ಹೆಣ್ಣು ಮಕ್ಕಳನ್ನು ಪ್ರೀತಿಸಿ ಪೋಷಿಸಿ (Cherish the girl child ) ಎನ್ನುವ ಧ್ಯೇಯದೊಂದಿಗೆ 2006-07ನೇ ಸಾಲಿನಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು (Yedyurappa) ಭಾಗ್ಯಲಕ್ಷ್ಮಿ ಯೋಜನೆ (Bhagyalashmi Scheme ) ಎನ್ನುವ ಯೋಜನೆಯನ್ನು ಜಾರಿಗೆ ತಂದರು.
ಈ ಯೋಜನೆಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗಾಗಿ ರೂಪಿಸಲಾಗಿತ್ತು. BPL ರೇಷನ್ ಕಾರ್ಡ್ ಇರುವ ಕುಟುಂಬದ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಬಾಂಡ್ (Bhagyalashmi Bond ) ಪಡೆಯಬಹುದಾಗಿತ್ತು.
ಸರ್ಕಾರವು ಆ ಹೆಣ್ಣು ಮಕ್ಕಳ ಹೆಸರಿನಲ್ಲಿ ಹಣವನ್ನು ಡೆಪಾಸಿಟ್ ಇಡುತ್ತಿತ್ತು, ಈ ಯೋಜನೆಯ ಮೆಚುರಿಟಿ ಅವಧಿ 18 ವರ್ಷವಾಗಿದ್ದರಿಂದ ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷ ತುಂಬಿದ ಬಳಿಕ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಈಗ ಈ ಯೋಜನೆಗೆ 18 ವರ್ಷ ತುಂಬಿದ್ದು ಯೋಜನೆ ಜಾರಿಗೊಳಿಸಿದ ಆರಂಭದ ಸಮಯದಲ್ಲಿ ಬಾಂಡ್ ಪಡೆದವರಿಗೆ ಮಾರ್ಚ್ 2024 ರಂದು ಹಣ ಬಿಡುಗಡೆ ಮಾಡಲಾಗುತ್ತಿದೆ.
ಈ ಯೋಜನೆಯನ್ನು ಆರಂಭಿಸಿದ ಸಮಯದಿಂದ 2008 ಜುಲೈವರೆಗೆ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ ಸರ್ಕಾರವು 10,000 ಹಣವನ್ನು ಡೆಪಾಸಿಟ್ (deposit ) ಇಡುತ್ತಿತ್ತು, 18 ವರ್ಷ ತುಂಬಿದ ಬಳಿಕ ಮೊದಲ ಹೆಣ್ಣು ಮಗುವಿಗೆ 34,751ರೂ. ಎರಡನೇ ಹೆಣ್ಣು ಮಗುವಿಗೆ 40,619ರೂ. ಸಿಗುತ್ತಿದೆ. 2008 ಆಗಸ್ಟ್ ನಂತರ ಈ ಠೇವಣಿ ಇಡುವ ಮೊತ್ತವನ್ನು 19,300ರೂ. ಗೆ ಹೆಚ್ಚಿಸಲಾಯಿತು.
2008ರ ನಂತರ ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಹೆಣ್ಣು ಮಕ್ಕಳಿಗೆ ಅವರಿಗೆ 18 ವರ್ಷ ತುಂಬಿದ ಬಳಿಕ ಮೊದಲನೇ ಹೆಣ್ಣು ಮಗುವಿಗೆ 1,00,052ರೂ. ಎರಡನೇ ಮಗುವಾಗಿದ್ದಲ್ಲಿ ಎರಡನೇ ಮಗುವಿಗೆ 18,350ರೂ. ಡೆಪಾಸಿಟ್ ಇಡಲಾಗುತ್ತಿದ್ದು ಯೋಜನೆ ಮೆಚುರಿಟಿ ಅವಧಿಯಲ್ಲಿ 1,00,097ರೂ. ಸಿಗುತ್ತದೆ.
ಇದುವರೆಗೂ ಭಾಗ್ಯಲಕ್ಷ್ಮಿ ಯೋಜನೆ ಠೇವಣಿಯನ್ನು LIC ಯಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ ಇಡಲಾಗುತ್ತಿತ್ತು ಆದರೆ 2020 ರಿಂದ ಈ ನಿಯಮ ಬದಲಾಯಿಸಲಾಗಿದೆ. ಈಗ ಅಂಚೆ ಕಚೇರಿಯಲ್ಲಿ (Post office ) ಹೆಣ್ಣು ಮಕ್ಕಳ ಹೆಸರಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಮಾಡಿಸಬಹುದು. ಆದರೆ ಯೋಜನೆ ಹೆಸರು ಬದಲಾಗಿದೆ ಭಾಗ್ಯಲಕ್ಷ್ಮಿ ಯೋಜನೆಯ ಬದಲು ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samruddi Scheme) ಮರುನಾಮಕರಣ ಮಾಡಲಾಗಿದೆ.
ಇದು ಕೂಡ ಭಾಗ್ಯಲಕ್ಷ್ಮಿ ಯೋಜನೆಯನ್ನು ಹೋಲುವ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಸಹ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಹೆಚ್ಚಿನ ಬಡ್ಡಿ ದರದಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ನೀಡಲಾಗುತ್ತದೆ. ಸದ್ಯಕ್ಕೀಗ ಈ ಯೋಜನೆ ಬಗ್ಗೆ ಏನೇ ಹೆಚ್ಚಿನ ಮಾಹಿತಿ ಬೇಕಾಗಿದ್ದರೂ ಹತ್ತಿರದಲ್ಲಿರುವ ಅಂಚೆ ಕಚೇರಿ ಶಾಖೆಗೆ ಬೇಟಿ ಕೊಡಿ.
ನಿಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಚೇರಿಗಳಿಗೆ ಭೇಟಿ ಕೊಟ್ಟು ಕೂಡ ನೀವು ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ಅಲ್ಲೇ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಭಾಗ್ಯಲಕ್ಷ್ಮಿ ಯೋಜನೆಯಂತೆ ಸುಕನ್ಯಾ ಸಮೃದ್ಧಿ ಯೋಜನೆಗೂ ಕೂಡ ಮೊದಲ ಎರಡು ಹೆಣ್ಣು ಮಕ್ಕಳು ಮಾತ್ರ ಅರ್ಹರಾಗಿರುತ್ತಾರೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.
ಭಾಗ್ಯಲಕ್ಷ್ಮಿ ಯೋಜನೆಯನ್ನು ಮಗು ಹುಟ್ಟಿದ 1 ವರ್ಷದ ಸಮಯದೊಳಗೆ ಮಾಡಿಸಬೇಕಾಗಿತ್ತು ಆದರೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಹೆಣ್ಣು ಮಗುವಿಗೆ 10ವರ್ಷ ತುಂಬುವುದರ ಒಳಗೆ ಮಾಡಿಸಲು ಅನುಮತಿ ಇದೆ.
ಬೇಕಾಗುವ ದಾಖಲೆಗಳು:-
* BPL ರೇಷನ್ ಕಾರ್ಡ್
* ಪೋಷಕರ ಆಧಾರ್ ಕಾರ್ಡ್
* ಪೋಷಕರ ಬ್ಯಾಂಕ್ ಖಾತೆ ವಿವರ
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ.