ಕರ್ನಾಟಕ ರಾಜ್ಯ ಸರ್ಕಾರದ ( Karnataka Government) ಘೋಷಿಸಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಗೃಹಲಕ್ಷ್ಮೀ ಯೋಜನೆಯು (Gruhalakshmi Scheme) ಮಹಿಳೆಯರ ಪಾಲಿಗೆ ಅತಿ ಮಹತ್ವದ್ದಾಗಿದೆ.
ಈ ಯೋಜನೆ ಮೂಲಕ ಪಡಿತರ ಚೀಟಿ (ration card) ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರು ಮನೆ ನಿರ್ವಹಣೆಗಾಗಿ ಪ್ರತಿ ತಿಂಗಳು 2000 ಸಹಾಯಧನವನ್ನು ನೇರವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ.
ಆಗಸ್ಟ್ 30ನೇ ತಾರೀಕಿನಂದು ರಾಜ್ಯ ಸರ್ಕಾರವು ಈ ಯೋಜನೆಯ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಆವರೆಗೂ 1.10 ಕೋಟಿ ಮಹಿಳೆಯರು ಯೋಜನೆಗೆ ನೋಂದಾಯಿಸಿಕೊಂಡಿದ್ದರಾದರೂ 85 ಲಕ್ಷ ಮಹಿಳೆಯರ ಖಾತೆಗೆ ಮಾತ್ರ ಮೊದಲನೇ ಕಂತಿನ ಹಣವು ವರ್ಗಾವಣೆಯಾಗಿದೆ.
ದಾಖಲೆಗಳಲ್ಲಿ ಹೊಂದಾಣಿಕೆಯಾಗದ ಮತ್ತು ಬ್ಯಾಂಕ್ ಖಾತೆಗಳು ಸಮಸ್ಯೆಯಾಗಿರುವ ಕಾರಣ ಇನ್ನುಳಿದ ಫಲಾನುಭವಿಗಳು ಮೊದಲನೇ ಕಂತಿನ ಹಣದಿಂದ ವಂಚಿತರಾಗಿದ್ದಾರೆ. ಆದರೀಗ ಇದನ್ನೆಲ್ಲ ತಿದ್ದುಪಡಿ (document correction) ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು ಈಗ ಎಲ್ಲರೂ ಎರಡನೇ ಕಂತಿನ ಹಣವನ್ನು ನಿರೀಕ್ಷಿಸುತ್ತಿದ್ದಾರೆ.
ಅಕ್ಟೋಬರ್ ತಿಂಗಳ ಅಂತ್ಯದಲ್ಲಿದ್ದರೂ ಎರಡನೇ ಕಂತು ಅಂದರೆ ಸೆಪ್ಟೆಂಬರ್ ತಿಂಗಳ ಹಣ ವರ್ಗಾವಣೆಯಾಗಿಲ್ಲ ಎನ್ನುವುದು ಅನೇಕರ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಈ ಮೇಲೆ ತಿಳಿಸಿದಂತೆ ಮಹಿಳೆಯರಿಗೆ ಮೊದಲನೇ ಕಂತಿನ ಹಣ ಪಡೆಯಲು ಸಮಸ್ಯೆಯಾಗಿದ್ದ ಕಾರಣ ಅದನ್ನು ತಿದ್ದುಪಡಿಸಿಕೊಳ್ಳಲು ಕಾಲಾಕಾಶ ನೀಡಿ ಎರಡನೇ ಕಂತಿನ ಹಣವನ್ನು ತಡ ಮಾಡಲಾಗಿತ್ತು.
ಈಗ ಅಂತಿಮವಾಗಿ ಅಕ್ಟೋಬರ್ 17ರಿಂದಲೇ ಎರಡನೇ ಕಂತಿನ ಹಣ (September month amount) ವರ್ಗಾವಣೆಯಾಗುತ್ತಿದೆ. ವಿಜಯಪುರ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಗದಗ, ಧಾರವಾಡ, ಹಾಸನ, ಕಾವೇರಿ, ಮಂಡ್ಯ, ಕೊಡಗು, ಮೈಸೂರು, ಉಡುಪಿ ಬೆಳಗಾವಿ, ಬಾಗಲಕೋಟೆ ಮತ್ತು ಚಾಮರಾಜನಗರ ಜಿಲ್ಲೆಯವರಿಗೆ ಎರಡನೇ ಕಂತಿನ ಹಣವು ಬಿಡುಗಡೆಯಾಗಿದೆ.
ಇನ್ನುಳಿದ ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೆ ಅಕ್ಟೋಬರ್ 31ರ ಒಳಗೆ ಎರಡನೇ ಕಂತಿನ ಹಣ ಸಂಪೂರ್ಣವಾಗಿ ವರ್ಗಾವಣೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ. ಸರ್ವರ್ ಸಮಸ್ಯೆಯಿಂದ ಅನೇಕರ ಮೊಬೈಲ್ ಗಳಿಗೆ ಈ ಸಂಬಂಧಿತವಾಗಿ SMS ಸಂದೇಶ ಬರದೇ ಇರಬಹುದು.
ಆದರೆ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ತಮ್ಮ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎನ್ನುವುದನ್ನು ದೃಢೀಕರಿಸಿಕೊಳ್ಳಿ. ಮೊದಲನೇ ಕಂತಿನ ಹಣ ಪಡೆದಿದ್ದ ಪ್ರತಿಯೊಬ್ಬರಿಗೂ ಎರಡನೇ ಕಂತಿನ ಹಣವು ಕೂಡ ಅದೇ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದವರಿಗೆ ಪ್ರೈಮರಿ ಬ್ಯಾಂಕ್ ಅಕೌಂಟ್ ಗೆ (primary bank account) ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಲಿದೆ.
ನಿಮಗೆ ಇನ್ನು ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:-
● ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ (e-kyc) ಆಗದೆ ಇದ್ದರೆ ರೇಷನ್ ಕಾರ್ಡ್ ರದ್ದಾಗಿದ್ದರೆ ಮತ್ತು ಮಹಿಳೆಯ ಹೆಸರು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಇರದೇ ಇದ್ದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ, ಇದನ್ನು ತಿದ್ದುಪಡಿ ಮಾಡಿಸಿ.
● ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗದೆ ಇದ್ದರೆ ಮತ್ತು ಬ್ಯಾಂಕ್ ಖಾತೆಯು ಆಕ್ಟಿವ್ ಆಗಿರದೆ ಇದ್ದರೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಯಾಗುವುದಿಲ್ಲ
● ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಈ ಮೂರರಲ್ಲೂ ಕೂಡ ಮಹಿಳೆಯ ಹೆಸರು ಒಂದೇ ರೀತಿಯಲ್ಲಿ ಇರಬೇಕು, ದಾಖಲೆಗಳಲ್ಲಿ ವ್ಯತ್ಯಾಸವಾಗಿದ್ದರೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ. ಎಲ್ಲಾ ದಾಖಲೆಗಳಲ್ಲೂ ಒಂದೇ ಹೆಸರಿರುವಂತೆ ತಿದ್ದುಪಡಿ ಮಾಡಿಸಿ.
● ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಯಶಸ್ವಿ ಆಗಿದೆಯೇ ಇಲ್ಲವೇ ಎನ್ನುವುದನ್ನು ಮತ್ತೊಮ್ಮೆ ದೃಢಪಡಿಸಿಕೊಳ್ಳಿ.
● ಈ ಎಲ್ಲಾ ಮಾಹಿತಿಯು ಸರಿಯಾಗಿದ್ದು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದರೆ ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ಕೊಟ್ಟು CDPO ಅಧಿಕಾರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಗೃಹಲಕ್ಷ್ಮಿ ಅಕ್ನಾಲಜಿಮೆಂಟ್ ಪ್ರತಿ ಸಲ್ಲಿಸಿ ಅವರು ಸಮಸ್ಯೆ ಹರಿಸುತ್ತಾರೆ.