ಹೆಣ್ಣೆತ್ತವರಿಗೆ ಗುಡ್ ನ್ಯೂಸ್ ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸಿಗಲಿದೆ 25 ಲಕ್ಷ ಹಣ

 

WhatsApp Group Join Now
Telegram Group Join Now

ಕೇಂದ್ರ ಸರ್ಕಾರವು (Government) 2015ರಲ್ಲಿ ಹೆಣ್ಣು ಮಕ್ಕಳಿಗಾಗಿ (girl child) ವಿಶೇಷವಾದ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samruddi Yojane) ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವ ಉದ್ದೇಶದಿಂದ ಯೋಜನೆಯನ್ನು ಪರಿಚಯಿಸಲಾಗಿದೆ.

ಭೇಟಿ ಪಡಾವೋ ಭೇಟಿ ಬಚಾವೋ (Beti Bachaao beti Padhao) ದ್ಯೇಯದೊಂದಿಗೆ ಸ್ಥಾಪನೆಯಾದ ಈ ಯೋಜನೆಗೆ ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ಸಣ್ಣ ಉಳಿತಾಯ ರೀತಿ ಯೋಜನೆಯಾಗಿದ್ದು ಹೆಣ್ಣು ಮಕ್ಕಳ ಪೋಷಕರು ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಯೋಜನೆ ಆರಂಭಿಸಿ 15 ಸಣ್ಣದಾದ ಉಳಿತಾಯ (Saving) ಮಾಡಿಕೊಂಡು ಬಂದರೆ.

ಆ ಹೆಣ್ಣು ಮಗುವಿಗೆ 21 ವರ್ಷ ತುಂಬಿದ ಬಳಿಕ ಯೋಜನೆ ನೀವು ಹೂಡಿಕೆ ಮಾಡಿದ ಹಣಕ್ಕೆ ಉತ್ತಮವಾದ ಲಾಭದೊಂದಿಗೆ ನಿಶ್ಚಿತ ಆದಾಯ ಸಿಗುತ್ತದೆ. ಈ ಹಣವನ್ನು ಭವಿಷ್ಯದಲ್ಲಿ ಆಕೆ ವಿದ್ಯಾಭ್ಯಾಸದ ಖರ್ಚಿಗೆ ಅಥವಾ ಮದುವೆ ಖರ್ಚಿಗೆ ವಿನಿಯೋಗಿಸಿಕೊಳ್ಳಬಹುದು. ಯೋಜನೆಯ ಕುರಿತ ಕೆಲಸ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಯೋಚನೆಯ ಹೆಸರು:- ಸುಕನ್ಯಾ ಸಮೃದ್ಧಿ ಯೋಜನೆ (SSY)…

● ಭಾರತೀಯ ನಾಗರಿಕರು ಮಾತ್ರ ಈ ಯೋಜನೆಯನ್ನು ಖರೀದಿಸಬಹುದು
● ಹೆಣ್ಣು ಮಕ್ಕಳ ಪೋಷಕರ ತಮ್ಮ ಮಕ್ಕಳಿಗೆ 10 ವರ್ಷ ತುಂಬುವುದರ ಒಳಗೆ ಅವರ ಹೆಸರಿನಲ್ಲಿ ಯೋಜನೆಯನ್ನು ಆರಂಭಿಸಿರಬೇಕು.
● ವಾರ್ಷಿಕವಾಗಿ 250 ರೂಪಾಯಿ ಹೂಡಿಕೆ ಮಾಡುವುದರಿಂದ ಯೋಜನೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಬಹುದು, ಗರಿಷ್ಠ 1.5ಲಕ್ಷದವರೆಗೆ ಹೂಡಿಕೆ ಮಾಡಬಹುದು.

● ಒಂದು ವೇಳೆ ಡೀಫಾಲ್ಟನ್ ಆಗಿದ್ದರೆ 50 ರೂಪಾಯಿ ದಂಡವನ್ನು ತೆರುವ ಮೂಲಕ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಬಹುದು.

● ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆಯನ್ನು ಖರೀದಿಸಲು ಅವಕಾಶ. ಒಂದು ವೇಳೆ ಎರಡನೇ ಮಗುವಿನ ಜನನದ ಸಮಯದಲ್ಲಿ ಅವಳಿ ಹೆಣ್ಣು ಮಕ್ಕಳು ಆಗಿದ್ದರೆ ಮಾತ್ರ ಮೂರು ಜನ ಹೆಣ್ಣುಮಕ್ಕಳ ಹೆಸರಿನಲ್ಲಿಯೂ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಬಹುದು. ಮೂರು ಜನರಿಗೂ ಕೂಡ ಪ್ರತ್ಯೇಕವಾದ ಖಾತೆ ತೆರೆಯಬೇಕಾಗುತ್ತದೆ.

● ಹೆಣ್ಣು ಮಗುವಿಗೆ 15 ವರ್ಷ ತುಂಬುವವರೆಗೂ ಕೂಡ ನೀವು ಈ ಯೋಜನೆಯಡಿ ಹೂಡಿಕೆ ಮಾಡಬೇಕು. ಮಗಳಿಗೆ 28 ವರ್ಷವಾದಾಗ ನಿಮ್ಮ ಹೂಡಿಕೆ ಮೊತ್ತದ 50% ಅನ್ನು ಆಕೆಯ ಶಿಕ್ಷಣದ ಉದ್ದೇಶದಿಂದ ಅಥವಾ ಮದುವೆ ಉದ್ದೇಶದಿಂದ ಹಿಂಪಡೆಯಬಹುದು 21 ವರ್ಷ ತುಂಬಿದ ಮೇಲೆ ಯೋಜನೆ ಮೆಚ್ಯುರ್ ಆಗುತ್ತದೆ ಆಗ ಪೂರ್ತಿ ಹಣ ಬರುತ್ತದೆ.

● ಒಂದು ವೇಳೆ ದುರಾದೃಷ್ಟಾವಶಾತ್ ಮಗು ಮೃ’ತಪಟ್ಟರೆ ಹೆಣ್ಣು ಮಗುವಿನ ಪೋಷಕರಿಗೆ ಉಳಿತಾಯದ ಹಣ ಹೋಗುತ್ತದೆ.
● ಪ್ರಸ್ತುತವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಡಿ 8% ಬಡ್ಡಿದರ ನಿಗದಿಯಾಗಿದೆ. ಪ್ರತಿ ವರ್ಷವೂ ಕೂಡ ಇದು ಪರಿಷ್ಕೃತಗೊಳ್ಳುತ್ತಿರುತ್ತದೆ ಸದ್ಯಕ್ಕೆ ದೇಶದಲ್ಲಿ ಅತಿ ಹೆಚ್ಚು ಬಡ್ಡಿದರ ಹೊಂದಿರುವ ಉಳಿತಾಯ ಯೋಜನೆ ಇದೆ ಆಗಿದೆ.

● ಉದಾಹರಣೆಯೊಂದಿಗೆ ಯೋಜನೆಯನ್ನು ವಿವರಿಸುವುದಾದರೆ ನಿಮ್ಮ ಹೆಣ್ಣು ಮಗುವಿಗೆ ಈಗ 5 ವರ್ಷ ವಯಸ್ಸಾಗಿದೆ ಎಂದಿಟ್ಟುಕೊಳ್ಳೋಣ, ನೀವು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆ ಮಾಡಲು ಬಯಸಿದರೆ ಯೋಜನೆ ಮೆಚ್ಯುರಿಟಿ ವೇಳೆ 25 ಲಕ್ಷ ಹಣ ನಿಮ್ಮ ಮಗುವಿಗೆ ಸಿಗಬೇಕು ಎಂದಿದ್ದರೆ ನೀವು ವಾರ್ಷಿಕವಾಗಿ ರೂ.55,700 ಹಣವನ್ನು ಹೂಡಿಕೆ ಮಾಡಬೇಕು. ಮಾಸಿಕವಾಗಿ ಪಾವತಿ ಮಾಡುತ್ತಿದ್ದರೆ

ರೂ.4361 ಪಾವತಿ ಮಾಡಬೇಕು.
● 80C ನಡಿ ತೆರಿಗೆ ವಿನಾಯಿತಿ ಕೂಡ ಇದೆ.
● ಅಂಚೆ ಕಚೇರಿ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೀವು ಈ ಯೋಜನೆ ಮಾಡಿಸಬಹುದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಗೆ ಭೇಟಿ ಕೊಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now