ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಲಾಂಚ್ ಆಗಿ ಈಗಾಗಲೇ ಫಲಾನುಭವಿಗಳು ಮೂರನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (KWCWD) ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದ 1.08 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಹಣ ಪಡೆಯಲು ಅರ್ಹರಾಗಿದ್ದಾರೆ.
ಆದರೆ ಈವರೆಗೂ ಸಂಪೂರ್ಣವಾಗಿ ಎಲ್ಲಾ ಮಹಿಳೆಯರಿಗೂ ಕೂಡ ಹಣ ತಲುಪಿಲ್ಲ. 70%ರಿಂದ 80%ರಷ್ಟು ಮಹಿಳೆಯರು ಹಣ ಪಡೆದಿದ್ದರೆ ಇನ್ನುಳಿದ ಮಹಿಳೆಯರು ತಮ್ಮ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಆಗದ ಕಾರಣ, ಬ್ಯಾಂಕ್ ಖಾತೆ ಸ್ಥಗಿತವಾಗಿರುವ (Account inactive) ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್, NPCI ಮ್ಯಾಪಿಂಗ್ ಆಗಿರದ ಕಾರಣ ಮತ್ತು ದಾಖಲೆಗಳಲ್ಲಿ ಹೆಸರು ಮತ್ತಿತ್ತರ ದಾಖಲೆ ವ್ಯತ್ಯಾಸವಾಗಿರುವ (Mismatch) ಕಾರಣ ಮತ್ತು ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಷನ್ ಪ್ರಕ್ರಿಯೆ ಯಶಸ್ವಿಯಾಗದ ಕಾರಣ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ.
ಈ ಮೇಲೆ ತಿಳಿಸಿದ ಕಾರಣಗಳಿಂದ ಮೊದಲನೇ ಕಂತಿನ ಹಣ ಪಡೆಯಲಾಗದ ಮಹಿಳೆಯರು ಎರಡನೇ ತಿಂಗಳಿನಲ್ಲಿ ಈ ಸಮಸ್ಯೆಗಳನ್ನು ತಿದ್ದುಪಡಿ ( Proofs Corrections) ಮಾಡಿಸಿಕೊಂಡ ಕಾರಣ ಎರಡನೇ ಕಂತಿನ ಸಮಯದಲ್ಲಿ ಎರಡು ತಿಂಗಳ ಹಣವನ್ನು ಪಡೆದಿರುವ ಉದಾಹರಣೆಗಳು ಕೂಡ ಇವೆ. ಆದರೆ ಸಂಪೂರ್ಣವಾಗಿ ಎಲ್ಲಾ ಮಹಿಳೆಯರಿಗೂ ಹಣ ತಲುಪಿಲ್ಲ.
ಆರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಟ್ಟ ಮಾಹಿತಿ ಪ್ರಕಾರ 7 ರಿಂದ 8 ಲಕ್ಷ ಮಹಿಳೆಯರಿಗೆ ಅವರ ಬ್ಯಾಂಕ್ ಖಾತೆ ಸಮಸ್ಯೆಯಿಂದಲೇ ಹಣ ತುಂಬಿಸಲಾಗಿಲ್ಲವಂತೆ. ಆದರೆ ಅವರಿಗೆಲ್ಲಾ ಈಗ ಮತ್ತೊಂದು ಗುಡ್ ನ್ಯೂಸ್ ಇದೆ, ನೀವು ಈ ಸಮಸ್ಯೆ ಸರಿಪಡಿಸಿಕೊಂಡರೆ ಎರಡನೇ ಕಂತಿನ ಹಣ ಪಡೆಯಲಾಗದೆ ತೊಂದರೆ ಪಡುತ್ತಿದ್ದರೆ ಈಗ ನಾವು ಹೇಳುವ ಈ ಕೆಲಸ ಮಾಡಿದರೆ ಸಾಕು ಇದೇ ತಿಂಗಳಿಂದ ನಿಮಗೆ ಹಣ ಬರಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮೊದಲನೇ ಕಂತನ ಹಣ ಬಿಡುಗಡೆಯಾದ ಸಮಯದಲ್ಲಿಯೇ ಈ ರೀತಿ ಮಹಿಳೆಯರು ಬ್ಯಾಂಕ್ ಖಾತೆಗಳು ಸಮಸ್ಯೆ ಆಗಿವೆ ಅವರು ತಮ್ಮ ಬ್ಯಾಂಕ್ ಖಾತೆಗಳನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳಬೇಕು ಮತ್ತು ಅವರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿದ್ದರೆ ಮಾತ್ರ DBT ಮೂಲಕ ಹಣ ವರ್ಗಾವಣೆ ಆಗಲು ಸಾಧ್ಯವಾಗುತ್ತದೆ.
ಈ ಹಣ ಪಡೆಯಲು ಸಮಸ್ಯೆ ಆಗಿರುವರು ಕೂಡಲೇ ಇದನ್ನು ಬ್ಯಾಂಕ್ ಶಾಖೆಗಳಿಗೆ ಭೇಟಿಕೊಟ್ಟು ಸರಿಪಡಿಸಿಕೊಳ್ಳಿ ಎಂದಿದ್ದ ಸೂಚನೆ ಪ್ರಕಾರ ಸರಿಪಡಿಸಿಕೊಂಡಿದವ್ದರು ಎರಡನೇ ಕಂತಿನಲ್ಲಿ ಒಟ್ಟಿಗೆ ಎರಡು ತಿಂಗಳ ಹಣ ಪಡೆದಿದ್ದರು. ಈಗಲೂ ಹಣ ಪಡೆಯಲಾಗದವರಿಗೆ ಮತ್ತೊಂದು ಪರಿಹಾರ ಸೂಚಿಸಲಾಗಿದೆ.
ನೀವು ನಿಮ್ಮ ಗ್ರಾಮದ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ (Post office saving account ) ತೆರೆದು ಆ ಬ್ಯಾಂಕ್ ಖಾತೆಯನ್ನೇ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಿ ಆಗ ಖಂಡಿತವಾಗಿಯೂ ನಿಮಗೆ ಈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರಲಿದೆ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವ ಮಹಿಳೆಯರಲ್ಲಿ ಅವರ ಅಂಚೆ ಕಚೇರಿ ಬ್ಯಾಂಕ್ ಖಾತೆಗೆ ಹಣ ಹೋಗುತ್ತಿದೆ. ಹಾಗಾಗಿ ನೀವು ಕೂಡ ನಿಮ್ಮ ಅಂಚೆ ಕಚೇರಿಗಳಲ್ಲಿ ಅಕೌಂಟ್ ಓಪನ್ ಮಾಡಿಸಿದರೆ ಖಂಡಿತವಾಗಿಯೂ ನಿಮಗೆ ಹಣ ಬರುತ್ತದೆ. ಎಷ್ಟೋ ಮಹಿಳೆಯರು ಹಲವು ವರ್ಷಗಳ ಹಿಂದೆ ಖಾತೆ ತೆರೆದು ಅದರ ದಾಖಲೆಗಳು ಇಲ್ಲದಂತೆ ಕಳೆದುಕೊಂಡಿದ್ದಾರೆ.
ಈಗ ಅವರ ಗೃಹಲಕ್ಮಿ ಹಣವು ಆ ಖಾತೆಗಳಿಗೆ ಹೋಗುತ್ತಿರಬಹುದು ಆ ಖಾತೆಯ ದಾಖಲೆಗಳು ಇಲ್ಲದೆ ಹಣವನ್ನು ಪಡೆಯಲಾಗದೆ ಪರದಾಡುತ್ತಿರು ಈ ರೀತಿ ಅಂಚೆ ಕಚೇರಿಯಿಂದ ಖಾತೆಗಳನ್ನು ಓಪನ್ ಮಾಡಿದಾಗ ಸಮಸ್ಯೆ ಪರಿಹಾರ ಆಗುತ್ತದೆ. ಇದು ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಉಪಯೋಗವಾಗ ಮಾಹಿತಿ ಆಗಿದ್ದು ತಪ್ಪದೇ ಇದನ್ನು ಶೇರ್ ಮಾಡಿ