ರಾಮಾಯಣ ಕಾಲದಲ್ಲಿ ಒಮ್ಮೆ ಲಕ್ಷ್ಮಣನು ಪ್ರಾಣಪಾಯದಲ್ಲಿ ಇದ್ದಾಗ ಭಗವಾನ್ ಆಂಜನೇಯರು ಲಕ್ಷ್ಮಣನ ಚಿಕಿತ್ಸೆಗೆ ಬೇಕಾದ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಹೋಗಿದ್ದರು ಎನ್ನುವ ಕಥೆಯನ್ನು ನಾವೆಲ್ಲರೂ ಕೂಡ ಕೇಳಿದ್ದೇವೆ. ಈಗಲೂ ಸಹ ಈ ಸಂಜೀವಿನಿ ಗಿಡ ಇದೆ.
ವೈದ್ಯ ಲೋಕವೇ ಈ ಬಗ್ಗೆ ಅಚ್ಚರಿಗೊಂಡಿದ್ದು ದೇಶದಲ್ಲಿ ಅನೇಕ ಮೂಳೆ ತಜ್ಞರು ಗಂಭೀರವಾದ ಮೂಳೆ ಸಮಸ್ಯೆ ಇರುವವರಿಗೆ ಈ ದೇವಸ್ಥಾನಕ್ಕೆ ಹೋಗಿ ಎಂದು ಸಲಹೆ ನೀಡುತ್ತಾರೆ, ಅಷ್ಟರ ಮಟ್ಟಿಗೆ ಈ ದೇವಸ್ಥಾನದಲ್ಲಿರುವ ವಿಶೇಷತೆ ಪಾಪ್ಯುಲಾರ್ ಆಗಿದೆ. ದೇವಸ್ಥಾನದ ಹಿಂಭಾಗದಲ್ಲಿ ಇರುವ ಸ್ವಲ್ಪ ಜಾಗದಲ್ಲಿ ಒಂದು ಸಸ್ಯ ಬೆಳೆಯುತ್ತದೆ ಅದರಲ್ಲಿರುವ ಎಲೆಯನ್ನು ಸೇವಿಸಿದರೆ ಸಾಕು ಎಂತಹದೇ ಮೂಳೆ ರೋಗ ಇದ್ದರೂ ಪರಿಹಾರವಾಗುತ್ತದೆ ಹಾಗಾಗಿ ಇದನ್ನೇ ಸಂಜೀವಿನಿ ಎಲೆ ಎಂದು ಕರೆಯಲಾಗುತ್ತದೆ.
ಇಡೀ ಭಾರತ ದೇಶದಲ್ಲಿ ಅತ್ಯಂತ ಶಕ್ತಿಶಾಲಿ ಹನುಮನ ದೇವಸ್ಥಾನವಾದ ಮಧ್ಯಪ್ರದೇಶದ ಕಟಿನಿಯ ಸಂಕಟ ಮೋಚನ ಹನುಮಾನ್ ದೇವಾಲಯದಲ್ಲಿ ಈ ಸಂಜೀವಿನಿ ಎಲೆ ಇದೆ. ಈ ದೇವಸ್ಥಾನಕ್ಕೆ ಹೋದ ಎಲ್ಲರಿಗೂ ಕೂಡ ಪ್ರಸಾದವಾಗಿ ಸಂಜೀವಿನಿ ಎಲೆ ಕೊಡುತ್ತಾರೆ ಎಂದು ಭಾವಿಸಿಕೊಳ್ಳಬೇಡಿ.
ಯಾರಿಗೆ ಗಂಭೀರವಾದ ಮೂಳೆ ಸಮಸ್ಯೆ ಇದೆ. ಅವರಿಗೆ ಮಾತ್ರ ಪ್ರಸಾದವಾಗಿ ದೇವಸ್ಥಾನದ ಅರ್ಚಕರೆ ಆ ಭಕ್ತನಿಗೆ ಸಂಜೀವಿನಿ ಎಲೆಯನ್ನು ತಿನಿಸುತ್ತಾರೆ ಆದರೆ ಇದಕ್ಕೂ ಕೂಡ ಒಂದು ಪ್ರೊಸೀಜರ್ ಇದೆ. ಅದೇನೆಂದರೆ, ದೇವಸ್ಥಾನಕ್ಕೆ ಹೋಗುವವರು ತಪ್ಪದೆ ಅವರ ವೈದ್ಯಕೀಯ ವರದಿ ಎಂದರೆ ಮೆಡಿಕಲ್ ರಿಪೋರ್ಟ್ ಕೂಡ ತೆಗೆದುಕೊಂಡು ಹೋಗಬೇಕು.
ದೇವಸ್ಥಾನದ ಆಡಳಿತ ಮಂಡಳಿ ಇದನ್ನು ಕೂಲಂಕುಶವಾಗಿ ಪರಿಶೀಲಿಸಿ ಯಾರು ಈ ಪ್ರಸಾದ ಪಡೆಯುವುದಕ್ಕೆ ಅರ್ಹರು ಅವರಿಗಷ್ಟೇ ಪ್ರಸಾದ ನೀಡುವುದು. ಇದಕ್ಕೆ ಎಷ್ಟು ಸಮಯ ಬೇಕಾದರೂ ಆಗಬಹುದು. ಒಂದು ದಿನ ಅಥವಾ ಎರಡು ದಿನ ಆದರೂ ಕೂಡ ಉಚಿತವಾಗಿ ಉಳಿದುಕೊಳ್ಳುವುದಕ್ಕೆ ವಸತಿಗೃಹ, ಉಚಿತ ಪ್ರಸಾದದ ವ್ಯವಸ್ಥೆಯು ಇದೆ.
ಇಲ್ಲಿ ನೀಡಲಾಗುವ ಈ ಪ್ರಸಾದಕ್ಕಾಗಲಿ ಅಥವಾ ಉಳಿದುಕೊಳ್ಳುವ ವ್ಯವಸ್ಥೆಯಾಗಲಿ ಯಾವುದೇ ರೀತಿಯ ಚಾರ್ಜಸ್ ಮಾಡುವುದಿಲ್ಲ. ಯಾಕೆಂದರೆ ಹನುಮಾನ್ ದೇವರ ವರ ಪ್ರಸಾದವನ್ನು ಅಷ್ಟು ಶುದ್ಧ ಮನಸ್ಸಿನಿಂದ ಇಲ್ಲಿ ಭಕ್ತಾದಿಗಳಿಗೆ ತಲುಪಿಸಲಾಗುತ್ತದೆ. ಆದರೆ ಒಂದು ಕುಟುಂಬದಲ್ಲಿ ಐದು ಜನರಿಗೆ ಮೂಳೆ ಸಮಸ್ಯೆ ಇದ್ದು ಐದು ಜನರು ಕೂಡ ಪ್ರಸಾದಕ್ಕಾಗಿ ಬಂದರೆ ಎಲ್ಲರಿಗೂ ನೀಡುವುದಿಲ್ಲ ಒಂದು ವರ್ಷದಲ್ಲಿ ಕುಟುಂಬದ ಒಬ್ಬರಿಗೆ ಮಾತ್ರ ನೀಡಲಾಗುತ್ತದೆ.
ಯಾಕೆಂದರೆ ದೇವಸ್ಥಾನದ ಹಿಂದೆ ಕೆಲವೇ ಕೆಲವು ಸಂಜೀವಿನಿ ಗಿಡ ಇದೆ ಅದರಲ್ಲಿ ಹೆಚ್ಚೆಂದರೆ ವರ್ಷಕ್ಕೆ 100 ಎಲೆಗಳು ಬಿಡಬಹುದು ಅಷ್ಟೇ, ಆ ನೂರು ಎಲೆಗಳು ಮಾತ್ರ ಬಳಸಲು ಸಾಧ್ಯ. ಹೀಗಾಗಿ ಹೆಚ್ಚು ಅವಶ್ಯಕತೆ ಇರುವವರಿಗೆ ಸಿಗಲಿ ಎಂದು ಈ ರೀತಿ ನಿರ್ಧಾರ ಕೈಗೊಳ್ಳಲಾಗಿದೆ.
2018 ರಿಂದ ಈಚೆಗೆ ಈ ದೇವಸ್ಥಾನ ಹೆಚ್ಚು ಪಚಲಿತದಲ್ಲಿದೆ. ಮತ್ತು ದಿನಕ್ಕೆ ಲಕ್ಷಾಂತರ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ರೀತಿ ಪ್ರಸಾದವನ್ನು ನೇರವಾಗಿ ಭಕ್ತಾದಿಗಳ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಕೂಡ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಸ್ಥಳ ಪುರಾಣದ ಹಿನ್ನೆಲೆಯನ್ನು ನೋಡುವುದಾದರೆ ಆಂಜನೇಯನು ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಹೋಗುವಾಗ ಬಿದ್ದ ಸಂಜೀವಿನಿ ಎಲೆಯನ್ನು ಕಂಡ ಮಹರ್ಷಿ ಒಬ್ಬರು ಇಲ್ಲಿ ಈ ಗಿಡಗಳು ಬೆಳೆದರೆ ಮುಂದೆ ಕಲಿಗಾಲದಲ್ಲಿ ಜನರು ಇದರ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಅದರ ಶಕ್ತಿಕುಂದು ಹೋಗುವಂತೆ ಮಾಡಿ ಕೇವಲ ಕಾಯಿಲೆ ಗುಣವಾಗುವಷ್ಟು ಮಾತ್ರ ಶಕ್ತಿ ಉಳಿಸಿ ಹೋದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ.