ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕುರಿತು ಅನೇಕ ಮಂದಿಗೆ ಇನ್ನೂ ಸಹ ಗೊಂದಲವಿದೆ. ಯಾಕೆಂದರೆ ಈಗಾಗಲೇ ಸರ್ಕಾರ ಎರಡನೇ ಕಂತಿನ ಹಣ ಬಿಡುಗಡೆ ಮಾಡಲು ಸಿದ್ಧಗೊಂಡಿದ್ದರೂ ಅನೇಕ ಮಹಿಳೆಯರು ಮೊದಲನೇ ಕಂತಿನ ಹಣವನ್ನೇ ಪಡೆಯಲಾಗಿಲ್ಲ. ಹೀಗಾಗಿ ಅವರೆಲ್ಲ ನಿರಾಶೆಗೊಂಡಿದ್ದಾರೆ ಮತ್ತು ಯಾವ ಕಾರಣಕ್ಕಾಗಿ ತಮಗೆ ಈ ರೀತಿ ಸಮಸ್ಯೆಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಲಾಗದೆ ಸಮಸ್ಯೆಯಲ್ಲಿದ್ದಾರೆ.
ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child welfare department) ಅಧಿಕಾರಿಗಳು ಈ ಕುರಿತು ಮಾಹಿತಿಯನ್ನು ಕೂಡ ನೀಡಿದ್ದಾರೆ. ಮೊದಲನೇ ಕಂತಿನ ಹಣ ಪಡೆಯಲಾಗದೆ ಇರುವವರು ಯಾವ ಸಮಸ್ಯೆಯಿಂದ ವಂಚಿತರಾಗಿದ್ದಾರೆ ಮತ್ತು ಏನು ಮಾಡಬೇಕು ಎನ್ನುವುದರ ಕುರಿತು ಕೂಡ ತಿಳಿಸಿದ್ದಾರೆ.
ಆಹಾರ ಇಲಾಖೆಯಿಂದ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಈ ಕೆಳಗಿನ ಸಮಸ್ಯೆಗಳು ಇದ್ದವರು ಗೃಹಲಕ್ಷ್ಮೀ ಯೋಜನೆ ಹಣವನ್ನು ಪಡೆಯಲಾಗುವುಲ್ಲ:-
● ಮಹಿಳೆಯರ ಬ್ಯಾಂಕ್ ಖಾತೆಗಳು ರದ್ದಾಗಿರುವ (account inactive) ಕಾರಣ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ ಹಾಗೂ NPCI ಮ್ಯಾಪಿಂಗ್ (Adhar Seeding & NPCI Maping) ಆಗಿರದ ಕಾರಣ 8 ಲಕ್ಷ ಮಹಿಳೆಯರು ಮೊದಲೇ ಕಂಚಿನ ಹಣದಿಂದ ವಂಚಿತರಾಗಿದ್ದಾರೆ ಅಂಕಿ ಅಂಶಗಳ ಸಮೇತ ಅಧಿಕಾರಿಗಳು ತಿಳಿಸಿದ್ದಾರೆ.
● ಇನ್ನುಳಿದಂತೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿ ಮೂರು ದಾಖಲೆಗಳಲ್ಲೂ (Name mismatch in Documents) ಕೂಡ ಹೆಸರು ಒಂದೇ ರೀತಿ ಇರಬೇಕು. ಹೆಸರಿನಲ್ಲಿ ವ್ಯತ್ಯಾಸಗಳಿದ್ದರೂ ಕೂಡ ಅವರಿಗೆ ಗೃಹಲಕ್ಷ್ಮಿ ಸಹಾಯಧನ ಸೇರಿದಂತೆ ಸರ್ಕಾರಿ ಯೋಜನೆಗಳ ಯಾವುದೇ ಪ್ರಯೋಜನ ಸಿಗುವುದಿಲ್ಲ.
● ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ (e-kyc update) ಆಗಿರದ ಕಾರಣ ಕೂಡ ಅನೇಕರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಸಾಧ್ಯವಾಗಿಲ್ಲ
● ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವುದು ಯಶಸ್ವಿಯಾಗಿರಬೇಕು (Application failed), ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿಲ್ಲ ಎಂದರು ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬರಲು ಸಾಧ್ಯವಾಗುವುದಿಲ್ಲ.
ಪರಿಹಾರ:-
● ಈ ಮೇಲೆ ತಿಳಿಸಿದ ಯಾವುದೇ ಸಮಸ್ಯೆಗಳಾಗಿದ್ದರು ಅದನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿಲ್ಲ ಎಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.
● ಎಲ್ಲಾ ದಾಖಲೆಗಳು ಸರಿ ಇದ್ದು ಕೂಡ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎನ್ನುವ ದೂರು ಇದ್ದರೆ ಅದಕ್ಕೆ ಪರಿಹಾರ ಮಾರ್ಗವನ್ನು ಕೂಡ ಸರ್ಕಾರ ಸೂಚಿಸಿದೆ. ಅದೇನೆಂದರೆ, ನಿಮ್ಮ ಹತ್ತಿರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ಕೊಡಿ. ಅಲ್ಲಿನ CDPO ಅಧಿಕಾರಿಗಳ ಬಳಿ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದಿದ್ದಾರೆ, ಅವರ ಯಾವ ಬ್ಯಾಂಕ್ ಖಾತೆಗೆ ಹಣ ಹೋಗಿದೆ ಒಂದು ವೇಳೆ ಪಡೆಯಲು ಸಾಧ್ಯವಾಗಿಲ್ಲ ಎಂದರೆ ಯಾವ ಸಮಸ್ಯೆಯಿಂದ ಎನ್ನುವ ವಿವರ ಇರುತ್ತದೆ.
● ಮತ್ತೊಂದು ಮುಖ್ಯವಾದ ಸೂಚನೆ ಏನೆಂದರೆ ನೀವು CDPO ಅಧಿಕಾರಿಗಳ ಬಳಿ ಹೋಗುವಾಗ ತಪ್ಪದೆ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಂಜುರಾತಿ ಪತ್ರದ ಜೆರಾಕ್ಸ್ ಸಲ್ಲಿಸಬೇಕು.
● ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣದ ಕುರಿತು ಇರುವ ಅಪ್ಡೇಟ್ ಏನೆಂದರೆ ಅಕ್ಟೋಬರ್ 15ರ ಒಳಗೆ ಮೊದಲನೇ ಕಂತಿನ ಹಣ ಪಡೆದಿರುವ ಎಲ್ಲಾ ಫಲಾನುಭವಿಗಳು ಕೂಡ ಎರಡನೇ ಕಂತಿನ ಹಣವನ್ನು ಪಡೆಯಲಿದ್ದಾರೆ.