ನಮ್ಮ ದೇಶದಲ್ಲಿ ಸಹಸ್ರಾರು ದೇವತೆಗಳು ಅವತಾರ ತಾಳಿದ್ದಾರೆ ಮತ್ತು ಇಲ್ಲೇ ನೆರೆ ನಿಂತು ಮಕ್ಕಳಂತೆ ತನ್ನ ಭಕ್ತರನ್ನು ಪೋಷಿಸುತ್ತಿದ್ದಾರೆ. ನಮ್ಮ ನಾಡಿನಲ್ಲೂ ಕೂಡ ಈ ರೀತಿ ಸಾಕಷ್ಟು ಶ್ರೀ ಕ್ಷೇತ್ರಗಳಿವೆ, ಮತ್ತು ಹಲವು ಕಡೆಯಲ್ಲಿ ಇನ್ನೂ ಸಹ ಇಂತಹ ಪ್ರಭಾವಗಳು ಬೆಳಕಿಗೆ ಬರುತ್ತಲೇ ಇವೆ ಈ ರೀತಿ ಒಂದು ಕ್ಷೇತ್ರಕ್ಕೆ ಸೇರಲಿದೆ ಕಾಟೇರಮ್ಮ ದೇವಸ್ಥಾನ.
ಈ ದೇವಸ್ಥಾನವನ್ನು ಜೋಡಿ ಆಲದಮರದ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ. ತಾಯಿ ಪ್ರತ್ಯಂಗಿರಾ ದೇವಿಯು ಸಾಕ್ಷಾತ್ ಕಾಟೇರಮ್ಮನಾಗಿ ಇಲ್ಲಿ ನೆಲೆ ನಿಂತು ತಾನೇ ಹೆತ್ತ ಮಕ್ಕಳಂತೆ ತನ್ನ ಬಳಿ ಬರುವವರಿಗೆ ಇಷ್ಟ ಕಷ್ಟಗಳಿಗೆ ನುಡಿ ಹೇಳಿ ಕಾಪಾಡುತ್ತಿದ್ದಾರೆ.
ಈ ದೇವಸ್ಥಾನದ ವಿಶೇಷತೆ ಏನೆಂದರೆ ಜೀವನದಲ್ಲಿ ಮನುಷ್ಯನಿಗೆ ಬರುವ ನೂರಾರು ಕಷ್ಟಗಳಾದ ವಿವಾಹ ವಿಳಂಬ, ಸಂತಾನ ವಿಳಂಬ, ವ್ಯಾಪಾರ ವ್ಯವಹಾರ ನಷ್ಟ, ಆರೋಗ್ಯ ಸಮಸ್ಯೆ, ಕುಟುಂಬದಲ್ಲಿ ಕಲಹ, ಮಾನಸಿಕ ತೊಂದರೆ ಇನ್ನೂ ಮುಂತಾದ ಯಾವುದೇ ರೀತಿಯ ಕಷ್ಟಗಳು ಇದ್ದರೂ ಕೂಡ ಪೂರ್ಣಫಲದ ಹರಕೆ ಕಟ್ಟಿಕೊಂಡರೆ ಅದಕ್ಕೆ ಪರಿಹಾರ ಸಿಗುತ್ತದೆ.
ತೆಂಗಿನ ಕಾಯಿಯನ್ನು ದೇವಸ್ಥಾನದಲ್ಲಿ ತಂದು ನೀವು ಭಕ್ತಿಯಿಂದ ಮನಸಾರೆ ತಾಯಿಯನ್ನು ಪ್ರಾರ್ಥಿಸಿ ಕಷ್ಟ ಹೇಳಿಕೊಂಡು ಅಲ್ಲಿ ನಿಮಗೆ ಸೂಚಿಸಲಾಗುವಷ್ಟು ಬಾರಿ ಪ್ರದಕ್ಷಿಣೆ ಹಾಕಿ ಆಲದ ಮರಕ್ಕೆ ಪೂರ್ಣ ಫಲವನ್ನು ಅಂದರೆ ತೆಂಗಿನಕಾಯಿಯನ್ನು ಕಟ್ಟಬೇಕು 9 ವಾರಗಳು ತಪ್ಪದೇ ಅದೇ ದಿನ ಬಂದು 9 ತೆಂಗಿನಕಾಯಿ ಕಟ್ಟಿದರೆ ನಿಮ್ಮ ಸಮಸ್ಯೆ ಪರಿಹಾರ ಆದಂತೆ ಲೆಕ್ಕ.
ಈ ದೇವಸ್ಥಾನಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶದ ನಾನಾ ಮೂಲೆಗಳಿಂದ ಭಕ್ತಾದಿಗಳು ಬರುತ್ತಾರೆ. ಒಂದು ಬಾರಿ ದೇವಸ್ಥಾನಕ್ಕೆ ಬಂದವರಿಗೆ ತಮ್ಮ 9 ವಾರಗಳ ಹರಕೆ ಮುಗಿದರು ಕೂಡ ಮತ್ತೆ ಮತ್ತೆ ಬರುವ ಮನಸಾಗುತ್ತದೆ, ಅಷ್ಟು ಮಹಿಮೆ ಇದೆ ಈ ದೇವಸ್ಥಾನದಲ್ಲಿ. ಪಾಕಿಸ್ತಾನ, ಜಪಾನ್, ಜರ್ಮನಿ ದೇಶದಿಂದ ಕೂಡ ಈ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಇದ್ದಾರೆ.
ಇಲ್ಲಿ ಅಮಾವಾಸ್ಯೆ ದಿನದಂದು ಪ್ರತ್ಯಂಗಿರಾ ಹೋಮ ಕೂಡ ನಡೆಯುತ್ತದೆ. ರಾತ್ರಿ 9ಕ್ಕೆ ಹೋಮ ಮುಕ್ತಾಯವಾಗಿ ತಾಯಿಯ ಮೊರೆ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ತಾಯಿಯ ವಿಗ್ರಹವನ್ನು ಹೊತ್ತು ಮೆರಿಸಲಾಗುತ್ತದೆ. ಅಂತಹ ಸಮಯದಲ್ಲಿ ತಮಗೆ ಯಾವುದೇ ವಿಷಯದ ಬಗ್ಗೆ ಗೊಂದಲ ಇದ್ದರೂ ತಾಯಿಯ ಬಳಿ ನುಡಿ ಕೇಳಬಹುದು.
ಆ ಕಾರ್ಯ ಆಗುವುದದಿದ್ದರೆ ಅಥವಾ ಒಳ್ಳೆಯದಿದ್ದರೆ ಬಲಕ್ಕೆ ನುಡಿ ಕೊಡುತ್ತಾರೆ ಇಲ್ಲವಾದಲ್ಲಿ ಎಡಕ್ಕೆ ನುಡಿ ಕೊಡುತ್ತಾರೆ. ಈ ಉತ್ಸವವನ್ನು ಮೆರೆಸುವ ವ್ಯಕ್ತಿಗಳು ಎಷ್ಟೇ ಶಕ್ತಿಶಾಲಿಗಳಾಗಿದ್ದರು ಅವರ ಪ್ರಭಾವ ನಡೆಯುವುದಿಲ್ಲ ಇಲ್ಲಿ ತಾಯಿಯ ಶಕ್ತಿ ಮಾತನಾಡುತ್ತದೆ, ತಾಯಿ ತಿರುಗಿಸಿದ ಕಡೆ ಅವರು ತಿರುಗುತ್ತಿರುತ್ತಾರೆ ಇದರ ಮೂಲಕ ಭಕ್ತರ ಪ್ರಶ್ನೆಗೆ ಉತ್ತರ ಸಿಗುತ್ತದೆ.
ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯದ ಅತಿ ದೊಡ್ಡ ಪ್ರತ್ಯಂಗಿರಾ ದೇವಿ ವಿಗ್ರಹವನ್ನು ಕೂಡ ಸ್ಥಾಪನೆ ಮಾಡಲಾಗುತ್ತಿದೆ. ಈಗಲೇ ಈ ದೇವಸ್ಥಾನಕ್ಕೆ ಭೇಟಿ ಕೊಡುವ ಭಕ್ತಾದಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು ಮುಂದೆ ಇದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುವ ಸಾಧ್ಯತೆ ಇದೆ. ದೂರದ ಊರುಗಳಿಂದ ಬರುವವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ದಾಸೋಹದ ವ್ಯವಸ್ಥೆಯು ಕೂಡ ಇದೆ.
ಅಮವಾಸ್ಯೆ ದಿನದಂದು ಕಿಕ್ಕಿರಿದು ಸೇರುವ ಭಕ್ತ ಸಮೂಹದಲ್ಲಿ ತಾಯಿ ಉತ್ಸವ ನೋಡುವುದೇ ಕಣ್ಣಿಗೆ ಹಬ್ಬ ಹಾಗೂ ಏಳು ಜನ್ಮಗಳ ಪುಣ್ಯ ಎನ್ನಬಹುದು. ಮನಸಾರೆ ಭಕ್ತಿಯಿಂದ ನಂಬಿ ತಾಯಿಯ ಗುಡಿಗೆ ಹೋದವರು ನೂರಕ್ಕೆ ನೂರರಷ್ಟು ತಮ್ಮ ಸಮಸ್ಯೆಗೆ ಪರಿಹಾರ ಕಾಣುತ್ತಾರೆ ಎನ್ನುವುದು ಈ ದೇವಸ್ಥಾನಕ್ಕೆ ನಡೆದುಕೊಳ್ಳುವವರ ನಂಬಿಕೆ.
ವಿಳಾಸ:-
ಅಮ್ಮಾ ಶಕ್ತಿ ಪೀಠ,
ಶ್ರೀ ಕ್ಷೇತ್ರ ಕೆಂಪಾಪುರ(ಕಂಬಳಿಪುರ),
ಸೂಲಿಬೆಲೆ ಹೋಬಳಿ,
ಹೊಸಪೇಟೆ ತಾಲೂಕು,
ಬೆಂಗಳೂರು ಗ್ರಾಮಾಂತರ ಮತ್ತು ಜಿಲ್ಲೆ.
ದೂರವಾಣಿ ಸಂಖ್ಯೆ:- 8867841758, 6360562826