ಸಾಲ ಎನ್ನುವುದು ಮನುಷ್ಯನಿಗೆ ಅತಿ ದೊಡ್ಡ ಶಾ’ಪ ಎನ್ನಬಹುದು. ಯಾಕೆಂದರೆ ಸಾಲ ಮಾಡಿದ ವ್ಯಕ್ತಿಯು ಆತನ ಜೀವನದ ಎಲ್ಲಾ ಸಂತೋಷವನ್ನು ಕೂಡ ಕಳೆದುಕೊಂಡು ಬಿಡುತ್ತಾನೆ. ಆದರೆ ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಸಂದರ್ಭ ಬಂದೇ ಬರುತ್ತದೆ ಸಾಲ ಮಾಡಿದ ಹಾಗೆಯೇ ಅದನ್ನು ತೀರಿಸಿ ಬಿಡಬೇಕು ಇಲ್ಲವಾದರೆ ಅದು ಶೂಲವಾಗಿ ಬಿಡುತ್ತದೆ.
ಆಗ ನಾವು ನಮ್ಮ ಜೀವನದ ಅತಿ ದೊಡ್ಡ ಬೆಲೆಯನ್ನು ಅದಕ್ಕೆ ತೆರಬೇಕಾಗುತ್ತದೆ. ಕೆಲವರು ಸಾಲ ಮಾಡಿ ವ್ಯವಹಾರಗಳನ್ನು ಸುಲಭವಾಗಿ ಮುಗಿಸುತ್ತಾರೆ ಆದರೆ ಎಲ್ಲರಿಗೂ ಈ ಕಲೆ ಗೊತ್ತಿರುವುದಿಲ್ಲ. ಹಾಗಾಗಿ ಈ ಅಂಕಣದಲ್ಲಿ ಸುಲಭವಾಗಿ ಸಾಲ ತೀರಿಸಲು ಅನುಕೂಲವಾಗುವಂತಹ ಕೆಲವು ಸರಳ ಉಪಾಯಗಳ ಬಗ್ಗೆ ತಿಳಿಸುತ್ತಿದ್ದೇವೆ.
ಬೋರ್ವೆಲ್ ಹಾಕಿಸಬೇಕು ಅಂದುಕೊಂಡವರಿಗೆ ಉಪಯುಕ್ತ ಮಾಹಿತಿ.!
● ಇದನ್ನು ನೀವು ಸಾಲ ತೆಗೆದುಕೊಳ್ಳುವಾಗಲೇ ಮಾಡಬೇಕು, ಅದೇನೆಂದರೆ ಯಾವುದೇ ಕಾರಣಕ್ಕೂ ಮಂಗಳವಾರ ಮತ್ತು ಶನಿವಾರದ ದಿನ ಸಾಲ ತೆಗೆದುಕೊಳ್ಳಬಾರದು. 08, 17, 26 ಇವುಗಳನ್ನು ಶನಿಗ್ರಹದ ಪ್ರಭಾವದ ಸಂಖ್ಯೆಗಳು ಎನ್ನಲಾಗುತ್ತದೆ. ಈ ದಿನಾಂಕದಂದು ಕೂಡ ಸಾಲ ತೆಗೆದುಕೊಳ್ಳಬಾರದು ಈ ದಿನ ಸಾಲ ಕೊಟ್ಟರು, ಸಾಲ ತೆಗೆದುಕೊಂಡರು ಅದು ಸರಳವಾಗಿ ಮುಗಿಯುವುದಿಲ್ಲ. ಸಾಲ ತೆಗೆದುಕೊಳ್ಳುವುದಕ್ಕೆ ಸೋಮವಾರ ಬುಧವಾರ ಶುಕ್ರವಾರ ಸೂಕ್ತ.
● ನೀವು ಸಾಲ ಮಾಡಿ ಎಷ್ಟೇ ಕಷ್ಟಪಟ್ಟರು ಅದನ್ನು ತೀರಿಸಲು ಆಗುತ್ತಿಲ್ಲ ಎಂದರೆ ಈ ಉಪಾಯ ಮಾಡಿ. ಒಂದು ಮಂಗಳವಾರದ ದಿನದಂದು ಮನೆಯನ್ನು ಸ್ವಚ್ಛ ಮಾಡಿ ನಿಮ್ಮ ಮನೆ ದೇವರ, ಇಷ್ಟ ದೇವರ ಹೆಸರು ಹೇಳಿ ದೇವರಿಗೆ ದೀಪ ಹಚ್ಚಿ ಪೂಜೆ ಮಾಡಿ ನಂತರ ಒಂದು ವೀಳ್ಯದೆಲೆಯನ್ನು ತೆಗೆದುಕೊಳ್ಳಿ.
ಆಎಲೆ ಒಡೆದಿರಬಾರದು, ಬಾಡಿರಬಾರದು. ಅದರ ತೊಟ್ಟನ್ನು ಬಿಡಿಸಿ ಎಲೆಗೆ 2 ಲವಂಗ ಮತ್ತು 1 ಏಲಕ್ಕಿ ಹಾಕಿ ಪಾನ್ ರೀತಿ ಮಡಚಿ. ಇದನ್ನು ಕೆಂಪುದಾರದಲ್ಲಿ ಕಟ್ಟಿ ಆಂಜನೇಯನ ಗುಡಿಗೆ ಹೋಗಿ ಅರ್ಪಿಸಿ, ಆಂಜನೇಯನ ಬಳಿ ಇದನ್ನು ಇಡುವಂತೆ ಕೇಳಿಕೊಳ್ಳಿ. ಬಳಿಕ ಮನಸಾರೆಯಾಗಿ ಆಂಜನೇಯನನ್ನು ಪ್ರಾರ್ಥಿಸಿ ನಂತರ ಚಮತ್ಕಾರವೇ ನಡೆಯುತ್ತದೆ. ಆದರೆ ಆಂಜನೇಯನ ಮೇಲೆ ಅಪಾರ ಭಕ್ತಿ ಹಾಗೂ ಶುದ್ಧ ಮನಸ್ಸಿನಿಂದ ಇದನ್ನು ಮಾಡಬೇಕು.
● ಮತ್ತೊಂದು ಉಪಾಯವಿದೆ. ಇದನ್ನು ಯಾವುದಾದರೂ ನದಿ ಅಥವಾ ಹರಿಯುವ ನೀರಿರುವ ಜಾಗದಲ್ಲಿ ಮಾಡಬೇಕು. ನೀವು ಮನೆಯಲ್ಲಿ ಈಶ್ವರ ಹಾಗೂ ಆಂಜನೇಯನನ್ನು ಪ್ರಾರ್ಥಿಸಿ ಸಾಲ ತೀರಿಸಲು ಮಾರ್ಗ ತೋರಿ ಎಂದು ಕೇಳಿಕೊಂಡು ಹರಿಯುವ ನೀರು ಇರುವ ಕಡೆ ಹೋಗಿ ಒಂದು ವೀಳ್ಯದೆಲೆಯಲ್ಲಿ ಎರಡು ಲವಂಗ ಹಾಕಿ ಅದನ್ನು ನೀರಿಗೆ ಹರಿಯಲು ಬಿಡಬೇಕು ಅದು ಹೇಗೆ ಕೊಚ್ಚಿಕೊಂಡು ಹೋಗುತ್ತದೆಯೋ ಹಾಗೆ ನಿಮ್ಮ ಕಷ್ಟಗಳು ಕೊಚ್ಚಿಕೊಂಡು ಹೋಗುತ್ತವೆ ಎಂದು ಹೇಳಲಾಗುತ್ತದೆ.
ಗೃಹಲಕ್ಷ್ಮಿ ಮೊದಲ ಕಂತಿನ 2,000ರೂ. ಇನ್ನೂ ಬಂದಿಲ್ವಾ.? ಎರಡು ಕಂತಿನ ಹಣ ಒಟ್ಟಿಗೆ ಬರಲು ಈ ರೀತಿ ಮಾಡಿ.!
● ಇನ್ನೊಂದು ಮೂರು ತಿಂಗಳುಗಳ ಕಾಲ ಮಾಡುವ ಮಂಗಳವಾರದ ವ್ರತ. ಇದನ್ನು ಮೂರು ತಿಂಗಳುಗಳ ಕಾಲ ಕಠಿಣವಾಗಿ ಪ್ರತಿ ಮಂಗಳವಾರದಂದು ಮಾಡಬೇಕು. ಮಧ್ಯದಲ್ಲಿ ಮಹಿಳೆಯರಿಗೆ ಮಾಡಲು ಸಾಧ್ಯವಾಗಲಿಲ್ಲ ಎಂದರೆ ನಮಕುಟುಂಬದ ಯಾವುದಾದರೂ ಸದಸ್ಯರು ಆ ವಾರ ಮಾಡಬಹುದು.
ಇದನ್ನು ಮಾಡುವುದು ಬಹಳ ಸರಳ ಮನೆಯನ್ನು ಸ್ವಚ್ಛ ಮಾಡಿ ಮನೆಯಲ್ಲಿ ದೇವರ ಹೆಸರು ಹೇಳಿ ಪೂಜೆ ಮಾಡಿ ಆಂಜನೇಯನು ಕೂಡ ಪ್ರಾರ್ಥಿಸಬೇಕು. 21 ಬಾರಿ ಹನುಮಾನ್ ಚಾಲೀಸಾ ಪಠಿಸಬೇಕು ಮತ್ತು ಆಂಜನೇಯನ ಗುಡಿಗೆ ಹೋಗಿ ದರ್ಶನ ಪಡೆದು ಅಲ್ಲೇ ಕೆಲ ಸಮಯ ಇದ್ದು ಬರಬೇಕು.
ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್.! ಸರ್ಕಾರದಿಂದ ಹೊಸ ಆದೇಶ.!
ರಾತ್ರಿ ಹೊತ್ತು ಊಟ ಮಾಡಬಾರದು ಫಲಹಾರ ಮಾತ್ರ ಸೇವಿಸಬೇಕು, ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು, ಈ ಸಮಯದಲ್ಲಿ ಕೈಲಾದಷ್ಟು ದಾನ ಧರ್ಮ ಮಾಡಬೇಕು, ಯಾರಿಗೂ ಕೆಟ್ಟದ್ದನ್ನು ಬಯಸಬಾರದು ಕೆಟ್ಟ ಮಾತಿನಲ್ಲಿ ಯಾರನ್ನು ಮಾತನಾಡಿಸಬಾರದು, ಈ ರೀತಿ ಇದ್ದರೆ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.