ದೇಶದ ಎಲ್ಲಾ ಹಣಕಾಸು ಸಂಸ್ಥೆಗಳು ಕೂಡ RBI ಒಡೆತನಕ್ಕೆ ಒಳಪಟ್ಟಿರುತ್ತದೆ, ಹಾಗಾಗಿ ರಿಸರ್ವ್ ಬ್ಯಾಂಕ್ ಅನ್ನು ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಯುತ್ತಾರೆ. ದೇಶದ ಎಲ್ಲಾ ಬ್ಯಾಂಕುಗಳಿಗೂ ಕೂಡ ನೀತಿ ನಿಯಮಗಳನ್ನು ಹೇರಿ ಗ್ರಾಹಕರಿಂದ ಹಣಕಾಸು ಸಂಸ್ಥೆಗಳಿಗೆ, ಹಣಕಾಸು ಸಂಸ್ಥೆಗಳಿಂದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ RBI ಮಧ್ಯಸ್ಥಿಕೆ ವಹಿಸುತ್ತದೆ.
ಗ್ರಾಹಕರ ಹಿತದೃಷ್ಟಿಯ ಉದ್ದೇಶದಿಂದಾಗಿ ಹಣಕಾಸು ಸಂಸ್ಥೆಗಳಿಗೆ ಕೆಲ ನಿಯಮಗಳನ್ನು ಕೂಡ ಹೇರುತ್ತದೆ. ಈ ನಿಯಮಗಳನ್ನು ಪೂರೈಸದ ಬ್ಯಾಂಕುಗಳು ಅಥವಾ ಇನ್ಯಾವುದೇ ಕಂಪನಿಗಳಾಗಲಿ RBI ವಿಧಿಸುವ ದಂಡ ಕಟ್ಟಬೇಕಾಗುತ್ತದೆ ಅಥವಾ ಮುಂದಿನ ಹಂತಕ್ಕೆ ಹೋದಾಗ ರದ್ದಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಕೂಡ ಈ ರೀತಿ RBI ಅನೇಕ ಬ್ಯಾಂಕ್ ಗಳ ಲೈಸೆನ್ಸ್ ಗಳನ್ನು ಕಸಿದುಕೊಂಡಿತ್ತು.
ಈಗ ಮುಂದೆವರರೆದು ದೇಶದ ಕೆಲವು ಸಹಕಾರಿ ವಲಯದ ಬ್ಯಾಂಕ್ ಗಳಿಗೂ ಕೂಡ ಚಾಟಿ ಬೀಸಿದೆ RBI ನಿಯಮಗಳನ್ನು ಮುರಿದಿರುವ ಸಹಕಾರಿ ಬ್ಯಾಂಕ್ ಗಳ ಲೈಸೆನ್ಸ್ ಕಸಿದುಕೊಂಡಿದೆ ಮತ್ತು ಇನ್ನು ಕೆಲವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳ ಶಾಖೆಗಳನ್ನು ಮೆಚ್ಚಲು ಆದೇಶ ಹೊರಡಿಸಿದೆ. ಸಹಕಾರಿ ಬ್ಯಾಂಕ್ ಗಳು ತಮ್ಮ ಲಾಭದಾಯಕವಲ್ಲದ ಶಾಖೆಗಳನ್ನು ತಮ್ಮ ಪೂರ್ವಾನುಮತಿ ಇಲ್ಲದೆ ಮುಚ್ಚಬಹುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಸೂಕ್ತ ಕಾರಣಗಳನ್ನು ನೀಡಿ ಲಾಭದಾಯಕವಲ್ಲದ ಶಾಖೆಗಳನ್ನು ಮುಚ್ಚುವ ನಿರ್ಧಾರವನ್ನು ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಮಂಡಳಿಯ ಸಭೆಯು ನಿರ್ಧರಿಸಬಹುದು. ಅದರೆ ನಿರ್ಧಾರದ ಕಾರಣವನ್ನು ತಪ್ಪದೇ ದಾಖಲಿಸಬೇಕು ಎಂದು RBI ಆದೇಶ ಹೊರಡಿಸಿದೆ. RBI ನಿಂದ ಈ ರೀತಿ ನೋಟಿಸ್ ಪಡೆದಿರುವ ಬ್ಯಾಂಕ್ ಗಳ ಲಿಸ್ಟ್ ಹಾಗೂ ಅವುಗಳ ಕಾರಣ ಇಲ್ಲಿದೆ. ನೀವು ಕೂಡ ಈ ಬ್ಯಾಂಕ್ ಗಳ ಖಾತೆದಾರರಾಗಿರಬಹುದು ಚೆಕ್ ಮಾಡಿಕೊಳ್ಳಿ.
* UMA Co-operative Bank Limited:-
ಪ್ರಾಥಮಿಕ ಸಹಕಾರಿ ಬ್ಯಾಂಕ್ಗಳು ಇತರ ಬ್ಯಾಂಕ್ ಗಳೊಂದಿಗೆ ಠೇವಣಿ ಇರಿಸುವ ಕುರಿತು RBIಹೊರಡಿಸಿದದ್ದ ನಿಯಮವನ್ನು ಉಲ್ಲಂಘಿಸಿರುವ ಕಾರಣ Uma Co-operative Bank Limited ಗೆ RBI ರೂ. 7 ಲಕ್ಷ ದಂಡ ವಿಧಿಸಿದೆ.
* Pesent people’s Co-operative Bank Limited:- 2016 ರಲ್ಲಿ KYC ಮಾರ್ಗಸೂಚಗಳ ಕುರಿತು RBI ನೀಡಿದ ಸೂಚನೆಗಳನ್ನು ಪಾಲಿಸದೇ ಇರುವ ಕಾರಣದಿಂದ ರಿಸರ್ವ್ ಬ್ಯಾಂಕ್ ಪೆಸೆಂಟ್ ಪೀಪಲ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ರೂ. 2 ಲಕ್ಷ ದಂಡವನ್ನು ವಿಧಿಸಿದೆ.
* Ijwal Mizoram Co-operative Apex Bank Limited:- ರಾಜ್ಯ ಸಹಕಾರಿ ಬ್ಯಾಂಕ್ಗಳಿಗೆಅನ್ವಯವಾಗುವವಂತೆ ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ RBI ನೀಡಿರುವ ನಿರ್ದೇಶನಗಳನ್ನು ಪಾಲಿಸದೇ ಇರುವುದಕ್ಕಾಗಿ ಐಜ್ವಾಲ್ ನ ಮಿಜೋರಾಂ ಕೋ-ಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ಗೆ ರೂ. 2 ಲಕ್ಷ ದಂಡ ವಿಧಿಸಿದೆ.
* Birbum Central Co-operative Bank limited:- ಹೌಸಿಂಗ್ ಫೈನಾನ್ಸ್ ನಿಯಮವನ್ನು ಉಲ್ಲಂಘಿಸಿದ ಕಾರಣ ಬಿರ್ಭೂಮ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಗೆ RBI ರೂ. 1.10 ಲಕ್ಷ ದಂಡ ವಿಧಿಸಲಾಗಿದೆ.