ಪ್ರತಿಯೊಬ್ಬರಿಗೂ ಕೂಡ ಕೋರ್ಟ್ ಮತ್ತು ಕಾನೂನಿನ ಬಗ್ಗೆ ಸ್ವಲ್ಪವಾದರೂ ಅರಿವು ಇರಲೇಬೇಕು. ಯಾಕೆಂದರೆ ಇಂದು ನಾವು ಬದುಕುತ್ತಿರುವ ಈ ಸಮಾಜದಲ್ಲಿ ನಮ್ಮ ರಕ್ಷಣೆಗೆ ಕೋರ್ಟ್ ಮತ್ತು ಕಾನೂನಿನ ನೆರವು ಬೇಕೇ ಬೇಕು. ಆದರೆ ಜನರು ಕೋರ್ಟ್ ಎನ್ನುವ ಹೆಸರು ಕೇಳಿದ ತಕ್ಷಣವೇ ಭ’ಯ ಬೀಳುತ್ತಾರೆ ಇನ್ನು ಕೋರ್ಟ್ ನೋಟಿಸ್ ಎಂದರೆ ಅದನ್ನು ರಿಸಿವ್ ಮಾಡಿದಕ್ಕೂ ಕೂಡ ಹೆದರುತ್ತಾರೆ.
ಹಾಗಾದರೆ ಕೋರ್ಟ್ ಅಥವಾ ವಕೀಲರಿಂದ ನೋಟಿಸ್ ಬಂದಾಗ ತೆಗೆದುಕೊಳ್ಳಬಾರದ ಅಥವಾ ಆ ಸಮಯದಲ್ಲಿ ಏನು ಮಾಡಬೇಕು ಎನ್ನುವುದರ ಕುರಿತು ಎಲ್ಲರಿಗೂ ಅನುಕೂಲವಾಗುವ ಕೆಲವು ಮುಖ್ಯ ವಿಷಯಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪ್ರತಿಯೊಬ್ಬರಿಗೂ ಅನುಕೂಲವಾಗುವ ಸುದ್ದಿ ಇದಾಗಿದ್ದು, ನಿಮ್ಮ ಸ್ನೇಹಿತರ ಹಾಗೂ ಕುಟುಂಬದವರ ಜೊತೆಗೆ ಈ ಮಾಹಿತಿ ಹಂಚಿಕೊಳ್ಳಿ.
ಅಕ್ಟೋಬರ್ ತಿಂಗಳಲ್ಲಿ ಕರೆಯಲಾದ ಸರ್ಕಾರಿ ಹುದ್ದೆಗಳು, 10ನೇ ತರಗತಿ ಆದವರಿಗೂ ಇದೆ ಅವಕಾಶ, ತಪ್ಪದೇ ಅರ್ಜಿ ಸಲ್ಲಿಸಿ.!
ಯಾವುದೇ ಕೋರ್ಟ್ ಅಥವಾ ವಕೀಲರಿಂದ ನೋಟಿಸ್ ಬಂದಾಗ ಅದನ್ನು ರಿಸೀವ್ ಮಾಡಿ. ನೀವು ರಿಸೀವ್ ಮಾಡದೇ ಇರಬಹುದು ಆದರೆ ಮಾಡದೇ ಇದ್ದರೆ ನಿಮಗೆ ನ’ಷ್ಟ. ಯಾಕೆಂದರೆ. ರಿಸೀವ್ ಮಾಡಿ ನೋಡಿದಾಗ ಮಾತ್ರ ಅದರ ಒಳಗೆ ಏನು ಮಾಹಿತಿ ಇದೆ ಎಂದು ನಿಮಗೆ ಗೊತ್ತಾಗುತ್ತದೆ.
ಉದಾಹರಣೆಗೆ ನೀವೇ ಒಂದು ಕೋರ್ಟ್ ಕೇಸ್ ನಡೆಸುತ್ತಿದ್ದೀರಾ ಎಂದು ಇಟ್ಟುಕೊಳ್ಳೋಣ ನೀವು ಮತ್ಯಾರ ಮೇಲೋ, ಕೇಸ್ ಹಾಕಿದ್ದೀರಾ ಅಥವಾ ಯಾರೋ ನಿಮ್ಮ ಮೇಲೆ ಕೇಸ್ ಹಾಕಿದ್ದಾರೆ ಅದು ಆಸ್ತಿ ವಿಚಾರದ್ದೇ ಆಗಿರಬಹುದು ಅಥವಾ ಚೆಕ್ ಬೌನ್ಸ್ ಪ್ರಕರಣವೆ ಆಗಿರಬಹುದು ಅಥವಾ ಇನ್ಯಾವುದೇ ಪ್ರಕರಣಗಳು ಇರಬಹುದು ಅದಕ್ಕೆ ಸಂಬಂಧಿಸಿದ ಹಾಗೆ ನೋಟಿಸ್ ಬಂದಿದ್ದರೆ ಅದನ್ನು ತೆರೆದು ನೋಡಿದಾಗ ಮಾತ್ರ ನಿಮಗೆ ಅದರ ಒಳಗೆ ಏನು ಮಾಹಿತಿ ಇದೆ ಎಂದು ಗೊತ್ತಾಗುವುದು.
ಇಲ್ಲದೇ ಹೋದರೆ ಆ ನೋಟಿಸ್ ಒಳಗೆ ಏನು ವಿಷಯ ಇತ್ತು ಎನ್ನುವುದು ಹಾಗೆ ಉಳಿದು ಹೋಗುತ್ತದೆ. ಆಗ ಅದಕ್ಕೆ ಪರಿಹಾರ ಹುಡುಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೋರ್ಟ್ ನೋಟಿಸ್ ಬಂದರೆ ತೆಗೆದುಕೊಳ್ಳುವುದಕ್ಕೆ ಭಯ ಬೀಳಬಾರದು. ನೀವು ಕೋರ್ಟ್ ನೋಟಿಸ್ ರಿಸೀವ್ ಮಾಡಿದರೆ ಅದರ ಒಳಗೆ ಮಾಹಿತಿ ಇರುವುದನ್ನು ತಿಳಿದುಕೊಂಡು ಮುಂದೆ ಏನು ಮಾಡಬಹುದು ಎನ್ನುವುದನ್ನು ಚಿಂತಿಸಲು ಅವಕಾಶ ದೊರೆಯುತ್ತದೆ.
ಯಾಕೆಂದರೆ ಯಾವುದೇ ಕೋರ್ಟ್ ನೋಟಿಸ್ ಬಂದರೂ ನೀವು ತಕ್ಷಣವೇ ಹಾಜರಾಗಬೇಕು ಎಂದು ತಾಕೀತು ಮಾಡಿರುವುದಿಲ್ಲ. ಈ ಕ್ಷಣವೇ ಆಕ್ಷನ್ ತೆಗೆದುಕೊಳ್ಳುವಂತೆ ಅಥವಾ ಮರುದಿನವೇ ಉತ್ತರಿಸುವಂತೆ ಯಾವುದೇ ನೋಟಿಸ್ ಕೂಡ ಕಳುಹಿಸಿರುವುದಿಲ್ಲ, ನಿಮ್ಮ ಉತ್ತರಗಳನ್ನು ಕೇಳಿದ್ದರೆ ಅದಕ್ಕೆ ಕನಿಷ್ಠ ಏಳು ದಿನ, 10 ದಿನ ಅಥವಾ ಎರಡು ವಾರಗಳಾದರೂ ಅನುಮತಿ ಇದ್ದೇ ಇರುತ್ತದೆ.
ಹಾಗಾಗಿ ನೀವು ಆ ನೋಟಿಸ್ ಗಳನ್ನು ರಿಸೀವ್ ಮಾಡಿಕೊಂಡರೆ ಆ ವಿಷಯಗಳನ್ನು ನಿಮ್ಮ ವಕೀಲರ ಬಳಿ ಚರ್ಚಿಸಬಹುದು. ನಿಮಗೆ ನಿಮ್ಮ ವಕೀಲರು ಸರಿಯಾಗಿ ಸಲಹೆ ನೀಡುತ್ತಿಲ್ಲ ಅಥವಾ ಸ್ಪಂದಿಸುತ್ತಿಲ್ಲ ಎನ್ನುವ ಅನುಮಾನ ಇದ್ದರೆ, ಆ ನೋಟಿಸ್ ಇಟ್ಟುಕೊಂಡು ಬೇರೆಯವರ ಜೊತೆ ಕೂಡ ಇದರ ಬಗ್ಗೆ ಚರ್ಚಿಸಬಹುದು.
ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ವಿಷಯಗಳಲ್ಲಿ ಮಿಸ್ಟೇಕ್ ಮಾಡಿಕೊಳ್ಳಬೇಡಿ, ಯಾವುದೇ ನೋಟಿಸ್ ತೆಗೆದುಕೊಳ್ಳುವುದರಿಂದ ಏನು ತ’ಪ್ಪಾಗುವುದಿಲ್ಲ ಆದರೆ ನೋಟಿಸ್ ಸ್ವೀಕರಿಸದೆ ಇರುವುದೇ ತ’ಪ್ಪು. ನೋಟಿಸ್ ಸ್ವೀಕರಿಸಬೇಡಿ ಎಂದು ಯಾವುದಾದರೂ ಲಾಯರ್ ನಿಮಗೆ ಹೇಳಿದ್ದರೆ ಅವರು ನಿಮ್ಮನ್ನು ಮಿಸ್ ಗೈಡ್ ಮಾಡುತ್ತಿದ್ದಾರೆ ಎಂದೇ ಅರ್ಥ.