ಅಭಿಜಿತ್ ಕರ್ನಾಟಕ ಕಂಡ ಸುರದ್ರೂಪಿ ನಾಯಕ. 90ರ ದಶಕದ ಚಾಕಲೇಟ್ ಹೀರೋ. ಚಿತ್ರದುರ್ಗದಿಂದ ಸಿನಿಮಾ ಅವಕಾಶಗಳನ್ನು ಅರಸಿ ತಾನೊಬ್ಬ ನಾಯಕ ಆಗಲೇಬೇಕು ಎನ್ನುವ ಹಂಬಲ ಹೊತ್ತು ಗಾಂಧಿನಗರದ ಕಡೆಗೆ ಬಂದ ಅಭಿಜಿತ್ ಅವರು ಜೀವನದಲ್ಲಿ ಎರಡು ರೀತಿ ಅನುಭವಗಳನ್ನು ಪಡೆದುಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಸಾಕಷ್ಟು ಸೈಕಲ್ ಹೊಡೆದು ಅವಕಾಶಗಳಿಗಾಗಿ ಅಲೆಯುತ್ತಿದ್ದ ಅಭಿಜಿತ್ ಅವರಿಗೆ ಮೊದಮೊದಲು ಕಾಲೇಜ್ ಹೀರೋ ಎನ್ನುವ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸುವ ಅವಕಾಶ ದೊರಕಿತು. ಆ ಸಮಯದಲ್ಲಿ ಎಲ್ಲಾ ಹೊಸ ಪ್ರತಿಭೆಗಳನ್ನು ಮೊದಲು ಈ ರೀತಿ ರೋಲ್ ಗೆ ಹಾಕಿಕೊಳ್ಳುವುದು ವಾಡಿಕೆಯಾಗಿತ್ತು ಶಶಿಕುಮಾರ್ ಅವರು ಹಾಗೂ ದೇವರಾಜ್ ಅವರು ಈ ರೀತಿ ಎಲ್ಲರೂ ಕೂಡ ವಿಲ್ಲನ್ ರೋಲ್ ಮಾಡಿ ನಂತರ ಹೀರೋ ಅವಕಾಶ ಪಡೆದುಕೊಂಡವರು.
ಹಾಗೆಯೇ ಅಭಿಜಿತ್ ಅವರು ಸಹ ಕೆಲವೊಂದು ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಖಳನಾಯಕನಾಗಿ ಅಥವಾ ಮತ್ಯಾವುದಾದರೂ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ನಂತರ ಹೀರೋ ಆಗಿ ಮೆರೆದವರು. ಶ್ರುತಿ ಅವರ ಅಭಿನಯದ ರಂಜಿತ ಎನ್ನುವ ಸಿನಿಮಾವು ಅಭಿಜಿತ್ ಅವರ ವೃತ್ತಿ ಬದುಕನ್ನು ಬದಲಿಸಿದ ಮೊದಲ ಸಿನಿಮಾ. ಈ ಸಿನಿಮಾದ ಅದ್ಭುತ ಯಶಸ್ಸು ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿಜಿತ್ ಅವರಿಗೆ ಬಹಳಷ್ಟು ಅವಕಾಶವನ್ನು ತಂದು ಕೊಟ್ಟಿತ್ತು
ಅಭಿಜಿತ್ ಅವರ ಹೆಸರನ್ನು ಸಿನಿಮಾಗಳಿಗಾಗಿ ಅಭಿಜಿತ್ ಎಂದು ಬದಲಾಯಿಸಲಾಯಿತು ಆದರೆ ಅವರ ನಿಜವಾದ ಹೆಸರು ರಾಮಸ್ವಾಮಿ ಎನ್ನುವುದಾಗಿತ್ತು. ಇವರು ಸಂಗೀತದ ಬಗ್ಗೆ ಸಿಕ್ಕಾಪಟ್ಟೆ ಒಲವು ಹೊಂದಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಪೋಷಕ ಪಾತ್ರದಲ್ಲಿ ಖಳನಾಯಕನಾಗಿ ಸಿನಿಮಾ ಹೀರೋ ಆಗಿ ಸಿಂಗರ್ ಆಗಿ ಈ ರೀತಿ ಎಲ್ಲಾ ಕೆಲಸಗಳಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದವರು ಅಭಿಜಿತ್ ಅವರು.
ಶೃತಿ ಅವರೊಂದಿಗೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಇವರು ಹೀರೋ ಆಗಿ ಬಹುದಿನಗಳ ಕಾಲ ಬೇಡಿಕೆಯಲ್ಲಿ ಇದ್ದವರು. ಹೆಚ್ಚಿನ ಜನರು ಇವರನ್ನು ವಿಷ್ಣುವರ್ಧನ್ ಅವರ ರೀತಿಯಲ್ಲಿ ಹೋಲುತ್ತಾರೆ ಎಂದು ಕೂಡ ಮಾತನಾಡುತ್ತಿದ್ದರು. ಹಾಗೂ ವಿಷ್ಣುವರ್ಧನ್ ಅವರ ಆಪ್ತ ಬಳಗದಲ್ಲಿ ಕೂಡ ಅಭಿಜಿತ್ ಅವರು ಗುರುತಿಸಿಕೊಂಡಿದ್ದರು. ಡಾಕ್ಟರ್ ವಿಷ್ಣುವರ್ಧನ್ ಅವರೊಂದಿಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ ಇವರು ಹೆಚ್ಚಾಗಿ ವಿಷ್ಣು ವರ್ಧನ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ನಿಜ ಜೀವನದಲ್ಲಿ ಎಷ್ಟೋ ಜನ ಇವರನ್ನು ವಿಷ್ಣುವರ್ಧನ್ ಅವರ ತಮ್ಮ ಎಂದೇ ಭಾವಿಸಿದ್ದರು ಹಾಗೂ ಇವರು ಎಲ್ಲೇ ಹೋದರು ಕೂಡ ಇವರಿಗೆ ವಿಷ್ಣುವರ್ಧನ್ ಅವರ ತಮ್ಮ ಎನ್ನುವ ರೀತಿಯಲ್ಲಿಯೇ ಗೌರವ ತೋರುತ್ತಿದ್ದರು. ಅದರಲ್ಲೂ ವಿಷ್ಣುವರ್ಧನ್ ಅವರೊಂದಿಗೆ ಇವರು ಅಭಿನಯಿಸಿದ ಯಜಮಾನ ಸಿನಿಮಾದ ಅದ್ಭುತವಾದ ಯಶಸ್ಸಿನ ನಂತರ ಇವರನ್ನು ಕನ್ನಡದ ಜನತೆ ಮತ್ತಷ್ಟು ಇಷ್ಟ ಪಟ್ಟರು.
ಜೊತೆಗೆ ಕೋಟಿಗೊಬ್ಬ ಎನ್ನುವ ಸಿನಿಮಾದಲ್ಲೂ ಕೂಡ ಇವರ ಪೊಲೀಸ್ ಪಾತ್ರ ಬಹಳಷ್ಟು ಜನರಿಗೆ ಮೆಚ್ಚುಗೆಯಾಗಿತ್ತು. ಈಗ 50ರ ಆಸುಪಾಸಿನಲ್ಲಿ ಇರುವ ಅಭಿಜಿತ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಸ್ವಲ್ಪ ದೂರ ಆಗಿದ್ದಾರೆ ಅನಿಸುತ್ತದೆ. ಆದರೆ ಅದಕ್ಕೂ ಕೂಡ ಕಾರಣ ಇದೆ. ಅಭಿಜಿತ್ ಅವರು ಸ್ವಲ್ಪ ವರ್ಷಗಳವರೆಗೆ ಹೀರೋ ಆಗಿ ತುಂಬಾ ಯಶಸ್ಸನ್ನು ಕಂಡರು ಅವರು ಅಭಿನಯಿಸಿದ್ದ ಬಹುತೇಕ ಸಿನಿಮಾಗಳು ಭರ್ಜರಿ ಹಿಟ್ ಗಳಿಸಿದ್ದರೂ ಕೂಡ ಅದು ಯಾಕೋ ಕೆಲವು ವರ್ಷಗಳ ನಂತರ ಹೀರೋ ಆಗಿ ಅವರಿಗೆ ಅವಕಾಶಗಳು ಕಡಿಮೆಯಾಗಿತ್ತು ಅಥವಾ ಅವರು ಹೀರೋ ಆಗಿದ್ದ ಸಿನಿಮಾಗಳು ನಂತರದ ದಿನಗಳಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಆದರೆ ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ಇವರು ಗುರುತಿಸಿಕೊಂಡರೆ ಆ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದವು ಆದರೆ ಸೋಲೋ ಆಗಿ ಇವರು ಸಿನಿಮಾಗಳನ್ನು ಮಾಡಿದರೆ ಆ ಸಿನಿಮಾ ಸೋಲುತ್ತಿತ್ತು.
ಅವರು ಕೊನೆಯದಾಗಿ ಸಿಬಿಐ ಶಿವ ಎನ್ನುವ ಸಿನಿಮಾವನ್ನು ರಾಮ್ ಕುಮಾರ್ ಅವರ ಜೊತೆ ಅಭಿನಯಿಸಿ ನಿರ್ದೇಶನ ಕೂಡ ಮಾಡಿದ್ದರು ಆದರೆ ಆ ಸಿನಿಮಾ ಕೂಡ ಫ್ಲಾಫ್ ಆಗಿ ಹೋಗಿತ್ತು. ಮತ್ತು ಇವರ ಸಿನಿಮಾಗಳು ಸೋಲುತ್ತಿದ್ದ ಕಾರಣ ನಂತರ ಇವರಿಗೆ ಹೀರೋ ಆಗಿ ಅವಕಾಶಗಳು ಬರಲಿಲ್ಲ ಯಾವುದಾದರು ಸಣ್ಣಪುಟ್ಟ ಪಾತ್ರಕ್ಕೆ ಇವರನ್ನು ಕರೆಯುತ್ತಿದ್ದರು. ಹೀಗಾಗಿ ತುಂಬಾ ಸ್ವಾಭಿಮಾನಿ ಆಗಿದ್ದ ಇವರು ಹೀರೋ ಆಗಿ ಮಿಂಚಿ ಈಗ ಹೇಗೆ ಈ ರೀತಿ ಪಾತ್ರಗಳನ್ನು ಒಪ್ಪಿಕೊಳ್ಳುವುದು ಎನ್ನುವ ಕಾರಣಕ್ಕೆ ಸಿನಿಮಾ ಇಂಡಸ್ಟ್ರಿ ಇಂದ ದೂರ ಉಳಿಯಬೇಕಾಯಿತು. ಆ ಸಮಯದಲ್ಲಿ ಸತತವಾಗಿ 8 ವರ್ಷಗಳ ಕಾಲ ಯಾವುದೇ ಒಂದು ಸಿನಿಮಾದ ಅವಕಾಶ ಇಲ್ಲದೆ ಮನೆಯಲ್ಲೇ ಖಾಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಅಭಿಜಿತ್ ಅವರಿಗೆ ಎದುರಾಗಿತ್ತು. ಅಂತಹ ಸಮಯದಲ್ಲಿ ಬಹಳವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇವರು ಜೀವನ ನಿರ್ವಹಣೆಗಾಗಿ ತಾವು ಗಳಿಸಿದ್ದ ಆಸ್ತಿಯನ್ನು ಮಾರುವ ಸ್ಥಿತಿಯನ್ನು ಕೂಡ ತಲುಪಿದ್ದರು.
ಹಾಗೂ ಅದರಲ್ಲಿ ಸ್ವಲ್ಪ ಪ್ರಮಾಣದ ಸೈಟು ಹಾಗೂ ಆಸ್ತಿಪಾಸ್ತಿಯನ್ನು ಕೂಡ ಮಾರಬೇಕಾಯಿತು ಆದರೆ ಸದ್ಯ ಈಗ ಅವರ ಮಕ್ಕಳು ಬೆಳೆದು ದೊಡ್ಡವರಾಗಿ ಸೆಟಲ್ ಆಗಿರುವ ಕಾರಣ ಅವರ ಪರಿಸ್ಥಿತಿ ಸುಧಾರಿಸಿದೆ ಮತ್ತು ಇತ್ತೀಚೆಗೆ ಅವರಿಗೆ ಕಿರುತೆರೆಯಲ್ಲಿ ಒಳ್ಳೆ ಅವಕಾಶಗಳು ಬರುತ್ತಿದ್ದು ಈಗ ಕಿರುತೆರೆಯಲ್ಲಿ ಸತ್ಯ ಎನ್ನುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂಬರ್ ಒನ್ ಜೋಡಿ ಎನ್ನುವ ಕಾರ್ಯಕ್ರಮದಲ್ಲಿ ಕೂಡ ಅಭಿಜಿತ್ ಹಾಗೂ ಅವರ ಪತ್ನಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಣ್ಣೀರಿಟ್ಟು ಅವರ ಕಷ್ಟದ ದಿನಗಳನ್ನು ನೆನೆಸಿಕೊಂಡು ಅಭಿಜಿತ್ ಅವರು ಭಾವುಕರಾಗಿದ್ದಾರೆ. ಅಭಿಜಿತ್ ಅವರ ಜೀವನದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.