ವಿದ್ಯಾರ್ಥಿಗಳಿಗೆ ಸರ್ಕಾರದಿಂದ Freeship Card, ಏನೆಲ್ಲಾ ಪ್ರಯೋಜನ ಇದೆ, ಪಡೆಯುವುದು ಹೇಗೆ ನೋಡಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಿಗೆ ಫ್ರೀಶಿಪ್ ಕಾರ್ಡ್ (Freeship card) ಎನ್ನುವ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಇದನ್ನು ಸರಳ ಭಾಷೆಯಲ್ಲಿ ಸ್ಕಾಲರ್ಷಿಪ್ ATM ಕಾರ್ಡ್ ಎಂದು ಹೇಳಬಹುದು ಈ Freeship Card ಮೂಲಕ ವಿದ್ಯಾರ್ಥಿಯು ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯು (Social Welfare department ) ಎಲ್ಲ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ (SC Students ) ಪದವಿಪೂರ್ವ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಪ್ರವೇಶದ ಅನುಕೂಲತೆ ಮಾಡಿ ಕೊಟ್ಟು ಆರ್ಥಿಕ ನೆರವು ನೀಡಲು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ (Scholarship) ಯೋಜನೆಯನ್ನು ರೂಪಿಸಿದೆ.

ಇದೇ ಸಮಯದಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳ ವ್ಯಾಸಂಗ ಮಾಡುತ್ತಿರುವ ಹಾಗೂ ಇದಕ್ಕೆ ರೂಪಿಸಿರುವ ಮನದಂಡಗಳಿಗೆ ಒಳಪಡುವ ಎಲ್ಲಾ ಅರ್ಜಿದಾರರಿಗೆ ಫ್ರೀಶಿಪ್ ಕಾರ್ಡ್ ನೀಡಲು ಮುಂದಾಗಿದೆ.

ಫ್ರೀ ಶಿಪ್ ಕಾರ್ಡ್ ಕುರಿತು ಮಾಹಿತಿ

* ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷದ ಒಳಗಿದ್ದರೆ ಅಂತಹ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಕೋರ್ಸ್ ಗಳಿಗೆ ಫ್ರೀಶಿಪ್ ಕಾರ್ಡ್ ಮೂಲಕ ಉಚಿತವಾಗಿ ಪ್ರವೇಶ ಪಡೆಯಬಹುದು.
* ಸರ್ಕಾರವು ಆಯಾ ಕೋರ್ಸ್ ಗಳಿಗೆ ನಿಗದಿಪಡಿಸಿರುವ ದರಗಳಲ್ಲಿ ಶುಲ್ಕವನ್ನು ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಾಗುತ್ತದೆ.

* ಯಾವುದೇ ಶಿಕ್ಷಣ ಸಂಸ್ಥೆ Freeship Card ಹೊಂದಿರುವ ಸದರಿ ಪರಿಶಿಷ್ಟ ಜಾತಿ ವಿದ್ಯಾರ್ಥಿಯಿಂದ ಮರುಪಾವತಿ ಮಾಡಲಾಗುವ ಶುಲ್ಕಗಳನ್ನು ಹೊರತುಪಡಿಸಿ ಇತರೆ ಕಡ್ಡಾಯ ಶುಲ್ಕಗಳನ್ನು ಆರಂಭದಲ್ಲಿಯ ಪಾವತಿ ಮಾಡುವಂತೆ ಒತ್ತಾಯ ಮಾಡತಕ್ಕದ್ದಲ್ಲ ಎಂದು ನಿಯಮ ಮಾಡಲಾಗಿದೆ.

ಈ Freeship Card ಪಡೆಯಲು ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಆಧಾರ್ ಸಂಖ್ಯೆ
* ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ
* ವಿದ್ಯಾರ್ಥಿಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ RD ಸಂಖ್ಯೆ
* ವಿದ್ಯಾರ್ಥಿ SSLC ನೋಂದಣಿ ಸಂಖ್ಯೆ
* ವಿದ್ಯಾರ್ಥಿಯ ಯೂನಿವರ್ಸಿಟಿ ಅಥವಾ ಮಂಡಳಿಯ ನೋಂದಣಿ ಸಂಖ್ಯೆ.

Freeship Card ಪಡೆಯಲು ಅರ್ಜಿ ಸಲ್ಲಿಸುವ ವಿಧಾನ:-
* https://ssp. postmatric. Karnataka. gov. in/2324_SA/signin.aspx ಈ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು
* ಈ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮ 2023-24 ಫ್ರೀ ಶಿಪ್ ಕಾರ್ಡ್ ಎನ್ನುವ ಹೆಸರಿನಲ್ಲಿ ಫ್ರೀ ಶಿಪ್ ಕಾರ್ಡ್ ‌ ಅರ್ಜಿ ಫಾರಂ ಓಪನ್ ಆಗುತ್ತದೆ.

* ಅದರಲ್ಲಿ SSB ID ನಮೂದಿಸಬೇಕು, ಇತ್ತೀಚಿನ ಭಾವಚಿತ್ರ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಮೊದಲಿಗೆ ವಿದ್ಯಾರ್ಥಿಯ ತಂದೆ ಹೆಸರು, ಜನ್ಮ ದಿನಾಂಕ, ವಾರ್ಷಿಕ ಆದಾಯ, ವಿಳಾಸ, ಪ್ರಸಕ್ತ ಶಾಲೆ ಪ್ರವೇಶಾತಿ ಪಡೆದಿರುವ ಕೋರ್ಸು, ವರ್ಷ, ವಿಶ್ವವಿದ್ಯಾಲಯ ಅಥವಾ ಬೋರ್ಡ್, ವಸತಿ ನಿಲಯ ಇತ್ಯಾದಿಗಳ ವಿವರ ಸೇರಿದಂತೆ SSLC ನೋಂದಣಿ ಸಂಖ್ಯೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಹಿಂದಿನ ವರ್ಷದ ಕೋರ್ಸ್ ವಿವರ, ಪ್ರಸಕ್ತ ಸಾಲಿನಲ್ಲಿ ಪ್ರವೇಶಾತಿ ಪಡೆದಿರುವ ಕಾಲೇಜಿನ ಹೆಸರು ಇತ್ಯಾದಿಗಳನ್ನು ಫಿಲ್ ಮಾಡಬೇಕು ಮತ್ತು ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

* ನೀಡಿರುವ ಮಾಹಿತಿಗೆ ಅನುಗುಣವಾಗಿ ಮರುಪಾವತಿಯಾಗುವ ಶುಲ್ಕದ ವಿವರಗಳ ಪಟ್ಟಿ ಬರುತ್ತದೆ. ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಅಂದಾಜು ಮೊತ್ತವನ್ನು ವಿದ್ಯಾರ್ಥಿಗೆ ಮರುಪಾವತಿ ಮಾಡಬಹುದು. ಒಂದು ವೇಳೆ ವಿದ್ಯಾರ್ಥಿಯು ಕಾಲೇಜಿಗೆ ಈ ಶುಲ್ಕವನ್ನು ಪಾವತಿಸಿದ್ದರೆ ಮರು ಪಾವತಿಯಾಗುತ್ತದೆ.

ಇಲ್ಲವಾದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಎರಡು ಕಂತುಗಳ ಸಂಪೂರ್ಣ ವಿದ್ಯಾರ್ಥಿ ವೇತನ ಮೊತ್ತವನ್ನು ಪ್ರತಿ ಕಂತು ಜಾರಿಯಾದ 7 ದಿನಗಳ ಒಳಗಡೆ ವಿದ್ಯಾರ್ಥಿಯು ಕಾಲೇಜಿಗೆ ಪಾವತಿಸಲು ಇರುವ ಕಂಡಿಶನ್ ಗೆ ಒಪ್ಪಿಕೊಳ್ಳಬೇಕು. ಈ ಕುರಿತು ಯಾವುದೇ ಗೊಂದಲಗಳಿದ್ದರೂ ಸಹಾಯವಾಣಿ ಸಂಖ್ಯೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಿ 9482300400

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now