Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (Karnataka government) ರಾಜ್ಯದ ಜನತೆಗಾಗಿ 5 ಗ್ಯಾರಂಟಿ ಯೋಜನೆಗಳನ್ನು (Guarantee Scheme ) ನೀಡಿದೆ ಇದರಲ್ಲಿ ಅನ್ನಭಾಗ್ಯ ಯೋಜನೆ (Annabhagya) ಕೂಡ ಒಂದು.
ಅನ್ನ ಭಾಗ್ಯ ಯೋಜನೆಯು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿದ್ದು, ಹಸಿವು ಮುಕ್ತ ಕರ್ನಾಟಕ ರೂಪಿಸುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10Kg ಪಡಿತರ (10kg free ration ) ನೀಡಲಾಗುವುದು ಎನ್ನುವುದು ಪ್ರಣಾಳಿಕೆ ಘೋಷಣೆಯಾಗಿತ್ತು.
ಆದರೆ ದಾಸ್ತಾನು ಕೊರತೆ ಉಂಟಾಗಿರುವ ಕಾರಣ 5kg ಪಡಿತರ ಹಾಗೂ ಉಳಿದ 5Kg ಬದಲಿಗೆ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂಪಾಯಿಯಂತೆ 170ರೂ. ಗಳನ್ನು ಆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ dbt ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.
ಈಗಾಗಲೇ ಜುಲೈ ತಿಂಗಳಿಂದ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆಯು ಜಾರಿಗೆ ಬಂದಿದ್ದು ಅಗತ್ಯವಿರುವ ಮಟ್ಟದ ದಾಸ್ತಾನು ಲಭ್ಯವಾಗುವವರೆಗೂ ಕೂಡ ಇದೇ ಮಾದರಿಯಲ್ಲಿ ಮುಂದುವರಿಸಲು ಯೋಚಿಸಲಾಗಿದೆ. ರಾಜ್ಯದ ಅರ್ಹ ಫಲಾನುಭವಿಗಳು ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಪಡೆದಿದ್ದಾರೆ.
ಅಕ್ಟೋಬರ್ ತಿಂಗಳಿನ ಹಣ ಜಮೆ ಆಗುವುದು ಬಾಕಿ ಇದೆ ಈಗ ಈ ಕುರಿತು ಅಪ್ಡೇಟ್ ಇದೆ, ಅಕ್ಟೋಬರ್ ತಿಂಗಳ (October month amount ) ಹಣ ಕೂಡ ಜಮೆ ಆಗುತ್ತಿದೆ. ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ DBT ಸ್ಟೇಟಸ್ ಚೆಕ್ ಮಾಡುವ ವಿಭಾಗದಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಜೊತೆಗೆ ಅಕ್ಟೋಬರ್ ತಿಂಗಳನ್ನು ಕೂಡ ಸೇರ್ಪಡೆ ಮಾಡಲಾಗಿದೆ.
ಇದರರ್ಥ ಅಕ್ಟೋಬರ್ ತಿಂಗಳಿನ ಹಣ ಕೂಡ ಜಮೆ ಆಗುತ್ತದೆ ಎಂದು ಮತ್ತು ನವೆಂಬರ್ 20 ರ ಒಳಗೆ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳಿಗೂ ಅಕ್ಟೋಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಯಾಗುವುದು ಎಂದು ಸರ್ಕಾರ ತಿಳಿಸಿದೆ. ನೀವು ಕೂಡ ಅನ್ನಭಾಗ್ಯ ಯೋಜನೆಗೆ ಅರ್ಹರಾಗಿದ್ದು ನಿಮಗೆ ಅಕ್ಟೋಬರ್ ತಿಂಗಳ ಹಣ ಬರಲಿದೆಯೇ ಎನ್ನುವುದನ್ನು ಚೆಕ್ ಮಾಡಲು ಈ ವಿಧಾನಗಳನ್ನು ಅನುಸರಿಸಿ.
* ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ. ಗೂಗಲ್ ನಲ್ಲಿ ahara ಎಂದು ಟೈಪ್ ಮಾಡಿ.
e-services ಎನ್ನುವ ಲಿಂಕ್ ಕಾಣುತ್ತದೆ ಕ್ಲಿಕ್ ಮಾಡಿದರೆ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ.
* ಪೇಜಿನ ಎಡಭಾಗದಲ್ಲಿರುವ ಮೂರು ಗೆರೆಗಳನ್ನು ಕ್ಲಿಕ್ ಮಾಡಿ ಹಲವು ಆಯ್ಕೆಗಳು ಇರುತ್ತದೆ, ಅದರಲ್ಲಿ ಇ-ಸ್ಥಿತಿ (e-staus) ಎನ್ನುವುದನ್ನು ಕ್ಲಿಕ್ ಮಾಡಿ.
* ಡಿಬಿಟಿ ಸ್ಥಿತಿ (DBT Status) ಎನ್ನುವ ಆಪ್ಷನ್ ಕಾಣುತ್ತದೆ, ಕ್ಲಿಕ್ ಮಾಡಿದರೆ ಜಿಲ್ಲಾವಾರು ಲಿಂಕ್ ಕಾಣುತ್ತದೆ ಅದರಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.
* ಮತ್ತೊಮ್ಮೆ ನೇರ ನಗದು ವರ್ಗಾವಣೆ ಸ್ಥಿತಿ (Status of DBT) ಕ್ಲಿಕ್ ಮಾಡಿ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ವರ್ಷ, ತಿಂಗಳು, RC No. ಆಪ್ಷನ್ ಇರುತ್ತದೆ. ವರ್ಷ 2023 ಸೆಲೆಕ್ಟ್ ಮಾಡಿ ತಿಂಗಳು ಎನ್ನುವ ಆಪ್ಷನ್ ಅಲ್ಲಿ ಜುಲ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಇರುತ್ತದೆ. ಅಕ್ಟೋಬರ್ ತಿಂಗಳು ಸೆಲೆಕ್ಟ್ ಮಾಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ, ಕ್ಯಾಪ್ಚಾ ಕೋಡ್ ಹಾಕಿ Go ಕ್ಲಿಕ್ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ತಿಳಿಯುತ್ತದೆ.
* ಸ್ಟೇಟಸ್ ನಲ್ಲಿ ಪಾವತಿ ಪ್ರಗತಿಯಲ್ಲಿದೆ ಎಂದು ಬಂದರೆ 20ನೇ ತಾರೀಕಿನ ಒಳಗಡೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದರ್ಥ. ಬೇರೆ ಏನಾದರೂ ಸಮಸ್ಯೆ ಇದ್ದರೆ ಅದನ್ನು ಘೋಷಿಸಲಾಗಿರುತ್ತದೆ ತಿದ್ದುಪಡಿ ಮಾಡಿಸಿಕೊಳ್ಳಿ.