ಈಗ ಎಲ್ಲಾ ಕ್ಷೇತ್ರಗಳು ಕೂಡ ಈಗ ಡಿಜಟಲೀಕರಣಗೊಳ್ಳುತ್ತಿವೆ. ಕೃಷಿ ಕ್ಷೇತ್ರವು ಕೂಡ ಇದಕ್ಕೆ ಹೊರತೇನಲ್ಲ. ಕೃಷಿ ಕ್ಷೇತ್ರದಲ್ಲೂ ಕೂಡ ಯಂತ್ರೋಪರಣಗಳ ಬಳಕೆ ಹಾಗೂ ತಂತ್ರಜ್ಞಾನದ ಬಳಕೆ ಅಳವಡಿಸಿಕೊಂಡಿರುವುದು ಕೃಷಿ ಕ್ಷೇತ್ರದಲ್ಲೂ ಕ್ರಾಂತಿಯಾಗುತ್ತಿದೆ.
ಇಂದು ಬೆರಳ ತುದಿಯಲ್ಲಿ ರೈತನು ದೇಶದ ಯಾವುದೇ ಮೂಲೆಯಲ್ಲಿದ್ದರೂ ಕೂಡ ಕೃಷಿಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಜಮೀನಿಗೆ ಸಂಬಂಧಪಟ್ಟ ದಾಖಲೆಗಳ ಕುರಿತ ಮಾಹಿತಿ, ಕೃಷಿ ವಿಚಾರವಾಗಿ ಯಾವುದೇ ಮಾಹಿತಿ, ಸರ್ಕಾರದಿಂದ ಯಾವ ಅನುದಾನಗಳಿವೆ ಮತ್ತು ಅದಕ್ಕೆ ಫಲಾನುಭವಿಗಳಾಗಿದ್ದರೆ ಸ್ಟೇಟಸ್ ಏನಾಗಿದೆ ಇತ್ಯಾದಿ ವಿವರಗಳನ್ನು ಪಡೆದುಕೊಳ್ಳಬಹುದು.
ಹಾಗೆಯೇ ಈಗ ಈ ಪಟ್ಟಿಗೆ ಮತ್ತೊಂದು ಸೇರುತ್ತಿದ್ದು ಕರ್ನಾಟಕ ಸರ್ಕಾರ ಕೃಷಿ ಮಾರಾಟ ಮಳಿಗೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವೆಬ್ಸೈಟ್ಗೆ ಹೋಗಿ ಪ್ರತಿದಿನವೂ ಕೂಡ ರಾಜ್ಯದ ಯಾವ APMC ಮಾರುಕಟ್ಟೆಗೆ ಎಷ್ಟು ಕ್ವಿಂಟಲ್ ಬೆಳೆ ಬಂದಿದೆ, ಯಾವ ಬೆಳೆಗೆ ಎಷ್ಟು ಬೆಲೆ ಇದೆ, ಎಷ್ಟು ವಿಧದ ಬೆಳೆ ಬಂದಿದೆ, ಮತ್ತೆ ಯಾವ ದಿನಾಂಕದಂದು ಎಷ್ಟು ಬೆಲೆ ಇತ್ತು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಇದನ್ನು ಹೇಗೆ ಚೆಕ್ ಮಾಡುವುದು ಎನ್ನುವುದರ ಮಾಹಿತಿ ಹೀಗಿದೆ.
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಗೆ ಹೋಗಿ maratavahini ಎಂದು ಸರ್ಚ್ ಮಾಡಿ ಅಥವಾ ನೇರವಾಗಿ https://www.krishimaratavahini.kar.nic.in ವೆಬ್ ಸೈಟ್ ಗೆ ಭೇಟಿ ಕೊಡಿ.
* ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಂಡಳಿಯ ಕೃಷಿ ಮಾರಾಟ ವಾಹಿನಿ ವೆಬ್ಸೈಟ್ನ ಅಧಿಕೃತ ಪೇಜ್ ಓಪನ್ ಆಗುತ್ತದೆ.
* ಪೇಜ್ ಎಡಭಾಗದಲ್ಲಿ ಹಲವಾರು ಆಯ್ಕೆಗಳು ಇರುತ್ತವೆ, ಅದರಲ್ಲಿ ಧಾರಣೆಗಳ ಮಾಹಿತಿ ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.
* ಮತ್ತೊಂದು ಪೇಜ್ ಓಪನ್ ಆಗುತ್ತದೆ. ಆ ಮುಖಪುಟದಲ್ಲಿ ವರದಿಗಳು ಎಂದು ಪಟ್ಟಿಯಿದ್ದು ಮೊದಲಿಗೆ ದಿನಾಂಕ ನಮೂದಿಸುವ ಆಪ್ಷನ್ ಇರುತ್ತದೆ. ಅದರಲ್ಲಿ ನಿಮಗೆ ಯಾವ ದಿನಾಂಕ ಬೇಕು ಆ ದಿನಾಂಕವನ್ನು ಸೆಲೆಕ್ಟ್ ಮಾಡಿ, ಆ ದಿನಾಂಕದಲ್ಲಿನ ರಾಜ್ಯ ಮಟ್ಟದ ದೈನಂದಿಕ ವರದಿ, ಮಾರುಕಟ್ಟೆವಾರು ದೈನಂದಿಕ ವರದಿ, ಉತ್ಪನ್ನವಾರು ದೈನಂದಿಕ ವರದಿ, ನಿಯತಕಾಲಿಕ ವರದಿ, ವ್ಯತ್ಯಾಸದ ವರದಿ.
ಇತ್ತೀಚಿನ ಧಾರಣೆಗಳ ವರದಿ, ಮಾಸಿಕ ಸ್ಥಿತಿ ವರದಿ, ವರದಿ ಮಾಡದ ಮಾರುಕಟ್ಟೆಗಳು, ಮಾರುಕಟ್ಟೆಗಳ ರಜಾ ದಿನಗಳ ವಿವರ ದಿನಾಂಕವಾರು ಮಾಹಿತಿ ಇತ್ಯಾದಿ ಹಲವು ಆಯ್ಕೆಗಳು ಇರುತ್ತವೆ. ಇದರಲ್ಲಿ ನಿಮಗೆ ಯಾವ ವರದಿ ಬೇಕು ಎನ್ನುವುದನ್ನು ಸೆಲೆಕ್ಟ್ ಮಾಡಿ ವರದಿ ನೋಡುವುದು ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಉದಾಹರಣೆಗೆ ನೀವು ಉತ್ಪನ್ನವಾರು ವರದಿ ಸೆಲೆಕ್ಟ್ ಮಾಡಿದರೆ ನೀವು ವರದಿ ನೋಡುವುದು ಎಂದು ಕ್ಲಿಕ್ ಮಾಡಿದ ತಕ್ಷಣ ಏಕದಳ ಧಾನ್ಯಗಳು, ಎಣ್ಣೆ ಕಾಳುಗಳು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಉತ್ಪನ್ನಗಳ ಆಯ್ಕೆ ಇರುತ್ತದೆ. ಅದರಲ್ಲಿ ನಿಮಗೆ ಯಾವ ಉತ್ಪನ್ನದ ವಿವರ ನೋಡಬೇಕು ಅದನ್ನು ಸೆಲೆಕ್ಟ್ ಮಾಡಿ ಕೊನೆಯಲ್ಲಿ ಇರುವ ವರದಿ ನೋಡುವುದು ಎನ್ನುವ ಆಪ್ಷನ್ ಕ್ಲಿಕ್ ಮಾಡಿ.
* ಆಗ ಯಾವ ಮಾರುಕಟ್ಟೆಯಲ್ಲಿ ನೀವು ಸೆಲೆಕ್ಟ್ ಮಾಡಿದ ಉತ್ಪನ್ನಕ್ಕೆ ಎಷ್ಟು ಬೆಲೆ ಇದೆ ಗರಿಷ್ಠ ಎಷ್ಟು ಮತ್ತು ಎಷ್ಟು ಕ್ವಿಂಟಲ್ ಅಂದು ಮಾರುಕಟ್ಟೆಗೆ ಬಂದಿದೆ, ಇತ್ಯಾದಿ ವಿವರ ಬರುತ್ತದೆ. ಇದೇ ರೀತಿಯಾಗಿ ನೀವು ಉಳಿದ ಎಲ್ಲಾ ಉತ್ಪನ್ನಗಳ ಮಾಹಿತಿ ಮತ್ತು ಇನ್ನಿತರ ವಿವರಗಳನ್ನು ಕೂಡ ಚೆಕ್ ಮಾಡಬಹುದು.