ಭಾರತೀಯ ಅಂಚೆ ಇಲಾಖೆಯು ಹತ್ತಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಅಂಚೆ ಇಲಾಖೆ ಕಾರ್ಯ ನಿರ್ವಹಿಸುವುದರಿಂದ ಅಂಚೆ ಇಲಾಖೆ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸರ್ಕಾರವು ಗ್ಯಾರಂಟಿ. ಇತ್ತೀಚಿನ ದಿನಗಳಲ್ಲಿ ಅಚೆ ಕಛೇರಿ ಯೋಜನೆಗಳಿಗೆ ಸರ್ಕಾರವು ಉತ್ತಮವಾದ ಬಡ್ಡಿದರ ನಿಗದಿ ಪಡಿಸಿದೆ.
ಪೋಸ್ಟ್ ಆಫೀಸ್ ನಲ್ಲಿ ಎಲ್ಲಾ ವಯೋಮಾನದವರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹೆಣ್ಣು ಮಕ್ಕಳಿಗಾಗಿ, ಮಹಿಳೆಯರಿಗಾಗಿ, ಹಿರಿಯ ನಾಗರಿಕರಿಗಾಗಿ ಮತ್ತು ಪೆನ್ಷನ್ ಬಗ್ಗೆ ಪ್ಲಾನ್ ಮಾಡುವವರಿಗೆ ಹೀಗೆ ಪ್ರತಿಯೊಬ್ಬರಿಗೂ ಕೂಡ ಅನ್ವಯವಾಗುವಂತಹ ಯೋಜನೆಗಳು ಇವೆ. ಅದರಲ್ಲಿ ರಿಕ್ಯೂರಿಂಗ್ ಡೆಪಾಸಿಟ್ ಎಂದು ಕರೆಯಲಾಗುವ ಕಡಿಮೆ ಕಾಲಾವಧಿಯ ಉಳಿತಾಯ ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಯೋಜನೆ ಹೆಸರು:- ರಿಕ್ಯುರಿಂಗ್ ಡಿಪೋಸಿಟ್ (RD)
● RD ಖಾತೆ ತೆರೆಯಲು ಕೆಲ ದಾಖಲೆಗಳ ಅವಶ್ಯಕತೆ ಇರುತ್ತದೆ.
1. ಆಧಾರ್ ಕಾರ್ಡ್ (POI)
2. ಮತದಾರರ ಗುರುತಿನ ಚೀಟಿ (POA)
3. ಇತ್ತೀಚಿನ ಭಾವಚಿತ್ರ
2. ಮೊಬೈಲ್ ಸಂಖ್ಯೆ
● RD ಖಾತೆ ತೆರೆಯಲು ಯಾವುದೇ ವಯಸ್ಸಿನ ಮಿತಿ ಇಲ್ಲ, 10 ವರ್ಷದ ಒಳಗಿನವರ ಹೆಸರಿನಲ್ಲಿ ಸಹ RD ಖಾತೆ ತೆರೆಯಬಹುದು.
● RD ಖಾತೆ ಮೆಚುರಿಟಿ ಅವಧಿ 5 ವರ್ಷಗಳು, ಒಂದು ವೇಳೆ ನೀವು ಇದನ್ನು ಮುಂದುವರಿಸಲು ಬಯಸಿದರೆ 10 ವರ್ಷಗಳವರೆಗೂ ವಿಸ್ತರಿಸಬಹುದು.
● ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ RD ಖಾತೆ ತೆರೆಯಬಹುದು.
● ಸಿಂಗಲ್ ಅಕೌಂಟ್ ಕರೆಯಬಹುದು ಅಥವಾ ಗಂಡ-ಹೆಂಡತಿ ತಂದೆ-ಮಕ್ಕಳು ಈ ರೀತಿ ಜಾಯಿಂಟ್ ಅಕೌಂಟ್ ಕೂಡ ತೆರೆಯಬಹುದು. ಸಿಂಗಲ್ ಅಕೌಂಟ್ ನ್ನು ಜಾಯಿಂಟ್ ಅಕೌಂಟ್ ಆಗಿ ಕನ್ವರ್ಟ್ ಮಾಡಿಕೊಳ್ಳಬಹುದು.
● ಒಂದು ಪೋಸ್ಟ್ ಆಫೀಸ್ ನಿಂದ ಮತ್ತೊಂದು ಪೋಸ್ಟ್ ಆಫೀಸ್ ಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆ.
● ಕನಿಷ್ಠ 100ರೂ. ಇಂದ ಖಾತೆ ತೆರೆಯಬಹುದು, ಗರಿಷ್ಠ ಯಾವುದೇ ಮಿತಿ ಇಲ್ಲ. ಪ್ರತಿ ತಿಂಗಳೂ ಕೂಡ ನೀವು ಆರಿಸಿಕೊಂಡ ಮೊತ್ತದ ಹಣವನ್ನು 5 ವರ್ಷಗಳವರೆಗೆ ನಿರಂತರವಾಗಿ ಕಟ್ಟುತ್ತಾ ಹೋಗಬೇಕು. ಹಣ ಅಥವಾ ಚೆಕ್ ಮೂಲಕ ಕೂಡ ಪಾವತಿಸಬಹುದು..
● ಆದಾಯ ತೆರಿಗೆ ನೀತಿ 80C ಅಡಿ ಹೂಡಿಕೆ ಮಾಡಿದ ಹಣಕ್ಕೆ ವಿನಾಯಿತಿ ಇರುತ್ತದೆ.
● ಖಾತೆ ತೆರೆಯುವಾಗ ತಪ್ಪದೆ ನಾಮಿನಿಗೆ ಹೆಸರನ್ನು ಸೂಚಿಸಬೇಕು, ಒಂದು ವೇಳೆ ಯೋಜನೆ ಖರೀದಿಸಿದವರು ಸಾ’ವ’ನ್ನ’ಪ್ಪಿ’ದ’ರೆ ಕಾನೂನು ಪ್ರಕಾರ ಸಲ್ಲಬೇಕಾದ ಮೊತ್ತ ನಾಮಿನಿಗೆ ಹೋಗುತ್ತದೆ.
● 1-15 ನೇ ತಾರೀಖಿನ ಒಳಗೆ ಖಾತೆ ತೆರೆದಿದ್ದರೆ ನೀವು 15ರ ಒಳಗೆ ಪ್ರತಿ ತಿಂಗಳು RD ಪಾವತಿಸಬೇಕು. 15-30 ರ ಒಳಗೆ ಖಾತೆ ತೆರೆದಿದ್ದರೆ 30ರ ಒಳಗೆ ಹಣ ಪಾವತಿಸಬೇಕು. ಈ ಸಮಯ ತಪ್ಪಿಸಿದರೆ ನಿಮ್ಮ ಹಣಕ್ಕೆ 1% ಬಡ್ಡಿ ಸಮೇತ ಮುಂದಿನ ತಿಂಗಳು ಕಟ್ಟಬೇಕಾಗುತ್ತದೆ.
● ಯಾವುದೋ ಕಾರಣದಿಂದ ಸತತ 4 ತಿಂಗಳು ಹಣ ಕಟ್ಟದೆ ಇದ್ದಲ್ಲಿ 2 ತಿಂಗಳು ಯೋಜನೆ ಹೋಲ್ಡ್ ಆಗಿರುತ್ತದೆ. ಆ ಸಮಯದಲ್ಲಿಯೂ ಹಣ ಕಟ್ಟದೆ ಹೋದರೆ 6 ತಿಂಗಳ ನಂತರ ಅದು ಉಳಿತಾಯ ಖಾತೆಯಾಗಿ ಬದಲಾಗುತ್ತದೆ.
● RD ಯೋಜನೆ ಬಡ್ಡಿದರ ಪ್ರಸ್ತುತವಾಗಿ 7.2% ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕೃತಗೊಳ್ಳುತ್ತದೆ.
● ಉದಾಹರಣೆಯೊಂದಿಗೆ ಹೇಳುವುದಾದರೆ ನೀವು ಪ್ರತಿ ತಿಂಗಳು 1000 ರೂಪಾಯಿಯನ್ನು RD ಕಟ್ಟುತ್ತಿದ್ದರೆ 5 ವರ್ಷಕ್ಕೆ ನಿಮ್ಮ ಹಣ ರೂ.60,000 ಆಗಿರುತ್ತದೆ. 7.2% ಬಡ್ಡಿದರದ ಅನ್ವಯ ರೂ.12,314 ಹಣ ಲಾಭವಾಗಿ ಸಿಗುತ್ತದೆ. ಒಟ್ಟಾರೆಯಾಗಿ ರೂ.72,314 ಪಡೆಯುತ್ತೀರಿ.
● ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ಅಂಚೆಕಛೇರಿಯನ್ನು ಸಂಪರ್ಕಿಸಿ.