Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕರ್ನಾಟಕ ರಾಜ್ಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಪ್ರತಿ ವರ್ಷವೂ ಕೂಡ ಮಂಡಳಿಯಲ್ಲಿ ನೋಂದಾಯಿತವಾಗಿ ಲೇಬರ್ ಕಾರ್ಡ್ ಹೊಂದಿರುವಂತಹ ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬಕ್ಕೆ ಸರಕಾರದಿಂದ ಅನೇಕ ಸವಲತ್ತುಗಳ ಅನುಕೂಲ ನೀಡಲಾಗುತ್ತಿದೆ. ಇದರಲ್ಲಿ ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ಕಿಟ್, ಉಚಿತ ಲ್ಯಾಪ್ಟಾಪ್, ಟ್ಯಾಬ್ ಮತ್ತು ಸ್ಕಾಲರ್ಶಿಪ್ ಕೂಡ ನೀಡಲಾಗುತ್ತಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲೂ ಕೂಡ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿತ್ತು. ಕಟ್ಟಡ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ತಡೆಯುವುದು ಮತ್ತು ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು ಮಂಡಳಿಗೆ ಉದ್ದೇಶವಾಗಿದೆ.
ಹಾಗಾಗಿ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಲೇಬರ್ ಕಾರ್ಡ್ ಪಡೆದಿರುವ ಕಾರ್ಮಿಕರ ನರ್ಸರಿಯಿಂದ ಸ್ನಾತಕೋತರ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಮೊದಲ ಎರಡು ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಬಹುದು. ಈ ವರ್ಷ ಅರ್ಜಿ ಸಲ್ಲಿಸಿದವರ ಅರ್ಜಿ ವಿಲೇವಾರಿಯಾಗಿದ್ದು ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗುತ್ತಿದೆ.
ನೀವು ಕೂಡ SSP ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿ ಸ್ಟೇಟಸ್ ಏನಾಗಿದೆ ಎಂದು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಿ. ನೀವು ಎರಡು ವಿಧಾನವಾಗಿ ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಬಹುದು. ಸೇವಾಸಿಂಧು ವೆಬ್ಸೈಟ್ ಗೆ ಲಾಗಿನ್ ಆಗಿ ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಬಹುದು ಅಥವಾ ಲಾಗಿನ್ ಆಗದೆಯೂ ಕೂಡ ಸೇವಾಸಿಂಧು ವೆಬ್ಸೈಟ್ನಲ್ಲಿ ಓಪನ್ ಆಗಿ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಬಹುದು.
ಸೇವಾ ಸಿಂಧು ವೆಬ್ಸೈಟ್ ಮೂಲಕ ತಿಳಿದುಕೊಳ್ಳುವ ವಿಧಾನ:-
1. https://sevasindhuservices.Karnataka.gov.in ಮೂಲಕ ವೆಬ್ಸೈಟ್ ಗೆ ಭೇಟಿ ಕೊಡಿ.
2. check your application status for other department ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
3. application reference no. ಮತ್ತು ಅಪ್ಲಿಕೇಶನ್ ಹಾಕಿರುವ ದಿನಾಂಕವನ್ನು ನಮೂದಿಸಿ ಕೆಳಗೆ ಕೊಡಲಾಗಿರುವ word verification ಕೂಡ ಎಂಟ್ರಿ ಮಾಡಿ.
4. ಸ್ಕ್ರೀನ್ ಮೇಲೆ application reference no. name of the service, applied by, application due date ಇರುತ್ತದೆ ಸ್ಕ್ರೋಲ್ ಮಾಡಿದರೆtask name ನಲ್ಲಿ application submitted ಎಂದರೆ ನೀವು ಅರ್ಜಿ ಸಲ್ಲಿಸಿದ್ದೀರಾ ಎಂದು ಅರ್ಥ ಅದರ status Completed ಎಂದು ಇದ್ದರೆ ಸಲ್ಲಿಕೆಯಾಗಿದೆ ಎಂದರ್ಥ, ನಂತರ task name push data to sevasindhu data base ಎಂದು ಇರುತ್ತದೆ ಅದರ status ಕೂಡ delivered ಎಂದು ಇದ್ದರೆ ನಿಮ್ಮ ವಿವರವನ್ನು ಸೇವಾ ಸಿಂಧು ಡಾಟಾ ಗೆ ಕಳುಹಿಸಲಾಗಿದೆ ಎಂದರ್ಥ.
* ಸೇವಾ ಸಿಂಧು ಲಾಗಿನ್ ಐಡಿ ಮೂಲಕ ಚೆಕ್ ಮಾಡುವ ವಿಧಾನ:-
1. ಸೇವಾ ಸಿಂಧು ID ಮೂಲಕ log in ಆಗಿ, ಇಂಟರ್ ಫೇಸ್ ನಲ್ಲಿ ಎಡ ಭಾಗದಲ್ಲಿರುವ Menu list ನಲ್ಲಿ View status of applications ಸೆಲೆಕ್ಟ್ ಮಾಡಿ, track application status ಕ್ಲಿಕ್ ಮಾಡಿ.
2. ಸ್ಕ್ರೀನ್ ಮೇಲೆ View status of Application/track Status of application ಇಂದು ಬಂದಿರುತ್ತದೆ ಅದರಲ್ಲಿ ನಿಮ್ಮ ಆಕ್ನಾಲಜ್ಮೆಂಟ್ ಲೆಟರ್ ನಂಬರ್ ಕೇಳಲಾಗಿರುತ್ತದೆ, app no. ಬಾಕ್ಸ್ ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್ ಹಾಕಿ get data ಎನ್ನುವುದರ ಮೇಲೆ ಕ್ಲಿಕ್ ಮಾಡಿ.
3. Service name, application reference no, received on, submission date, due date, current status ವಿವರ ಬರುತ್ತದೆ. ಅದರಲ್ಲಿ current status delivered ಮೇಲೆ ಕ್ಲಿಕ್ ಮಾಡಿ.
4. application reference no., name of the service, applied by, Submitted application form ಇದರ ವಿವರ ಬರುತ್ತದೆ. ಅದೇ ಪೇಜ್ ಸ್ಕ್ರೋಲ್ ಮಾಡಿದರೆ task name ನಲ್ಲಿ application submitted ಎಂದರೆ ನೀವು ಅರ್ಜಿ ಸಲ್ಲಿಸಿದ್ದೀರಾ ಎಂದು ಅರ್ಥ ಅದರ status Completed ಎಂದು ಇದ್ದರೆ ಸಲ್ಲಿಕೆಯಾಗಿದೆ ಎಂದರ್ಥ, ನಂತರ task name push data to sevasindhu data base ಎಂದು ಇರುತ್ತದೆ ಅದರ status ಕೂಡ delivered ಎಂದು ಇದ್ದರೆ ನಿಮ್ಮ ವಿವರವನ್ನು ಸೇವಾ ಸಿಂಧು ಡಾಟಾ ಗೆ ಕಳುಹಿಸಲಾಗಿದೆ ಎಂದರ್ಥ.