ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದವರಿಗೆ ಶಾ-ಕಿಂಗ್ ನ್ಯೂಸ್ 90 ಸಾವಿರ ಅರ್ಜಿ ರಿಜೆಕ್ಟ್.! ಈ ಲಿಂಕ್ ಮೂಲಕ ಚೆಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಅಂತ.!

 

WhatsApp Group Join Now
Telegram Group Join Now

ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಗೆ ಬಂದ ಮೇಲೆ ರೇಷನ್ ಕಾರ್ಡ್ ಗೆ (Ration card) ರಾಜ್ಯದಲ್ಲಿ ಇನ್ನೆಲ್ಲಿದ ಡಿಮ್ಯಾಂಡ್ ಶುರುವಾಗಿದೆ. ರೇಷನ್ ಕಾರ್ಡ್ ನಲ್ಲಿ ಮಾಹಿತಿ ತಪ್ಪಿದ್ದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲಾಗುವುದಿಲ್ಲ, ಹಾಗಾಗಿ ಈಗ ತಮ್ಮ ರೇಷನ್ ಕಾರ್ಡ್ ಗಳಲ್ಲಿರುವ ತಪ್ಪುಗಳನ್ನು ತಿದ್ದುಪಡಿ (Ration card correction) ಮಾಡಿಸಿಕೊಳ್ಳಲು ಕಛೇರಿಗಳಿಗೆ ಜನರು ಅಲೆಯುತ್ತಿದ್ದಾರೆ.

ಸದ್ಯಕ್ಕೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಆನ್ಲೈನ್ ಮೂಲಕ ಮಾತ್ರ ಮಾಡಿಸಿಕೊಳ್ಳಲು ಅವಕಾಶ ಇದ್ದು ನೂತನ ಸರ್ಕಾರ ಸ್ಥಾಪನೆಯಾದ ಮೇಲೂ ಮೂರು ಬಾರಿ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ಪ್ರತಿ ಬಾರಿಯೂ ಸರ್ವರ್ ಸಮಸ್ಯೆ (Server and technical issue) ಮತ್ತು ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಅನೇಕರಿಗೆ ತಮ್ಮ ರೇಷನ್ ಕಾರ್ಡ್ ಮಾಹಿತಿ ಸರಿಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗ ಅವರಿಗೆಲ್ಲ ಗುಡ್ ನ್ಯೂಸ್ ಇದೆ.

ಇದೊಂದು ಬಿಟ್ರೆ 80% ಕಾಯಿಲೆ ನಿಮ್ಮ ಹತ್ರ ಬರೋದಿಲ್ಲ ದೀರ್ಘಾಯಸ್ಸು ಹಾಗೂ ಕಾಯಿಲೆ ರಹಿತ ಜೀವನದ ಗುಟ್ಟು ತಿಳಿಸಿದ ಖ್ಯಾತ ಮನೋವೈದ್ಯರು.!

ಅದೇನೆಂದರೆ, ಮತ್ತೆ ಅಕ್ಟೋಬರ್ 6 ರಿಂದ ಅಕ್ಟೋಬರ್ 13 ರವರೆಗೆ ಜಿಲ್ಲಾವಾರು ರೇಷನ್ ಕಾರ್ಡ್ ತಿದ್ದುಪಡಿಗೆ ಜಿಲ್ಲಾವಾರು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಭೇಟಿಕೊಟ್ಟು ಈ ಮೊದಲು ಸರ್ಕಾರ ಸೂಚಿಸಿದ್ದ ತಿದ್ದುಪಡಿಗಳನ್ನಷ್ಟೇ ಮಾಡಿಸಿಕೊಳ್ಳಲು ಅವಕಾಶ ಇದೆ.

ಇದರೊಂದಿಗೆ ಆಹಾರ ಇಲಾಖೆ ವತಿಯಿಂದ ಮತ್ತೊಂದು ಹೊಸ ಅಪ್ಡೇಟ್ ರೇಷನ್ ಕಾರ್ಡ್ ತಿದ್ದುಪಡಿ ಕುರಿತು ಇದೆ. ಅದೇನೆಂದರೆ, ಈವರೆಗೂ ಕೂಡ ಅರ್ಜಿ ಸಲ್ಲಿಸಿದವರ ಪೈಕಿ 90,000 ಅರ್ಜಿಗಳು ತಿರಸ್ಕೃತಗೊಂಡಿವೆ (application reject) ಎನ್ನುವ ಮಾಹಿತಿ ತಿಳಿದು ಬಂದಿದೆ, ಇದಕ್ಕೆ ಕಾರಣ ಸಾಕಷ್ಟಿದೆ.

ಹೋಟೆಲ್ ಆರಂಭಿಸಲು ಸರ್ಕಾರದಿಂದ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.! ನಿಮ್ಮ ಕನಸಿನ‌ ಉದ್ಯಮ ಆರಂಭ ಮಾಡಲು ಸುವರ್ಣಾವಕಾಶ

ಈಗಾಗಲೇ ನಿಗದಿಪಡಿಸಿರುವ ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ ಕಾರ್ಡುಗಳು ಹೊಂದಿದ್ದರೆ ಅಂತಹ ಕಾರ್ಡ್ ಗಳಲ್ಲಿ ಫಲಾನುಭವಿಗಳು ಬಯಸಿದ ತಿದ್ದುಪಡಿ ಮಾಡಲಾಗಿಲ್ಲ ಎನ್ನುವ ಮಾಹಿತಿಯನ್ನು ಮೂಲಗಳು ತಿಳಿಸಿವೆ. ನೀವೇನಾದರೂ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿ (Ration card Status) ಏನಾಗಿದೆ ಎಂದು ಚೆಕ್ ಮಾಡಿಕೊಳ್ಳಬೇಕು ಎಂದು ಬಯಸಿದರೆ ಅದಕ್ಕೂ ಕೂಡ ಅವಕಾಶ ಮಾಡಿಕೊಡಲಾಗಿದೆ.

ಈಗ ನಾವು ಹೇಳುವ ಈ ವಿಧಾನದ ಮೂಲಕ ನೀವು ಆಹಾರ ಇಲಾಖೆಯ ವೆಬ್ಸೈಟ್ ಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

1 ಲಕ್ಷ ಬಡ್ಡಿ ಸಿಗಬೇಕು ಅಂದ್ರೆ ನೀವು ಎಷ್ಟು ಹೂಡಿಕೆ ಮಾಡಬೇಕು ಗೊತ್ತಾ.? ಇಲ್ಲಿದೆ ನೋಡಿ‌ ನಿಮ್ಮ ಹಣವನ್ನು ದುಪ್ಪಟ್ಟು ಮಾಡುವ ವಿಧಾನ

● ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ತೆರಳಿ. https://ahara.kar.nic.in/Home/EServices ಲಿಂಕ್ ಕ್ಲಿಕ್ ಮಾಡುವ ಮೂಲಕ ಹೋಮ್ ಪೇಜ್ ಗೆ ಹೋಗಬಹುದು.
● ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, e-status ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ಕೆಳಗೆ ಕಾಣುವ amendmamendment requests ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ವಲಯವಾರು ಪ್ರತ್ಯೇಕ ಲಿಂಕ್ ಗಳು ಇರುತ್ತವೆ, ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕ್ ಕ್ಲಿಕ್ ಮಾಡಿ.

● ಮುಂದಿನ ಪುಟದಲ್ಲಿ ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ ಎಂಬ ಆಯ್ಕೆಯನ್ನು ಕಾಣುತ್ತೀರಿ. ಕ್ಲಿಕ್ ಮಾಡಿದ ಮೇಲೆ ಮತ್ತೊಂದು ಪುಟ ತೆರೆಯುತ್ತದೆ. ಅದರಲ್ಲಿ RC NO. ಅಥವಾ Acknowledgment NO. ನಮೂದಿಸಲು ಕೇಳಲಾಗಿರುತ್ತದೆ ಅದನ್ನ ಎಂಟ್ರಿ ಮಾಡಿ Go ಆಪ್ಶನ್ ಮೇಲೆ ಕ್ಲಿಕ್ ಮಾಡಿ.
● ನಿಮ್ಮ ಅರ್ಜಿ ಸ್ಥಿತಿ ಬರುತ್ತದೆ, ಅದರಲ್ಲಿ ಆಹಾರ ನಿರೀಕ್ಷಕರಿಂದ ಪ್ರತಿಕ್ರಿಯೆಗೆ ಕಾಯುತ್ತಿದೆ ಎಂದು ಬಂದಿದ್ದರೆ ತಿದ್ದುಪಡಿ ಇನ್ನೂ ಬಾಕಿ ಇದೆ ಎಂದರ್ಥ. ಒಂದು ವೇಳೆ Canceled by System ಎಂದು ಬಂದಿದ್ದರೆ ಅರ್ಜಿ ತಿರಸ್ಕಾರವಾಗಿದೆ ಎಂದರ್ಥ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now