ಬಿಳಿ ಮುಟ್ಟಿನ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ, ಈ ಮನೆಮದ್ದು ಸೇವಿಸಿ ಸಾಕು

ಸಾಕಷ್ಟು ಹೆಣ್ಣು ಮಕ್ಕಳನ್ನು ಕಾಡುವಂತಹ ಸಮಸ್ಯೆಗಳಲ್ಲಿ ಬಿಳಿಮುಟ್ಟಿನ ಸಮಸ್ಯೆಯು ಸಹ ಒಂದಾಗಿದೆ. ಈ ಒಂದು ಬಿಳಿ ಮುಟ್ಟಿನ ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ ಕೆಲವೊಮ್ಮೆ ಸೋಂಕುಗಳು ಉಂಟಾದರೂ ಸಹ ಈ ಒಂದು ಬಿಳಿ ಮುಟ್ಟಿನ ಸಮಸ್ಯೆ ಉಂಟಾಗುತ್ತದೆ. ನಮ್ಮ ದೇಹದಲ್ಲಿ ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಸುಳಿದಾಗ ಅದನ್ನು ಹೊರಹಾಕಲು ಈ ಒಂದು ಬಿಳಿ ಮುಟ್ಟು ಉಂಟಾಗುತ್ತದೆ. ಕೆಲವು ಮಹಿಳೆಯರಿಗೆ ಬಿಳಿಮುಟ್ಟು ಆಗುವುದಿಲ್ಲ ಅಥವಾ ಕೆಲವರಿಗೆ ಬಿಳಿ ಮುಟ್ಟು ಜಾಸ್ತಿ ಪ್ರಮಾಣದಲ್ಲಿ ಸಮಸ್ಯೆ ಉಂಟಾಗುತ್ತದೆ ಹೆಚ್ಚಿನ ಬಿಳಿ ಮುಟ್ಟು ಆಗುವುದಕ್ಕೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಇರುವುದು ಕಾರಣ ಆಗಬಹುದು. ನಮ್ಮ ದೇಹದಲ್ಲಿ ಇರುವಂತಹ ನಿರ್ಜೀವ ಕೋಶಗಳನ್ನು ಹೊರ ಹಾಕುವಂತಹ ಪ್ರಯತ್ನವನ್ನು ಇದು ಮಾಡುತ್ತದೆ ಇದು ಒಂದು ಕಾಯಿಲೆಯಲ್ಲ ಬದಲಿಗೆ ನಮ್ಮ ದೇಹವನ್ನು ಶುಚಿ ಮಾಡುವಂತಹ ಒಂದು ಪ್ರಕ್ರಿಯೆಯಾಗಿದೆ ನಮಗೆ ಇದು ಪ್ರಕೃತಿ ದತ್ತವಾಗಿ ಸಿಕ್ಕಿರುವಂತಹ ಒಂದು ಕೊಡುಗೆ ಎಂದೇ ಹೇಳಬಹುದು.

ಕೆಲವರು ಇದನ್ನು ಬೇರೆಯವರೊಂದಿಗೆ ಹೇಳಿಕೊಳ್ಳುವುದಕ್ಕೂ ಸಹ ಮುಜುಗರವನ್ನು ಪಡುತ್ತಾರೆ. ಬಿಳಿ ಮುಟ್ಟಿಗೆ ಕೆಲವೊಂದು ಮನೆ ಮದ್ದುಗಳನ್ನು ನೋಡುವುದಾದರೆ. ಒಂದು ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ಅದಕ್ಕೆ ಒಂದು ಲೋಟ ನೀರನ್ನು ಹಾಕಿ ತದನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಮೆಂತೆಕಾಳನ್ನು ಸೇರಿಸಿ ಅದನ್ನು ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ ಐದು ನಿಮಿಷ ಕುದಿಸಿದ ನಂತರ ಅದನ್ನು ಶೋಧಿಸಿಕೊಂಡು ಕುಡಿಯಬಹುದು ಅಥವಾ ಅದರಲ್ಲಿ ಇರುವಂತಹ ಮೆಂತೆಕಾಳನ್ನು ನೀವು ಹಾಗೆಯೇ ತಿನ್ನಬಹುದು ಮೆಂತೆಕಾಳು ಕೇವಲ ಬಿಳಿ ಮುಟ್ಟಿನ ಸಮಸ್ಯೆಗೆ ಅಷ್ಟೇ ಅಲ್ಲದೆ ಇನ್ನೂ ಅನೇಕ ರೀತಿಯಾದಂತಹ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ. ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸಿದರೆ ಬಿಳಿ ಮುಟ್ಟಿನ ಸಮಸ್ಯೆಯನ್ನು ಸಹ ನಿವಾರಣೆ‌ ಮಾಡುತ್ತದೆ.

ಅಲ್ಲದೆ ಈ ಒಂದು ಮೆಂತೆ ಕಾಳನ್ನು ಸೇವನೆ ಮಾಡುವುದರಿಂದ ಯಾರಿಗೆಲ್ಲ ಬೆನ್ನು ನೋವಿನ ಸಮಸ್ಯೆ ಇರುತ್ತದೆ ಅಂತಹವರಿಗೂ ಸಹ ಇದು ಒಂದು ಉತ್ತಮವಾದಂತಹ ಮನೆಮದ್ದು ಎಂದು ಹೇಳಬಹುದು. ಎರಡನೆಯದಾಗಿ ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಿಟಿಕೆ ಎಷ್ಟು ಒಣ ಶುಂಠಿಯ ಪುಡಿಯನ್ನು ಹಾಕಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನೀವು ಮನೆಯಲ್ಲಿಯೆ ಒಣ ಶುಂಠಿ ಪುಡಿಯನ್ನು ತಯಾರಿಸಿ ಕೊಳ್ಳಬಹುದು ಇಲ್ಲವಾದರೆ ನೀವು ಅಂಗಡಿಯಿಂದ ತಂದು ಬಳಸಬಹುದು. ಬೆಚ್ಚಗಿನ ನೀರಿನಲ್ಲಿ ಇದನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ನಿಮಗೆ ಬಿಳಿ ಮುಟ್ಟಿನ ಸಮಸ್ಯೆ ಕಮ್ಮಿಯಾಗುತ್ತದೆ ಇದನ್ನು ವಾರದಲ್ಲಿ ಎರಡರಿಂದ ಮೂರು ದಿನ ನೀವು ಸೇವಿಸಿದರೆ ತುಂಬಾ ಒಳ್ಳೆಯದು.

ಮೂರನೆಯದಾಗಿ ಒಂದು ಲೋಟ ನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಕೊತ್ತಂಬರಿ ಬೀಜವನ್ನು ಹಾಕಿ ರಾತ್ರಿಯಿಡಿ ನೆನೆಯಲು ಬಿಡಿ ನಂತರ ಅದನ್ನು ನೀವು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ನಿಮ್ಮ ಬಿಳಿ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಯಾರಿಗೆಲ್ಲ ಸುಸ್ತು ಆಯಾಸ ಆಗುತ್ತದೆ ಅಂತಹವರಿಗೂ ಸಹ ಈ ಒಂದು ಕೊತ್ತಂಬರಿ ಬೀಜ ಮತ್ತು ನೀರನ್ನು ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯದು. ಈ ಮೇಲೆ ತಿಳಿಸಿದಂತಹ ಎಲ್ಲಾ ಡ್ರಿಂಕ್ ಗಳನ್ನು ನೀವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು ಹಾಗೆಯೆ ತೆಗೆದುಕೊಂಡ ನಂತರ ಒಂದು ಗಂಟೆಯವರೆಗೂ ಏನನ್ನೂ ಸೇವಿಸಬಾರದು. ಕೆಲವರು ಈ ಒಂದು ಬಿಳಿ ಮುಟ್ಟಿನ ಸಮಸ್ಯೆಯನ್ನು ದೊಡ್ಡ ಕಾಯಿಲೆ ಎಂದೇ ಭಾವಿಸಿರುತ್ತಾರೆ.

ಆದರೆ ಇದರ ಬಗ್ಗೆ ನೀವು ಚೆನ್ನಾಗಿ ತಿಳಿದುಕೊಂಡು ನಂತರ ಮನೆ ಮದ್ದುಗಳನ್ನು ತಯಾರಿಸಿ ನೀವು ಸೇವನೆ ಮಾಡುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ಇದರಿಂದ ನಿಮಗೆ ಹೆಚ್ಚಿನ ತೊಂದರೆ ಉಂಟಾಗುತ್ತಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಿ ಈ ಒಂದು ಸಮಸ್ಯೆಗೆ ಸುಲಭವಾದಂತಹ ಪರಿಹಾರವನ್ನು ಕಂಡುಕೊಳ್ಳಬಹುದು. ಶಿಲಿಂದ್ರಗಳ ಕಾರಣದಿಂದಲೂ ಸಹ ಈ ಒಂದು ಸಮಸ್ಯೆ ತುಂಬಾ ಜನ ಮಹಿಳೆಯರಲ್ಲಿ ಕಂಡುಬರುತ್ತದೆ ಈ ಒಂದು ಶಿಲಿಂದ್ರಗಳ ಕಾರಣದಿಂದ ಉಂಟಾಗುವಂತಹ ಸಮಸ್ಯೆ ಉರಿ ಮತ್ತು ತುರಿಕೆಯಿಂದ ಕೂಡಿರುತ್ತದೆ. ಯಾರೆಲ್ಲಾ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುತ್ತಾ ಇಲ್ಲವೋ ಅಂತಹ ಮಹಿಳೆಯರಿಗೆ ಈ ಒಂದು ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಹಾಗೆಯೆ ಯಾರು ಮೂತ್ರ ವಿಸರ್ಜನೆಯನ್ನು ತಡೆದು ಕೊಳ್ಳುತ್ತಾರೆ ಅದರಿಂದಲೂ ಸಹ ಈ ಒಂದು ಬಿಳಿ ಮುಟ್ಟಿನ ಸಮಸ್ಯೆ ಎನ್ನುವಂತಹದ್ದು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ನೀವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ಅಲ್ಲದೆ ಮೂತ್ರ ವಿಸರ್ಜನೆಯನ್ನು ನೀವು ಎಂದಿಗೂ ತಡೆದುಕೊಳ್ಳಬಾರದು ಇದು ತುಂಬಾ ಅಪಾಯಕಾರಿ. ಈ ಬಿಳಿ ಮುಟ್ಟಿನ ಸಮಸ್ಯೆ ಜೊತೆಗೆ ನಿಮಗೆ ಕೆಳಹೊಟ್ಟೆಯ ನೋವು, ಜ್ವರ, ನಿಮ್ಮ ತೂಕದಲ್ಲಿ ಇಳಿಕೆ ಆಗುವುದು, ಸುಸ್ತಾಗುವುದು ಇನ್ನಿತರ ಕಾರಣಗಳು ಕಂಡುಬಂದರೆ ಕೂಡಲೇ ನೀವು ವೈದ್ಯರ ಸಂಪರ್ಕವನ್ನು ಮಾಡಬೇಕು. ನೀವು ನಿಮ್ಮ ದೇಹವನ್ನು ತುಂಬಾ ಸ್ವಚ್ಛತೆಯಿಂದ ನೋಡಿಕೊಳ್ಳಬೇಕು ಆಗಿದ್ದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಹಾಗೆಯೆ ಎತೇಚ್ಛವಾಗಿ ನೀವು ನೀರನ್ನು ಕುಡಿಯಬೇಕು.

Leave a Comment

%d bloggers like this: