Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೇಂದ್ರ ಸರ್ಕಾರವು 2019 ರಿಂದ ಮೊದಲು ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಮಾಲೀಕರು ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ. ಈಗಾಗಲೇ ದೇಶದ ಹಲವು ರಾಜ್ಯಗಳು ಇದನ್ನು ಅಳವಡಿಸಿಕೊಂಡಿದ್ದು ಕರ್ನಾಟಕ ಸಾರಿಗೆ ಇಲಾಖೆಯು ಆಗಸ್ಟ್ 13 ರಂದು ಈ ಘೋಷಣೆ ಮಾಡಿ ಇದಕ್ಕೆ ಮೂರು ತಿಂಗಳ ಅವಧಿಯನ್ನು ನೀಡಿದೆ.
ಒಂದು ವೇಳೆ ನವೆಂಬರ್ 15ರ ನಂತರ HSRP ನಂಬರ್ ಪ್ಲೇಟ್ ಇಲ್ಲದೇ ನಿಯಮ ಉಲ್ಲಂಘಿಸಿ ವಾಹನಗಳು ರಸ್ತೆಗಳಿದ್ದರೆ 500 ರಿಂದ 1000 ದಂಡ ಬೀಳುತ್ತದೆ. ಹಾಗಾಗಿ ಕೂಡಲೇ ನೀವು ನಿಮ್ಮ ಹತ್ತಿರದ ಡೀಲರ್ ಅಥವಾ ಶೋರೂಮ್ ಗಳಲ್ಲಿ ಇದನ್ನು ಬದಲಾಯಿಸಿ ಅಥವಾ ನೀವೇ ಇದಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿತ್ತು ನಂಬರ್ ಪ್ಲೇಟ್ ಪಡೆದುಕೊಳ್ಳಬಹುದು ಯಾವ ರೀತಿ ಸುಲಭವಾಗಿ ಆನ್ಲೈನ್ ನಲ್ಲಿ ಬುಕ್ ಮಾಡಿ ಹೇಗೆ ವಾಹನಕ್ಕೆ ಅಳವಡಿಸಿಕೊಳ್ಳುವುದು ಎನ್ನುವುದರ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಮೊದಲಿಗೆ ಗೂಗಲ್ ನಲ್ಲಿ SAIM ಎಂದು ಟೈಪ್ ಮಾಡಿ ಸರ್ಚ್ ಕೊಡಿ.
* Society of Indian Automobile manufactures ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
* SIAM ವೆಬ್ಸೈಟ್ ಅಧಿಕೃತ ಪೇಜ್ ಓಪನ್ ಆಗುತ್ತದೆ.
* ಮುಖಪುಟದ ಬಲಭಾಗದಲ್ಲಿ ಹಲವಾರು ಆಪ್ಷನ್ ಗಳು ಇರುತ್ತದೆ. ಅದರಲ್ಲಿ Book HSRP ಆಪ್ಷನ್ ಸೆಲೆಕ್ಟ್ ಮಾಡಿ.
* HSRP Registration ಫಾರಂ ಓಪನ್ ಆಗುತ್ತದೆ.
* Full Name, Vehicle Reg. No, email, mobile no, state, district ಈ ಮಾಹಿತಿಯನ್ನು ನಿಮ್ಮ RC Cardನಲ್ಲಿ ಇರುವಂತೆ ಸರಿಯಾಗಿ ಭರ್ತಿ ಮಾಡಿ, ಕೊನೆಯಲ್ಲಿ ಇರುವ Authentication ಓದಿ, I agree ಎನ್ನುವುದನ್ನು ಕ್ಲಿಕ್ ಮಾಡಿ Submit ಕೊಡಿ.
* Please select your Vehicle brand for booking HSRP ಎನ್ನುವ ಪೇಜ್ ಓಪನ್ ಆಗುತ್ತದೆ ಅದರಲ್ಲಿಯೂ State, District ಸೆಲೆಕ್ಟ್ ಮಾಡಿ Select your Vehicle type ಎನ್ನುವ ಆಯ್ಕೆಯಲ್ಲಿ ನಿಮ್ಮದು ದ್ವಿಚಕ್ರ ವಾಹನವೋ, ತ್ರಿಚಕ್ರ ವಾಹನವೋ ಅಥವಾ ನಾಲ್ಕು ಚಕ್ರದ ವಾಹನವೋ ಎನ್ನುವ ಆಯ್ಕೆಯಲ್ಲಿ ಸೆಲೆಕ್ಟ್ ಮಾಡಿ. ಅದರ ಕೆಳಗೆ ಭಾರತದಲ್ಲಿರುವ ಎಲ್ಲಾ ಕಂಪನಿಗಳ ಬ್ರಾಂಡ್ ಇರುತ್ತದೆ. ಅದರಲ್ಲಿ ನಿಮ್ಮ ವಾಹನ ಯಾವ ಕಂಪನಿ ಆ ಬ್ರಾಂಡ್ ಸೆಲೆಕ್ಟ್ ಮಾಡಿ, ಆಗ ಆ ಬ್ರಾಂಡ್ ನ HSRP ನಂಬರ್ ಪ್ಲೇಟ್ ಬುಕ್ಕಿಂಗ್ ಪೇಜ್ ಓಪನ್ ಆಗುತ್ತದೆ.
* ಆ ಪೇಜ್ ನಲ್ಲಿ High Security Number Plate with Color Sticker ಎನ್ನುವ ಆಪ್ಷನ್ ಇರುತ್ತದೆ ಸೆಲೆಕ್ಟ್ ಮಾಡಿ.
* bookmyhsrp.com ವೆಬ್ಸೈಟ್ ಪೇಜ್ ಓಪನ್ ಆಗುತ್ತದೆ details ನಲ್ಲಿ Vehicle Information ಮತ್ತು Contact information ಕೇಳಲಾಗಿರುತ್ತದೆ ಸರಿಯಾಗಿ ಭರ್ತಿ ಮಾಡಿ. ಇದರಲ್ಲಿ ತಪ್ಪಿದ್ದರೆ ನಿಮ್ಮ ಬುಕಿಂಗ್ ಕ್ಯಾನ್ಸಲ್ ಆಗುತ್ತದೆ ಮತ್ತು ನೀವು ಕಟ್ಟುವ ಶುಲ್ಕವು ಮರುಪಾವತಿಯಾಗುವುದಿಲ್ಲ. ಎಲ್ಲಾ ಮಾಹಿತಿ ಸರಿ ಇದ್ದರೆ ನೀವು ನೀಡಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ನಮೂದಿಸಿ next ಕ್ಲಿಕ್ ಮಾಡಿ ಮುಂದಿನ ಹಂತಕ್ಕೆ ಹೋಗಿ.
* ಮುಂದಿನ ಹಂತದಲ್ಲಿ ಮನೆಯಲ್ಲಿ ನೀವೇ ಅಳವಡಿಸಿಕೊಳ್ಳುವುದಾದರೆ Home delivery ಆಪ್ಷನ್ ಕ್ಲಿಕ್ ಮಾಡಿ ಅಥವಾ dealer appointment ಕ್ಲಿಕ್ ಮಾಡಿ ಹತ್ತಿರದಲ್ಲಿರುವ ಡೀಲರ್ ಮೂಲಕ ಕೂಡ ಅಳವಡಿಸಿಕೊಳ್ಳಬಹುದು.
* dealer appointment ಆಪ್ಷನ್ ಕ್ಲಿಕ್ ಮಾಡಿದರೆ ನಿಮ್ಮ ಹತ್ತಿರದಲ್ಲಿರುವ ಎಲ್ಲಾ ಶೋರೂಮ್ ಹಾಗೂ ಡೀಲರ್ಸ್ ಹೆಸರು ಬರುತ್ತದೆ ನಿಮಗೆ ಬೇಕಾದನ್ನು ಸೆಲೆಕ್ಟ್ ಮಾಡಿ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿ ನಿಮಗೆ ಬೇಕಾದ ದಿನಾಂಕ ಮತ್ತು ಸಮಯವನ್ನು ಕೂಡ ಸೆಲೆಕ್ಟ್ ಮಾಡಿ. ಆ ದಿನಾಂಕದಂದು ಹೋಗಿ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.
* ದಿನಾಂಕ ಹಾಗೂ ಸಮಯ ನಿಗದಿಯಾದ ನಂತರ ಮುಂದಿನ ಹಂತದಲ್ಲಿ ನಿಮ್ಮ HSRP ಹೇಗಿರುತ್ತದೆ ಎನ್ನುವುದರ ಡೀಟೇಲ್ಸ್ ಸ್ಕ್ರೀನ್ ಮೇಲೆ ಬರುತ್ತದೆ ಮತ್ತು ನಿಮ್ಮ ವೈಯುಕ್ತಿಕ ಇಂಫಾರ್ಮೇಷನ್ಗಳು ಕೂಡ ಬರುತ್ತವೆ. ಅದರಲ್ಲಿ ವ್ಯತ್ಯಾಸಗಳಿದ್ದರೆ ಬದಲಾಯಿಸಬಹುದು. ಕೊನೆಯಲ್ಲಿ ಇದಕ್ಕೆ ಎಷ್ಟು ಶುಲ್ಕವಾಗಬಹುದು ಎನ್ನುವುದರ ಲಿಸ್ಟ್ ಡೀಟೇಲ್ಸ್ ಸಮೇತ ಬರುತ್ತದೆ ಕೆಳಗೆ pay online ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡುವ ಮೂಲಕ ಆನ್ಲೈನಲ್ಲಿ ಪಾವತಿಸಿ ಈ ಇ-ರಸೀದಿ (e-receipt ) ಮತ್ತು ಅರ್ಜಿ ಸ್ವೀಕೃತಿ ಪತ್ರ (acknowledgement) ಪಡೆಯಿರಿ.