ಬ್ಯಾಂಕ್ ಅಕೌಂಟ್ (Bank account) ಎನ್ನುವುದು ಎಷ್ಟು ಮುಖ್ಯ ಎಂದರೆ ಒಂದು ರೈತನ ಕುಟುಂಬವೇ ಆಗಿದ್ದರೂ ಆ ಕುಟುಂಬದಲ್ಲಿ ಐದು ಜನ ಸದಸ್ಯರಿದ್ದಾರೆ ಎಂದುಕೊಂಡರೆ ರೈತನಿಗೆ ಸರ್ಕಾರದಿಂದ ಸಿಗುವ ಕಿಸಾನ್ ಸಮ್ಮಾನ್ ನಿಧಿ ಅಥವಾ ಇನ್ಯಾವುದೇ ಅನುದಾನ ಪಡೆಯಬೇಕು ಎಂದರೆ ಬ್ಯಾಂಕ್ ಖಾತೆ ಇರಬೇಕು, ಆತನ ತಂದೆ ತಾಯಿಯರಿಗೆ ವೃದ್ಯಾಪ್ಯ ವೇತನವು ಕೂಡ DBT ಮೂಲಕ ಅವರ ಬ್ಯಾಂಕ್ ಖಾತೆಗಳಿಗ ಜಮೆ ಆಗುತ್ತದೆ.
ಸದ್ಯಕ್ಕೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣವನ್ನು ರೈತನ ಪತ್ನಿ ಪಡೆಯಲು ಆಕೆಗೂ ಅಕೌಂಟ್ ಇರಬೇಕು, ರೈತನ ಮಗ ಶಾಲೆಗಳಲ್ಲಿ ಸ್ಕಾಲರ್ಶಿಪ್ ಪಡೆಯುವುದಾದರೆ ಆ ಮಗುವಿನ ಹೆಸರಿನಲ್ಲಿ ಕೂಡ ಬ್ಯಾಂಕ್ ಖಾತೆ ಇರಬೇಕು ಹೀಗೆ ಬ್ಯಾಂಕ್ ಖಾತೆ ಅನ್ನೋದು ನಮ್ಮ ದಿನನಿತ್ಯ ಜೀವನದ ಭಾಗವಾಗದೆ.
ಮತ್ತೊಂದು ವಿಚಾರವೇನೆಂದರೆ ಭಾರತವು ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಡುತ್ತಿದೆ ಈ ನಿಟ್ಟಿನಲ್ಲಿ ಹಣಕಾಸಿನ ಕ್ಷೇತ್ರದಲ್ಲೂ ಕ್ರಾಂತಿ ನಡೆದಿದ್ದು ಲೆಸ್ ಕ್ಯಾಶ್ ಧ್ಯೇಯದಡಿ ಆನ್ಲೈನ್ ಪೇಮೆಂಟ್ ಮಾಡುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಊರಿನ ಒಬ್ಬ ಸಣ್ಣ ತರಕಾರಿ ವ್ಯಾಪಾರದಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಯವರಿಗೂ ಕೂಡ ಎಲ್ಲರೂ ತಮ್ಮ ಆರ್ಥಿಕ ವಹಿವಾಟುಗಳನ್ನು ಆನ್ಲೈನ್ ಮೂಲಕ ಮಾಡುತ್ತಿದ್ದಾರೆ.
ಈ ರೀತಿ UPI ಆಧಾರಿತ ಟ್ರಾನ್ಸ್ಯಾಕ್ಷನ್ ಗಳಿಗೂ ಕೂಡ ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಅದಕ್ಕೆ ATM ಕಾರ್ಡ್ ಪಡೆದಿರಬೇಕು. ಪ್ರತಿಯೊಬ್ಬರಿಗೂಬ್ಯಾಂಕ್ ಖಾತೆ ತೆರೆದಾಗ ATM ಚೆಕ್ ಬುಕ್ ಇತ್ಯಾದಿಗಳನ್ನು ಬ್ಯಾಂಕ್ ನೀಡುತ್ತದೆ.
ATM ಕಾರ್ಡ್ ಗಳ ಮೂಲಕ ನಾವು ATM ಮಿಷನ್ ಗಳಿಗೆ ಹೋಗಿ ಕ್ಯಾಶ್ ವಿತ್ ಡ್ರಾ ಮಾಡಬಹುದು ಅಥವಾ ಆನ್ಲೈನ್ ವಹಿವಾಟು ನಡೆಸುವುದಾದರೆ UPI ಬೆಂಬಲಿತ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಕೂಡ ವಹಿಮಾಟು ಮಾಡಬಹುದು. ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ನಾವು ಆನ್ಲೈನ್ ಪೇಮೆಂಟ್ ಮಾಡುವುದಕ್ಕೆ ಆಗದೆ ಹಣವನ್ನು ವಿತ್ ಡ್ರಾ ಮಾಡಬೇಕಾದ ಪರಿಸ್ಥಿತಿ ಬರುತ್ತದೆ.
ಅಂತಹ ಸಮಯದಲ್ಲಿ ATM ಕಳೆದು ಹೋಗಿದ್ದರೆ ಅಥವಾ ATM ಗಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದರೆ ಸಮಸ್ಯೆಗಳಾಗುತ್ತವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ SBI ಮಹತ್ವದ ಹೆಜ್ಜೆ ಇಟ್ಟಿದ.ೆ ತನ್ನ ಗ್ರಾಹಕರಿಗೆ ATM ಕಾರ್ಡ್ ಬದಲಾಗಿ ಬದಲಿ ವ್ಯವಸ್ಥೆ ಮಾಡಿಕೊಟ್ಟು ಗ್ರಾಹಕ ಸ್ನೇಹಿ ಎನಿಸಿದೆ.
SBI YONO ಆಪ್ ಬಗ್ಗೆ ಬಹುತೇಕರಿಗೆ ತಿಳಿದಿರುತ್ತದೆ. SBI ಬ್ಯಾಂಕಿಗೆ ಹೋಗಿ ಮಾಡಬೇಕಾದ ಅನೇಕ ಕೆಲಸಗಳನ್ನು ಆನ್ಲೈನ್ ಮೂಲಕವೇ ಈ YONO ಆಪ್ ಮೂಲಕ ಮನೆಯಲ್ಲಿ ಕುಳಿತು ಇವನ ಆಪ್ ಮೂಲಕ ಮಾಡಬಹುದು. ಇನ್ನು ಮುಂದೆ ಇದೇ ಆಪ್ ಬಳಸಿ ATM ಕಾರ್ಡ್ ಗಳು ಇಲ್ಲದ ಸಂದರ್ಭದಲ್ಲಿ ಹಣವನ್ನು ವಿಥ್ ಡ್ರಮ್ ಮಾಡಬಹುದು. ಇದಕ್ಕೆSBI ಬ್ಯಾಂಕ್ ಅವಕಾಶ ಮಾಡಿಕೊಟ್ಟಿದೆ.YONO ಅಪ್ಲಿಕೇಶನ್ ಸ್ಟಿಕ್ಕರ್ ಆಂಟಿಸಿರುವ ಯಾವುದೇ ATM ನಲ್ಲಿ YONO ಆಪ್ ಮೂಲಕ ಹಣ ಡ್ರಾ ಮಾಡಬಹುದು.
* ಮೊದಲಿಗೆ YONO App ಡೌನ್ಲೋಡ್ ಮಾಡಿಕೊಳ್ಳಿ.
* YONO ಅಪ್ಲಿಕೇಶನ್ ತೆರೆದು, ಅದರಲ್ಲಿ cash withdraw ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
* ನಂತರ ನೀವು ಪಡೆದುಕೊಳ್ಳಲು ಮೊತ್ತವನ್ನು ನಮೂದಿಸಿ, ಎಟಿಎಂ ಯಾವುದು ಎಂಬುದನ್ನು ಆಯ್ಕೆ ಮಾಡಿ.
* ನಿಮಗೆ ಒಂದು QR code ಕಾಣಿಸುತ್ತದೆ. ಅದನ್ನು ATM ಮಿಷನ್ ನಲ್ಲಿ ಸ್ಕ್ಯಾನ್ ಮಾಡಿ.
* UID ಮತ್ತು ಪಿನ್ ನಂಬರ್ ಅನ್ನು ನಮೂದಿಸಿ ಹಣ ಪಡೆಯಿರಿ.