ಕೇಂದ್ರ ಸರ್ಕಾರವು(Central government) ರಾಜ್ಯದ ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು, ಹೆಣ್ಣು ಮಕ್ಕಳು, ರೈತ ವರ್ಗ, ಮಹಿಳೆಯರು, ಕಾರ್ಮಿಕರು, ಅಸಂಘಟಿತ ವಲಯದಲ್ಲಿ ದುಡಿಯುವ ಜನರು ಮತ್ತು ಹಿರಿಯ ನಾಗರಿಕರು ಹೀಗೆ ಪ್ರತಿಯೊಂದು ವರ್ಗಕ್ಕೂ ಕೂಡ ಅವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದೆ.
ಕೇಂದ್ರ ಸರ್ಕಾರದ ಪೆನ್ಷನ್ ಯೋಜನೆಗಳು ದೇಶದ ಜನರ ಗಮನ ಸೆಳೆದಿದೆ, ಹಿಂದೆಲ್ಲಾ ಸರ್ಕಾರಿ ಹುದ್ದೆ ಹೊಂದಿದವರಿಗೆ ಮಾತ್ರ ಪೆನ್ಷನ್ ಸಿಗುತ್ತಿತ್ತು, ಆದರೆ ಈಗ ಅಸಂಘಟಿತ ವಲಯದಲ್ಲಿ ದುಡಿಯುವವರು ಕೂಡ ದುಡಿಯುವ ವಯಸ್ಸಿನಲ್ಲಿಯೇ ವೃದ್ಯಾಪ್ಯ ಜೀವನದ ಬಗ್ಗೆ ಚಿಂತೆ ಮಾಡಿ ಒಂದೊಳ್ಳೆ ಯೋಜನೆಗಳಲ್ಲಿ ಹೂಡಿಕೆ ಮಾಡಿ ಜೀವನದ ಸಂಧ್ಯಾ ಕಾಲವನ್ನು ಸುಗಮವಾಗಿಸಿಕೊಳ್ಳಬಹುದು.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
ವಯಸ್ಸಾದ ಮೇಲೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ, ಆ ಸಮಯದಲ್ಲಿ ಮತ್ತೊಬ್ಬರ ಮೇಲೆ ಡಿಪೆಂಡ್ ಆಗುವುದು ತಪ್ಪಿಸಲು ವಯಸ್ಸಿನಲ್ಲಿಯೇ ಈ ಬಗ್ಗೆ ಪ್ಲಾನ್ ಮಾಡಿ ಹೂಡಿಕೆ ಮಾಡಿದರೆ ಒಳ್ಳೆಯದು ಅದಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದಲೂ ಕೂಡ ಯೋಜನೆಗಳಿವೆ. ಪ್ರಧಾನಮಂತ್ರಿ ಅಟಲ್ ಪೆನ್ಷನ್ ಯೋಜನೆ ( PM Atal Pension Scheme) ಎನ್ನುವ ಯೋಜನೆಯನ್ನು ಈ ವಿಧದಲ್ಲಿ ಬಹಳ ಹೆಸರುವಾಸಿಯಾಗಿದ್ದು.
2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಈ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ಮೂಲಕ ನೀವು ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಾ ಬಂದರೆ ನಿಮಗೆ 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ಖಚಿತ ಮಾಸಿಕ ಪಿಂಚಣಿ ಬರುತ್ತದೆ ಇತರ ಕುರಿತು ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಅಟಲ್ ಪೆನ್ಷನ್ ಯೋಜನೆ ಕುರಿತಾದ ಪ್ರಮುಖ ಅಂಶಗಳು:-
● ಭಾರತೀಯ ಪ್ರಜೆಯಾಗಿರಬೇಕು.
● 18 ರಿಂದ 40 ವರ್ಷಗಳ ನಡುವಿನ ವಯಸ್ಸಿನವರು ಮಾತ್ರ ಯೋಜನೆಗೆ ಅರ್ಹರು.
● ಮೊಬೈಲ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಹೊಂದಿರಬೇಕು.
● ನಿಮ್ಮ ಹೂಡಿಕೆಯ ಆಧಾರದ ಮೇಲೆ ನಿವೃತ್ತಿಯ ನಂತರ ವ್ಯಕ್ತಿಗೆ ಪಾವತಿಸಬೇಕಾದ ಕನಿಷ್ಠ ಪಿಂಚಣಿಯನ್ನು ಭಾರತ ಸರ್ಕಾರವು ಖಾತರಿಪಡಿಸುತ್ತದೆ.
● ಸೆಕ್ಷನ್ 80CCD ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹರಾಗಿರುತ್ತಾರೆ.
● 60 ವರ್ಷ ವಯಸ್ಸಿನವರೆಗೆ ಪ್ರತಿ ತಿಂಗಳೂ ನೀವು ಕನಿಷ್ಠ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಬರಬೇಕು, ದಿನಕ್ಕೆ 42 ರೂ ಇಂದ ಮಾಸಿಕವಾಗಿ 5000 ವರೆಗೂ ಕೂಡ ಹೂಡಿಕೆ ಮಾಡಬಹುದು ನಿಮ್ಮ ಹೂಡಿಕೆಯ ಆಧಾರದ ಮೇಲೆ ನಿಮಗೆ ಪೆನ್ಷನ್ ಸಿಗುತ್ತದೆ.
ಗ್ಯಾಸ್ಟ್ರಿಕ್ ಪ್ರಾಬ್ಲಂ ಬರಲು ಈ ಮೂರು ಅಂಶಗಳೇ ಕಾರಣ, ಟ್ಯಾಬ್ಲೆಟ್ ತಗೋಬೇಡಿ.! ಡಾಕ್ಟರ್ ಹೇಳಿದ ಸತ್ಯ
● ಕನಿಷ್ಠ ಒಂದು ಸಾವಿರ ರೂಪಾಯಿಯಿಂದ 5000 ವರೆಗೂ ಕೂಡ ಪ್ರತಿ ತಿಂಗಳು ಖಚಿತ ಪೆನ್ಷನ್ ಪಡೆಯಬಹುದು, ನೀವು ಮತ್ತು ನಿಮ್ಮ ಸಂಗಾತಿ ಒಟ್ಟಿಗೆ ಯೋಜನೆಯನ್ನು ಆಯ್ದುಕೊಂಡರೆ ಮಾಸಿಕ 10,000 ದವರೆಗೆ ಪಿಂಚಣಿ ಪಡೆಯಬಹುದು.
● ಯೋಜನೆಯನ್ನು ಖರೀದಿಸಿ ಹೂಡಿಕೆದಾರರಾದ ಮೇಲೆ ನೀವೇನಾದರೂ ಅಕಾಲಿಕ ಮ’ರ’ಣಕ್ಕೆ ತುತ್ತಾದರೆ, ನಿಮ್ಮ ಮರಣದ ಸಂದರ್ಭದಲ್ಲಿ, ನಿಮ್ಮ ಸಂಗಾತಿಯು ಕೊಡುಗೆಯನ್ನು ಪಡೆಯಬಹುದು ಅಥವಾ ಯೋಜನೆಯ ಅವಧಿಯನ್ನು ಪೂರ್ಣಗೊಳಿಸಬಹುದು.
● ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದ್ದು ನಿಮ್ಮ ಮತ್ತು ನಿಮ್ಮ ಸಂಗಾತಿಯ ಅವಧಿಯ ನಂತರ ನಾಮಿನಿಗೆ ಕಾರಣ ಬದ್ಧವಾಗಿ ಸಲ್ಲಬೇಕಾದ ಹಣ ಹೋಗುತ್ತದೆ.
● ನಿಮ್ಮ ಹತ್ತಿರದಲ್ಲಿರುವ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ನೀವು ಈ ಯೋಜನೆಯನ್ನು ಖರೀದಿಸಬಹುದು.
ಗ್ಯಾಸ್ಟ್ರಿಕ್ ಪ್ರಾಬ್ಲಂ ಬರಲು ಈ ಮೂರು ಅಂಶಗಳೇ ಕಾರಣ, ಟ್ಯಾಬ್ಲೆಟ್ ತಗೋಬೇಡಿ.! ಡಾಕ್ಟರ್ ಹೇಳಿದ ಸತ್ಯ