14 ಅಕ್ಟೋಬರ್ 2023 ರಂದು ಮಹಾಲಯ ಅಮಾವಾಸ್ಯೆ. ಈ ದಿನ ನಡೆಯಲಿರುವ ಸೂರ್ಯಗ್ರಹಣವು ಈ ವರ್ಷದ ಅತಿ ದೊಡ್ಡ ಸೂರ್ಯಗ್ರಹಣವಾಗಿದೆ. ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆ ದಿನದಂದೇ ಬರುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುವುದರಿಂದ ಭೂಮಿಗೆ ಸೂರ್ಯನ ಬೆಳಕು ಗ್ರಹಣ ಇರುವಷ್ಟು ಕಾಲ ಕತ್ತಲಾಗಿ ನೆರಳಾಗಿ ಕಾಣುತ್ತದೆ.
ಈ ಗ್ರಹಣ ಇದ್ದಷ್ಟು ಕಾಲವನ್ನು ನಕಾರಾತ್ಮಕ ಪ್ರಭಾವ ಬೀರುವ ಕಾಲ ಎಂದು ಹೇಳಲಾಗುತ್ತದೆ. ವೈದಿಕ ಪುರಾಣದ ಪ್ರಕಾರ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ, ಸೂತಕದ ಸಮಯ ಆರಂಭವಾಗುವಾಗಲೇ ಇದಕ್ಕೆ ನಿಷಿದ್ಧವೇರಲಾಗಿರುತ್ತದೆ.
ಗರ್ಭಿಣಿಯರಿಗೆ ಬಹಳ ಎಚ್ಚರಿಕೆಯಿಂದ ಇರಲು ಹೇಳಲಾಗುತ್ತದೆ ಯಾಕೆಂದರೆ ಗ್ರಹಣದ ಪ್ರಭಾವವು ಈ ಭೂಮಿ ಮೇಲಿರುವ ಪ್ರತಿಯೊಂದು ಜೀವರಾಶಿಗೂ ಪ್ರಭಾವ ಬೀರುತ್ತದೆ ಹಾಗೂ ಗರ್ಭದಲ್ಲಿರುವ ಭ್ರೂಣಗಳ ಮೇಲೆ ಸಹ ನೆಗೆಟಿವ್ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಆ ಸಮಯದಲ್ಲಿ ಇವರನ್ನು ಮನೆಯಿಂದ ಹೊರಬರದಂತೆ ಹೇಳಲಾಗುತ್ತದೆ.
ಇನ್ನುಳಿದಂತೆ ಈ ಸಮಯದಲ್ಲಿ ಹಲ್ಲುಜ್ಜುವುದು, ಸ್ನಾನ ಮಾಡುವುದು, ತಲೆ ಬಾಚಿಕೊಳ್ಳುವುದು ಇನ್ನು ಮುಂತಾದ ದೈನಂದಿಕ ಚಟುವಟಿಕೆಗಳನ್ನು ಮಾಡಬಾರದು. ಸಾಧ್ಯವಾದರೆ ಪ್ರತಿಯೊಬ್ಬರು ಮೃತ್ಯುಂಜಯ ಮಂತ್ರ ಅಥವಾ ಪಂಚಾಕ್ಷರಿ ಮಂತ್ರ ಅಥವಾ ಗಾಯಿತ್ರಿ ಮಂತ್ರವನ್ನು ಅಥವಾ ಹನುಮಾನ್ ಚಾಲೀಸವನ್ನು ಪಠಿಸಬಹುದು.
ಇಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ದೇವರ ವಿಗ್ರಹವನ್ನು ಹಾಗೂ ಫೋಟೋಗಳನ್ನು ಸ್ಪರ್ಶಿಸಬಾರದು, ಪೂಜೆ ಮಾಡಬಾರದು. ಅಡುಗೆ ಮಾಡುವುದು, ಊಟ ಮಾಡುವುದು ಇವುಗಳನ್ನು ಕೂಡ ಮಾಡಬಾರದು. ಗ್ರಹಣ ಸಮಯ ಮುಗಿದ ಮೇಲೆ ಮನೆಯನ್ನು ಶುದ್ದಿ ಮಾಡಿ, ತುಳಸಿ ನೀರು ಅಥವಾ ಗೋಮೂತ್ರದಿಂದ ಮನೆ ಪೂರ್ತಿ ಸಿಂಪಡಿಸಿ ದೇವರಕೋಣೆಯನ್ನು ಶುದ್ಧ ಮಾಡಿ ನಂತರ ಪೂಜೆ ಆರಂಭಿಸಬೇಕು.
ಆ ಬಳಿಕವಷ್ಟೇ ಅಡುಗೆ ಮಾಡಿ ಆಹಾರ ಸೇವಿಸಬೇಕು. ಅಡುಗೆ ಮಾಡುವ ಪದಾರ್ಥಗಳಿದ್ದರೆ ಆ ಪದಾರ್ಥಗಳಿಗೆಲ್ಲಾ ತುಳಸಿ ದಳವನ್ನು ಅಥವಾ ದರ್ಬೆಯನ್ನು ಹಾಕಬೇಕು ಎಂದು ಹೇಳಲಾಗಿದೆ. ಈ ಗ್ರಹಣವು ದ್ವಾದಶ ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಕೆಲವು ರಾಶಿಗೆ ಅದೃಷ್ಟ ತಂದರೆ, ಇನ್ನು ಕೆಲವು ರಾಶಿಗಳಿಗೆ ದೋಷವನ್ನುಂಟು ಮಾಡುತ್ತದೆ. ಈ ವರ್ಷದ ಈ ಸೂರ್ಯಗ್ರಹವು 6 ರಾಶಿಗಳಿಗೆ ಯೋಗವನ್ನು ತಂದಿದೆ. ಯಾವ ರಾಶಿ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದರ ವಿವರ ಇಲ್ಲಿದೆ ನೋಡಿ
● ಮೇಷ ರಾಶಿ:- ಈ ಗ್ರಹಣದ ಬಳಿಕ ಮೇಷ ರಾಶಿಯವರಿಗೆ ಅದೃಷ್ಟ ಬದಲಾಗಲಿದೆ. ಇವರಿಗೆ ಗೌರವ, ಸಂಪತ್ತು ಎರಡು ಸಹ ಒಲಿದು ಬರಲಿದೆ. ಶೇರ್ ಮಾರ್ಕೆಟ್ ಗಳಲ್ಲಿ ಹಣ ಹೂಡಿಕೆ ಮಾಡಿದ್ದರೆ ಲಾಭ ಪಡೆಯಲಿದ್ದಾರೆ. ಕಳೆದು ಹೋಗಿರುವ ಹಣ ಸಿಗಬಹುದು ಅಥವಾ ಲಾಟರಿ ಮೂಲಕ ಹಣ ಬರಬಹುದು.
● ಮಿಥುನ ರಾಶಿ:- ಆದಾಯಗಳಲ್ಲಿ ಒಳ್ಳೆಯ ಲಾಭವನ್ನು ಕಾಣುತ್ತಾರೆ. ಎಲ್ಲೇ ಹೂಡಿಕೆ ಮಾಡಿದರೂ ಅದರ ದ್ವಿಗುಣ ಹಣ ಮರಳಿ ಬರುತ್ತದೆ. ವೃತ್ತಿ ಜೀವನದಲ್ಲೂ ಕೂಡ ಒಳ್ಳೆಯ ರೀತಿ ಬದಲಾವಣೆ ಆಗುತ್ತದೆ. ಕುಟುಂಬದ ಜವಾಬ್ದಾರಿ ಹೆಚ್ಚಾದರೂ ಇನ್ನು ಮುಂದೆ ನಿಮ್ಮ ಸಮಯ ಒಳ್ಳೆ ರೀತಿ ಬದಲಾಗಲಿದೆ. ಸಂಬಂಧಗಳ ಬಗ್ಗೆ ಕಾಳಜಿ ಇರಲಿ
● ಧನಸ್ಸು ರಾಶಿ:- ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಲಿದೆ. ಗಂಡ ಹೆಂಡತಿ ನಡುವೆ ಸಮಸ್ಯೆ ಇದ್ದರೆ ಸುಧಾರಿಸುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ, ಹಣಕಾಸಿನ ವಿಷಯದಲ್ಲಿ ಕೂಡ ಉತ್ತಮ ಬದಲಾವಣೆಗಳು ಕಂಡು ಬರಲಿವೆ. ಗುಪ್ತ ಧನ ಸಂಪತ್ತು ಸಿಗಬಹುದು.
● ಕುಂಭ ರಾಶಿ:- ಇವರಿಗೆ ಧನಲಾಭದ ಪ್ರಬಲ ಯೋಗಗಳು ಇವೆ. ವ್ಯಾಪಾರ ವ್ಯವಹಾರಗಳಲ್ಲಿ ಹಣ ತೊಡಗಿಸಿಕೊಂಡರೆ ಲಾಭ ಕಾಣುತ್ತಾರೆ. ಖರ್ಚುಗಳ ಸಮಯಕ್ಕೆ ಸರಿಯಾಗಿ ಹಣ ಒಲಿದು ಬರುತ್ತದೆ. ಹಣಕಾಸಿನ ಪರಿಸ್ಥಿತಿ ಇನ್ನು ಮುಂದೆ ಬಹಳ ಉತ್ತಮವಾಗಿ ಬದಲಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ
● ಮೀನ ರಾಶಿ:- ಬಹಳ ಬೇಗವಾಗಿ ಲಾಭ ಉಂಟಾಗುವಂತಹ ಅವಕಾಶಗಳು ಸಿಗಲಿದೆ. ಸಿರಿ ಸಂಪತ್ತು, ಅಷ್ಟೈಶ್ವರ್ಯಗಳು ಒಲಿದು ಬರಲಿದೆ. ಈ ಕಾರಣದಿಂದಾಗಿ ನೀವು ಬಹಳ ಶಾಂತಿ ಮತ್ತು ಸಂತೋಷದಿಂದ ಇರುತ್ತೀರಿ. ಹಲವಾರು ಶುಭ ಕಾರ್ಯಗಳನ್ನು ಮಾಡುವ ಶಕ್ತಿ ನಿಮಗೆ ಬರುತ್ತದೆ.