂತಹ ಬಿಳಿ ಬಟ್ಟೆಯನ್ನು ಕವರ್ ಮಾಡಿಕೊಂಡು ನಂತರ ಹೊರಗೆ ಹೋಗಬೇಕು. ಹಾಗೇನಾದರೂ ನಾವು ಸುಟ್ಟ ನಂತರ ಬಿಸಿಲಿಗೆ ಹೋಗಿದ್ದೆ ಆದಲ್ಲಿ ನಮ್ಮ ಗಾಯ ಇನ್ನೂ ಹೆಚ್ಚಾಗಿ ಹರಡುತ್ತದೆ ಗಾಯದ ನೋವು ಮತ್ತು ತೀವ್ರತೆ ಇನ್ನೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ನಾವು ನಮ್ಮ ಅಡುಗೆ ಮನೆಯಲ್ಲಿ ಕೆಲವೊಂದು ಕಡೆ ನೋಡಿದಂತಹ ಹೊಸ ಹೊಸ ರುಚಿಗಳನ್ನು ಪ್ರಯೋಗ ಮಾಡಲೆಂದೇ ಆತುರದಲ್ಲಿ ಕೆಲವೊಂದು ಬಾರಿ ಬಿಸಿ ಪಾತ್ರೆಯನ್ನು ಮುಟ್ಟಿ ಸುಟ್ಟಿಕೊಂಡಿರುತ್ತದೆ ಅಥವಾ ಕೆಲವೊಮ್ಮೆ ಬಿಸಿನೀರು, ಕಾಫಿ, ಟೀ ಇಂತಹವುಗಳನ್ನು ನಮ್ಮ ಮೈ ಮೇಲೆ ಬಿದ್ದು ಕಾಯಗಳ ಆಗುತ್ತದೆ. ಮೊದಲೆಲ್ಲಾ ಅಡಿಗೆ ಮನೆಯ ಜವಾಬ್ದಾರಿಯನ್ನು ಕೇವಲ ಹೆಣ್ಣು ಮಕ್ಕಳು ಮಾತ್ರ ನೋಡಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಗಂಡು ಹೆಣ್ಣು ಎನ್ನುವ ಭೇದ ಭಾವ ಕಡಿಮೆಯಾಗುತ್ತ ಬರುತ್ತಿದೆ. ದಿನಕಳೆದಂತೆ ಇಬ್ಬರು ಸಮಾನರು ಎಂಬುದು ಮೂಡುತ್ತಿದೆ ಆದ್ದರಿಂದ ಗಂಡಸರು ಅಥವಾ ಹೆಂಗಸರು ಯಾರೇ ಆದರೂ ಸಹ ತಮ್ಮ ದೇಹದ ಯಾವುದೇ ಭಾಗ ಸುಟ್ಟುಕೊಂಡರು ಸಹ ಮೇಲೆ ತಿಳಿಸಿದಂತಹ ಕೆಲವೊಂದು ವಿಧಾನಗಳನ್ನು ಅನುಸರಿಸಿ.