ದೀಪಾವಳಿ ಹಬ್ಬ ಎಲ್ಲರಿಗೂ ಕೂಡ ಬಹಳ ವಿಶೇಷವಾದ ಹಬ್ಬವಾಗಿದೆ ಹೌದು ದೀಪಾವಳಿ ಹಬ್ಬವು ಅತಿ ಹೆಚ್ಚು ಬೆಳಕಿನಿಂದ ಕೂಡಿದ್ದು ಪ್ರತಿ ಯೊಬ್ಬರ ಜೀವನದಲ್ಲಿಯೂ ಕೂಡ ಸದಾ ಕಾಲ ಬೆಳಕು ತುಂಬಿರಲಿ ಎನ್ನುವುದೇ ಈ ಹಬ್ಬದ ವಿಶೇಷ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಆದ್ದರಿಂದ ಈ ಹಬ್ಬವನ್ನು ಪ್ರತಿಯೊಬ್ಬರೂ ಕೂಡ ಬಹಳ ವಿಜೃಂಭಣೆ ಯಿಂದ ಬಹಳ ಪ್ರೀತಿಯಿಂದ ಆಚರಣೆ ಮಾಡುವುದು ತುಂಬಾ ಒಳ್ಳೆ ಯದು. ಅದೇ ರೀತಿಯಾಗಿ ನಾವು ದೀಪಾವಳಿಯ ಹಬ್ಬದ ದಿನದಂದು ಈ ಐದು ವಸ್ತುಗಳನ್ನು ನಾವೇನಾದರೂ ಮನೆಗೆ ತಂದಿದ್ದೆ ಆದರೆ ಕಷ್ಟಗಳು ಬೆನ್ನಟ್ಟುತ್ತದೆ ಎಂದೇ ಹೇಳಬಹುದು.
ಹಾಗಾದರೆ ದೀಪಾವಳಿ ಹಬ್ಬದ ಸಮಯದಲ್ಲಿ ಈ ಐದು ವಸ್ತುಗಳನ್ನು ತರುವುದರಿಂದ ಯಾವುದೆಲ್ಲ ರೀತಿಯ ಸಂಕಷ್ಟಕ್ಕೆ ಗುರಿಯಾಗುತ್ತೇವೆ. ಹಾಗೂ ಆ ಐದು ವಸ್ತುಗಳು ಯಾವುದು ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿಯೋಣ. ಮೊದಲೇ ಹೇಳಿದಂತೆ ಇಂತಹ ವಸ್ತುಗಳನ್ನು ನಾವು ದೀಪಾವಳಿ ಹಬ್ಬದ ದಿನ ತರುವುದರಿಂದ ಕಷ್ಟಗಳು ಒಂದರ ಮೇಲೊಂದು ಬರುತ್ತಾ ಇರುತ್ತದೆ ಹಾಗೂ ಮನೆಯಲ್ಲಿ ಅಶಾಂತಿ ನೆಲೆಸುವುದು.
ಮನೆಯಲ್ಲಿ ಏನೇ ಪೂಜೆ ಮಾಡಿದರು ಕೂಡ ಮನಸ್ಸಿನಲ್ಲಿ ಒಂದು ರೀತಿಯ ಗೊಂದಲ ಸೃಷ್ಟಿಯಾಗುವುದು, ಇಲ್ಲ ಸಲದ ಮಾತುಗಳಿಗೆ ಮನೆಯಲ್ಲಿ ಜಗಳ ಕಿರಿಕಿರಿ ಮನೆಯ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು, ನಮ್ಮ ಮಕ್ಕಳು ನಮ್ಮ ಮಾತುಗಳನ್ನು ಕೇಳದೆ ಇರುವುದು, ನಾವು ಏನೇ ಕೆಲಸ ಮಾಡಿದರೂ ಕೂಡ ಅದರಲ್ಲಿ ವಿಜ್ಞಗಳು ಉಂಟಾಗುವುದು ಹೀಗೆ ಹತ್ತು ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ.
ದೀಪಾವಳಿಯು ಶುಕ್ರವಾರ ಅಂದರೆ ಇಂದಿನಿಂದ ಪ್ರಾರಂಭವಾಗುತ್ತದೆ ಹೌದು 10 11 12 13 14 ಈ ಐದು ದಿನಗಳಲ್ಲಿಯೂ ಕೂಡ ನಾವು ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಹಾಗಾದರೆ ಈ ಐದು ದಿನದ ವಿಶೇಷತೆಗಳು ಏನು ಎಂದು ನೋಡುವುದಾದರೆ.
* ಮೊದಲನೆ ದಿನ ಧನ ತ್ರಯೋಧಶಿ ದಿನವಾಗಿರುತ್ತದೆ.
* ಎರಡನೇ ದಿನ ದಿನಾಂಕ ತಿಂಗಳು ವರ್ಷ ಇಷ್ಟನ್ನು ಕೂಡಿದರೆ 11, 11, 11 ಬರುತ್ತದೆ.
ಈ ರೀತಿಯಾಗಿ ಒಂದು ಚೀಟಿಯಲ್ಲಿ ಬರೆದು ಹಣ ಇಡುವಂತಹ ಸ್ಥಳದಲ್ಲಿ ಇಡುವುದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಬಹುದು.
* ಮೂರನೇ ದಿನ ನರಕ ಚತುರ್ದಶಿ
* ನಾಲ್ಕನೇ ದಿನ ದೀಪಾವಳಿ ಅಮಾವಾಸ್ಯೆ
* ಹಾಗೂ ಐದನೇ ದಿನ ದೀಪಾವಳಿ ಪಾಡ್ಯ ಹೀಗೆ ಈ ಐದು ದಿನಗಳು ಕೂಡ ಬಹಳ ವಿಶೇಷವಾಗಿದೆ.
ಹಾಗಾದರೆ ಯಾವ ಐದು ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ನೋಡುವುದಾದರೆ.
1. ಸ್ಟೀಲ್ ಪಾತ್ರೆಗಳನ್ನು ಕೊಂಡುಕೊಳ್ಳಬಾರದು.
2. ಅಲ್ಯುಮಿನಿಯಂ ಪಾತ್ರೆಗಳನ್ನು ಸಹ ಕೊಂಡುಕೊಳ್ಳಬಾರದು.
3. ಹೊಸ ಗಾಜಿನ ವಸ್ತುಗಳನ್ನು ಸಹ ತರಕೂಡದು.
4. ಕಬ್ಬಿಣದ ವಸ್ತುಗಳು
5. ಪ್ಲಾಸ್ಟಿಕ್ ವಸ್ತುಗಳು
ಹಾಗೇನಾದರೂ ಯಾರಾದರೂ ಈ ದಿನ ಅಲ್ಯೂಮಿನಿಯಂ ಪಾತ್ರೆ ಹಾಗೂ ಗಾಜಿನ ವಸ್ತುಗಳನ್ನು ತರುತ್ತಾರೋ ಅವರಿಗೆ ರಾಹು ದೋಷ ಉಂಟಾಗುತ್ತದೆ.
ಯಾರು ದೀಪಾವಳಿಯ ಈ ಐದು ದಿನದಲ್ಲಿ ಕಬ್ಬಿಣ ಖರೀದಿ ಮಾಡುತ್ತಾರೋ ಅವರಿಗೆ ಶನಿ ದೋಷ ಉಂಟಾಗುತ್ತದೆ. ಹಾಗೂ ಮನೆಯಲ್ಲಿ ಸದಾ ಕಾಲ ಕಿರಿಕಿರಿ ಜಗಳ ಉಂಟಾಗುತ್ತಿರುತ್ತದೆ. ಹೀಗೆ ಮೇಲೆ ಹೇಳಿದ ಇಷ್ಟು ಪದಾರ್ಥಗಳನ್ನು ನೀವು ಈ ದೀಪಾವಳಿಯ ಸಮಯದಲ್ಲಿ ತರದೆ ಇರುವುದು ತುಂಬಾ ಒಳ್ಳೆಯದು. ಹಾಗೇನಾದರೂ ತಂದರೆ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.