ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಎಲ್ಲಾ ರೈತರಿಗೂ (Farmers) ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವುಗಳಲ್ಲಿ ರೈತರಿಗೆ ಸಹಾಯಧನವನ್ನು ನೀಡುವ ಉದ್ದೇಶದಿಂದ ರೂಪಿಸಲಾಗಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Scheme) ಬಹಳ ವಿಶೇಷ.
ಈ ಯೋಜನೆ ಮೂಲಕ ಅರ್ಹ ಪ್ರತಿ ರೈತರಿಗೆ ಕೇಂದ್ರ ಸರ್ಕಾರದ ವತಿಯಿಂದ ವರ್ಷದಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ಮೂರು ಬಾರಿ ಸಹಾಯಧನವನ್ನು ರೈತನ ಕೃಷಿ ಚಟುವಟಿಗಳ ಖರ್ಚು ವೆಚ್ಚಕ್ಕೆ ಅನುಕೂಲವಾಗಲಿ ಎಂದು ನೇರವಾಗಿ ರೈತನ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತದೆ. (transfer through DBT to beneficiares bank account ) ಈವರೆಗೆ ಯಶಸ್ವಿಯಾಗಿ 14 ಬಾರಿ PM ಕಿಸಾನ್ ನಿಧಿ ಯೋಜನೆಗೆ ಅರ್ಹರಾದ ರೈತರುಗಳು ಈ ಯೋಜನೆಯ ಸಹಾಯಧನವನ್ನು ಪಡೆದಿದ್ದಾರೆ.
ಈ ಆರ್ಥಿಕ ವರ್ಷದ ಎರಡನೇ ಕಂತಿನ ಒಟ್ಟಾರೆಯಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣದ ಬಿಡುಗಡೆ ಸಮಯವಾಗಿದೆ ಹಾಗಾಗಿ ಎಲ್ಲ ರೈತರು ಕೂಡ ಇದರ ನಿರೀಕ್ಷೆಯಲ್ಲಿದ್ದಾರೆ. ಅಂತಿಮವಾಗಿ PM Event ಮೂಲಕ ದೇಶದ ರೈತರಿಗೆ ಯಾವ ದಿನಾಂಕದಂದು PM ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಹಣ ಬರುತ್ತದೆ ಎನ್ನುವುದನ್ನು ಘೋಷಿಸಲಾಗಿದೆ.
ಈ ಪ್ರಕಾರವಾಗಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಇದೇ ತಿಂಗಳ ಅಂದರೆ 15 ನವೆಂಬರ್ 2023 ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿಗಳು 15ನೇ ಕಂತಿನ PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣವನ್ನು ಬಿಡುಗಡೆಗೆ ಚಾಲನೆ ನೀಡಲಿದ್ದಾರೆ. ಯೋಜನೆಯ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವುದರಿಂದ.
ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಕುಸಿಯುತ್ತಿದ್ದು ಈ ಬಾರಿ 8 ಕೋಟಿ ಅರ್ಹ ರೈತರುಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ನೀವು ಕೂಡ ಯೋಜನೆ ಫಲಾನುಭವಿಗಳಾಗಿದ್ದರೆ ನಿಮ್ಮ ಸ್ಟೇಟಸ್ ಏನಾಗಿದೆ ಎಂದು ಈ ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಬಹುದು.
* ಮೊದಲಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ, pmkisan.gov.in ಕ್ಲಿಕ್ ಮಾಡಿ ಪಿಎಂ ಕಿಸಾನ್ ಸಮ್ಮಾನ್ ನಿಧಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಭಾರತ ಸರ್ಕಾರ ಅಫೀಶಿಯಲ್ ವೆಬ್ಸೈಟ್ ಓಪನ್ ಆಗುತ್ತದೆ. ಈ ವೆಬ್ ಸೈಟ್ಗೆ ನಲ್ಲಿ ನಿಮಗೆ ಹಣ ಬರಲಿದೆಯೇ ಅಥವಾ ಹಣ ಪಡೆಯಲು ಯಾವುದಾದರೂ ಸಮಸ್ಯೆ ಆಗಿದೆಯೇ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಬಹುದು.
* Know your status ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* Reg. no ಬಾಕ್ಸ್ ನಲ್ಲಿ ನಿಮಗೆ ಕೃಷಿ ಇಲಾಖೆಯಿಂದ ನೀಡಿರುವ ರಿಜಿಸ್ಟರ್ ನಂಬರನ್ನು ನಮೂದಿಸಿ ಅಥವಾ ನಿಮ್ಮ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅರ್ಜಿ ಸಂಖ್ಯೆಯನ್ನು ಹಾಕಿ ಕ್ಯಾಪ್ಚಾ ನಮೂದಿಸಿ Get data ಕ್ಲಿಕ್ ಮಾಡಿ.
* ಮುಂದಿನ ಪುಟದಲ್ಲಿ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ವಿಳಾಸ, ನಿಮ್ಮ ಮೊಬೈಲ್ ಸಂಖ್ಯೆ ಇತ್ಯಾದಿ ಡಿಟೇಲ್ಸ್ ಗಳು ಬರುತ್ತವೆ
* Eligibility Status ಆಪ್ಷನ್ ನಲ್ಲಿ land Sending, KYC Status, Aadhar bank account Seeding Status ಈ ಮೂರು ಆಪ್ಶನ್ ಗಳಲ್ಲೂ ಕೂಡ ಹಸಿರು ಬಣ್ಣದಲ್ಲಿ ರೈಟ್ ಮಾರ್ಕ್ ಕ್ಲಿಕ್ ಆಗಿದ್ದರೆ ನಿಮಗೆ ಕಿಸಾನ್ ನಿಧಿ ಯೋಜನೆ ಹಣ ಈ ಕಂತಿನಲ್ಲಿ ಬರುತ್ತದೆ ಎಂದರ್ಥ. ಇದರಲ್ಲಿ ಯಾವುದೇ ಒಂದರಲ್ಲಿ ಕೆಂಪು ಬಣ್ಣದಲ್ಲಿ ಅಡ್ಡ ಗೆರೆ ಹಾಕಿದ್ದರೆ ನೀವು ಆ ಪ್ರಕ್ರಿಯ ಪೂರ್ತಿಗೊಳಿಸಿಲ್ಲ ಹಾಗಾಗಿ ಪ್ರಕ್ರಿಯೆ ಪೂರ್ತಿಗೊಳಿಸಿ ಎಂದರ್ಥ.
reason of Inelligibility ಕ್ಲಿಕ್ ಮಾಡಿ ಡೀಟೇಲ್ಸ್ ತಿಳಿದುಕೊಳ್ಳಬಹುದು.
* Last installment details ವಿಭಾಗದಲ್ಲಿ ಈವರಿಗೆ ಪಡೆದಿರುವ 14 ಕಂತುಗಳ ವಿವರವನ್ನು ಪಡೆಯಬಹುದು. ಯಾವ ಬ್ಯಾಂಕ್ ಖಾತೆಗೆ, ಯಾವ ದಿನಾಂಕದಂದು ವರ್ಗಾವಣೆ ಆಗಿದೆ ಎನ್ನುವುದರ ಮಾಹಿತಿ ಬರುತ್ತದೆ.